Get Updates
Get notified of breaking news, exclusive insights, and must-see stories!

Bengaluru rain: ಇಂದು ವಿವಿಧೆಡೆ ಮಳೆ, ಸೆ.21ರವರೆಗೆ ಸಾಧಾರಣ ಮಳೆ ಸಾಧ್ಯತೆ, ಹವಾಮಾನ ವರದಿ

ಬೆಂಗಳೂರು, ಸೆಪ್ಟಂಬರ್ 15: ಸಿಲಿಕಾನ್ ಸಿಟಿಯಲ್ಲಿ ಮುಂಗಾರು ಮಳೆ ಸಕ್ರಿಯಗೊಂಡಿದ್ದು, ಮಳೆ ಸಿಂಚನ ಮುಂದುವರಿದಿದೆ. ಇಂದಿನಿಂದ ಮುಂದಿನ 48 ಗಂಟೆ (ಶನಿವಾರ) ವರೆಗೆ ಗುಡುಗು ಮಿಂಚು ಸಹಿತ ವ್ಯಾಪಕ ಮಳೆ ಸುರಿಯಲಿದೆ. ನಂತರ ನಾಲ್ಕು ದಿನ ಮಳೆಯ ಅಬ್ಬರ ತುಸು ಇಳಿಕೆ ಆಗಲಿದೆ.

ಬುಧವಾರದಿಂದ ನಗರದ ಉತ್ತಮ ಮಳೆ ಆಗುತ್ತಿದೆ. ನೆನ್ನೆ ಗುರುವಾರ ಸಹ ಧಾರಾಕಾರ ಮಳೆ ಆಗಿದ್ದು, ಇಂದು ಮಧ್ಯಾಹ್ನದಿಂದಲೇ ಜೋರು ಮಳೆ ಆಗಿದೆ. ಈ ಪೈಕಿ ಮಹಾದೇವಪುರ ವಲಯ ವ್ಯಾಪ್ತಿಯ ಹೊರಮಾವು (2) ನಲ್ಲಿ 10.50 ಮಿಲಿ ಮೀಟರ್ ಸುರಿದಿದೆ. ಇನ್ನುಳಿದಂತೆ ತುಂತುರು ಮಳೆ ಆಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮಾಹಿತಿ ನೀಡಿದೆ.

Bengaluru Several Party May Face Moderate To Heavy Rain In Till September 21th

ಬೆಂಗಳೂರಿನಲ್ಲಿ ಮುಂದಿನ ಸೆಪ್ಟಂಬರ್ 21ರವರೆಗೆ ವಿವಿಧೆಡೆ ವ್ಯಾಪಕ ಮಳೆ ಸಾಧ್ಯತೆ ಇದ್ದು, ಭಾನುವಾರದಿಂದ ಮಳೆ ಅಬ್ಬರು ತುಸು ಕಡಿಮೆ ಇರಲಿದೆ ಎಂದು ಅಂದಾಜಿಸಲಾಗಿದೆ. ನಿತ್ಯವು ಮೋಡ ಕವಿದ ವಾತಾವರಣ ಮುಂದುವರಿಯಲಿದೆ. ಸ

ನಗರದ ವಿವಿಧ ಬಡಾವಣೆಗಳಲ್ಲಿ ಜೋರು ಮಳೆ ಸುರಿದರೆ, ಇನ್ನೂ ಹಲವೆಡೆ ಆಗಾಗ ಜಿಟಿ ಜಿಟಿ ಮಳೆ ಬೀಳಲಿದೆ. ಇಡೀ ದಿನ ಮೋಡ ಕವಿದ ಮಳೆ ಆಗಲಿದೆ. ಶುಷ್ಕ ವಾತಾವರಣ ಕಡಿಮೆ ಆಗಿದ್ದು, ತಂಪು ವಾತಾವರಣ ನಿರ್ಮಾಣವಾಗಿದೆ. ಇಂದು ಶುಕ್ರವಾರ ಇಂದು ಅಲ್ಲಲ್ಲಿ ಮಳೆ ಆಗಿದ್ದು, ತಡರಾತ್ರಿವರೆಗೂ ಕೆಲವೆಡೆ ಮಳೆ ಮುಂದುವರಿಯಲಿದೆ.

ಬೆಂಗಳೂರನಲ್ಲಿ ಮಳೆಗೆ ಭೂಮಿ ಕುಸಿತ

ನಗರದ ಕೆಲವೆಡೆ ಜೋರು ಮಳೆ ಆಗಿದೆ. ಇದೇ ವೇಳೆ ಕೆಆರ್ ಪುರ ರೈಲು ನಿಲ್ದಾಣದ ಮುಂಭಾಗದಲ್ಲಿ ಭೂಮಿ ಕುಸಿತ ಸಂಭವಿಸಿದೆ. ಇದರಿಂದ ಒಂದು ಲೈನ್ ಸಂಚಾರಕ್ಕೆ ಮಾತ್ರ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಯಿತು. ಇದರಿಂದಾಗಿ ಅಲ್ಲಲ್ಲಿ ಸಂಚಾರ ದಟ್ಟಣೆ ಕಡಿಮೆ ಆಯಿತು. ಹೀಗಾಗಿ ನಗರದ ಒಳಗೆ ಪ್ರವೇಶಿಸುವ ವಾಹನಗಳು ನಿಧಾನವಾಗಿ ಚಲಿಸಿದ ದೃಶ್ಯ ಕಂಡು ಬಂತು.

Bengaluru Several Party May Face Moderate To Heavy Rain In Till September 21th

ಸೆಪ್ಟಂಬರ್ 21ರವರೆಗೆ ಮಳೆ ಮುಂದುವರಿಯಲಿದ್ದು, ತಾಪಮಾನ ಇಳಿಕೆ ಆಗಲಿದೆ. ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ರಾಜ್ಯದ ವಿವಿಧೆಡೆ ಜೋರು ಮಳೆ

ಕರ್ನಾಟಕದಲ್ಲಿ ಮುಂದಿನ ನಾಲ್ಕೈದು ದಿನ ಮಳೆ ವ್ಯಾಪಕವಾಗಿ ಸುರಿಯಲಿದೆ. ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಬಿರುಸಿನಿಂದ ಕೂಡಿರಲಿದೆ. ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆ ಭಾರೀ ಮಳೆ ಬರಲಿದ್ದು, ಯೆಲ್ಲೋ ಅಲರ್ಟ್ ಕೊಡಲಾಗಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ತುಮಕೂರು, ಹಾವೇರಿ, ಗದಗ, ಧಾರವಾಡ, ಬೆಳಗಾವಿ, ಬಾಗಲಕೋಟೆ ಸೇರಿದಂತೆ ವಿವಿಧೆಡೆ ಧಾರಾಕಾರ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+