Bengaluru rain: ಅ.21ರ ತನಕ ನಗರಕ್ಕೆ ಮಳೆ: ಹವಾಮಾನ ವರದಿ

ಬೆಂಗಳೂರು, ಅಕ್ಟೋಬರ್ 15: ಬೆಂಗಳೂರಿನಲ್ಲಿ ಭಾನವಾರವು ಜೋರು ಮಳೆ ಆಗುವ ಸಂಭವವಿದೆ. ಅಲ್ಲಲ್ಲಿ ಮೋಡ ಕವಿದ ವಾತಾವರಣ ಕಂಡು ಬಂದಿದ್ದು, ಅಕ್ಟೋಬರ್ 21ರವರೆಗೂ ನಗರದ ವಿವಿಧೆಡೆ ಮಳೆ ಆಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇಂದು ಅಕ್ಟೋಬರ್ 15ರಂದು ತಡರಾತ್ರಿ ಬೆಂಗಳೂರಿನ ಜಕ್ಕೂರು, ನಾಗವಾರ, ಯಲಹಂಕ, ಹೆಬ್ಬಾಳ, ಕೋರಮಂಗಳ, ವಿದ್ಯಾಪೀಠ, ಯಶವಂತಪುರ, ಮಹಾದೇವಪುರ, ಕೆಂಗೇರಿ ಸೇರಿದ್ದಂತೆ ವಿವಿಧ ಬಡಾವಣೆಗಳಲ್ಲಿ ಮಳೆ ಆಗುವ ಸಾಧ್ಯತೆಗಳು ಇವೆ. ಉಳಿದೆಡೆ ತಂಪು ವಾತಾವರಣ ಕಂಡು ಬರಲಿದೆ.

Bengaluru Several Parts May See Thunderstome Rain Till October 21st As IMD Predicts

ಮುಂದಿನ ಅಕ್ಟೋಬರ್ 21ರವರೆಗೆ ನಗರದಲ್ಲಿ ತಾಪಮಾನ ಇಳಿಕೆ ಆಗಿರಲಿದೆ. ಕಾರಣವೆನೆಂದರೆ ದಿನವು ಮೋಡ ಕವಿದ ವಾತಾವರಣದಿಂದಾಗಿ ಚಳಿ ತುಸು ಹೆಚ್ಚಾವು ಸಂಭವವಿದೆ. ಈ ವೇಳೆ ನಿತ್ಯ ಸಂಜೆ ಇಲ್ಲವೇ ರಾತ್ರಿ ಹೊತ್ತಿಗೆ ಜಿಟಿ ಜಿಟಿ ಮಳೆ ಬರಲಾರಂಭಿಸಲಿದೆ.

ನಗರದ ತಾಪಮಾನ ಈಗಿದ್ದಂತೆ ಗರಿಷ್ಠ 30 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ. ಇದರ ಹೊರತು ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಹವಾಮಾನದಲ್ಲಿ ಯಾವುದೇ ಗಂಭೀರ ರೂಪದ ಬದಲಾವಣೆಗಳು ಇಲ್ಲ ಎಂದು ಮುನ್ಸೂಚನಾ ವರದಿ ತಿಳಿಸಿದೆ.

ಶನಿವಾರ ಸುರಿದ ಅಬ್ಬರದ ಮಳೆ
ಶನಿವಾರ ಬೆಳಗ್ಗೆಯಿಂದ ಕಂಡು ಬಂದಿದ್ದ ಬಿಸಿಲು ಸಂಜೆಗೆ ಮರೆಯಾಗಿ ಕೆಲವೆಡೆ ಹಗುರದಿಂದ ಸಾಧಾರಣ ಮಳೆ ಆದರೆ, ಅನೇಕ ಕಡೆಗಳಲ್ಲಿ ಭರ್ಜರಿ ಮಳೆ ಆಗಿದೆ. ಈ ಪೈಕಿ ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ಅತ್ಯಧಿಕ ಮಳೆ ದಾಖಲಾಗಿದೆ.

Bengaluru Several Parts May See Thunderstome Rain Till October 21st As IMD Predicts

ಬೇಗೂರಿನಲ್ಲಿ 50 ಮಿಲಿ ಮೀಟರ್ ಮಳೆ ಆಗಿದೆ. ಉಳಿದಂತೆ ಅರಕೆರೆ 48 ಮಿ.ಮೀ, ಕೋಣನಕುಂಟೆ 48 ಮಿ.ಮೀ, ಬೇಗೂರು 48 ಮಿ.ಮೀ, ದೊರೆಸಾನಿ ಪಾಳ್ಯ ಮತ್ತು ಬಿಳೆಕಳಿಯಲ್ಲಿ ತಲಾ 46 ಮಿ.ಮೀ, ಸಿಂಗಸಂದ್ರ 40.5 ಮಿ.ಮೀ, ಗೊಟ್ಟಿಗೆರೆ 39.5 ಮೀ.ಮಿ, ಬೊಮ್ಮನಹಳ್ಳಿ 31ಮಿ.ಮೀ, ಬಿಟಿಎಂ ಬಡಾವಣೆ 28.5 ಮಿಲಿ ಮೀಟರ್ ಮಳೆ ದಾಖಲಾಗಿದೆ.

ಅಂಜನಾಪುರ, ಬಸವನಗುಡಿ, ಪಟ್ಟಾಭಿರಾಮನಗರ, ಲಕ್ಕಸಂದ್ರ, ಕೋನೆನ ಅಗ್ರಹಾರ, ಉತ್ತರಹಳ್ಳಿ ಸೇರಿದಂತೆ ಕೆಲವು ಬಡಾವಣೆಗಳಲ್ಲಿ ಮಳೆಯ ಸಿಂಚನವಾಗಿದೆ.

ಹವಾಮಾನದಲ್ಲಿನ ಬದಲಾವಣೆಗಳಿಂದ ಕರ್ನಾಟಕ ಅತ್ಯಧಿಕ ಮಳೆ ವಾತಾವರಣ ಉಂಟಾಗಿದ್ದು, ಮುಂದಿನ ನಾಲ್ಕೈದು ದಿನ ಕರಾವಳಿ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಒಂದೆರಡು ಜಿಲ್ಲೆಗಳಲ್ಲಿ ಉತ್ತಮ ಮಳೆ ನಿರೀಕ್ಷೆ ಇದೆ ಎಂದು ಐಎಂಡಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+