Get Updates
Get notified of breaking news, exclusive insights, and must-see stories!

ಮುಂದೆ ಹೇಗಿರುತ್ತಾಳೋ ಎಂಬ ಭಯದಿಂದ ಪತ್ನಿ ಕೊಂದ ಪತಿ: ಬೆಚ್ಚಿದ ಬೆಂಗಳೂರು

ಬೆಂಗಳೂರು, ಫೆಬ್ರವರಿ 21: ಆಸ್ತಿ, ಹಣ ವಿಚಾರ ಸೇರಿದಂತೆ ಇನ್ನಿತರೆ ಸಣ್ಣಪುಟ್ಟ ವಿಚಾರಕ್ಕೆ ನಡೆದ ಗಲಾಟೆಗಳು ಕೊಲೆಯಲ್ಲಿ ಅಂತ್ಯವಾದ ಉದಾಹರಣೆಗಳಿವೆ. ಇದೀಗ ತಾನು ಸಾವನ್ನಪ್ಪಿದ ಬಳಿಕ ಪತ್ನಿಯನ್ನು ನೋಡಿಕೊಳ್ಳಲು ಯಾರೂ ಇರುವುದಿಲ್ಲ ಎನ್ನುವ ಕಾರಣದಿಂದ ಆಕೆಯನ್ನ ಪತಿಯೇ ಕೊಲೆ ಮಾಡಿ ಜೈಲು ಸೇರಿರುವ ವಿಚಿತ್ರ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ದಂಪತಿಗೆ ಒಬ್ಬ ಮಗಳಿದ್ದು, ಅಮೆರಿಕಾದಲ್ಲಿ ವಾಸವಿದ್ದಾರೆ. ಆದರೆ, ಆಕೆ ತನ್ನ ತಾಯಿಯ ಅಂತಿಮ ವಿಧಿ ವಿಧಾನಕ್ಕೆ ಬರಲು ನಿರಾಕರಿಸಿರುವುದು ಅತ್ಯಂತ ದುಃಖಕರ ಸಂಗತಿಯಾಗಿದೆ.

ಬೆಂಗಳೂರು ನಗರದ ಹಿರಿಯ ನಾಗರಿಕರ ವಸತಿ ಸಮುದಾಯದಲ್ಲಿ ನಡೆದ ದುರ್ಘಟನೆ ಇದೀಗ ಇನ್ನಷ್ಟು ದುಃಖಕರ ತಿರುವು ಪಡೆದಿದೆ. ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯ ಏಕೈಕ ಪುತ್ರಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲು ಅಮೆರಿಕದಿಂದ ಭಾರತಕ್ಕೆ ಬರಲು ನಿರಾಕರಿಸಿದ್ದು, ಇದು ಮನಕಲುಕುವ ಘಟನೆಯಾಗಿದೆ.

Bengaluru Senior Living Tragedy Husband Kills Wife on Fear of Her Future Daughter Skips Final Rites

ಪತ್ನಿಯನ್ನ ಕೊಲೆ ಮಾಡಿದ ಪತಿ

ಫೆಬ್ರವರಿ 18ರಂದು, 70 ವರ್ಷದ ನಾಗೇಶ್ವರ ರಾವ್ ಅವರು ತಮ್ಮ 63 ವರ್ಷದ ಪತ್ನಿ ಸಂಧ್ಯಾ ಶ್ರೀ ಅವರನ್ನು ಕೊಲೆ ಮಾಡಿದ ಆರೋಪ ಕೇಳಿಬಂದಿದೆ. ಈ ಘಟನೆ ವೈಟ್‌ಫೀಲ್ಡ್ ವಿಭಾಗದ ಅವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬೊಮ್ಮನಹಳ್ಳಿಯ ವರ್ಚುಸೊ ಅಪಾರ್ಟ್‌ಮೆಂಟ್‌ನಲ್ಲಿರುವ ಅವರ ಫ್ಲ್ಯಾಟ್‌ನಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಈ ದಂಪತಿ 2022ರಿಂದ ಹಿರಿಯ ನಾಗರಿಕರ ಸಮುದಾಯದಲ್ಲಿ ವಾಸಿಸುತ್ತಿದ್ದರು.

ಪೊಲೀಸರ ಮಾಹಿತಿ ಪ್ರಕಾರ, ರಾವ್ ಅವರು ಸೋಫಾದ ಮೇಲೆ ಮೇಲೆ ಕುಳಿತಿದ್ದು, ಅವರ ಪತ್ನಿಯ ಮೃತದೇಹ ಅಡುಗೆ ಮನೆಯಲ್ಲಿತ್ತು. ವಿಚಾರಣೆ ವೇಳೆ ಅವರು ತಪ್ಪನ್ನು ಒಪ್ಪಿಕೊಂಡು, ತಮ್ಮ ಸಾವಿನ ಬಳಿಕ ಪತ್ನಿಯನ್ನು ನೋಡಿಕೊಳ್ಳುವವರು ಯಾರೂ ಇರುವುದಿಲ್ಲ ಎಂಬ ಭಯದಿಂದ ಈ ಕೃತ್ಯ ಎಸಗಿದ್ದಾಗಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಪತ್ನಿ ಕೊಲೆಗೆ ವಿಚಿತ್ರ ಕಾರಣ ಕೊಟ್ಟ ಪತಿ

ತಾನು ಇನ್ನೂ ಎರಡು ಅಥವಾ ಮೂರು ವರ್ಷಗಳಿಗಿಂತ ಹೆಚ್ಚು ಕಾಲ ಬದುಕುವ ಸಾಧ್ಯತೆ ಇಲ್ಲ. ಆದ್ದರಿಂದ ಅವಳ ಭವಿಷ್ಯದ ಬಗ್ಗೆ ಆತಂಕಗೊಂಡಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಜೊತೆಗೆ, ನೆರವಿಗೆ ಆಪ್ತ ಸಂಬಂಧಿಕರು ಯಾರೂ ಇಲ್ಲ. ಆದ್ದರಿಂದ ಈ ಕೃತ್ಯ ಎಸಗಿರುದಾಗಿ ಹೇಳಿದ್ದಾರೆ. ಆತನ, ಬಂಧನದ ಬಳಿಕ ಪೊಲೀಸರು ಅಮೆರಿಕದ ನ್ಯೂಜೆರ್ಸಿಯಲ್ಲಿ ವಾಸಿಸುತ್ತಿರುವ ದಂಪತಿಯ ಅವರ ಪುತ್ರಿಯನ್ನು ಸಂಪರ್ಕಿಸಿ ಘಟನೆ ಕುರಿತು ಮಾಹಿತಿ ನೀಡಿದರು.

ತಾಯಿಯ ಅಂತಿಮ ವಿಧಿ ವಿಧಾನಕ್ಕೆ ಬಾರದ ಪುತ್ರಿ

ಹಿರಿಯ ಐಪಿಎಸ್ ಅಧಿಕಾರಿಯೊಬ್ಬರ ಪ್ರಕಾರ, ಆರಂಭದಲ್ಲಿ ಪುತ್ರಿ ಬೆಂಗಳೂರಿಗೆ ಬರುತ್ತೇನೆ ಎಂದು ತಿಳಿಸಿದ್ದರಿಂದ ತಾಯಿಯ ಮರಣೋತ್ತರ ಪರೀಕ್ಷೆ ಸೇರಿದಂತೆ ಇತರೆ ಕಾನೂನು ಕ್ರಮಗಳನ್ನು ಅಧಿಕಾರಿಗಳು ತಾತ್ಕಾಲಿಕವಾಗಿ ಮುಂದೂಡಿದ್ದರು. ಆದರೆ, ದಂಪತಿಯ ಪುತ್ರಿ ನಂತರ ವೈಯಕ್ತಿಕ ಕಾರಣಗಳನ್ನು ನೀಡಿ ಭಾರತಕ್ಕೆ ಬರಲು ಸಾಧ್ಯವಿಲ್ಲ ಎಂದು ಅವರು ಪೊಲೀಸರಿಗೆ ತಿಳಿಸಿದ್ದರು.

ಬಳಿಕ ಅಧಿಕಾರಿಗಳು ಆಕೆಯನ್ನು ಮನವರಿಕೆ ಮಾಡಲು ಹಲವು ಬಾರಿ ಪ್ರಯತ್ನಿಸಿದರು. ದಂಪತಿಯ ಏಕೈಕ ಮಗಳು ಆಗಿರುವುದರಿಂದ ಕಾನೂನು ದೃಷ್ಟಿಯಿಂದ ಹಾಗೂ ಭಾವನಾತ್ಮಕವಾಗಿ ಕೂಡ ಆಕೆಯ ಉಪಸ್ಥಿತಿಯು ಅತ್ಯಂತ ಅಗತ್ಯವೆಂದು ತಿಳಿಸಿದರು. ತಾಯಿ ಮೃತಪಟ್ಟಿದ್ದು, ತಂದೆ ಜೈಲು ಶಿಕ್ಷೆಯನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಆಕೆಯ ಉಪಸ್ಥಿತಿ ಮುಖ್ಯವೆಂದು ಒತ್ತಿ ಹೇಳಿದ್ದಾರೆ.

ಆದರೂ ಆಕೆ ನಿರಾಕರಿಸಿದ ಹಿನ್ನೆಲೆ, ಪೊಲೀಸರು ರಾವ್ ಅವರ ಮಾವ ವಿಜಯ್ ಬಾಬು ಅವರನ್ನು ಸಂಪರ್ಕಿಸಿದರು. ಅವರು ಜೆಬಿ ನಗರ ನಿವಾಸಿ ಆಗಿದ್ದಾರೆ ಎಂದು ತಿಳಿದುಬಂದಿದೆ. ವಿಜಯ್ ಬಾಬು ಅವರು ಅಧಿಕಾರಿಗಳಿಗೆ ಸಂಪೂರ್ಣ ಸಹಕರಿಸಿದರು. ಅಗತ್ಯವಿರುವ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಕುಟುಂಬದ ಸಂಪ್ರದಾಯದಂತೆ ಸಂಧ್ಯಾ ಶ್ರೀ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಿದರು.

ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದ ಘಟನೆ

ಇನ್ನೂ ಈ ಘಟನೆ ಹಿರಿಯ ನಾಗರಿಕರ ಸಮುದಾಯದ ನಿವಾಸಿಗಳನ್ನು ಬೆಚ್ಚಿಬೀಳುವಂತೆ ಮಾಡಿದೆ. ವೃದ್ಧಾಪ್ಯದಲ್ಲಿನ ಏಕಾಂಗಿತನ, ಮಾನಸಿಕ ಒತ್ತಡ ಹಾಗೂ ಹಿರಿಯರಿಗಾಗಿ ಅಗತ್ಯವಾದ ಬೆಂಬಲ ವ್ಯವಸ್ಥೆಗಳ ಕುರಿತಾಗಿ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+