Bengaluru Second Airport: ಈ ಜಾಗದಲ್ಲೇ ಬೆಂಗಳೂರಿನ 2ನೇ ಏರ್‌ಪೋರ್ಟ್ ನಿರ್ಮಾಣ ಬಹುತೇಕ ಖಚಿತ
ಬೆಳೆಯುತ್ತಿರುವ ಬೆಂಗಳೂರಿನ ಭವಿಷ್ಯದ ದೃಷ್ಟಿಯಿಂದ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಸಜ್ಜಾಗಿದೆ. ಈಗಾಗಲೇ ಮೂರು ಸ್ಥಳಗಳನ್ನು ಗುರುತಿಸಿ ಕೇಂದ್ರದ ಒಪ್ಪಿಗೆ ನಿರೀಕ್ಷಿಸುತ್ತಿದೆ. ಒಂದು ಸ್ಥಳ ಕುಣಿಗಲ್ ಬಳಿಯ ಹಾಸನ ಹೆದ್ದಾರಿ ಬಳಿ ಇದ್ದರೆ, ಮತ್ತೆರಡು ಸ್ಥಳಗಳು ಕನಕಪುರ ರಸ್ತೆಯಲ್ಲಿವೆ. ಕೇಂದ್ರದಿಂದ ಅಧಿಕಾರಿಗಳು ಬಂದೇ ಎರಡನೇ ಏರ್‌ಪೋರ್ಟ್‌ಗೆ ಜಾಗ ಫೈನಲ್ ಮಾಡಲಿದ್ದಾರೆ. ಆದರೆ ಮೂಲಗಳ ಪ್ರಕಾರ ಇದೇ ಜಾಗ ಫಿಕ್ಸ್ ಆಗಲಿದೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಮೂರು ಜಾಗಗಳಲ್ಲಿ ಎಲ್ಲಿ ಹೊಸ ಏರ್‌ಪೋರ್ಟ್ ತಲೆ ಎತ್ತಲಿದೆ? ಎಂಬ ಮಾಹಿತಿ ಇಲ್ಲಿದೆ.
ಕನಕಪುರ ರಸ್ತೆಯಲ್ಲೇ ಎರಡನೇ ಏರ್‌ಪೋರ್ಟ್‌ಗಾಗಿ ಎರಡು ಜಾಗಗಳನ್ನು ರಾಜ್ಯ ಸರ್ಕಾರ ಗುರುತಿಸಿದೆ. ಇದರ ಹಿಂದೆ ಹಲವು ಕಾರಣಗಳೂ ಇವೆ. ಹಲವು ಕಾರಣಗಳಿಂದ ಕುಣಿಗಲ್ ಬಳಿಯ ಹಾಸನ ಹೆದ್ದಾರಿ ಸಮೀಪ ಏರ್‌ಪೋರ್ಟ್ ನಿರ್ಮಾಣವಾಗುವ ಸಾಧ್ಯತೆ ಕಡಿಮೆಯೇ ಇದೆ. ಹೀಗಾಗಿ ಕನಕಪುರ ರಸ್ತೆಯಲ್ಲೇ ಗುರುತಿಸಲಾದ ಎರಡು ಸ್ಥಳಗಳ ಪೈಕಿ ಒಂದು ಜಾಗವಂತೂ ಫೈನಲ್ ಆಗುವುದು ಪಕ್ಕಾ ಎಂದು ಹೇಳಲಾಗುತ್ತಿದೆ. ಇದಕ್ಕೆ ಏನೆಲ್ಲ ಕಾರಣ ಅನ್ನೋದನ್ನ ನೋಡೋದಾದ್ರೆ...

ಕನಕಪುರ ರಸ್ತೆಯು ಬೆಂಗಳೂರಿನ ದಕ್ಷಿಣ ಭಾಗದಲ್ಲಿದೆ. ಒಂದು ರೀತಿಯ ನಗರದ ಹೊರವಲಯ ಎಂದೇ ಹೇಳಬಹುದು. ಇದು ಕನಕಪುರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಈಗಾಗಲೇ ಈ ಭಾಗದಲ್ಲಿ ಹಲವು ಕೈಗಾರಿಕಾ ಪ್ರದೇಶಗಳು ಕೂಡ ಇವೆ. ಹಾಗಾಗಿ ಇಲ್ಲೇ ಏರ್‌ಪೋರ್ಟ್ ನಿರ್ಮಿಸುವುದು ಉತ್ತಮ ಎನ್ನುವುದು ತಜ್ಞರ ಅಭಿಪ್ರಾಯ. ಇದಕ್ಕೆ ಇನ್ನೂ ಹಲವು ಕಾರಣಗಳಿವೆ.
ರಾಜಕೀಯ ದೃಷ್ಟಿಯಿಂದ ನೋಡುವುದಾದರೆ, ಕನಕಪುರ ರಸ್ತೆ ಹಾಗೂ ಈ ಭಾಗದಲ್ಲಿ ಈಗಿನ ಕರ್ನಾಟಕದ ಡಿಸಿಎಂ ಹಾಗೂ ಮುಂದಿನ ಸಿಎಂ ಆಕಾಂಕ್ಷಿಯೂ ಆದ ಡಿಕೆ ಶಿವಕುಮಾರ್ ಅವರ ತವರು ಕ್ಷೇತ್ರ. ಈಗಾಗಲೇ ಕನಕಪುರದ ಅಭಿವೃದ್ಧಿಗಾಗಿ ಅವರು ಸಾಕಷ್ಟು ಮುತುವರ್ಜಿ ವಹಿಸಿದ್ದಾರೆ. ಆದರೆ, ಈಗ ಬೆಂಗಳೂರಿಗೆ ಎರಡನೇ ಏರ್‌ಪೋರ್ಟ್ ಅನಿವಾರ್ಯ ಆಗಿರುವುದರಿಂದ ಇದನ್ನೇಕೆ ತವರು ಭಾಗಕ್ಕೆ ಕೊಡುಗೆಯಾಗಿ ಕೊಡಬಾರದು? ಎಂಬ ಲೆಕ್ಕಾಚಾರವೂ ಇದೆ ಎಂದು ಹೇಳಲಾಗುತ್ತಿದೆ. ಈ ಏರ್‌ಪೋರ್ಟ್ ನಿರ್ಮಾಣವಾದ್ರೆ ಇತ್ತ ಬೆಂಗಳೂರಿಗೆ ಹೊಸ ಏರ್‌ಪೋರ್ಟ್ ಸಿಕ್ಕಂತಾಗುತ್ತೆ. ಅತ್ತ ಕನಕಪುರ ಭಾಗದ ಅಭಿವೃದ್ಧಿ ಕೂಡ ಸಲೀಸಾಗಿ ನಡೆಯಲಿದೆ ಎನ್ನುವ ಲೆಕ್ಕಾಚಾರ ಇರಬಹುದು.

ಹೊಸೂರು ಏರ್‌ಪೋರ್ಟ್‌ಗೂ ಟಕ್ಕರ್
ಅತ್ತ ತಮಿಳುನಾಡು ಸರ್ಕಾರವು ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ಭಾರಿ ಬಿರುಸಿನ ತಯಾರಿಯಲ್ಲಿದೆ. ಹೀಗಾಗಿ ಕನಕಪುರ ರಸ್ತೆಯಲ್ಲೇ ಬೆಂಗಳೂರಿನ ಹೊಸ ಏರ್‌ಪೋರ್ಟ್ ನಿರ್ಮಾಣವಾದರೆ ಅತ್ತ ತಮಿಳುನಾಡಿಗೂ ಟಕ್ಕರ್ ಕೊಡಬಹುದು. ಈ ಜಾಗದಲ್ಲಿ ಆಗಲೇ ಒಂದು ಏರ್‌ಪೋರ್ಟ್ ಇರುವ ಕಾರಣಕ್ಕೆ ತಮಿಳುನಾಡಿನ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಬಹುದು. ಹಾಗಾಗಿ ಇದೇ ಜಾಗದಲ್ಲಿ ಏರ್‌ಪೋರ್ಟ್ ನಿರ್ಮಾಣವಾಗುವ ಸಾಧ್ಯತೆಗಳು ದಟ್ಟವಾಗಿವೆ.
ದಕ್ಷಿಣ ಬೆಂಗಳೂರು, ಮೈಸೂರು, ಮಂಡ್ಯ, ತುಮಕೂರು ಮತ್ತು ಚಾಮರಾಜನಗರ ಸೇರಿದಂತೆ ಈ ಭಾಗದ ಪ್ರಯಾಣಿಕರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬದಲಾಗಿ ಈ ಎರಡನೇ ಏರ್‌ಪೋರ್ಟ್ ಬಳಸಲು ಅನುಕೂಲವೂ ಆಗಲಿದೆ. ಕನಕಪುರ ರಸ್ತೆ, ನೈಸ್ ರಸ್ತೆ ಮತ್ತು ಮೈಸೂರು ರಸ್ತೆ ಮೂಲಕವೂ ಈ ಹೊಸ ಏರ್‌ಪೋರ್ಟ್‌ಗೆ ಸುಗಮ ಸಂಚಾರ ವ್ಯವಸ್ಥೆ ಇರಲಿದೆ. ಈ ಎಲ್ಲ ದೃಷ್ಟಿಯಿಂದಲೂ ಕನಕಪುರ ರಸ್ತೆಯಲ್ಲಿ ಗುರುತಿಸಲಾದ ಎರಡು ಜಾಗಗಳು ಹೊಸ ಏರ್‌ಪೋರ್ಟ್‌ಗೆ ಪೂರಕವಾಗಿವೆ ಎನ್ನಲಾಗಿದ್ದು, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಶೀಘ್ರವೇ ಇಲ್ಲಿನ ಸ್ಥಳ ಅಂತಿಮಗೊಳಿಸುವ ಸಾಧ್ಯತೆ ಇದೆ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications