Bengaluru Second Airport: ಬೆಂಗಳೂರು ವಿಮಾನ ನಿಲ್ದಾಣ: ಈ ಭಾಗದಲ್ಲಿ ಭೂಮಿಗೆ ಬಂಗಾರದ ಬೆಲೆ.. ಪ್ಲಾಟ್ ಬೆಲೆ 18 ಕೋಟಿ!
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ವಿಚಾರವು ಬೆಂಗಳೂರಿನ ಸಮೀಪದ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ರಿಯಲ್ ಎಸ್ಟೇಟ್‌ಗೆ ಬೂಸ್ಟ್ ನೀಡಿದೆ. ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮಟ್ಟದಲ್ಲಿ ಇನ್ನಷ್ಟು ಚರ್ಚೆಗಳು ಆಗಬೇಕಿವೆ. ಆದರೆ, ವಿಮಾನ ನಿಲ್ದಾಣದ ವಿಚಾರದಲ್ಲಿ ಇನ್ನೂ ಪ್ರಗತಿ ಆಗದಿದ್ದರೂ. ರಿಯಲ್ ಎಸ್ಟೇಟ್ ಚಿಗುರಿಕೊಂಡಿದ್ದು. ವಿವಿಧ ಪ್ರದೇಶದಲ್ಲಿ ಭೂಮಿಗೆ ಬಂಗಾರದ ಬೆಲೆ ಬರುವುದಕ್ಕೆ ಪ್ರಾರಂಭವಾಗಿದೆ. ವಿಮಾನ ನಿಲ್ದಾಣಕ್ಕೆ ಜಾಗಗಳನ್ನು ಶಾರ್ಟ್ ಲಿಸ್ಟ್ ಮಾಡಿದ ಮೇಲೆ ಭೂಮಿ ಬೆಲೆ ಹಲವು ಪಟ್ಟು ಹೆಚ್ಚಳವಾಗಿದೆ.
ನಗರದ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಳೆದ ಒಂದು ವರ್ಷದಿಂದಲೂ ಹೆಚ್ಚು ಚರ್ಚೆ ನಡೆಯುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಜಾಗ ಶಾರ್ಟ್ ಲಿಸ್ಟ್ ಆಗುವ ಸಾಧ್ಯತೆ ಇದೆ. ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಲವು ಜಾಗಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗಿತ್ತು. ಅವುಗಳಲ್ಲಿ ಕನಕಪುರ ರಸ್ತೆಯಲ್ಲಿ ಎರಡು ಜಾಗ ಮತ್ತು ನೆಲಮಂಗಲದ ಕುಣಿಗಲ್ ರಸ್ತೆಯಲ್ಲಿ ಒಂದು ಪ್ರಮುಖವಾಗಿದೆ. ಈ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ಚುರುಕು ಪಡೆದುಕೊಂಡಿದ್ದು ಭೂಮಿಗೆ ಬಂಗಾರದ ಬೆಲೆ ಬಂದಿದೆ.

ಕಳೆದ ಆರು ತಿಂಗಳ ಅವಧಿಯಲ್ಲಿ ಕರ್ನಾಟಕ ಸರ್ಕಾರವು ತೆಗೆದುಕೊಂಡ ಕೆಲವು ಪ್ರಮುಖ ನಿರ್ಧಾರಗಳು ದಕ್ಷಿಣ ಕರ್ನಾಟಕದಲ್ಲಿ ಭೂಮಿ ಬೆಲೆ ಹೆಚ್ಚಳವಾಗುವುದಕ್ಕೆ ಕಾರಣವಾಗಿದೆ. ಅದರಲ್ಲಿ ಮುಖ್ಯವಾಗಿ ಬೆಂಗಳೂರಿನಲ್ಲಿ ಮೆಟ್ರೋ ವಿಸ್ತರಣೆ, ಪೆರಿಫೆರಲ್ ರಿಂಗ್ ರೋಡ್, ಸುರಂಗ ಮಾರ್ಗ, ಜಿಲ್ಲೆಗಳ ಹೆಸರು ಬದಲಾವಣೆ ಹಾಗೂ ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ವಿಚಾರವೂ ಪ್ರಮುಖವಾಗಿದೆ. ರಾಮನಗರವನ್ನು ಬೆಂಗಳೂರು ದಕ್ಷಿಣ ಎಂದು ಬದಲಾಯಿಸಿದ ಮೇಲೆ ಈ ಭಾಗದಲ್ಲೂ ಭೂಮಿಯ ಬೆಲೆ ಹೆಚ್ಚಳವಾಗುತ್ತಿದೆ. ಈ ಭಾಗದಲ್ಲಿ ಭೂಮಿ ಬೆಲೆ ಏರಿಕೆ ಆಗಿದೆ ಎಂದು DH ವರದಿ ಮಾಡಿದೆ.
ಇದೀಗ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಜಾಗ ಇನ್ನೂ ಅಂತಿಮವಾಗಿಲ್ಲ. ಆದರೆ ಶಾರ್ಟ್‌ಲಿಸ್ಟ್ ಆಗಿರುವ ಪ್ರದೇಶಗಳಲ್ಲೇ ಒಂದು ಜಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗುವುದಂತೂ ಬಹುತೇಕ ಖಚಿತವಾಗಿದೆ. ಹೀಗಾಗಿ, ಜನ ಇಲ್ಲಿ ಭೂಮಿ ಖರೀದಿ ಮಾಡುವುದು ಹಾಗೂ ಹೂಡಿಕೆ ಮಾಡುವುದು ಹೆಚ್ಚಾಗಿದೆ. ಹೀಗಾಗಿ ಸಹಜವಾಗಿಯೇ ಭೂಮಿ ಬೆಲೆ ಹೆಚ್ಚಳವಾಗಿದೆ. ಈ ಭಾಗದಲ್ಲಿ ಭೂಮಿಯ ಬೆಲೆಯು ಈ ಹಿಂದೆ ಎಕರೆಗೆ 1ರಿಂದ 2 ಕೋಟಿ ರೂಪಾಯಿ ಇತ್ತು. ಆದರೆ ಇದೀಗ 4 ಕೋಟಿ ರೂ.ಗಳಿಗೆ ಏರಿಕೆ ಕಂಡಿದೆ.
ಈ ಭಾಗದಲ್ಲಿ ಯಾರೂ ಇದೀಗ ಭೂಮಿ ಮಾರಾಟ ಮಾಡುವುದಕ್ಕೆ ಮುಂದಾಗುತ್ತಿಲ್ಲ. ಕಾರಣ ಇಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗುವುದು ಖಚಿತವಾದರೆ ಭೂಮಿಗೆ ಇನ್ನಷ್ಟು ಬೆಲೆ ಬರಬಹುದು. ಹೀಗಾಗಿ ಈಗ ಮಾರಾಟ ಮಾಡಿ ಲಾಸ್ ಯಾಕೆ ಮಾಡಿಕೊಳ್ಳಬೇಕು ಎನ್ನುವುದು ಭೂಮಾಲೀಕರ ಲೆಕ್ಕಾಚಾರವಾಗಿದೆ. ಇನ್ನು ಜನ ಹೆಚ್ಚಾಗಿ ಕನಕಪುರದಲ್ಲಿ ಆಸ್ತಿ ಖರೀದಿ ಮಾಡುವುದಕ್ಕೆ ಮುಂದಾಗುತ್ತಿದ್ದಾರೆ. ಇಲ್ಲೇ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ ಎನ್ನುವುದು ಅವರ ನಂಬಿಕೆ. ಡಿ.ಕೆ ಶಿವಕುಮಾರ್ ಅವರು ರಾಮನಗರದ ರಿಯಲ್ ಎಸ್ಟೇಟ್ ಅಥವಾ ಇಲ್ಲಿನ ಭೂಮಾಲೀಕರಿಗೆ ಅನುಕೂಲವಾಗಬೇಕು ಎಂದು ಈ ಹಿಂದೆ ಹೇಳಿದ್ದರು. ಇನ್ನು ಕನಕಪುರ ಮುಖ್ಯ ರಸ್ತೆಯಲ್ಲಿನ ಕೆಲವು ಪ್ಲಾಟ್‌ಗಳು ಎಕರೆಗೆ 12ರಿಂದ18 ಕೋಟಿ ರೂಪಾಯಿಗೆ ಬೆಲೆ ಬಾಳುತ್ತಿವೆ ಎಂದು ಹೇಳಲಾಗಿದೆ.












Click it and Unblock the Notifications