Bengaluru Second Airport: ತಮಿಳುನಾಡಿಗೆ ಮಾಸ್ಟರ್‌ ಸ್ಟ್ರೋಕ್ ಕೊಟ್ಟ ಕರ್ನಾಟಕ ಸರ್ಕಾರ!

Bengaluru Second Airport: ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಚಾರದಲ್ಲಿ ಎಂಡ್‌ ಟು ಎಂಡ್‌ ಕನೆಕ್ಟಿವಿಟಿಯಲ್ಲಿ ರಾಜ್ಯ ಸರ್ಕಾರ ಪ್ಲ್ಯಾನ್ ತಮಿಳುನಾಡು ಸರ್ಕಾರಕ್ಕೆ ಮಾಸ್ಟರ್‌ ಸ್ಟ್ರೋಕ್ ಕೊಟ್ಟಿದೆ. ಬೆಂಗಳೂರು ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ರಾಜ್ಯ ಸರ್ಕಾರವು ಮಾಸ್ಟರ್‌ ಪ್ಲ್ಯಾನ್‌ ಮಾಡಿದೆ. ಈ ಮೂಲಕ ತಮಿಳುನಾಡಿಗೆ ಶಾಕ್‌ ಕೊಡುವುದರೊಂದಿಗೆ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕಿಂತ ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಭಿನ್ನವಾಗಿರಲಿದೆ. ಅದು ಹೇಗೆ ತಮಿಳುನಾಡಿಗೆ ಕರ್ನಾಟಕ ಕೊಟ್ಟಿರುವ ಶಾಕ್‌ ಏನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಕರ್ನಾಟಕ ಸರ್ಕಾರವು ಎರಡನೇ ವಿಮಾನ ನಿಲ್ದಾಣದ ವಿಚಾರದಲ್ಲಿ ಮಾಸ್ಟರ್‌ ಪ್ಲ್ಯಾನ್ ಮಾಡಿಕೊಂಡಿದ್ದು. ಇದು ತಮಿಳುನಾಡಿಗೆ ಭಾರೀ ಶಾಕ್‌ ಕೊಟ್ಟಿದೆ. ತಮಿಳುನಾಡು ಸರ್ಕಾರವು ಅಲ್ಲಿನ ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಮುಂದಾಗಿದೆ. ಆದರೆ, ಅಲ್ಲಿ ಯಾವುದೇ ಎಂಡ್‌ ಟು ಎಂಡ್‌ ಕನೆಕ್ಟಿವಿಟಿ ಇಲ್ಲ. ಮೆಟ್ರೋ ಸೇರಿದಂತೆ ಯಾವುದೇ ಪ್ರಮುಖ ಸಾರಿಗೆ ವ್ಯವಸ್ಥೆಯೂ ಅಲ್ಲಿಲ್ಲ. ಕೈಗಾರಿಕಾ ಪ್ರದೇಶವಾಗಿರುವುದರಿಂದ ಈ ಭಾಗದಲ್ಲಿ ಭಾರೀ ಗಾತ್ರದ ವಾಹನಗಳ ಸಂಚಾರವಿದೆ. ತಮಿಳುನಾಡು - ಕರ್ನಾಟಕ, ಉತ್ತರ - ದಕ್ಷಿಣ ಭಾರತದ ಮಾರ್ಗದಲ್ಲಿ ಸಂಚರಿಸುವ ಹಲವು ವಾಹನಗಳು ಇದೇ ಮಾರ್ಗವಾಗಿ ಸಂಚರಿಸುತ್ತವೆ.

Bengaluru Second Airport Karnataka Government Gave Master Stroke to Tamil Nadu

ಸಹಜವಾಗಿಯೇ ಈ ಭಾಗದಲ್ಲಿ ಮುಂದಿನ ದಿನಗಳಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾದರೆ ಟ್ರಾಫಿಕ್‌ ಜಾಮ್‌ ಹೆಚ್ಚಳವಾಗಲಿದೆ. ಇದರಿಂದ ಈ ವಿಮಾನ ನಿಲ್ದಾಣದ ಬಳಕೆ ಸವಾಲಾಗಿ ಪರಿಣಮಿಸಲಿದೆ. ಅದೇ ಕರ್ನಾಟಕದಲ್ಲಿ ಈಗಾಗಲೇ ಇರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಉದ್ದೇಶಿತ ವಿಮಾನ ನಿಲ್ದಾಣ ಎರಡಕ್ಕೂ ಮುಂದಿನ ದಿನಗಳಲ್ಲಿ ಮೆಟ್ರೋ ಕನೆಕ್ಟಿವಿಟಿ ಸಿಗಲಿದೆ.

ದೇವನಹಳ್ಳಿಗೆ ಈಗಾಗಲೇ ಮೆಟ್ರೋ ವಿಸ್ತರಣೆ ಮಾಡುವುದಾಗಿ ರಾಜ್ಯ ಸರ್ಕಾರವು ಘೋಷಣೆ ಮಾಡಿದೆ. ಆದರೆ, ಇದೇ ಸಂದರ್ಭದಲ್ಲಿ ಹೊಸೂರಿನಲ್ಲಿ ಈ ರೀತಿಯ ಪ್ರಸ್ತಾವನೆಯೇ ಇಲ್ಲ. ತಮಿಳುನಾಡು ಸರ್ಕಾರವು ಕರ್ನಾಟಕಕ್ಕೆ ಕೊಟ್ಟಿದ್ದ ಪ್ರಸ್ತಾವನೆಯನ್ನು ಈಗಾಗಲೇ ತಿರಸ್ಕರಿಸುವುದು ಕರ್ನಾಟಕಕ್ಕೆ ಈಗ ಲಾಭವಾಗಿ ಪರಿಣಮಿಸಿದೆ.

ಮೆಟ್ರೋದಿಂದ ಕೆಲವೇ ಕಿ.ಮೀ ದೂರದಲ್ಲಿ ವಿಮಾನ ನಿಲ್ದಾಣ

ಮೆಟ್ರೋ ಸಂಪರ್ಕ ಇರುವ ಕೆಲವೇ ಕಿ.ಮೀ ದೂರದಲ್ಲಿ ಎರಡನೇ ವಿಮಾನ ನಿಲ್ದಾಣದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗಿದೆ. ಇದರಿಂದ ವಿಮಾನ ನಿಲ್ದಾಣಕ್ಕೆ ಹೋಗಲು ಸಹಕಾರಿಯಾಗಲಿದೆ. ಇನ್ನು ಕುಣಿಗಲ್‌ ರಸ್ತೆ ಹಾಗೂ ಕನಕಪುರ ರಸ್ತೆ ಎರಡು ಜಾಗಗಳಿಂದ ಬೆಂಗಳೂರಿಗೆ 50 ಕಿ.ಮೀ ದೂರವಿದೆ. ಇನ್ನು ನೆಲಮಂಗಲ-ಹಾಸನ ಹೆದ್ದಾರಿಯ ಜಂಕ್ಷನ್‌ ಕೇವಲ 10 ಕಿ.ಮೀ. ದೂರದಲ್ಲಿದೆ. ಇಲ್ಲೊಂದು ಜಾಗವನ್ನು ಗುರುತಿಸಲಾಗಿದೆ.

ಕನಕಪುರ ರಸ್ತೆ-ನೈಸ್‌ ರಸ್ತೆ ಜಂಕ್ಷನ್‌ನಿಂದ ಕೇವಲ 10 ಕಿ.ಮೀ. ದೂರದಲ್ಲಿ ಮತ್ತೊಂದು ಜಾಗವನ್ನು ನಿಗದಿ ಮಾಡಲಾಗಿದೆ. ವಿಶೇಷವೆಂದರೆ ಈಗ ಗುರುತಿಸಲಾಗಿರುವ ಜಾಗಗಳ ಮೆಟ್ರೋ ಕೊನೆಯ ನಿಲ್ದಾಣದಿಂದ ಕೆಲವೇ ಕಿ.ಮೀ ದೂರದಲ್ಲಿ ಇದೆ. ಮುಂದಿನ ದಿನಗಳಲ್ಲಿ ಇಲ್ಲಿಗೆ ಮೆಟ್ರೋ ವಿಸ್ತರಣೆ ಸಹ ಮಾಡಿಕೊಳ್ಳಲು ಅವಕಾಶ ಇರಲಿದೆ.

ಹೊಸೂರಿಗೆ ಮೆಟ್ರೋ ವಿಸ್ತರಿಸಿರಲಿಲ್ಲ: ತಮಿಳುನಾಡು ಸರ್ಕಾರವು ಹೊಸೂರಿಗೆ ವಿಮಾನ ನಿಲ್ದಾಣ ವಿಸ್ತರಣೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಕನ್ನಡಿಗರ ವಿರೋಧದಿಂದ ಇದು ಸಾಧ್ಯವಾಗಿರಲಿಲ್ಲ. ಇದರಿಂದ ಇದೀಗ ಲಾಭವಾಗಿದೆ.

ಇನ್ನು ತಮಿಳುನಾಡು ಸರ್ಕಾರವು, ಕರ್ನಾಟಕ ಸರ್ಕಾರಕ್ಕಿಂತ ವೇಗವಾಗಿ ಕೆಲಸ ಮಾಡುತ್ತಿದೆ. ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ 2 ಸ್ಥಳಗಳನ್ನು ಫೈನಲ್‌ ಮಾಡಿದ್ದು. ಅದನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಸಲ್ಲಿಕೆ ಮಾಡಿತ್ತು. ಇದೀಗ ಈ ಎರಡೂ ಸ್ಥಳಗಳಲ್ಲಿ ಪ್ರಾಧಿಕಾರ ಪರಿಶೀಲನೆ ನಡೆಸಿದೆ.

ಬೆಂಗಳೂರು ಎರಡನೇ ವಿಮಾನ ನಿಲ್ದಾಣ ಅಭಿವೃದ್ಧಿಯ ವಿಚಾರದ ಜೊತೆ ಜೊತೆಗೆ ಎಚ್‌ಎಎಲ್‌ ವಿಮಾನ ನಿಲ್ದಾಣದ ಅಭಿವೃದ್ಧಿಯ ಬಗ್ಗೆಯೂ ಚರ್ಚೆಗಳು ಜೋರಾಗಿವೆ. ಸಂಸದ ತೇಜಸ್ವಿ ಸೂರ್ಯ ಅವರು ಎಚ್‌ಎಎಲ್‌ ವಿಮಾನ ನಿಲ್ದಾಣ ಅಭಿವೃದ್ಧೀ ಮಾಡುವಂತೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+