Bengaluru 2nd Airport: ಹೊಸ ಏರ್‌ಪೋರ್ಟ್‌ಗೆ ಯಾವ ಜಾಗ ಫೈನಲ್‌? ಸಚಿವ ಎಂಬಿ ಪಾಟೀಲ್ ಮಹತ್ವದ ಮಾಹಿತಿ

ಬೆಂಗಳೂರಿಗೆ ಎರಡನೇ ಏರ್‌ಪೋರ್ಟ್‌ ನಿರ್ಮಿಸುವ ಸಲುವಾಗಿ ಕರ್ನಾಟಕ ಸರ್ಕಾರವು ಮೂರು ಜಾಗಗಳಲ್ಲಿ ಅಂತಿಮಗೊಳಿಸಿ ಕೇಂದ್ರದ ಅನುಮೋದನೆಗೆ ಕಳಿಸಿಕೊಟ್ಟಿದೆ. ಕುಣಿಗಲ್‌ ಬಳಿಯ ಹಾಸನ ಹೆದ್ದಾರಿ ಸಮೀಪ ಒಂದು ಜಾಗ ಹಾಗೂ ಕನಕಪುರ ರಸ್ತೆಯಲ್ಲಿ ಎರಡು ಜಾಗಗಳನ್ನು ಗುರುತಿಸಲಾಗಿದೆ. ಈ ಮೂರು ಸ್ಥಳಗಳ ವರದಿಯನ್ನು ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಕಳುಹಿಸಲಾಗಿದೆ. ಈ ಮೂರರಲ್ಲಿ ಯಾವ ಸ್ಥಳ ಫೈನಲ್‌ ಆಗಲಿದೆ ಎಂಬ ಗೊಂದಲ ಈಗಲೂ ಇದೆ. ಈ ಬಗ್ಗೆ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

ಬೆಂಗಳೂರಿಗೆ ಹೊಸ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಯಾರ ಒತ್ತಡ ಅಥವಾ ಒತ್ತಾಯಕ್ಕೂ ಮಣಿಯದೆ ನಿರ್ಮಿಸಲಾಗುವುದು. ಬೆಂಗಳೂರಿನ ಭವಿಷ್ಯದ ಬೆಳೆವಣಿಗೆ ಮತ್ತು ಕೈಗಾರಿಕೋದ್ಯಮ, ಉದ್ಯೋಗ ಸೃಷ್ಟಿ ಎಲ್ಲವನ್ನೂ ಗಮನದಲ್ಲಿರಿಸಿಕೊಂಡು ಈ ಎರಡನೇ ಏರ್‌ಪೋರ್ಟ್‌ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದೇವೆ. ಈಗಾಗಲೇ ಬೆಂಗಳೂರಿನಲ್ಲಿ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ನಮ್ಮ ಸರ್ಕಾರದ ವತಿಯಿಂದ ಮೂರು ಸ್ಥಳಗಳ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ರವಾನಿಸಲಾಗಿದೆ ಎಂದು ಎಂಬಿ ಪಾಟೀಲ್‌ ಹೇಳಿದ್ದಾರೆ.

Bengaluru Second Airport Final Approval To Be Sought In Delhi Says Minister MB Patil

ಬೆಂಗಳೂರು ದಕ್ಷಿಣ ಭಾಗದ ಕನಕಪುರ ರಸ್ತೆಗೆ ಸಮೀಪ ಎರಡು ಸ್ಥಳಗಳು ಹಾಗೂ ನೆಲಮಂಗಲ-ಕುಣಿಗಲ್ ರಸ್ತೆಯಲ್ಲಿ ಇನ್ನೊಂದು ಸ್ಥಳವನ್ನು ಗುರುತಿಸಿದ್ದೇವೆ. ಸದ್ಯ ವಿಧಾನ ಮಂಡಲದ ಅಧಿವೇಶನ ನಡೆಯುತ್ತಿದ್ದು, ಇದು ಮುಗಿದ ನಂತರ ನಾವು ದೆಹಲಿಗೆ ಭೇಟಿ ನೀಡಲಿದ್ದೇವೆ. ಈ ಪ್ರಸ್ತಾಪಿತ ಸ್ಥಳಗಳ ಬಗ್ಗೆ ಕೇಂದ್ರ ಸರ್ಕಾರದ ಸಂಬಂಧಿತ ಇಲಾಖೆಗಳು ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತೇವೆ. ಬಳಿಕ ಎರಡನೇ ಏರ್‌ಪೋರ್ಟ್‌ಗೆ ಅಂತಿಮ ಅನುಮೋದನೆ ಪಡೆಯಲು ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ವಿಮಾನ ನಿಲ್ದಾಣ ಪ್ರಾಧಿಕಾರದವರು ನಾವು ಪ್ರಸ್ತಾಪಿಸಿರುವ ಜಾಗಗಳನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸುತ್ತಾರೆ. ಖುದ್ದು ಅವರೇ ಆಗಮಿಸಿ ಸ್ಥಳವನ್ನು ವೀಕ್ಷಣೆ ಮಾಡಲಿದ್ದಾರೆ. ಎಲ್ಲ ಅಂಶಗಳನ್ನು ಮೌಲ್ಯಮಾಪನ ಮಾಡಿ ಎರಡನೇ ಏರ್‌ಪೋರ್ಟ್‌ಗೆ ಸ್ಥಳ ಅಂತಿಮಗೊಳಿಸಲಿದ್ದಾರೆ. ಯಾವ ಜಾಗ ಸೂಕ್ತ ಎಂದು ಅವರೇ ಪ್ರಮಾಣೀಕರಿಸುತ್ತಾರೆ. ಇದಾದ ನಂತರ ರಾಜ್ಯ ಸರ್ಕಾರದಿಂದ ಮುಂದಿನ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ವಿವರಿಸಿದ್ದಾರೆ.

Bengaluru Second Airport Final Approval To Be Sought In Delhi Says Minister MB Patil

ಇದೇ ಜಾಗ ಗುರುತಿಸಲು ಕಾರಣವೇನು?:

ಬೆಂಗಳೂರಿನ ಸಮೀಪದಲ್ಲೇ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಗೆ ಮೂರು ಸ್ಥಳಗಳನ್ನು ಗುರುತಿಸಲಾಗಿದೆ. ನೆಲಮಂಗಲ-ಕುಣಿಗಲ್ ರಸ್ತೆಯಲ್ಲಿ ಒಂದು ಹಾಗೂ ಕನಕಪುರ ರಸ್ತೆಯಲ್ಲಿ ಎರಡು ಸ್ಥಳಗಳನ್ನು ಗುರುತಿಸಿ ಅನುಮೋದನೆಗಾಗಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಕಳುಹಿಸಲಾಗಿದೆ. ಈ ಪೈಕಿ ಒಂದು ಜಾಗ ನೆಲಮಂಗಲ-ಹಾಸನ ಹೆದ್ದಾರಿ ಜಂಕ್ಷನ್‌ನಿಂದ 10 ಕಿ.ಮೀ ದೂರದಲ್ಲೇ ಇದೆ. ಮತ್ತೆರಡು ಜಾಗ ಕನಕಪುರ ರಸ್ತೆ-ನೈಸ್ ರಸ್ತೆ ಜಂಕ್ಷನ್‌ನಿಂದ ಕೇವಲ 10 ಕಿ.ಮೀ ದೂರದಲ್ಲೇ ಇವೆ. ಈ ಎರಡೂ ರಸ್ತೆಗಳು ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿಗಳ ಸಮೀಪದಲ್ಲೇ ಇವೆ. ಈ ಎರಡೂ ಜಾಗಗಳ ಸಮೀಪವೇ ಮೆಟ್ರೋ ಕೊನೇ ನಿಲ್ದಾಣಗಳು ಕೂಡ ಇವೆ. ಭವಿಷ್ಯದ ರಸ್ತೆ ಸಂಪರ್ಕ, ಮೆಟ್ರೋ ಸೇವೆ ಗಮನದಲ್ಲಿಟ್ಟುಕೊಂಡು ಈ ಜಾಗಗಳನ್ನು ಗುರುತಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+