Liquor: ಮದ್ಯ ಬೇಡ ಎನ್ನುತ್ತಿರುವ ಮದ್ಯ ಪ್ರಿಯರು, ಸರ್ಕಾರಕ್ಕೆ ತಲೆನೋವು!
Liquor: ಭಾರತದಲ್ಲೇ ಅತ್ಯಂತ ಹೆಚ್ಚು ವಿಸ್ಕಿ ಕರ್ನಾಟಕದಲ್ಲಿ ಮಾರಾಟವಾಗುತ್ತಿದೆ ಎನ್ನುವ ವರದಿಯೊಂದು ಇತ್ತೀಚೆಗೆ ಪ್ರಕಟವಾಗಿತ್ತು. ಇದರ ಬೆನ್ನಲ್ಲೇ ಬಿಯರ್ ಸೇರಿದಂತೆ ವಿವಿಧ ಮದ್ಯಗಳ ಮಾರಾಟವು ಭರ್ಜರಿ ಕುಸಿತ ಕಂಡಿದ್ದು, ಮದ್ಯ ಪ್ರಿಯರು ಕರ್ನಾಟಕ ಸರ್ಕಾರಕ್ಕೆ ಭರ್ಜರಿ ಶಾಕ್ ಕೊಟ್ಟಿದ್ದಾರೆ. ಅದರ ವಿವರ ಈ ಲೇಖನದಲ್ಲಿ ನೋಡೋಣ.
ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಅತ್ಯಧಿಕ ಮದ್ಯ ಮಾರಾಟವಾಗುತ್ತದೆ. ದಕ್ಷಿಣ ಭಾರತದ ಉಳಿದ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಬೆಂಗಳೂರಿನಲ್ಲಿ ಮದ್ಯದ ಗುಣಮಟ್ಟ ಹಾಗೂ ರುಚಿ ಉತ್ತಮವಾಗಿರುತ್ತದೆ ಎನ್ನುವುದು ಸಹ ಇದಕ್ಕೆ ಕಾರಣ. ಬೆಂಗಳೂರಿನಿಂದ ವಿವಿಧ ರಾಜ್ಯಗಳಿಂದ ಬರುವ ಜನರು ಸಹ ಮದ್ಯ ಖರೀದಿ ಮಾಡುವುದು ಇದೆ.

ಇಲ್ಲಿ ಫಸ್ಟ್ ಕ್ಲಾಸ್ ಅಥವಾ ಬ್ರ್ಯಾಂಡೆಡ್ ಮದ್ಯ ಸಿಗುತ್ತದೆ ಎನ್ನುವುದು ಸಹ ಇದಕ್ಕೆ ಮುಖ್ಯ ಕಾರಣಗಳಲ್ಲಿ ಒಂದಾಗಿದೆ. ಆದರೆ ಇಷ್ಟೆಲ್ಲದರ ನಡುವೆಯೂ ಕರ್ನಾಟಕದಲ್ಲಿ ಮದ್ಯ ಮಾರಾಟ ಭಾರೀ ಕುಸಿತ ಕಂಡಿದೆ. ಕಳೆದ ವರ್ಷಗಳಿಗೆ ಹೋಲಿಕೆ ಮಾಡಿದರೆ ಶೇ15 ರಿಂದ 20 ರಷ್ಟು ಮದ್ಯ ಮಾರಾಟ ಕುಸಿತ ಕಂಡಿದೆ ಎಂದು ಅಂದಾಜಿಸಲಾಗಿದೆ. ಅದಕ್ಕೆ ಕಾರಣವೂ ಇದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬರೋಬ್ಬರಿ ಮೂರರಿಂದ ನಾಲ್ಕು ಬಾರಿ ಬಿಯರ್ ಸೇರಿದಂತೆ ಮದ್ಯದ ಬೆಲೆ ಏರಿಕೆಯಾಗಿದೆ. ಈ ರೀತಿ ನಿರಂತರವಾಗಿ ಮದ್ಯದ ಬೆಲೆ ಏರಿಕೆ ಆಗಿರುವುದರಿಂದ ಮದ್ಯ ಮಾರಾಟದಲ್ಲಿ ಭಾರೀ ಕುಸಿತ ಕಂಡಿದೆ ಎನ್ನುತ್ತಿವೆ ಅಂಕಿ - ಅಂಶಗಳು ಕಳೆದ ಆರು ತಿಂಗಳ ಅವಧಿಯಲ್ಲಿ ಮದ್ಯ ಮಾರಾಟ ಬೆಲೆಯು ಭರ್ಜರಿ ಕುಸಿತ ಕಂಡಿದೆ. ಈ ಮೂಲಕ ಮದ್ಯ ಬೆಲೆ ಏರಿಕೆಯಿಂದ ಹೆಚ್ಚು ಆದಾಯ ಸಂಗ್ರಹ ಮಾಡಿಕೊಳ್ಳಬಹುದು ಎಂದು ಲೆಕ್ಕಾಚಾರ ಹಾಕಿಕೊಂಡಿದ್ದ ಸರ್ಕಾರಕ್ಕೆ ಕರ್ನಾಟಕದ ಮದ್ಯ ಪ್ರಿಯರು ಶಾಕ್ ನೀಡಿದ್ದಾರೆ.
ಕಳೆದ ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ವರ್ಷ ಮದ್ಯ ವ್ಯಾಪಾರ ಕುಸಿತ ಕಂಡಿದೆ. ಅಬಕಾರಿ ಇಲಾಖೆಯ ಅರ್ಧ ವಾರ್ಷಿಕ ವಹಿವಾಟಿನ ಡೇಟಾದಲ್ಲಿ ಉಲ್ಲೇಖ ಮಾಡಿರುವಂತೆ ಮದ್ಯ ಮಾರಾಟ ಭಾರೀ ಇಳಿಕೆ ಕಂಡಿದೆ. 2023 ಮತ್ತು 2024ಕ್ಕೆ ಹೋಲಿಕೆ ಮಾಡಿದರೆ ಮದ್ಯ ಮಾರಾಟ ಇಳಿಕೆಯಾಗಿದೆ. ಆದರೆ ಬೆಲೆ ಏರಿಕೆಯಿಂದ ನಷ್ಟದ ಮೇಲೆ ಭಾರೀ ಪರಿಣಾಮ ಬೀರಿಲ್ಲ. ಅದೇ ಸಂದರ್ಭದಲ್ಲಿ ಹೆಚ್ಚು ಲಾಭ ಸಹ ಆಗಿಲ್ಲ.
2023ನೇ ಸಾಲಿನ ಏಪ್ರಿಲ್-ಸೆಪ್ಟೆಂಬರ್ ನಡುವೆ 352.83 ಲಕ್ಷ ಬಾಕ್ಸ್ ಐಎಂಎಲ್ ಮದ್ಯ ಮಾರಾಟವಾದೆ. ಇನ್ನು 2024ರ ಅದೇ ಅವಧಿಯಲ್ಲಿ 345.76 ಲಕ್ಷ ಬಾಕ್ಸ್ಗೆ ಮದ್ಯ ಮಾರಾಟ ಇಳಿಕೆ ಕಂಡಿದೆ. ಆದರೆ, 2025ನೇ ಸಾಲಿನಲ್ಲಿ ಇದೇ ಅವಧಿಯಲ್ಲಿ ಕೇವಲ 342.93 ಲಕ್ಷ ಬಾಕ್ಸ್ ಮಾತ್ರ ಮದ್ಯ ಮಾರಾಟವಾಗಿದೆ. ಕಳೆದ ಸಾಲಿಗೆ ಹೋಲಿಕೆ ಮಾಡಿ, ನೋಡಿದರೆ ಬರೋಬ್ಬರಿ 2.83 ಲಕ್ಷ ಬಾಕ್ಸ್ ವ್ಯಾಪಾರ ಕುಸಿತ ಕಂಡಿದೆ.












Click it and Unblock the Notifications