Bengaluru Road Rage: ಬೆಚ್ಚಿ ಬೀಳುವ ರೋಡ್ ರೇಜ್ ವಿಡಿಯೋ ವೈರಲ್: ಕಾರು ಚಾಲಕ ಅರೆಸ್ಟ್, ಆಗಿದ್ದೇನು?
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹಾಡ ಹಗಲೇ ವ್ಯಕ್ತಿಯೊಬ್ಬನನ್ನು ಕಾರಿನ ಬಾನೆಟ್ ಮೇಲೆ ಕಿಲೋ ಮೀಟರ್ಗಟ್ಟಲೇ ಹೊತ್ತೊಯ್ದ ಘಟನೆ ಬುಧವಾರ ಮಧ್ಯಾಹ್ನ ಎಚ್ಎಎಲ್ ರಸ್ತೆಯಲ್ಲಿ ನಡೆದಿದೆ. ಈ ಭೀಕರ ದೃಶ್ಯಗಳನ್ನು ದಾರಿಹೋಕರು ಸೆರೆ ಹಿಡಿದಿದ್ದು, ಇಂಟರ್ನೆಟ್ನಲ್ಲಿ ಹರಿದಾಡುತ್ತಿದೆ. ಬೆಂಗಳೂರು ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಕಾರಿನ ಚಾಲಕನನ್ನು ಬಂಧಿಸಿದ್ದಾಗಿ ಹಲಸೂರು ಪೊಲೀಸರು ಖಚಿತಪಡಿಸಿದ್ದಾರೆ. ವಿಡಿಯೋ ನೋಡಿದ ಬೆಂಗಳೂರಿಗರು ಬೆಚ್ಚಿ ಬಿದ್ದಿದ್ದಾರೆ.
ಕಾರು ಚಾಲಕ, ಆರೋಪಿ ಸುರೇಶ್ ನನ್ನು ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಈತ ಪುಲಕೇಶಿ ನಗರ ನಿವಾಸಿ. ಕಾರಿನ ಬಾನೆಟ್ ಮೇಲಿದ್ದ ವ್ಯಕ್ತಿಯನ್ನು ಗೂಡ್ಸ್ ವಾಹನ ಚಾಲಕ ನಂಜುಂಡ ಎಂದು ಗುರುತಿಸಲಾಗಿದೆ. ನಗರದ ಟ್ರನಿಟಿ ವೃತ್ತ ಬಳಿ ಬುಧವಾರ ಗೂಡ್ಸ್ ವಾಹನಕ್ಕೆ ಕಾರು ತಾಗಿದೆ. ಈ ಸಂಬಂಧ ರಸ್ತೆಯಲ್ಲಿ ಗಾಡಿ ಸೈಡಿಗೆ ಹಾಕುವಂತೆ ಹೇಳಲಾಗಿದೆ. ಆದರೆ ಕಾರು ನಿಂತಿಲ್ಲ. ಅಲ್ಲಿಂದಲೇ ಶುರುವಾದ ಜಗಳ ಸಿಬಿ ಜಂಕ್ಷನ್, ಎಎಸ್ಸಿ ಸೆಂಟರ್ ಕಾಲೇಜುವರೆಗೆ ಜಗಳ ಮುಂದುವರಿದಿದೆ.

ಕೊನೆಗೆ ಕಾರು ನಿಲ್ಲಿಸಿ ಜಗಳಕ್ಕೆ ಇಳಿದಿದ್ದ ಇಬ್ಬರ ಮಧ್ಯ ಮಾತಿನ ಚಕಮಕಿ ನಡೆದಿದೆ. ತನ್ನ ಸರಕು ವಾಹನಕ್ಕೆ ಹಾನಿ ಆಗಿದ್ದು, ಪರಿಹಾರ ನೀಡಬೇಕು. ಇಲ್ಲವೇ ರಿಪೇರಿ ಮಾಡಿಸಿಕೊಡಬೇಕೆಂದು ನಂಜುಂಡ ಕಾರು ಚಾಲಕ ಸುರೇಶನನ್ನು ಒತ್ತಾಯಿಸಿದ್ದಾರೆ. ನೋಡ ನೋಡುತ್ತಲೇ ವಾಗ್ವಾದ ತಾರಕಕ್ಕೇರಿದೆ. ಕಾರಿನಿಂದ ಕೆಳಗೆ ಇಳಿಯದ ಸುರೇಶ್ ಅಲ್ಲಿಂದ ಹೊರಡಲು ಮುಂದಾಗಿದ್ದಾನೆ.
ಬಾನೆಟ್ ಮೇಲೆ ಬಿದ್ದರೂ ಕಾರು ನಿಲ್ಲಿಸದೇ ದರ್ಪ
ಈ ವೇಳೆ ಕಾರಿನ ಮುಂದೆ ನಿಂತ ಸುರೇಶ್ ದಾರಿ ಬಿಡುವುದಿಲ್ಲ ಎಂದಿದ್ದಾರೆ. ನಿಲ್ಲಿಸಿ ಸಮಸ್ಯೆ ಬಗೆಹರಿಸಿಕೊಳ್ಳದೇ ಕಾರು ಚಾಲನೆ ಮಾಡಿದ ಸುರೇಶ್ ಕಾರಿನ ಬಾನೆಟ್ ಮೇಲೆ ಬಿದ್ದ ನಂಜುಂಡನನ್ನು ಒಂದು ಕಿಲೋ ಮೀಟರ್ ವರೆಗೆ ಹಾಗೆಯೇ ಹೊತ್ತೊಯ್ದು ದರ್ಪ ಮೆರೆದಿದ್ದಾನೆ. ಈ ವಿಡಿಯೋವನ್ನು ಸಾರ್ವಜನಿಕರು ಸೆರೆ ಹಿಡಿದಿದ್ದಾರೆ. ಈ ಘಟನೆ ಬೆಂಗಳೂರು ಜನರನ್ನು ಬೆಚ್ಚಿ ಬೀಳಿಸಿದೆ. ಹೀಗಾದರೆ ಏನ್ ಕಥೆ ಎಂದು ವಿಡಿಯೋ ಸೆರೆ ಹಿಡಿದ ಬೇರೊಂದು ವಾಹನ ಪ್ರಮಾಣಿಕರು ಮಾತನಾಡಿದ್ದು ಕೇಳಿಸುತ್ತದೆ. ಏ... ನಿಲ್ಲಿಸು ಎಂದು ನಂಜುಂಡ ಕೂಗಿದರೂ ಕಾರು ನಿಲ್ಲಿಸಿಲ್ಲ.
Shocking Road Rage Incident in Bengaluru! 🚨
— The Nalanda Index (@Nalanda_index) February 11, 2026
After a minor accident, an auto driver allegedly stood in front of the car to block it but the car driver moved forward, leaving the man clinging to the bonnet for dear life.
A case has been registered and the car driver has been… pic.twitter.com/r4nPUshMOa
ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ, ಕೊಲೆ ಯತ್ನದಡಿ ಕೇಸ್
ಇದೀಗ ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಶ್ನೆ ಎದ್ದಿದೆ. ಒಂದು ಜೀವಕ್ಕೆ ಬೆಲೆಯೇ ಇಲ್ಲವೇ. ಘಟನೆಯಲ್ಲಿ ಗೂಡ್ಸ್ ವಾಹನದ ಚಾಲಕನ ಜೀವಕ್ಕೆ ಏನಾದರೂ ಆಗಿದ್ದರೆ ಅವರ ಕುಟುಂಬದ ಗತಿ ಏನು? ಎಂದು ಸಾರ್ವಜನಿಕರು ಘಟನೆಯನ್ನು ಖಂಡಿಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಹಲಸೂರು ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನದಡಿ ದೂರು ದಾಖಲಾಗಿದೆ. ಕಾರು ಜಪ್ತಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಘಟನೆಗೆ ಜನರು ವ್ಯಾಪಕವಾಗಿ ಖಂಡಿಸಿದ್ದಾರೆ.
-
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ













Click it and Unblock the Notifications