Bengaluru: ಕಾರಿಗೆ ಒದ್ದ ಬೈಕ್ ಸವಾರನಿಗೆ ತಕ್ಕ ಪಾಠ ಕಲಿಸಿದ ಎಐ; ಈಗ ಜೆಮಿನಿನೇ ನನ್ನ ಲಾಯರ್‌ ಅಂದ CEO

ಇತ್ತೀಚಿನ ದಿನಗಳಲ್ಲಿ ಎಐ ಕೇವಲ ತಂತ್ರಜ್ಞಾನಕ್ಕೆ ಮಾತ್ರ ಸೀಮಿತವಾಗಿಲ್ಲ, ಸಾಮಾನ್ಯ ಜನರ ದೈನಂದಿನ ಸಮಸ್ಯೆಗಳನ್ನ ಬಗೆಹರಿಸುವಲ್ಲಿಯೂ ಸಹ ಪ್ರಮುಖ ಪಾತ್ರ ವಹಿಸುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಎಂದರೆ, ಬೆಂಗಳೂರಿನಲ್ಲಿ ನಡೆದ ರೋಡ್ ರೇಜ್ ಪ್ರಕರಣವೊಂದರಲ್ಲಿ ಸಿಇಒ ಒಬ್ಬರು ಗೂಗಲ್ ಜೆಮಿನಿ ಸಹಾಯದಿಂದ ತಮಗೆ ನ್ಯಾಯ ಒದಗಿಸಿಕೊಂಡಿರುವುದು.

ಹೌದು ನೋಡಿ, ಕಾರಿಗೆ ಹಾನಿ ಮಾಡಿದ ಬೈಕ್ ಸವಾರನಿಂದ ಕ್ಷಮೆ ಕೇಳಿಸಿ, ಪರಿಹಾರ ಪಡೆಯುವಲ್ಲಿ ಡ್ಯಾಶ್ ಕ್ಯಾಮ್ ಮತ್ತು ಜೆಮಿನಿ ಎಐ ಹೇಗೆ ನೆರವಾಯಿತು ಎಂಬುದನ್ನು ಸಿಇಒ ಸಿದ್ದಾರ್ಥ್ ದಿಯಾಲಾನಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Bengaluru Road Rage CEO Uses Gemini AI amp amp Dashcam Footage To Catch Biker Gets Apology amp amp Damages

ಬೆಂಗಳೂರು ರೋಡ್ ರೇಜ್ ಘಟನೆ: ಸೋನಿ ಸಿಗ್ನಲ್ ಬಳಿ ನಡೆದಿದ್ದೇನು?

ಸಿದ್ದಾರ್ಥ್ ದಿಯಾಲಾನಿ ಅವರು ಹೇಳುವ ಪ್ರಕಾರ, ಈ ಘಟನೆ ಬೆಂಗಳೂರಿನ ಸೋನಿ ಸಿಗ್ನಲ್ ಮತ್ತು ಈಜಿಪುರ ಸಿಗ್ನಲ್ ನಡುವೆ ನಡೆದಿದೆ. ಕಾರು ತಮ್ಮ ಬೈಕ್‌ಗೆ ತಗುಲಿದೆ ಎಂದು ತಪ್ಪಾಗಿ ಭಾವಿಸಿದ ಬೈಕ್ ಸವಾರನೊಬ್ಬ ತನ್ನ ಪತ್ನಿಯೊಂದಿಗೆ ಬಂದು ಸಿಇಒ ಕಾರನ್ನ ಅಡ್ಡಗಟ್ಟಿದ್ದಾನೆ. ಅಲ್ಲದೇ ಕಾರಿನ ಪಕ್ಕದ ಬಾಗಿಲಿಗೆ ಬಲವಾಗಿ ಒದ್ದಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಆತ, ತನ್ನ ಬೈಕ್ ಹತ್ತಿ ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದಾನೆ.

ಅಲ್ಲದೇ, ಸಿದ್ದಾರ್ಥ್‌ ಅವರ ಕಾರನ್ನ ಹಿಂದಿಕ್ಕಿ, ಹೆದರಿಸಲು ಪದೇ ಪದೇ ಬ್ರೇಕ್ ಹಾಕಿದ್ದಾನೆ. ಆದರೆ, ಈ ಎಲ್ಲಾ ದೃಶ್ಯಗಳು ಕಾರಿನಲ್ಲಿದ್ದ ಡ್ಯಾಶ್ ಕ್ಯಾಮ್‌ನಲ್ಲಿ ರೆಕಾರ್ಡ್ ಆಗುತ್ತಿವೆ ಎಂಬ ವಿಚಾರ ಆತನಿಗೆ ತಿಳಿದಿರಲಿಲ್ಲ.

ವಕೀಲನಂತೆ ನೆರವಾದ ಜೆಮಿನಿ ಎಐ

ಕಾರಿಗೆ ಆದ ದೊಡ್ಡ ಡೆಂಟ್ (ಜಖಂ) ನೋಡಿದ ಸಿದ್ದಾರ್ಥ್, ಆರಂಭದಲ್ಲಿ ಸುಮ್ಮನಾಗೋಣ ಎಂದುಕೊಂಡರೂ, ಬೈಕ್ ಸವಾರನಿಗೆ ತಕ್ಕ ಪಾಠ ಕಲಿಸಲೇಬೇಕು ಎಂದು ನಿರ್ಧರಿಸಿದರು. ಇದಕ್ಕಾಗಿ ಅವರು ಗೂಗಲ್‌ ಎಐ ಜೆಮಿನಿ ಮೊರೆ ಹೋದರು. ಕೋರಮಂಗಲ ಪೊಲೀಸ್ ಠಾಣೆಗೆ ನೀಡಬೇಕಾದ ದೂರಿನ ಪ್ರತಿಯನ್ನ ಜೆಮಿನಿ ಮೂಲಕ ಡ್ರಾಫ್ಟ್ ಮಾಡಿದರು.

ಅಷ್ಟೇ ಅಲ್ಲದೆ, ಪೊಲೀಸರಿಂದ ದೂರಿನ ಲಿಖಿತ ಸ್ವೀಕೃತಿಯನ್ನು ಕಡ್ಡಾಯವಾಗಿ ಪಡೆಯುವಂತೆ ಜೆಮಿನಿ ಅವರಿಗೆ ಸಲಹೆ ನೀಡಿತು. "ಜೆಮಿನಿ ಈಗ ನನ್ನ ವಕೀಲ" ಎಂದು ಸಿದ್ದಾರ್ಥ್ ಹೆಮ್ಮೆಯಿಂದ ಬರೆದುಕೊಂಡಿದ್ದಾರೆ.

ಕೋರಮಂಗಲ ಪೊಲೀಸ್‌ರ ಬೆಂಬಲ

ಜೆಮಿನಿ ಎಐ ಸಲಹೆಯಂತೆ ಸಿದ್ದಾರ್ಥ್ ದೂರಿನ ಸ್ವೀಕೃತಿ ಪ್ರತಿ ಇಲ್ಲದೆ ಕದಲುವುದಿಲ್ಲ ಎಂಬುದನ್ನು ಅರಿತ ಪೊಲೀಸರು, ಅತ್ಯಂತ ಸಹಕಾರದಿಂದ ವರ್ತಿಸಿದರು. ಸಿನಿಮಾಗಳಲ್ಲಿ ತೋರಿಸುವಂತೆ ಪೊಲೀಸರು ಸಿದ್ದಾರ್ಥ್ ಅವರಿಗೆ ಸಮೋಸ ತಿನ್ನಲು ನೀಡಿ, ಡ್ಯಾಶ್ ಕ್ಯಾಮ್ ವಿಡಿಯೋದಲ್ಲಿದ್ದ ಬೈಕ್ ನಂಬರ್ ಆಧರಿಸಿ ಡೇಟಾಬೇಸ್ ಮೂಲಕ ಸವಾರನ ಫೋನ್ ನಂಬರ್ ಪತ್ತೆ ಹಚ್ಚಿದರು. ಆತನನ್ನು ಠಾಣೆಗೆ ಕರೆಸಿದಾಗ, ಮೊದಲು ಕಾರು ಚಾಲಕನದ್ದೇ ತಪ್ಪು ಎಂದು ವಾದಿಸಿದ.

ಆದರೆ, ದೃಶ್ಯಾವಳಿಗಳನ್ನ ತೋರಿಸಿ, ಎಫ್‌ಐಆರ್ ದಾಖಲಿಸುವ ಎಚ್ಚರಿಕೆ ನೀಡಿದಾಗ ಆತನಿಗೆ ಪರಿಸ್ಥಿತಿಯ ಗಂಭೀರತೆ ಅರ್ಥವಾಯಿತು. ಕೊನೆಗೆ ಲಿಖಿತ ರೂಪದಲ್ಲಿ ಕ್ಷಮೆ ಕೇಳಿ, ಕಾರಿನ ದುರಸ್ತಿ ವೆಚ್ಚವನ್ನ ಭರಿಸಿದ. ಈ ಇಡೀ ಪ್ರಕ್ರಿಯೆ ಯಾವುದೇ ಲಂಚವಿಲ್ಲದೆ, ಕೋರಮಂಗಲ ಪೊಲೀಸರ ವೃತ್ತಿಪರತೆಯಿಂದ ಸುಖಾಂತ್ಯ ಕಂಡಿದೆ.

ನೆಟ್ಟಿಗರ ಭಾರೀ ಪ್ರತಿಕ್ರಿಯೆ

ಈ ಘಟನೆಯನ್ನ ಸಿದ್ದಾರ್ಥ್ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ನಂತರ, ನೆಟ್ಟಿಗರು ಭಾರಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. "ಡ್ಯಾಶ್ ಕ್ಯಾಮ್ ಮತ್ತು ಎಐ ಶಕ್ತಿ ಎಂತಹುದು ಎಂಬುದು ಇದರಿಂದ ಸಾಬೀತಾಗಿದೆ. ಕಾರಿಗೆ ಸೀಟ್ ಬೆಲ್ಟ್ ಮತ್ತು ಏರ್‌ಬ್ಯಾಗ್‌ಗಳಂತೆ ಡ್ಯಾಶ್ ಕ್ಯಾಮ್ ಕೂಡ ಕಡ್ಡಾಯವಾಗಬೇಕು" ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

"ನಮ್ಮ ದೇಶದಲ್ಲಿ ಡ್ಯಾಶ್ ಕ್ಯಾಮ್ ಬಗ್ಗೆ ಜನರಿಗೆ ಇನ್ನೂ ಅರಿವು ಮೂಡಬೇಕಿದೆ, ಕೇವಲ ಗೌಪ್ಯತೆಯ ನೆಪವೊಡ್ಡಿ ಇದನ್ನ ಕಡೆಗಣಿಸಬಾರದು, ಇಂತಹ ತಂತ್ರಜ್ಞಾನಗಳು ಸಂಕಷ್ಟದ ಸಮಯದಲ್ಲಿ ನಮ್ಮ ರಕ್ಷಣೆಗೆ ನಿಲ್ಲುತ್ತವೆ" ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+