Get Updates
Get notified of breaking news, exclusive insights, and must-see stories!

ಬೆಂಗಳೂರು ಲಾಲ್‌ಬಾಗ್‌ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ: ಈ ಬಾರಿ ದಾಖಲೆ ಆದಾಯ- ಎಷ್ಟು ಗೊತ್ತೇ?

'ಬೆಂಗಳೂರಿನ ಇತಿಹಾಸ’ ಎಂಬ ವಿಷಯದ ಹಿನ್ನೆಲೆಯಲ್ಲಿ ನಡೆದ ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ಆದಾಯ ಬಂದಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಎಷ್ಟು ಆದಾಯ ಬಂದಿದೆ? ಮಾಹಿತಿ ಪಡೆಯಿರಿ

ಬೆಂಗಳೂರು, ಜನವರಿ 31: ಬೆಂಗಳೂರಿನ ಲಾಲ್‌ಬಾಗ್ ಗಾರ್ಡನ್‌ನಲ್ಲಿ 2023 ರ ಗಣರಾಜ್ಯೋತ್ಸವದ ಫಲಪುಷ್ಪ ಪ್ರದರ್ಶನವು ದಾಖಲೆಯ ಆದಾಯವನ್ನು ಗಳಿಸುವ ಮೂಲಕ ಸೋಮವಾರ ಮುಕ್ತಾಯಗೊಂಡಿದೆ. 'ಬೆಂಗಳೂರಿನ ಇತಿಹಾಸ' ಎಂಬ ವಿಷಯದ ಹಿನ್ನೆಲೆಯಲ್ಲಿ ನಡೆದ ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ಆದಾಯ ಬಂದಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು 'ಟೈಮ್ಸ್‌ ಆಫ್‌ ಇಂಡಿಯಾ' ವರದಿಯನ್ನು ಪ್ರಕಟಿಸಿದೆ.

ಅಪಾರ ಆದಾಯದ ಹೊರತಾಗಿ, ಈ ವರ್ಷ 3.3 ಲಕ್ಷ ಪ್ರವಾಸಿಗರೊಂದಿಗೆ ಪುಷ್ಪ ಪ್ರದರ್ಶನವು ಅತ್ಯಧಿಕ ಜನಸಂದಣಿಯನ್ನು ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜನವರಿ 20 ರಂದು ಉದ್ಘಾಟನೆಗೊಂಡ 11 ದಿನಗಳ ಅವಧಿಯ ಕಾರ್ಯಕ್ರಮವು ಮೊದಲ ದಿನವೇ 77,000 ಜನರನ್ನು ಆಕರ್ಷಿಸಲು ಯಶಸ್ವಿಯಾಯಿತು. ಜನವರಿ 26 ರಂದು ಅತಿ ಹೆಚ್ಚು ಜನರು ಈ ಪ್ರದರ್ಶನಕ್ಕೆ ಭೇಟಿ ನೀಡಿದ್ದಾರೆ.

ಬೆಂಗಳೂರಿನ ಐಕಾನಿಕ್ ರಚನೆಗಳು ಮತ್ತು ಹೆಗ್ಗುರುತುಗಳ ಹೂವಿನ ಶಿಲ್ಪಗಳ ಜೊತೆಗೆ, ಗ್ಲಾಸ್ ಹೌಸ್ ಬಳಿ ಹಲವಾರು ಕಲಾಕೃತಿಗಳೊಂದಿಗೆ ಬೆಂಗಳೂರಿನ ಇತಿಹಾಸವನ್ನು ಬಿಂಬಿಸುವ ಪ್ರದರ್ಶನವನ್ನು ಸಹ ಏರ್ಪಡಿಸಲಾಗಿತ್ತು.

Bengaluru Republic Day flower show at Lalbagh generates highest ever revenue

2022 ರಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಫಲಪುಷ್ಪ ಪ್ರದರ್ಶನವು ಎಂಟು ಲಕ್ಷಕ್ಕೂ ಹೆಚ್ಚು ಪ್ರವಾಸಿಗರನ್ನು ದಾಖಲಿಸಿದೆ. ಆದಾಗ್ಯೂ, ಗಣರಾಜ್ಯೋತ್ಸವ ಕಾರ್ಯಕ್ರಮಗಳಿಗೆ ಜನಸಂದಣಿಯು ಯಾವಾಗಲೂ ಸ್ವಾತಂತ್ರ್ಯ ದಿನಾಚರಣೆಯ ಫಲಪುಷ್ಪ ಪ್ರದರ್ಶನಗಳಿಗಿಂತ ಕಡಿಮೆಯಾಗಿದೆ. ಆದರೂ, ಈ ಪ್ರದರ್ಶನವು 1.97 ಕೋಟಿ ರೂಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸುವ ಹೊತ್ತಿಗೆ, ಪರೀಕ್ಷೆಯ ಅವಧಿ ಪ್ರಾರಂಭವಾಗುತ್ತದೆ. ಆದ್ದರಿಂದ ಹೆಚ್ಚಿನ ಪೋಷಕರು ತಮ್ಮ ಮಕ್ಕಳನ್ನು ಪ್ರದರ್ಶನಕ್ಕೆ ಕರೆತರುವುದಿಲ್ಲ ಎಂದು ಅವರು ಹೇಳಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2022 ರಲ್ಲಿ ಗಣರಾಜ್ಯೋತ್ಸವದ ಪುಷ್ಪ ಪ್ರದರ್ಶನದಲ್ಲಿ ಒಟ್ಟು ಆದಾಯ 1.16 ಕೋಟಿ ರೂ ಆಗಿತ್ತು. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ವಿಧಿಸಲಾದ ನಿರ್ಬಂಧಗಳ ದೃಷ್ಟಿಯಿಂದ ಕಳೆದ ಎರಡು ವರ್ಷಗಳಲ್ಲಿ ಪ್ರದರ್ಶನವನ್ನು ಆಯೋಜಿಸಲಾಗಿಲ್ಲ.

Bengaluru Republic Day flower show at Lalbagh generates highest ever revenue

ಲಾಲ್‌ಬಾಗ್‌ ಸಸ್ಯೋದ್ಯಾನದಲ್ಲಿ ಪುಷ್ಪ ಪ್ರದರ್ಶನಗಳು ಪ್ರತಿ ವರ್ಷ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನದಂದು ನಡೆಯುತ್ತವೆ.

ಕಳೆದ ಸ್ವಾತಂತ್ರ್ಯ ಉತ್ಸವದಲ್ಲಿ ದಿವಂಗತ ನಟರಾದ ಡಾ.ರಾಜ್‌ಕುಮಾರ್‌ ಹಾಗೂ ಪುನೀತ್‌ ರಾಜ್‌ಕುಮಾರ್‌ ಅವರ ಥೀಮ್‌ ಒಳಗೊಂಡ ಫಲಪುಷ್ಪ ಪ್ರದರ್ಶನ ಮಾಡಲಾಗಿತ್ತು. ಈ ಥೀಮ್‌ಗೆ 6,22 ಲಕ್ಷ ಹೂ ಬಳಕೆ ಮಾಡಲಾಗಿತ್ತು ಎಂದು ತೋಟಗಾರಿಕಾ ಅಧಿಕಾರಿಗಳು ಮಾಹಿತಿ ನೀಡಿದ್ದರು. ಈ ಪ್ರದರ್ಶನವು ಅಪಾರ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸಲು ಯಶಸ್ವಿಯಾಗಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+