Bengaluru Rent: ಬೆಂಗಳೂರಿನಲ್ಲಿ ಬಾಡಿಗೆ-ಲೀಸ್ ಮನೆ ಹುಡುಕುವವರೇ ಎಚ್ಚರ, ಸದ್ದಿಲ್ಲದೆ ನಡೆದಿದೆ ₹100 ಕೋಟಿ ಹಗರಣ

ಬೆಂಗಳೂರು: ಮನೆಗಳನ್ನು ಬಾಡಿಗೆಗೆ ಹಾಗೂ ಲೀಸ್‌ ಕೊಡಿಸುವುದಾಗಿ ನಂಬಿಸಿ ಸಾರ್ವಜನಿಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಜಾಲವೊಂದು ಬೆಂಗಳೂರಿನಲ್ಲಿ ಬಯಲಿಗೆ ಬಂದಿದೆ. ನಗರದ ಪ್ರತಿಷ್ಠಿತ ಜೆಎಎಂ ಸಂಸ್ಥೆಯು 300ಕ್ಕೂ ಹೆಚ್ಚು ಜನರಿಂದ ಬರೋಬ್ಬರಿ ₹100 ಕೋಟಿಗೂ ಅಧಿಕ ಹಣವನ್ನು ದೋಚಿ ವಂಚಿಸಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಾನ್ ಸ್ಟೀಫನ್ ಎಂಬಾತನೇ ಈ ಬೃಹತ್ ಹಗರಣದ ಮಾಸ್ಟರ್ ಮೈಂಡ್ ಆಗಿದ್ದು, ಸಂತ್ರಸ್ತರು ಇಂದಿರಾನಗರ ಪೊಲೀಸ್ ಠಾಣೆಗೆ ದೂರು ನೀಡುತ್ತಿದ್ದಂತೆ ಕಚೇರಿ ಮುಚ್ಚಿ ತಲೆಮರೆಸಿಕೊಂಡಿದ್ದಾನೆ.

ಬಾಡಿಗೆದಾರರೇ ಟಾರ್ಗೆಟ್‌

ಬೆಂಗಳೂರಿನಲ್ಲಿ ಐಟಿ ಉದ್ಯೋಗಿಗಳು ಹಾಗೂ ಹೊರಗಿನಿಂದ ಬರುವ ಬಾಡಿಗೆದಾರರು ಎದುರಿಸುತ್ತಿರುವ ವಸತಿ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಈ ಸಂಸ್ಥೆ, ಜನರನ್ನು ಸೆಳೆಯಲು ಆಕರ್ಷಕ ಆಫರ್ ನೀಡಿತ್ತು. ಗ್ರಾಹಕರಿಂದ ₹10 ಲಕ್ಷದಿಂದ ಹಿಡಿದು ₹75 ಲಕ್ಷದವರೆಗೆ ಲೀಸ್ ಹಣವನ್ನು ಹೂಡಿಕೆ ಮಾಡಿಸಿಕೊಳ್ಳುತ್ತಿತ್ತು. ಜೊತೆಗೆ ₹30 ಲಕ್ಷಕ್ಕಿಂತ ಹೆಚ್ಚು ಹೂಡಿಕೆ ಮಾಡುವವರಿಗೆ ತಿಂಗಳಿಗೆ ಶೇ. 2ರಿಂದ ಶೇ 4.2ರವರೆಗೆ ಭಾರಿ ರಿಟರ್ನ್ಸ್ (ಲಾಭಾಂಶ) ಕೊಡುವುದಾಗಿ ಆಮಿಷ ಒಡ್ಡಲಾಗಿತ್ತು.

Bengaluru Rent

ಆರಂಭದಲ್ಲಿ ನಂಬಿಕೆ ಗಳಿಸಲು ಕೆಲವು ತಿಂಗಳುಗಳ ಕಾಲ ಮಾಲೀಕರಿಗೆ ಸಮರ್ಪಕವಾಗಿ ಬಾಡಿಗೆ ಪಾವತಿಸುತ್ತಿದ್ದ ಸಂಸ್ಥೆ, ಆ ನಂತರ ಹಣ ನೀಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿ ಕೈಕೊಟ್ಟಿದೆ. ಹೊಸ ಹೂಡಿಕೆದಾರರಿಂದ ಬಂದ ಹಣವನ್ನು ಹಳೆಯ ಹೂಡಿಕೆದಾರರಿಗೆ ಹಂಚುವ ಮಾದರಿಯಲ್ಲಿ ಈ ವಂಚನೆ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಸೂರು ಕಳೆದುಕೊಂಡು ಬೀದಿಗೆ ಬಿದ್ದ ಸಂತ್ರಸ್ತರು

ಈ ಹಗರಣದಿಂದಾಗಿ ಮನೆ ಮಾಲೀಕರು ಮತ್ತು ಬಾಡಿಗೆದಾರರು ಇಬ್ಬರೂ ಕಂಗಾಲಾಗಿದ್ದಾರೆ. ಸ್ಥಿರವಾದ ವಸತಿ ಮತ್ತು ತಿಂಗಳ ಆದಾಯದ ಆಸೆಗೆ ಬಿದ್ದು ನಮ್ಮ ಕುಟುಂಬ ₹37 ಲಕ್ಷ ಹೂಡಿಕೆ ಮಾಡಿತ್ತು. ಆದರೆ, ಸಂಸ್ಥೆಯು ಮನೆ ಮಾಲೀಕರಿಗೆ ಬಾಡಿಗೆ ಕಟ್ಟದಿದ್ದಾಗ ನಮಗೆ ಸತ್ಯ ಗೊತ್ತಾಯಿತು. ಈಗ ಮನೆ ಖಾಲಿ ಮಾಡುವಂತೆ ಮಾಲೀಕರು ಒತ್ತಡ ಹೇರುತ್ತಿದ್ದಾರೆ. ಕೊಟ್ಟ ಹಣವೂ ಇಲ್ಲ, ಇರಲು ಮನೆಯೂ ಇಲ್ಲದಂತಾಗಿದೆ" ಎಂದು ವಂಚನೆಗೊಳಗಾದವರು ತಮ್ಮ ಅಳಲು ತೋಡಿಕೊಂಡಿದ್ದಾರೆ.

Bengaluru Property: ಬೆಂಗಳೂರಲ್ಲಿ ಅನಧಿಕೃತ ಕಟ್ಟಡಗಳ ನಿರ್ಮಾಣಕ್ಕೆ ಬ್ರೇಕ್ - ಆಸ್ತಿದಾರರಿಗೆ ಹೊಸ ಎಚ್ಚರಿಕೆ
Bengaluru Property: ಬೆಂಗಳೂರಲ್ಲಿ ಅನಧಿಕೃತ ಕಟ್ಟಡಗಳ ನಿರ್ಮಾಣಕ್ಕೆ ಬ್ರೇಕ್ - ಆಸ್ತಿದಾರರಿಗೆ ಹೊಸ ಎಚ್ಚರಿಕೆ

ಈ ಹಿಂದೆಯೂ ಜೈಲು ಸೇರಿದ್ದ ಸ್ಟೀಫನ್

ಪೊಲೀಸ್ ಮೂಲಗಳ ಪ್ರಕಾರ, ಆರೋಪಿ ಜಾನ್ ಸ್ಟೀಫನ್ ಇಂತಹ ವಂಚನೆಗೆ ಇಳಿಯುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಇದೇ ಮಾದರಿಯ ಚೀಟಿಂಗ್ ಕೇಸ್‌ನಲ್ಲಿ ಈತನನ್ನು ಸಿಸಿಬಿ (CCB) ಅಧಿಕಾರಿಗಳು ಬಂಧಿಸಿ ಜೈಲಿಗಟ್ಟಿದ್ದರು. ಆದರೆ ಜೈಲಿನಿಂದ ಬೇಲ್ ಮೇಲೆ ಹೊರಬಂದ ಈ ಖದೀಮ, ಮತ್ತೆ ಅದೇ ಹೆಸರಿನಲ್ಲಿ ಕಂಪನಿ ಆರಂಭಿಸಿ ಜನರಿಗೆ ನೂರಾರು ಕೋಟಿ ನಾಮ ಹಾಕಿದ್ದಾನೆ. ಪ್ರಸ್ತುತ ಬೆಂಗಳೂರು ಮಾತ್ರವಲ್ಲದೆ ಚೆನ್ನೈನಲ್ಲೂ ಪ್ರಾದೇಶಿಕ ಕಚೇರಿ ಹೊಂದಿರುವ ಈ ಸಂಸ್ಥೆಯ ಎಲ್ಲ ಅಧಿಕೃತ ಮೊಬೈಲ್ ಸಂಖ್ಯೆಗಳು ಸ್ವಿಚ್ ಆಫ್ ಆಗಿದ್ದು, ತಲೆಮರೆಸಿಕೊಂಡಿರುವ ಆರೋಪಿ ಜಾನ್ ಸ್ಟೀಫನ್ ಪತ್ತೆಗಾಗಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+