Bengaluru Rain: ಕಳೆದ 24 ಗಂಟೆಯಲ್ಲಿ ಎರಡನೇ ಭಾರಿಗೆ ಜಾಸ್ತಿ ಮಳೆ ದಾಖಲು: ಎಷ್ಟು-ಎಲ್ಲಿ?

ಬೆಂಗಳೂರು, ಮೇ 04: ರಾಜ್ಯ ರಾಜಧಾನಿ ಉದ್ಯಾನ ನಗರಿ ಬೆಂಗಳೂರಿನಲ್ಲಿ ಮಳೆ ಅಬ್ಬರ ಕಡಿಮೆಯಾಗುವ ಲಕ್ಷಣಗಳು ಇಲ್ಲ. ದಿನೇ ದಿನೆ ಹೆಚ್ಚಿನ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆ ಕಳೆದ 24 ಗಂಟೆಗಳಲ್ಲಿ ನಗರದಲ್ಲಿ 60.5 ಮಿಲಿ ಮೀಟರ್‌ನಷ್ಟು ಸುರಿದಿದೆ. ಮುಂದಿನ ಮೂರು ದಿನ ಹೀಗೆ ಮಳೆ ಮುಂದುವರಿಯಲಿದೆ.

ಕರ್ನಾಟಕ ರಾಜ್ಯ ಹವಾಮಾನ ಇಲಾಖೆ ವರದಿ ಪ್ರಕಾರ, ಬುಧವಾರ ಸಂಜೆಯಿಂದ ಗುರುವಾರ ಬೆಳಗಿನವರೆಗೂ ನಗರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ದಾಖಲಾಗಿದೆ. ಇಂದು ಸಹ ಕೆಲವು ರಸ್ತೆಗಳಲ್ಲಿ ನೀರು ನಿಂತ ದೃಶ್ಯ ಕಂಡು ಬಂದಿದೆ. ಯಶವಂತಪುರದಲ್ಲಿ 60.5 ಮಿ.ಮೀ. ಮಳೆ ಬಿದ್ದಿದೆ. ಉಳಿದಂತೆ ಸಿಂಗಸಂದ್ರ 54 ಮಿ.ಮೀ., ಎಚ್‌ಎಎಲ್‌ ಏರ್‌ಪೋರ್ಟ್‌ 46.5 ಮಿ.ಮೀ., ಯಲಹಂಕ KSNDMC ಕ್ಯಾಂಪಸ್ ಬಳಿ 46 ಮಿ.ಮೀ., ಜಕ್ಕೂರು4 1.5 ಮಿ.ಮೀ., ಬೆಳ್ಳಂದೂರು 35 ಮಿ.ಮೀ., ಕೊಡಿಗೇಹಳ್ಳಿ 30 ಮಿ.ಮೀ., ಅಟ್ಟೂರು 29.5 ಮಿ.ಮೀ., ಚೌಡೇಶ್ವರಿ ವಾರ್ಡ್ 27.5 ಮಿ.ಮೀ., ಹೊರಮಾವು 25.5 ಮಿ.ಮೀ., ಗರುಡಾಚಾರ್ ಪಾಳ್ಯ 25.5 ಮಿ.ಮೀಟರ್ ನಷ್ಟು ಮಳೆ ದಾಖಲಾಗಿದೆ.

Bengaluru Recorded 60.5 mm Rain In Last 24 Hours, Rain Will Continue Till May 7th In City

ಗುರುವಾರ ಬೆಳಗ್ಗೆಯ ಸಹ ಕೆಲವೆಡೆ ಸೋನೆ ಮಳೆ ಕಂಡು ಬಂದಿದೆ. ನಗರದೆಲ್ಲಡೆ ತಂಪು ವಾತಾವರಣ ನಿರ್ಮಾಣವಾಗಿದ್ದು, ಇಂದು ಸಹ ಮಧ್ಯಾಹ್ನದ ನಂತರ ಮಳೆಯ ದರ್ಶನವಾಗಲಿದೆ ಎಂದು ಅಂದಾಜಿಸಲಾಗಿದೆ. ಅಧಿಕ ಚಳಿ ಸೃಷ್ಟಿಯಾಗಲಿದೆ. ಇಂದು ಗರಿಷ್ಠ 29 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ, ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಮೂಲಕ ಗರಿಷ್ಠ - ಕನಿಷ್ಠ ತಾಪಮಾನದಲ್ಲಿ ತುಸು ಇಳಿಕೆಯಾಗುವ ಸಂಭವವಿದೆ.

ಭಾನುವಾರದ ನಂತರ ಬುಧವಾರ ಜಾಸ್ತಿ ಮಳೆ

ಕಳೆದ ಭಾನುವಾರ ನಗರದಲ್ಲಿ ಒಟ್ಟು 111.5 ಮಿಲಿ ಮೀಟರ್ ಮಳೆ ದಾಖಲಾಗಿತ್ತು. ಇದನ್ನು ಈ ವರ್ಷದಲ್ಲೇ ಅತ್ಯಧಿಕ ಗರಿಷ್ಠ ಮಳೆ ಎಂದು ಹೇಳಲಾಗಿತ್ತು. ಅದರ ನಂತರ ನೆನ್ನೆ ಬುಧವಾರವೇ ಜೋರು ಮಳೆ ಬಿದ್ದಿದೆ.

ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಾರ, ಮುಂದಿನ ವಾರ ಮೇ 7 ರವರೆಗೆ ನಗರದಲ್ಲಿ ಹೀಗೆ ಮಳೆ ಮತ್ತು ತಂಪು ವಾತಾವರಣವೇ ಕಂಡು ಬರಲಿದೆ. ನಿತ್ಯ ತಡರಾತ್ರಿವರೆಗೂ ಮಳೆ ಆರ್ಭಟಿಸಲಿದೆ. ಕೆಲವೆಡೆ ವಿದ್ಯುತ್ ಕಡಿತಗೊಳ್ಳುತ್ತಿದ್ದು ಸಮಸ್ಯೆ ಉಂಟಾಗುತ್ತಿದೆ.

Bengaluru Recorded 60.5 mm Rain In Last 24 Hours, Rain Will Continue Till May 7th In City

ಮುಂದಿನ ಮೂರು ದಿನಗಳಲ್ಲಿ ನಗರದಲ್ಲಿ ತಾಪಮಾನ ನೋಡುವುದಾದರೆ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 22 ಡಿಗ್ರೆ ಸೆಲ್ಸಿಯಸ್ ಕಂಡು ಬರಲಿದೆ ಎಂದು ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+