Bengaluru Real Estate: 2026ರ ಮೊದಲ ತ್ರೈಮಾಸಿಕದಲ್ಲಿ ರಿಯಲ್ ಎಸ್ಟೇಟ್‌ಗೆ ಶಾಕ್: ಬೆಂಗಳೂರಿಗೆ ಮಾತ್ರ ಬಂಪರ್
Bengaluru Real Estate: ಬೆಂಗಳೂರು ಸೇರಿದಂತೆ ದೇಶದ 9 ಪ್ರಮುಖ ನಗರಗಳಲ್ಲಿ ರಿಯಲ್ ಎಸ್ಟೇಟ್‌ನ ಮೇಲೆ ಭಾರೀ ಪರಿಣಾಮ ಬೀರಿದೆ. ಬೆಂಗಳೂರು ನಗರ ಪ್ರದೇಶದಲ್ಲಿ ರಿಯಲ್ ಎಸ್ಟೇಟ್ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿದ್ದರೂ, ಒಟ್ಟಾರೆ ರಿಯಲ್ ಎಸ್ಟೇಟ್ ದೃಷ್ಟಿಯಲ್ಲಿ ನೋಡುವುದಾದರೆ ಮನೆಗಳ ಮಾರಾಟ ಹಾಗೂ ಖರೀದಿಯ ವಿಚಾರದಲ್ಲಿ ಭಾರೀ ಪರಿಣಾಮ ಬೀರಿದೆ.
ಭಾರತದ ಅಗ್ರ ಒಂಬತ್ತು ನಗರಗಳಲ್ಲಿ ಮನೆ ಮಾರಾಟವು 2026ರ ಮೊದಲ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ / ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಶೇ. 13 ರಷ್ಟು ಕುಸಿತ ಕಂಡಿದೆ. ಮನೆಗಳ ಮಾರಾಟ ಪ್ರಮಾಣವು ದೇಶದಲ್ಲಿ 98,761 ಯೂನಿಟ್‌ಗಳಿಗೆ ತಲುಪಿದೆ. ಈ ಪ್ರಮಾಣವು 2025ರ ಮೊದಲ ತ್ರೈಮಾಸಿಕದಲ್ಲಿ 1,13,602 ಯೂನಿಟ್‌ಗಳಿಗೆ ಹೋಲಿಕೆ ಮಾಡಿದರೆ ತೀರ ಕಡಿಮೆಯಾಗಿದೆ. ಇನ್ನು 18 ತ್ರೈಮಾಸಿಕಗಳಲ್ಲಿ ಇದೇ ಮೊದಲ ಬಾರಿಗೆ 1 ಲಕ್ಷಕ್ಕಿಂತ ಕಡಿಮೆ ಯೂನಿಟ್ ಮನೆ ಮಾರಾಟವಾಗಿವೆ ಎಂದು ಪ್ರಾಪ್‌ಈಕ್ವಿಟಿ ವರದಿ ಉಲ್ಲೇಖಿಸಿದೆ. ಮುಂಬೈ, ಪುಣೆ ಮತ್ತು ಥಾಣೆ ಕ್ರಮವಾಗಿ 20%, 25% ಮತ್ತು 24% ರಷ್ಟು ವಸತಿ ಮಾರಾಟದಲ್ಲಿ ತೀವ್ರ ಕುಸಿತವನ್ನು ಕಂಡಿವೆ.

ಬೆಂಗಳೂರಿನಲ್ಲಿ ಹೇಗಿದೆ ಪರಿಸ್ಥಿತಿ
ಇನ್ನು ಮನೆ ಮಾರಾಟ ವಿಚಾರದಲ್ಲಿ ಬೆಂಗಳೂರಿನ ಪರಿಸ್ಥಿತಿಯೂ ಸಹ ತೀರ ಭಿನ್ನವಾಗಿಲ್ಲ. ಬೆಂಗಳೂರಿನಲ್ಲಿ ಮನೆ ಮಾರಾಟ ಪ್ರಮಾಣವು 17991 ಯೂನಿಟ್‌ಗಳೊಂದಿಗೆ ದೇಶದಲ್ಲೇ ಮುಂಚೂಣಿಯಲ್ಲಿದೆ. ಪುಣೆ 16144 ಯೂನಿಟ್‌ಗಳೊಂದಿಗೆ ಮತ್ತು ಥಾಣೆ 15959 ಯೂನಿಟ್‌ಗಳೊಂದಿಗೆ ನಂತರದ ಸ್ಥಾನದಲ್ಲಿವೆ.
2026 ರ ಮೊದಲ ತ್ರೈಮಾಸಿಕದಲ್ಲಿ ವಸತಿ ಮಾರಾಟವು ಮಧ್ಯಮ ಮಟ್ಟದಲ್ಲಿ ಮುಂದುವರೆದಿದೆ, ದೆಹಲಿ-NCR ಮತ್ತು ಬೆಂಗಳೂರು ಹೊರಗಿನವುಗಳಾಗಿ ಹೊರಹೊಮ್ಮಿವೆ. ಹೆಚ್ಚಿನ ನಗರಗಳಲ್ಲಿ ಕಡಿಮೆ ಪೂರೈಕೆಯಿಂದಾಗಿ ಈ ಕಡಿತ ಸಂಭವಿಸಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 2026 ರ ಮೊದಲ ತ್ರೈಮಾಸಿಕದಲ್ಲಿ ಸುಮಾರು 22,000 ಯೂನಿಟ್‌ಗಳು ಕಡಿಮೆ ಪೂರೈಕೆಯಾಗಿವೆ ಎಂದು ಪ್ರಾಪ್‌ಇಕ್ವಿಟಿಯ ಸಂಸ್ಥಾಪಕ ಮತ್ತು ಸಿಇಒ ಸಮೀರ್ ಜಸುಜಾ ಹೇಳಿದರು.
ಬೆಂಗಳೂರು 17,991 ಯೂನಿಟ್‌ಗಳ ಮನೆ ಮಾರಾಟದೊಂದಿಗೆ ಮುಂಚೂಣಿಯಲ್ಲಿದ್ದರೆ, ದೆಹಲಿ- ಎನ್‌ಸಿಆರ್ 12,141 ಯೂನಿಟ್‌ಗಳೊಂದಿಗೆ ನಂತರದ ಸ್ಥಾನದಲ್ಲಿದೆ. ಮುಂಬೈ (9,186 ಯೂನಿಟ್‌ಗಳು), ಥಾಣೆ (15,959 ಯೂನಿಟ್‌ಗಳು) ಮತ್ತು ಪುಣೆ (16,144 ಯೂನಿಟ್‌ಗಳು) ಮನೆ ಮಾರಾಟವಾಗಿವೆ. ಆದರೆ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಮನೆಗಳ ಮಾರಾಟವು ತೀವ್ರ ಕುಸಿತ ಕಂಡಿವೆ. ರಿಯಲ್ ಎಸ್ಟೇಟ್ ಮಾರುಕಟ್ಟೆಯು / ಮನೆ ಮಾರಾಟ ಪ್ರಮಾಣವು ತೀವ್ರ ಕಡಿಮೆಯಾಗಿವೆ. ಇನ್ನು ರಿಯಲ್ ಎಸ್ಟೇಟ್ ಮನೆ ಮಾರಾಟವು ಹೈದರಾಬಾದ್‌ನಲ್ಲಿ 11,546 ಯೂನಿಟ್‌ಗಳನ್ನು ದಾಖಲಿಸಿವೆ. ವರ್ಷದಿಂದ ವರ್ಷಕ್ಕೆ 16% ಕಡಿಮೆಯಾಗಿದೆ ಎಂದು ಹೇಳಲಾಗಿದೆ. ಆದರೆ, ಕೋಲ್ಕತ್ತಾ ಮತ್ತು ಚೆನ್ನೈ 3,872 ಮತ್ತು 4,765 ಯೂನಿಟ್‌ಗಳೊಂದಿಗೆ ಸಣ್ಣ ಮಾರುಕಟ್ಟೆಗಳಾಗಿ ಗುರುತಿಸಿಕೊಂಡಿವೆ ಎಂದು ಪ್ರಾಪ್‌ಇಕ್ವಿಟಿ ವರದಿ ಉಲ್ಲೇಖಿಸಿದೆ.
ಮೂರು ತಿಂಗಳ ಅವಧಿಯಲ್ಲಿ ಭಾರೀ ಕುಸಿತ
ಇನ್ನು ಮೂರು ತಿಂಗಳ ಅವಧಿಯಲ್ಲಿ ಮನೆ ಮಾರಾಟ ಪ್ರಮಾಣವು ತೀವ್ರ ಕುಸಿತ ಕಂಡಿದೆ. ಪ್ರಾಪ್‌ಇಕ್ವಿಟಿಯ ಪ್ರಕಾರ, ಹೊಸ ಮನೆಗಳ ನಿರ್ಮಾಣ / ಮಾರಾಟವು ತೀವ್ರ ಕುಸಿತ ಕಂಡಿದೆ. ಜನವರಿ-ಮಾರ್ಚ್ 2026ರ ಅವಧಿಯಲ್ಲಿ ವರ್ಷದಿಂದ ವರ್ಷಕ್ಕೆ 19% ಮತ್ತು ತ್ರೈಮಾಸಿಕದಿಂದ 8% ರಷ್ಟು ಕುಸಿದು 92,411 ಯೂನಿಟ್‌ಗಳಿಗೆ ತಲುಪಿವೆ. ಕಳೆದ ವರ್ಷ 1,14,718 ಯೂನಿಟ್‌ಗಳಿತ್ತು ಎಂದು ವರದಿ ತಿಳಿಸಿದೆ.
ದೆಹಲಿ-ಎನ್‌ಸಿಆರ್ ಹೊಸ ಮನೆಗಳ ಬೆಳವಣಿಗೆಯ ವಿಚಾರದಲ್ಲಿ ದಾಖಲೆ ಬರೆದಿವೆ. ತ್ರೈಮಾಸಿಕದಲ್ಲಿ 17,227 ಯೂನಿಟ್‌ಗಳ ಮನೆ ನಿರ್ಮಾಣವಾಗಿವೆ. ಇದು ವರ್ಷದಿಂದ ವರ್ಷಕ್ಕೆ ಶೇ.89% ಮತ್ತು ತ್ರೈಮಾಸಿಕದಿಂದ ಶೇ.8% ಹೆಚ್ಚಳವಾಗಿದೆ. 17,782 ಯೂನಿಟ್‌ಗಳ ಮನೆ ನಿರ್ಮಾಣದೊಂದಿಗೆ ಬೆಂಗಳೂರು ಮನೆಗಳ / ಬೇಡಿಕೆ ಪೂರೈಕೆಯ ವಿಷಯದಲ್ಲಿ ಮತ್ತೆ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಸೇ 24% ವಾರ್ಷಿಕ ಕುಸಿತದ ಹೊರತಾಗಿಯೂ 10% ತ್ರೈಮಾಸಿಕ ಹೆಚ್ಚಳವನ್ನು ದಾಖಲಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.












Click it and Unblock the Notifications