Bengaluru Real Estate: ಈ ಪ್ರದೇಶಗಳಲ್ಲಿ ಆಸ್ತಿ ಮೌಲ್ಯ ಭಾರೀ ಹೆಚ್ಚಳ: ಮನೆ ಬಾಡಿಗೆಯೂ ಏರಿಕೆ!
ಬೆಂಗಳೂರು, ಮಾರ್ಚ್ 23: ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಪ್ರಯಾಣ ದರ, ಮನೆ ಬಾಡಿಗೆ, ಪಿಜಿ ರೆಂಟ್, ಆಸ್ತಿ ಸೇರಿದಂತೆ ಎಲ್ಲವುಗಳ ದರ ಏರುಗತಿಯಲ್ಲಿ ಸಾಗಿವೆ. ಐಟಿ ಕಾರಿಡಾರ್, ನಮ್ಮ ಮೆಟ್ರೋ ಮಾರ್ಗಗಳ ಆಸುಪಾಸುಗಳ ಮನೆ ಬಾಡಿಗೆ, ವಸತಿ ಗೃಹ (ಪಿಜಿ) ಬಾಡಿಗೆ ಪ್ರತಿ ಆರು ತಿಂಗಳಿಗೊಮ್ಮೆ ಬದಲಾಗುತ್ತಲೇ ಇರುತ್ತವೆ. ವರದಿಯೊಂದರ ಪ್ರಕಾರ, ಇದೀಗ ರಾಜಧಾನಿಯ ಈ ಎರಡ ಪ್ರದೇಶಗಳಲ್ಲಿ ಆಸ್ತಿ ಮಾಲ್ಯವು ಅತ್ಯಧಿಕ ಪ್ರಮಾಣದಲ್ಲಿ ಏರಿಕೆ ಆಗಿದೆ.
ಹೌದು, ಬೆಂಗಳೂರಿನ ರಿಯಲ್ ಎಸ್ಟೇಟ್ ಮತ್ತು ಆಸ್ತಿ ಮೌಲ್ಯ ಕುರಿತು ಅಧ್ಯಯನ ನಡೆಸಿ ವರದಿ ಪ್ರಕಟಿಸಿರುವ 'ಅನರಾಕ್ ಸಂಸ್ಥೆ'ಯ ಪ್ರಕಾರ, ಬೆಂಗಳೂರು ಎರಡು ಪ್ರದೇಶಗಳಲ್ಲಿ ಆಸ್ತಿ ಮೌಲ್ಯ ಕೇವಲ ಮೂರೇ ವರ್ಷಗಳಲ್ಲಿ ದಾಖಲೆಯ ಮಟ್ಟದಲ್ಲಿ ಹೆಚ್ಚಾಗಿದ್ದನ್ನು ಎಂದು ಖಚಿತಪಡಿಸಿದೆ..

ಅನರಾಕ್ ಎಂಬುದು ರಿಯಲ್ ಎಸ್ಟೇಟ್ ಕನ್ಸಲ್‌ಟೆಂಟ್ ಸಂಸ್ಥೆಯಾಗಿದೆ. ಬೆಂಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ಆಸ್ತಿ ಬೆಲೆಗಳು ಏರಿಕೆ ಆಗುವುದು ಸಹ. ಆದರೆ ಊಹೆಗೂ ಮೀರಿ ಹೆಚ್ಚಾದರೆ ಅದೊಂದು ದೊಡ್ಡ ಸುದ್ದಿಯಾಗುತ್ತದೆ. ಅಂತಹ ಹಲವು ಪ್ರದೇಶಗಳಲ್ಲಿ ಸರ್ಜಾಪುರ ರಸ್ತೆ ಹಾಗೂ ಥಣಿಸಂದ್ರವು ಒಂದು
ಐಟಿ ಕಾರಿಡಾರ್‌ಗೆ ಸಮೀಪ ಇರುವ ಸರ್ಜಾಪುರ ರಸ್ತೆ ಹಾಗೂ ಬೆಂಗಳೂರಿನ ಹೊರ ವಲಯದಲ್ಲಿರುವ ಹಾಗೂ ಕೈಗಾರಿಕೆಗಳು, ಹೂಡಿಕೆಗಳು ಹೆಚ್ಚಾಗುತ್ತಿರುವ ಥಣಿಸಂದ್ರ ಪ್ರದೇಶಗಳಲ್ಲಿ ಹಾಗೂ ಸುತ್ತಮುತ್ತ ರಿಯಲ್ ಎಸ್ಟೇಟ್ ಉದ್ಯಮ ಬೆಳೆಯುತ್ತಿದೆ. ಇಲ್ಲಿನ ಆಸ್ತಿದಾರರು ಕೋಟಿ ಕೋಟಿ ಒಡೆಯರಾಗುವ ಕಾಲ ಹತ್ತಿರವಾಗಿದೆ.
ಆಸ್ತಿಗಳ ಮೌಲ್ಯ ಎಷ್ಟು ಹೆಚ್ಚಾಗಿದೆ
ಏಕೆಂದ್ರೆ ಸರ್ಜಾರಪುರ ರಸ್ತೆಯ ಅಕ್ಕಪಕ್ಕದಲ್ಲಿ ಆಸ್ತಿಗಳ ಮೌಲ್ಯವು ಕಳೆದ ಮೂರೇ ವರ್ಷಗಳಲ್ಲಿ 63% ಏರಿಕೆ ಆಗಿದೆ. ಇದರ ನಂತರ ಥಣಿಸಂದ್ರದಲ್ಲೂ ಬರೋಬ್ಬರಿ 67% ರಷ್ಟು ಆಸ್ತಿ ಮೌಲ್ಯಗಳು ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.

ಥಣಿಸಂದ್ರ ಮುಖ್ಯ ರಸ್ತೆಯಲ್ಲಿ ಮನೆಯ ಬೆಲೆಯು ಪ್ರತಿ ಚದರಡಿಗೆ 5345 ರೂಪಾಯಿ ಯಿಂದ 2024ರ ಅಂತ್ಯಕ್ಕೆ 8900 ರೂಪಾಯಿಗೆ ಏರಿಕೆ ಕಂಡಿದೆ. ಇನ್ನೂ ಸರ್ಜಾಪುರ ರಸ್ತೆಯಲ್ಲಿ 6050 ರೂಪಾಯಿ ಇದ್ದ ಚದರಡಿ ಭೂಮಿಯ ಬೆಲೆ 9850 ರೂಪಾಯಿಗೆ ಏರಿಕೆ ಕಂಡಿದೆ.
ಮನೆ ಬಾಡಿಗೆ ದರದಲ್ಲೂ ಏರಿಕೆ
ಈ ಭಾಗದಲ್ಲಿ ಆಸ್ತಿಗಳಿಗೆ, ಮನೆ ಬಾಡಿಗೆಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಮನೆ ಬಾಡಿಗೆಯ ದರ ತೀವ್ರವಾಗಿ ಹೆಚ್ಚಾಗಿದೆ. ಆಸ್ತಿ ಮೌಲ್ಯಗಳ ಜೊತೆಗೆ ಬಾಡಿಗೆ ಮನೆ ಕಟ್ಟಿಸಿಕೊಂಡವರು ಭರ್ಜರಿ ಲಾಭ ಪಡೆದುಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಧ್ಯೆ, ಐಟಿ ಕಂಪನಿಗಳ ಉದ್ಯೋಗ ಕಡಿತದಿಂದಾಗಿ ಹೆಚ್ಚಿನ ಬಾಡಿಗೆ ನೀಡುವುದು ಮಧ್ಯಮ ವರ್ಗದ ಕಾರ್ಮಿಕ, ಉದ್ಯೋಗಿಗಳಿಗೆ ಹೊರೆಯಾಗಿದೆ. ಇನ್ನೂ ಈ ಪ್ರದೇಶಗಳಲ್ಲಿ ದೊಡ್ಡ ದೊಡ್ಡ ಕಂಪನಿಗಳು, ಉದ್ಯೋಗಿಗಳಿಗೆ ಭೂಮಿ ಖರೀದಿಗೆ ಹೆಚ್ಚಿನ ಅವಕಾಶಗಳು ಇವೆ.












Click it and Unblock the Notifications