Bengaluru Rave Party: ನಾನವಳಲ್ಲ.. ಎಂದು ಡ್ರಾಮಾ ಮಾಡಿದ ನಟಿ ಹೇಮಾ ರಕ್ತ ಪರೀಕ್ಷೆಯಲ್ಲಿ ಪಾಸಿಟಿವ್
ಬೆಂಗಳೂರು ಮೇ 23: ಐಟಿ ರಾಜಧಾನಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಹೊರವಲಯದಲ್ಲಿ ಭಾನುವಾರ (ಮೇ 19) ಮಧ್ಯರಾತ್ರಿ ನಡೆದಿದ್ದ ರೇವ್ ಪಾರ್ಟಿ ಪ್ರಕರಣ ತನಿಖೆಯಲ್ಲಿ 86 ಜನರು ಡ್ರಗ್ಸ್ ಸೇವಿಸಿರುವುದು ರಕ್ತ ಪರೀಕ್ಷೆಯಿಂದ ದೃಢಪಟ್ಟಿದೆ.
ರೇವ್ ಪಾರ್ಟಿಯಲ್ಲಿ ಭಾಗವಹಿಸಿದ್ದ ಟಾಲಿವುಡ್ ನಟಿ ಹೇಮಾ ಅವರ ರಕ್ತ ಪರೀಕ್ಷೆಯಲ್ಲೂ ಡ್ರಗ್ಸ್ ಸೇವಿಸಿರುವುದು ದೃಢವಾಗಿದೆ. ಪಾರ್ಟಿಯಲ್ಲಿ ಭಾಗಿಯಾಗಿದ್ದ 101 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಅವರ ರಕ್ತದ ಮಾದರಿಯನ್ನು ಪಡೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಆ ವರದಿಯಲ್ಲಿ ಪಾರ್ಟಿಯಲ್ಲಿ ಭಾಗಿಯಾಗಿದ್ದ ನಟಿ ಹೇಮಾ ಸೇರಿದಂತೆ 86 ಜನರು ಡ್ರಗ್ಸ್ ಸೇವಿಸಿರುವುದು ಖಚಿತವಾಗಿದೆ.

ವಾಸು ಎಂಬಾತನ ಹೆಸರಿನಲ್ಲಿ ಬರ್ತಡೇ ಪಾರ್ಟಿಯನ್ನು ಭಾನುವಾರ (ಮೇ 19) ಮಧ್ಯರಾತ್ರಿ ಆಯೋಜಿಸಲಾಗಿತ್ತು. ಆದರೆ ಇದಕ್ಕೆ ಎಂಟ್ರಿ ಫೀಸ್ ಮಾತ್ರ ಎರಡು ಲಕ್ಷದವರೆಗೆ ಇತ್ತು ಎನ್ನಲಾಗುತ್ತಿದೆ. ಐದು ಜನ ಈ ಇವೆಂಟ್ ಆರ್ಗನೈಸ್ ಮಾಡಿದ್ದರು. ಇಲ್ಲಿ ಮದ್ಯಪಾನ ಮಾತ್ರವಲ್ಲದೆ, ಡ್ರಗ್ಸನೊಂದಿಗೆ ಸೆಕ್ಸ್ ಕೂಡ ಇತ್ತು ಎಂದು ತನಿಖೆಯಿಂದ ತಿಳಿದು ಬಂದಿದೆ.
ಎಲೆಕ್ಟ್ರಾನಿಕ್ ಸಿಟಿ ಬಳಿಯ ಜಿ ಆರ್ ಫಾರ್ಮ್ ಹೌಸ್ ನಲ್ಲಿ ಪಾರ್ಟಿ ಭಾನುವಾರ ಸಂಜೆ ಐದು ಘಂಟೆಯಿಂದ ಆರಂಭವಾಗಿದ್ದು ಸೋಮವಾರ ಬೆಳಗಿನ ಜಾವದವರೆಗೂ ಮುಂದುವರಿದಿತ್ತು. ಪಾರ್ಟಿಯಲ್ಲಿ 110ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಬರ್ತ್ ಡೇ ಪಾರ್ಟಿ ನೆಪದಲ್ಲಿ ಆರಂಭವಾದ ಪಾರ್ಟಿಯಲ್ಲಿ ಮದ್ಯ, ಡ್ರಗ್ಸ್ ನ ಮಾದಕ ವಸ್ತು ಸೇವನೆ ನಶೆಯಲ್ಲಿ ತೇಲಾಡುತ್ತಿರುವ ಬಗ್ಗೆ ಮಾಹಿತಿ ಪಡೆದು ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ಕೆಲವರು ತಪ್ಪಿಸಿಕೊಂಡಿದ್ದಾರೆ.

ಪ್ರಕರಣವನ್ನು ತನಿಖೆ ಮಾಡಿದಷ್ಟೂ ಮತ್ತಷ್ಟು ಮಾಹಿತಿಗಳು ಹೊರಬರುತ್ತಿದ್ದು, ಇಲ್ಲಿ ಡ್ರಗ್ಸ್ ಮಾತ್ರ ಅಲ್ಲ ಸೆಕ್ಸ್ ಸಹ ಇತ್ತು ಎಂಬ ಶಾಕಿಂಗ್ ಮಾಹಿತಿ ತಿಳಿದುಬಂದಿದೆ. ಡ್ರಗ್ಸ್ ಜಾಲದ ಜೊತೆಗೆ ಸೆಕ್ಸ್ ಜಾಲದ ಬಗ್ಗೆ ಸಿಸಿಬಿಗೆ ಕೆಲ ಮಾಹಿತಿಗಳು ಲಭ್ಯವಾಗಿವೆ. ಈ ಹಿನ್ನಲೆ ಪ್ರಕರಣದ ತೀವ್ರತೆ ಹೆಚ್ಚಿದೆ. ವಾಸು ಬರ್ತಡೆ ಪಾರ್ಟಿ ಎಂದು ನೆಪಕ್ಕೆ ಆಯೋಜನೆ ಮಾಡಿದ್ದು ಅಕ್ರಮ ನಡೆಸಲಾಗಿದೆ. ಓರ್ವರಿಗೆ ಇಂತಿಷ್ಟು ಎಂದು ಹಣ ಪಡೆದು ಪಾರ್ಟಿಗೆ ಕರೆಸಿದ್ದಾರೆ.
ಸಿಸಿಬಿ ಪೊಲೀಸರಿಗೆ ಕಮಿಷನರ್ ಬಿ ದಯಾನಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ ಎಂದಿದ್ದಾರೆ. ನಗರದಲ್ಲಿ ಇಂತಹ ಡ್ರಗ್ಸ್ ಮತ್ತು ರೇವ್ ಪಾರ್ಟಿಗಳು ನಡೆಯದಂತೆ ಕ್ರಮ ತೆಗೆದುಕೊಳ್ಳಬೇಕು. ಪಾರ್ಟಿ ಆಯೋಜನೆ, ಪಾರ್ಟಿಗೆ ಡ್ರಗ್ಸ್ ಪೂರೈಕೆ ಪಾರ್ಟಿಗೆ ಸ್ಥಳದ ಅವಕಾಶ ನೀಡುವುದು ಹೀಗೆ ಎಲ್ಲಾ ಕೋನದಲ್ಲಿ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.












Click it and Unblock the Notifications