ಬೆಂಗಳೂರು ನಗರದಲ್ಲಿ ಮಳೆ ಅನಾಹುತ ತಪ್ಪಿಸಲು ತುರ್ತು ಕ್ರಮ: ಸಚಿವ ಕೃಷ್ಣ ಬೈರೇಗೌಡ ಸೂಚನೆ!

ಬೆಂಗಳೂರು ನಗರದಲ್ಲಿ ಮುಂದಿನ ಎರಡು ಮೂರು ದಿನ ನಗರದಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದ್ದು, ಅನಾಹುತಗಳು ಜರುಗುವ ಮುನ್ನ ಮುನ್ನೆಚ್ಚರಿಕೆ ವಹಿಸಿ ಎಂದು ಎಲ್ಲಾ ಅಧಿಕಾರಿಗಳಿಗೂ ಸಚಿವ ಕೃಷ್ಣ ಬೈರೇಗೌಡ ಸೂಚಿಸಿದ್ದಾರೆ.

ಐದೂ ಪಾಲಿಕೆ ಆಯುಕ್ತರು ಮುಖ್ಯ ಆಯುಕ್ತರು ಹಾಗೂ ಸಂಬಂಧಿತ ಅಧಿಕಾರಿಗಳ ಜೊತೆ ಬುಧವಾರ ಸಂಜೆ ವರ್ಚುವಲ್ ಸಭೆ ನಡೆಸಿ ಮಾತನಾಡಿದ ಅವರು,"ಬೆಂಗಳೂರಿನ ಪಶ್ಚಿಮ, ಉತ್ತರ, ಪೂರ್ವ ಹಾಗೂ ಕೇಂದ್ರ ವಲಯದಲ್ಲಿ ಮುಂದಿನ ಎರಡು ಮೂರು ದಿನ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಕರ್ನಾಟಕ ರಾಜ್ಯ ವಿಪತ್ತು ನಿವರ್ಹಣಾ ಪ್ರಾಧಿಕಾರ ಎಚ್ಚರಿಕೆ ನೀಡಿದ್ದು ಅಧಿಕಾರಿಗಳು ಮಳೆಯಿಂದ ಯಾವುದೇ ಅನಾಹುತ ಜರುಗುವ ಮುನ್ನ ಎಚ್ಚರಿಕೆ ವಹಿಸಬೇಕು, ಮುಂಜಾಗ್ರತಾ ಕ್ರಮಗಳನ್ನು ಜರುಗಿಸಬೇಕು ಎಂದು ನಿರ್ದೇಶಿಸಿದರು.

Bengaluru Rain Take Immediate Precautions to Prevent Rain-Related Disasters Says Krishna Byre Gowda

ಪಶ್ಚಿಮ ಮತ್ತು ಉತ್ತರ ಬೆಂಗಳೂರಿನಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಪ್ರಹರಿ ವಾಹನ ತಂಡ ಸಕ್ರೀಯವಾಗಿ ಕಾರ್ಯನಿರ್ವಹಿಸಬೇಕು, ನಗರದಾದ್ಯಂತ ರೌಂಡ್ಸ್ ಹಾಕಬೇಕು. ಎಲ್ಲೇ ಅಗತ್ಯ ಇದ್ದರೂ ಈ ತಂಡ ತಕ್ಷಣ ಸಹಾಯಕ್ಕೆ ನೆರವಾಗುವಂತಿರಬೇಕು ಎಂದು ತಿಳಿಸಿದರು.

ಕಂಟ್ರೋಲ್ ರೂಂ ಜಾಗೃತವಾಗಿರಲಿ

ಮಳೆ ಸಂದರ್ಭದಲ್ಲಿ ಕಂಟ್ರೋಲ್ ರೂಂ ದಿನದ 24 ಗಂಟೆಯೂ ಜಾಗೃತವಾಗಿರಬೇಕು. ನಗರದ ಯಾವುದೇ ಭಾಗದಿಂದ ದೂರುಗಳು ಬಂದರೂ ಸಹ ಕೂಡಲೇ ಸ್ಪಂದಿಸಬೇಕು. ಮಳೆಯಿಂದ ಹೆಚ್ಚು ನೀರು ನಿಲ್ಲಬಹುದಾದ ಪ್ರದೇಶಗಳಲ್ಲಿ ನೀರನ್ನು ಹೊರಗೆ ಹರಿಸುವ ಪಂಪಿಂಗ್ ವ್ಯವಸ್ಥೆಗೆ ಮೋಟರ್ ಗಳು ಸಿದ್ದವಾಗಿರಬೇಕು. ಮರಗಳು ಉರುಳಿದರೆ ಅದನ್ನು ಕತ್ತರಿಸಲು ಅಗತ್ಯ ಮಾನವ ಸಂಪನ್ಮೂಲ ಹಾಗೂ ಜೆಸಿಬಿ ಗಳ ಲಭ್ಯತೆ ಬಗ್ಗೆ ಈಗಲೇ ಖಚಿತಪಡಿಸಿಕೊಳ್ಳಿ. ಅಲ್ಲದೆ, ಯಾವುದೇ ಪರಿಸ್ಥಿತಿಯನ್ನು ನಿಬಾಯಿಸಲು ಜಿಬಿಎ ವ್ಯಾಪ್ತಿಯ ಇಂಜಿನಿಯರ್ ಗಳು ಹಾಗೂ ಅಗ್ನಿಶಾಮಕ ದಳ ಸರ್ವ ಸನ್ನದ್ಧರಾಗಿರಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ತಿಳಿಸಿದರು.

ಮಳೆನೀರು ನಿಲ್ಲುವ ಪ್ರದೇಶಗಳಲ್ಲಿ ಶಾಶ್ವತ ಪರಿಹಾರ ಕ್ರಮಕ್ಕೆ ಮೊದಲ ಆದ್ಯತೆ

ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬುಧವಾರ ಸುರಿದ ಮಳೆಯಿಂದಾಗಿ ಕೆಲವೆಡೆ ಉಂಟಾದ ಮಳೆನೀರು ನಿಲುಗಡೆ ಹಾಗೂ ಪ್ರವಾಹದ ಪರಿಸ್ಥಿತಿ ಕುರಿತು ಸಾರ್ವಜನಿಕರಲ್ಲಿ ಉಂಟಾಗಿರುವ ಗೊಂದಲಗಳಿಗೆ ಸ್ಪಷ್ಟನೆ ನೀಡುತ್ತಿದ್ದು, ಸಮಸ್ಯೆ ಎದುರಾಗಿರುವ ಪ್ರತಿಯೊಂದು ಸ್ಥಳದಲ್ಲಿನ ನೈಜ ಕಾರಣವನ್ನು ಗುರುತಿಸಿ ಪ್ರವಾಹ ಸಂದರ್ಭದಲ್ಲಿನ ತಾತ್ಕಾಲಿಕ ಪರಿಹಾರದ ಕ್ರಮದ ಜೊತೆಗೆ ಶಾಶ್ವತ ಪರಿಹಾರ ಕಾಮಗಾರಿಗಳಿಗಾಗಿ ನಿರಂತರವಾಗಿ ಕಾರ್ಯ ಪವೃತ್ತರಾಗಿರುವುದುದಾಗಿ ಬೆಂಗಳೂರು ಪೂರ್ವ ನಗರ ಪಾಲಿಕೆಯ ಆಯುಕ್ತರಾದ ಡಿ.ಎಸ್. ರಮೇಶ್ ಅವರು ತಿಳಿಸಿದ್ದಾರೆ.

ಮಳೆನೀರಿನ ಸರಾಗ ಹರಿವಿಗೆ ಅಡ್ಡಿಯಾಗಿರುವ ಸ್ಥಳಗಳಲ್ಲಿ ರೈಲ್ವೆ, ಬಿ ಸ್ವೈಲ್, ಹೈ ಡೆನ್ಸಿಟಿ ಕಾರಿಡಾರ್ ವಿಭಾಗಗಳ ಅಭಿವೃದ್ದಿ ಕಾಮಗಾರಿ, ಸಂಪರ್ಕರಹಿತ ಕಾಲುವೆ ವ್ಯವಸ್ಥೆ, ಅಗತ್ಯವಿರುವ ಕಡೆಗಳಲ್ಲಿ ಕಲ್ವರ್ಟ್ ಕೊರತೆ, ತಗ್ಗು ಪ್ರದೇಶ ಹಾಗೂ ಸ್ಥಳದ ಭೌಗೋಳಿಕ ಪರಿಸ್ಥಿತಿಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಿ ಸಂಬಂಧಪಟ್ಟ ಇಲಾಖೆಗಳ ಸಮನ್ವಯದಲ್ಲಿ ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಪಣತ್ತೂರು ರೈಲ್ವೆ ಅಂಡರ್ ಪಾಸ್

ಪಣತ್ತೂರು ರೈಲ್ವೆ ಅಂಡರ್ ಬ್ರಿಡ್ಜ್ ನಲ್ಲಿ ಮಳೆನೀರು ನಿಲುಗಡೆ ಸಮಸ್ಯೆಗೆ ರೈಲ್ವೆ ಇಲಾಖೆಯ ಡಬಲ್ ಲೈನ್ ಕಾಮಗಾರಿಯಿಂದ ಉಂಟಾಗಿರುವ ನೀರಿನ ಹರಿವಿನ ಅಡಚಣೆ ಒಂದು ಪ್ರಮುಖ ಕಾರಣವಾಗಿದೆ. ಇದೇ ವೇಳೆ, ಬಿ ಸ್ಮೈಲ್ ವತಿಯಿಂದ ಕೈಗೊಂಡಿರುವ ಬಫರ್ ರಸ್ತೆ ಕಾಮಗಾರಿ ಹಾಗೂ ಮಳೆನೀರು ಕಾಲುವೆ ಅಲೈನ್ಮೆಂಟ್ಗೆ ಸಂಬಂಧಿಸಿದ ಸಮಸ್ಯೆ ಕಂಡುಬಂದಿದೆ. ಭೂಮಿಯ ಲಭ್ಯತೆ/ಸ್ವಾಧೀನಕ್ಕೆ ಸಂಬಂಧಿಸಿದ ಅಡಚಣೆಗಳಿಂದ ಸಮರ್ಪಕ ಕಾಲುವೆ ಅಲೈನ್ಮೆಂಟ್ ಕಲ್ಪಿಸುವಲ್ಲಿ ತೊಂದರೆ ಉಂಟಾಗಿದ್ದು, ಈ ಅಂಶಗಳನ್ನು ಪರಿಗಣಿಸಿ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿಸಲು ಸೂಚಿಸಲಾಗಿದೆ.

ಹೂಡಿ ರೈಲ್ವೆ ಅಂಡರ್ ಬ್ರಿಡ್ಜ್‌

ಹೂಡಿ ರೈಲ್ವೆ ಅಂಡರ್ ಬ್ರಿಡ್ಜ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಮಳೆನೀರು ನಿಲುಗಡೆ ಸಮಸ್ಯೆ ಕಂಡುಬಂದಿದ್ದು, ಪ್ರಸ್ತುತ ತಾತ್ಕಾಲಿಕವಾಗಿ ಪಂಪ್ ಮೂಲಕ ನೀರು ಹೊರಹಾಕುವ ಕಾರ್ಯ ನಡೆಯುತ್ತಿದೆ. ಮಳೆ ನೀರು ಸರಾಗ ಹರಿವಿಗೆ ಅಡ್ಡಿಯಾಗಿರುವ ಪೈಪ್‌ನಲ್ಲಿನ ಹೂಳು ತೆರವುಗೊಳಿಸುವಂತೆ ರೈಲ್ವೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ರೈಲ್ವೆ ಇಲಾಖೆಯ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಹೂಡಿ ಅಂಡರ್ ಪಾಸ್‌ನಲ್ಲಿ ನೀರಿನ ಹರಿವಿಗೆ ಅಡ್ಡಿಯಾಗಿರುತ್ತದೆ. ಶಾಶ್ವತ ಪರಿಹಾರಕ್ಕಾಗಿ ಪ್ರಸ್ತುತ ಇರುವ ಪೈಪ್‌ನ್ನು ತೆರವುಗೊಳಿಸಿ, ಹೆಚ್ಚಿನ ವ್ಯಾಸದ ಪೈಪ್ ಅಳವಡಿಸುವುದು ಹಾಗೂ ಅಗತ್ಯ ಮಟ್ಟಿಗೆ ಸ್ಲೋಪ್ ಸರಿಪಡಿಸುವುದು ಅಗತ್ಯವಾಗಿದ್ದು, ನಗರ ಪಾಲಿಕೆ ವ್ಯಾಪ್ತಿಯ ಎಂಜಿನಿಯರ್ಗಳು ರೈಲ್ವೆ ಇಲಾಖೆಯೊಂದಿಗೆ ನಿರಂತರ ಸಮನ್ವಯ ನಡೆಸುತ್ತಿದ್ದು ಶಾಶ್ವತ ಪರಿಹಾರ ಕ್ರಮಕ್ಕೆ ಮನ್ನಣೆ ನೀಡಲಾಗುವುದು ಎಂದಿದ್ದಾರೆ.

ಸ್ಪೈಸ್ ಗಾರ್ಡನ್

ಸ್ಪೈಸ್ ಗಾರ್ಡನ್ ಪ್ರದೇಶದಲ್ಲಿ ಮಳೆನೀರು ನಿಲ್ಲಲು ಮುಖ್ಯ ಕಾರಣ ಮಳೆನೀರು ಚರಂಡಿಯ ಗಟರ್ನಲ್ಲಿರುವ ಮೂರು ವೆಂಟ್ಗಳ ಪೈಕಿ ಎರಡು ವೆಂಟ್ಗಳು ಕಸ, ಅವಶೇಷಗಳು ಹಾಗೂ ಕೆಳಭಾಗದಲ್ಲಿ ಬಿದ್ದಿರುವ ಸ್ಲ್ಯಾಬ್ನಿಂದ ಬಂದ್ ಆಗಿದ್ದು, ಪ್ರಸ್ತುತ ಒಂದು ವೆಂಟ್ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ನೀರಿನ ಹರಿವಿನ ಸಾಮರ್ಥ್ಯ ಕಡಿಮೆಯಾಗಿದೆ. ಶಾಶ್ವತ ಪರಿಹಾರಕ್ಕಾಗಿ ಗಟರ್ನ ಸಂಪೂರ್ಣ ಹೂಳು ತೆರವು, ಬಂದ್ ಆಗಿರುವ ವೆಂಟ್ಗಳನ್ನು ತೆರವುಗೊಳಿಸುವುದು ಹಾಗೂ ಸುಮಾರು 2-3 ಮೀಟರ್ ಭಾಗವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವ ಕಾಮಗಾರಿ ಕೈಗೊಳ್ಳಲಾಗುವುದು. ಈ ಕಾಮಗಾರಿ ಪೂರ್ಣಗೊಂಡ ನಂತರ ಮಳೆನೀರಿನ ಹರಿವು ಸುಗಮವಾಗಲಿದೆ.

ಸಂಹಿತ ಸೆರೆನಿಟಿ ಅಪಾರ್ಟ್ಮೆಂಟ್

ಸಂಹಿತ ಸೆರೆನಿಟಿ ಅಪಾರ್ಟ್ಮೆಂಟ್ ಸುತ್ತಮುತ್ತಲಿನ ಪ್ರದೇಶದಲ್ಲಿ ಸಮರ್ಪಕವಾಗಿ ವಿನ್ಯಾಸಗೊಳಿಸಿದ ಮಳೆನೀರು ನೀರು ಚರಂಡಿ ಸಂಪರ್ಕ ವ್ಯವಸ್ಥೆ ಇಲ್ಲದಿರುವುದು ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಕೆಲವು ಪಿಜಿ ಕಟ್ಟಡಗಳ ಮಾಲೀಕರು ತಮ್ಮದೇ ಆದ ರೀತಿಯಲ್ಲಿ ಚರಂಡಿ ವ್ಯವಸ್ಥೆ ಮಾಡಿಕೊಂಡಿದ್ದು, ಅವುಗಳಿಗೆ ಸಮರ್ಪಕ ಅಂತಿಮ ನೀರು ಹೊರಹರಿವು ಇಲ್ಲದಿರುವುದು ಕಂಡುಬಂದಿದೆ.

ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ರಸ್ತೆ ಮತ್ತು ಚರಂಡಿಯನ್ನು ಸಮರ್ಪಕ ಅಲೈನ್ಮೆಂಟ್ನೊಂದಿಗೆ ನಿರ್ಮಿಸುವ ಅಂದಾಜು ಸಿದ್ಧಪಡಿಸಲಾಗಿದೆ. ಫರ್ನ್ ಹ್ಯಾಬಿಟಾಟ್ ಸಮೀಪದ ಸ್ಥಳದಲ್ಲಿ ಸುಮಾರು 1.5 ಅಡಿ ಅಗಲದ ಖಾಸಗಿ ಸ್ವತ್ತಿನ ಮಾರ್ಗದ ಮೂಲಕ ಪೈಪ್‌ಲೈನ್ ಅಳವಡಿಸಿ ಅದನ್ನು ಮುಖ್ಯ ಮಳೆನೀರು ಕಾಲುವೆಗೆ ಸಂಪರ್ಕಿಸುವ ಯೋಜನೆ ರೂಪಿಸಲಾಗಿದ್ದು, ಸರ್ಕಾರದ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಿರುವುದಾಗಿ ಆಯುಕ್ತರು ತಿಳಿಸಿದ್ದಾರೆ.

ಹೆಣ್ಣೂರು-ಬಾಗಲೂರು ರಸ್ತೆ ಗೆದ್ದಲಹಳ್ಳಿ ರೈಲ್ವೆ ಸೇತುವೆ

ಹೆಣ್ಣೂರು -ಬಾಗಲೂರು ರಸ್ತೆ ಗೆದ್ದಲಹಳ್ಳಿ ರೈಲ್ವೆ ಸೇತುವೆ ವ್ಯಾಪ್ತಿಯಲ್ಲಿ ಸುಮಾರು ಅರ್ಧ ಅಡಿಯಷ್ಟು ಮಳೆನೀರು ನಿಲ್ಲುವುದು ಗಮನಕ್ಕೆ ಬಂದಿದ್ದು, ಈ ಪ್ರದೇಶದಲ್ಲಿ ನೀರು ಸಂಗ್ರಹವಾಗಲು ಮುಖ್ಯ ಕಾರಣ ಕಿರಿದಾದ ಕಲ್ವರ್ಟ್ ವೆಂಟ್ ಆಗಿರುವುದು ಪರಿಶೀಲನೆಯಿಂದ ತಿಳಿದುಬಂದಿರುತ್ತದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ರೈಲ್ವೆ ಸೇತುವೆಯಿಂದ ಸುಮಾರು 20 ಮೀಟರ್ ಮುಂದಕ್ಕೆ ಹೊಸ ಕಲ್ವರ್ಟ್ ನಿರ್ಮಿಸುವ ಯೋಜನೆ ರೂಪಿಸಲಾಗಿದ್ದು, ಈ ಕುರಿತು ಹೈ ಡೆನ್ಸಿಟಿ ಕಾರಿಡಾರ್ ವಿಭಾಗದ ಅಧಿಕಾರಿಗಳಿಗೆ ಸ್ಟಷ್ಟ ನಿರ್ದೇಶನಗಳನ್ನು ನೀಡಿದ್ದಾರೆ.

ಸಾಯಿ ಬಡಾವಣೆ ವಡ್ಡರಪಾಳ್ಯ

ಸಾಯಿ ಲೇಔಟ್ ಪ್ರದೇಶದಲ್ಲಿ ಈ ಹಿಂದೆ ಮಳೆಯಿಂದಾಗಿ ಎದುರಾಗುತ್ತಿದ್ದ ನೀರು ನಿಲುಗಡೆ ಸಮಸ್ಯೆಗೆ ಹೋಲಿಸಿದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಸುಮಾರು ಶೇ.100ರಷ್ಟು ಸುಧಾರಣೆ ಕಂಡುಬಂದಿದೆ. ಗೆದ್ದಲಹಳ್ಳಿ ರೈಲ್ವೆ ವೆಂಟ್ ಕಾಮಗಾರಿ ಪೂರ್ಣಗೊಂಡಿರುವ ಪರಿಣಾಮವಾಗಿ ಈ ಪ್ರದೇಶದಲ್ಲಿ ಪ್ರವಾಹದ ಪರಿಸ್ಥಿತಿ ಬಹುತೇಕ ನಿಯಂತ್ರಣಕ್ಕೆ ಬಂದಿರುತ್ತದೆ. ವಡ್ಡರಪಾಳ್ಯವು ತಗ್ಗು ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಇತ್ತೀಚಿನ ಮಳೆಯಲ್ಲಿ ಸುಮಾರು ಅರ್ಧ ಅಡಿಯಷ್ಟು ನೀರು ನಿಂತಿರುವುದು ಕಂಡುಬಂದಿದ್ದು, ಸ್ಥಳದ ಸ್ವರೂಪವನ್ನು ಪರಿಗಣಿಸಿ ನೀರು ಸರಾಗವಾಗಿ ಹರಿದುಹೋಗುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+