Bengaluru Rain Memes: ಮಳೆಗೆ ಕಾಯುತ್ತಿರುವ ಬೆಂಗಳೂರಿಗರು: ಮೀಮ್ಸ್ ವೈರಲ್
ಬೆಂಗಳೂರು, ಏಪ್ರಿಲ್ 15: ಬೆಂಗಳೂರಿನಲ್ಲಿ ಮಳೆ ಬರುವುದಾಗಿ ಮುನ್ಸೂಚನೆ ಸಿಕ್ಕ ಬೆನ್ನಲ್ಲೆ ಮತ್ತೆ ಒಣಹವೆಯ ವಾತಾವರಣ ನಿರ್ಮಾಣವಾಗಲಿದೆ. ಮುಂದಿನ ಮೂರು ನಾಲ್ಕು ದಿನದ ನಂತರ ಲಘು ಮಳೆ ಆಗಬಹುದು ಎಂದು ಹವಾಮಾನ ತಜ್ಞರು ಹೇಳಿದ್ದಾರೆ. ಮಾರ್ಚ್ ತಿಂಗಳಲ್ಲಿ ಒಂದು ಹನಿ ಮಳೆ ಸಹ ಬೆಂಗಳೂರಿಗೆ ಬಿದ್ದಿಲ್ಲ. ತಾಪಮಾನ, ಶಾಖದ ಅಲೆಗೆ ತತ್ತರಿಸಿರುವ ಬೆಂಗಳೂರು ನಿವಾಸಿಗಳು ಮಳೆಗಾಗಿ ಕಾಯುತ್ತಿರುವ ಮೀಮ್ಸ್ ಗಳನ್ನು ಶೇರ್ ಮಾಡಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್‌ಗಳನ್ನು ಪೋಸ್ಟ್ ಮಾಡುವ ಮೂಲಕ ಬೆಂಗಳೂರಿನ ನಿವಾಸಿಗಳ ಹಾಲಿ ಸ್ಥಿತಿಗತಿ, ಮಳೆ ಅಗತ್ಯತೆ ಕುರಿತು ಭಾವನೆಗಳನ್ನು ವ್ಯಕ್ತಪಡಿಸಲಾಗಿದೆ.

ಸಿಲಿಕಾನ್ ಸಿಟಿ, ಐಟಿ ಕೇಂದ್ರದಲ್ಲಿ ಜನರು ಮಳೆಗಾಗಿ ಕಾಯುತ್ತಿದ್ದಾರೆ. ಈ ಸಂಬಂಧ ಅನೇಕ ಹಾಸ್ಯಮಯ ಪ್ರಾತಿನಿಧ್ಯವನ್ನು ಅಂತರ್ಜಾಲದಲ್ಲಿ ಹಂಚಿಕೊಳ್ಳಲಾಗಿದೆ. ಸದ್ಯ ಬೆಂಗಳೂರಿಗೆ ಶುಷ್ಕ ವಾತಾವರಣದ ಮುನಸೂಚನೆ ನೀಡಲಾಗಿದೆ. ಏಪ್ರಿಲ್ 17 ಇಲ್ಲವೇ 18 ರಿಂದ ಲಘು ಮಳೆ ನಂತರ ಜೋರು ಮಳೆಯ ನಿರೀಕ್ಷೆ ಇದೆ ಎನ್ನಲಾಗಿದೆ.
ಹಸಿರು ಹೊದಿಕೆ ಕಳೆದುಕೊಂಡ ಬೆಂಗಳೂರು
ತೀವ್ರ ತಾಪಮಾನಕ್ಕೆ ನಗರವಾಸಿಗಳು ತತ್ತರಿಸಿದ್ದಾರೆ. ಹವಾಮಾನ ತಜ್ಞರ ಪ್ರಕಾರ, 2024ರ ಬೇಸಿಗೆಯು ಭವಿಷ್ಯದಲ್ಲಿ ತಾಪಮಾನ ಹೇಗಿರುತ್ತದೆ ಎಂಬುದಕ್ಕೆ ಸಣ್ಣ ಉದಾಹರಣೆ ಆಗಿದೆ. ಐಐಎಸ್‌ಸಿ (IISc) ಸೆಂಟರ್ ಫಾರ್ ಎಕೊಲಾಜಿಕಲ್ ಸೈನ್ಸಸ್ (CES) ಪ್ರಕಾರ ರಾಜಧಾನಿ ಹಸಿರು ಹೊದಿಕೆಯನ್ನು ಶೇಕಡಾ 66 ರಷ್ಟು ಕಳೆದುಕೊಂಡಿದೆ.

ಅಷ್ಟೇ ಅಲ್ಲದೇ ಶೇಕಡಾ 74 ರಷ್ಟು ಜಲಮೂಲಗಳನ್ನು ಕಳೆದುಕೊಂಡಿದೆ. ಕಾಂಕ್ರೀಟ ನಗರವಾಗಿ ಶೇಕಡಾ 584 ರಷ್ಟು ಬೆಳವಣಿಗೆ ಹೊಂದಿದೆ. ಈ ಬಾರಿ ಬೇಸಿಗೆ ಹೆಚ್ಚಾಗಲು ಹಿಂದೂ ಮಹಾಸಾಗರದಲ್ಲಿ ಎಲ್ ನಿನೊ ದಾಳಿಯ ವೈಪರಿತ್ಯ ಪ್ರಭಾವ ಕಾರಣ ಎಂದು ಐಎಂಡಿ ತಿಳಿಸಿದೆ.
ಸೋಷಿಯಲ್ ಮೀಡಿಯಾದಲ್ಲಿ ಮಳೆ ಮೀಮ್ಸ್
ಕ್ರಿಸ್ಟೋಫರ್ ನೋಲನ್ ಅವರ ಒಪೆನ್‌ಹೈಮರ್‌ನಿಂದ ಸಿಲಿಯನ್ ಮರ್ಫಿ ಅವರು ಆಕಾಶದ ಕಡೆಗೆ ನೋಡುತ್ತಿರುವ ಚಿತ್ರವನ್ನು ಫೋಟೋ ಪೋಸ್ಟ್ ಮಾಡಲಾಗಿದೆ. ಬೆಂಗಳೂರಿನ ಜನರು ಇದೇ ರೀತಿ ಆಕಾಶದತ್ತ ನೋಡುತ್ತಾ ಮಳೆಗೆ ಕಾಯುತ್ತಿದ್ದಾರೆ ಎಂದು ಬರೆದಿದ್ದಾರೆ.
People in Bengaluru City are seeing rain in other places be like... pic.twitter.com/PbBVJT4FLH
— snobfielder (@snobfielder) April 12, 2024
ಹವಾಮಾನ ವಿಮರ್ಶಕರೆಲ್ಲರಿಗೂ ಉತ್ತರ ನೀಡಲು ಬೆಂಗಳೂರು ಮೊದಲ ಮಳೆಯ ಹನಿಗಾಗಿ ಕಾಯುತ್ತಿದ್ದಾರೆ ಎಂದು ಮತ್ತೊಂದು ಮೀಮ್ಸ್ ಅನ್ನು ಹಂಚಿಕೊಳ್ಳಲಾಗಿದೆ.
ವಿಜಯಪುರ ಸೇರಿದಂತೆ ಕರ್ನಾಟಕ ವಿವಿಧೆಡೆ ಮಳೆಯ ದರ್ಶನವಾಗಿದೆ. ಆದರೆ ಬೆಂಗಳೂರಿಗರ ಪಾಲಿಗೆ ಮಳೆ ಕನಸಾಗಿದೆ. ಈ ಕುರಿತು ಎಂಎಸ್ ಧೋನಿಯವರ ಮೆಮೆ ಹಂಚಿಕೊಳ್ಳಲಾಗಿದೆ. ವೇದಿಕೆ ಕಾರ್ಯಕ್ರಮದಲ್ಲಿ ನೃತ್ಯಗಾರ್ತಿಯೊಬ್ಬರು ಬಿಟ್ಟ ಕಂಗಳಂತೆ ನೋಡುವ ಹಾಗೆ ಬೆಂಗಳೂರಲ್ಲಿ ಜನ ಬರುವಿಕೆಯ ನಿರೀಕ್ಷೆಯಲ್ಲಿ ನೋಡುತ್ತಿದ್ದಾರೆ. ಈ ಬಗ್ಗೆ ವೇದಿಕೆ ಕಾರ್ಯಕ್ರಮದ ಮೆಮೆ ಪೋಸ್ಟ್ ಮಾಡಲಾಗಿದೆ.
People in Bengaluru City are seeing rain in other places be like... pic.twitter.com/PbBVJT4FLH
— snobfielder (@snobfielder) April 12, 2024
ಬೆಂಗಳೂರು ಮಳೆ ವಿಳಂಬಕ್ಕೆ ಕಾರಣವೇನು?
ರಾಜ್ಯದ ಕೆಲವೆಡೆ ಪೂರ್ವ ಮುಂಗಾರು ಮಳೆ ಅಬ್ಬರಿಸುತ್ತಿದೆ. ಆದರೆ ಬೆಂಗಳೂರಿನಲ್ಲಿ ಮಾತ್ರ ಒಂದನಿ ಮಳೆ ಆಗಿಲ್ಲ. ಬರೀ ಶಾಖದ ಅಲೆ ಕಂಡು ಬರುತ್ತಿದೆ. ಹವಾಮಾನದಲ್ಲಿ ವೈಪರಿತ್ಯಗಳು ಘಟಿಸಿದರೆ ಮುಂದಿನ ದಿನಗಳಲ್ಲಿ ಲಘು ಮಳೆಯನ್ನು ಬೆಂಗಳೂರು ಕಾಣಲಿದೆ ಎಂದು ಅಂದಾಜಿಸಲಾಗಿದೆ.
ಇಂದಿನಿಂದ (ಸೋಮವಾರ) ಇನ್ನೂ ಕೆಲವು ದಿನ ಬೆಂಗಳೂರಿನಲ್ಲಿ ಶುಷ್ಕ ವಾತಾವರಣದ ನಿರೀಕ್ಷೆ ಇದೆ. ಏಪ್ರಿಲ್ 18 ಇಲ್ಲವೇ 20ರ ನಂತರ ಜೋರು ಮಳೆಯ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ. ಕಳೆದ ಮಾರ್ಚ್ ಬೆಂಗಳೂರು ಶೂನ್ಯ ಮಳೆಗೆ ಸಾಕ್ಷಿಯಾಗಿದೆ. ಇದು ಏಪ್ರಿಲ್ 15ರವರೆಗೂ ಮುಂದುವರಿದೆ. ಸದ್ಯ ಬೆಂಗಳೂರಿನಲ್ಲಿ 35 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.












Click it and Unblock the Notifications