Bengaluru Rains: ಬೆಂಗಳೂರಿಗೆ ಶುರುವಾಯ್ತು ಧಾರಾಕಾರ ಮಳೆ, ದೇವನಹಳ್ಳಿ ಜನರೇ ಎಚ್ಚರ

ಬೆಂಗಳೂರು, ಅಕ್ಟೋಬರ್ 22: ರಾಜ್ಯ ರಾಜಧಾನಿ ಸಿಲಿಕಾನ್ ಬೆಂಗಳೂರು ಒಂದೊಮ್ಮೆ ಭಾರೀ ಟ್ರಾಫಿಕ್‌ನಿಂದ ಸುದ್ದಿಯಾದರೆ, ಇದೀಗ ಭಾರೀ ಮಳೆ, ಪ್ರವಾಹದಿಂದ ಸುದ್ದಿಯಾಗಿದೆ. ಸೋಮವಾರ ಸುರಿದ ಮಳೆಗೆ ಚೇತರಿಸಿಕೊಳ್ಳಲು ಹೆಣಗಾಡುತ್ತಿರುವ ಬೆಂಗಳೂರು ನಗರದಲ್ಲಿ ಇಂದು ಮಂಗಳವಾರ ಮಧ್ಯಾಹ್ನವೇ ಭರ್ಜರಿ ಮಳೆ ಸುರಿಯುತ್ತಿದೆ. ದೇವನಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅತ್ಯಧಿಕ ಮಳೆ ಆಗುತ್ತಿದೆ.

ಇಂದು ಬೆಳಗ್ಗೆಯಿಂದಲೇ ನಗರದ ವಿವಿಧ ಕಡೆಗಳಲ್ಲಿ ವ್ಯಾಪಕ ಮಳೆ ಆಗುತ್ತಿದೆ. ಇಂದು ಬೆಳ್ಳಂಬೆಳಗ್ಗೆಯೇ ಯಲಹಂಕ ವಲಯದ ಚೌಡೇಶ್ವರಿಯಲ್ಲಿ ಅತ್ಯಧಿಕ 157 ಮಿಲಿ ಮೀಟರ್ ಮಳೆ ದಾಖಲಾಗಿದೆ. ಉಳಿದಂತೆ ವಿದ್ಯಾರಣ್ಯಪುರ, ಜಕ್ಕೂರು, ಕೊಡುಗೇಹಳ್ಳಿ, ಹೊರ ಮಾವು, ಹೆಮ್ಮಿಗೆಪುರ ಬಡಾವಣೆಗಳಲ್ಲಿ ಮಳೆ ಆರ್ಭಟಿಸಿದೆ.

Bengaluru Rain Heavy Rain Lashes in Devanahalli and Other Many Parts of City Know Forecast

ಅದರ ಬೆನ್ನಲ್ಲೆ ಮಧ್ಯಾಹ್ನ 3 ಗಂಟೆಗೆ ಹೊತ್ತಿಗೆ ಬೆಂಗಳೂರು ಗ್ರಾಮಾಂತರದ ದೇವನಹಳ್ಳಿಯಲ್ಲಿ ಬಿರುಗಾಳು, ಗುಡಗು ಸಹಿತ ಜೋರು ಮಳೆ ಅಬ್ಬರ ಕಂಡು ಬಂದಿದೆ. ಕೆಲವೆಡೆ ಸಂಚಾರ ತೊಂದರೆ ಆಗಿದ್ದು, ಏರ್‌ಪೋರ್ಟ್‌ಗೆ ಹೋಗುವವರು ಭಯದಿಂದಲೇ ತೆರಳುವಂತಾಗಿದೆ. ತಗ್ಗು ಪ್ರದೇಶದ ನಿವಾಸಿಗಳೂ ಮನೆಗಳಿಗೆ ನೀರು ನುಗ್ಗುವ ಆತಂಕದಲ್ಲಿ ಜೀವಿಸುತ್ತಿದ್ದಾರೆ. ಮಧ್ಯಾಹ್ನವೇ ಅರ್ಧ ಬೆಂಗಳೂರಿಗೆ ಕತ್ತಲು ಕವಿದ ಮಬ್ಬು ವಾತಾವರಣ ಕಂಡು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+