ಬೆಂಗಳೂರಲ್ಲಿ ಆಸ್ತಿ ಬಗ್ಗೆ ತಪ್ಪು ಮಾಹಿತಿ ನೀಡಿದ ಆಸ್ತಿದಾರರಿಗೆ ಸಂಕಷ್ಟ: 32 ಪ್ರಾಪರ್ಟಿ ಮಾಲೀಕರ ವಿರುದ್ಧ ಎಫ್‌ಐಆರ್!

ಬೆಂಗಳೂರು: ಕರ್ನಾಟಕ ಸರ್ಕಾರ ಹಾಗೂ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಜಂಟಿಯಾಗಿ ಬೆಂಗಳೂರು ನಗರದಲ್ಲಿ ಇ - ಖಾತಾವನ್ನು ಪರಿಚಯಿಸಿದೆ. ಬೆಂಗಳೂರು ನಗರದಲ್ಲಿ ಆಸ್ತಿದಾರರ ಆಸ್ತಿ ಸಂರಕ್ಷಣೆ ಮಾಡುವ ಉದ್ದೇಶದಿಂದ ಆಸ್ತಿಗಳಿಗೆ ಇ ಖಾತಾ ಪರಿಚಯಿಸಿದೆ. ಇದೇ ಮೊದಲ ಬಾರಿಗೆ ನಗರ ಪೊಲೀಸರು ಅನರ್ಹ ಇ-ಖಾತಾ ಅರ್ಜಿಗಳನ್ನು ತೆರವುಗೊಳಿಸಿದ ಆರೋಪ ಹೊತ್ತಿರುವ ಇಬ್ಬರು ಸರ್ಕಾರಿ (ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ಅಧಿಕಾರಿಗಳ ವಿರುದ್ಧ ಮಾತ್ರವಲ್ಲದೆ, ಅನುಮೋದನೆಗಳಿಂದ ಲಾಭ ಪಡೆದ 32 ಆಸ್ತಿ ಮಾಲೀಕರ ವಿರುದ್ಧವೂ ಎಫ್‌ಐಆರ್ ದಾಖಲಿಸಿದ್ದಾರೆ.

ಬೆಂಗಳೂರು ನಗರದಲ್ಲಿ ಆಸ್ತಿಗಳ ಸಂರಕ್ಷಣೆ ಹಾಗೂ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಆಸ್ತಿದಾರರು ಆಸ್ತಿ ತೆರಿಗೆ ವಂಚನೆ ಮಾಡಬಾರದು ಎನ್ನುವ ಉದ್ದೇಶದಿಂದ ಇ ಖಾತಾ ಪರಿಚಯಿಸಲಾಗಿದೆ. ಆದರೆ, ಜಿಬಿಎ ಅಧಿಕಾರಿಗಳು ಇ ಖಾತಾ ಯೋಜನೆಯಲ್ಲೂ ಅವ್ಯವಹಾರ ನಡೆಸಿದ್ದಾರೆ. ಅಲ್ಲದೆ, ಇದರಲ್ಲಿ ಕೆಲವು ಆಸ್ತಿದಾರರು ಸಹ ಶಾಮೀಲಾಗಿರುವ ಆರೋಪ ಕೇಳಿ ಬಂದಿದೆ. ಇದೀಗ ಸರ್ಕಾರವು ಇ ಖಾತಾ ಯೋಜನೆಯಲ್ಲಿ ಅವ್ಯವಹಾರ ನಡೆಸಿದವರ ವಿರುದ್ಧ ಗಂಭೀರ ಕ್ರಮಕ್ಕೆ ಮುಂದಾಗಿದೆ. ಮೊದಲ ಹಂತದಲ್ಲಿ ಹಲವು ಆಸ್ತಿದಾರರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ.

Bengaluru Property Trouble for Owners Over False Information FIR Filed Against 32 Property Owners

ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಲಾಗಿದ್ದು, ಇ-ಆಸ್ತಿ ಸಾಫ್ಟ್‌ವೇರ್‌ನಲ್ಲಿ ಬ್ಯಾಂಕ್ ಅಡಮಾನ ನಿಬಂಧನೆಯನ್ನು ದುರುಪಯೋಗ ಮಾಡಿಕೊಂಡು ಹೊಸದಾಗಿ ನಿರ್ಮಿಸಲಾದ ಫ್ಲಾಟ್‌ಗಳಿಗೆ ಅಕ್ರಮ ಇ-ಖಾತಾಗಳನ್ನು ನೀಡಲಾಗಿದೆ. ಈ ಸಂಬಂಧ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರಾಧಿಕಾರದ ಕಂದಾಯ ಅಧಿಕಾರಿಗಳು ಮತ್ತು ಖಾಸಗಿ ಅರ್ಜಿದಾರರ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ.

ಅನಿಯಮಿತ ಅನುಮೋದನೆಗಳ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅವುಗಳನ್ನು ಪರಿಶೀಲಿಸಿ ಅನುಮತಿ ನೀಡುವ ಜವಾಬ್ದಾರಿ ಹೊಂದಿರುವ ಅಧಿಕಾರಿಗಳ ವಿರುದ್ಧವೇ ಕ್ರಮ ಕೈಗೊಳ್ಳಲಾಗುತ್ತದೆ. ಹೀಗಾಗಿ ಈ ಬೆಳವಣಿಗೆ ಮಹತ್ವ ಪಡೆದಿದೆ. ಇನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಿಶೇಷ ಆಯುಕ್ತ (ಕಂದಾಯ ಮತ್ತು ಐಟಿ) ಮುನೀಶ್ ಮೌದ್ಗಿಲ್ ನೀಡಿದ ದೂರಿನ ಆಧಾರದ ಮೇಲೆ ಬೆಂಗಳೂರು ಪೊಲೀಸ್ ಅಧಿಕಾರಿಗಳು ಪಾಲಿಕೆಯ ಅಧಿಕಾರಿಗಳ ವಿರುದ್ಧವೇ ಕ್ರಮ ಜರುಗಿಸಿದ್ದಾರೆ.

ಕೃಷ್ಣರಾಜಪುರ ಮತ್ತು ಕೆಂಗೇರಿ ವಿಭಾಗಗಳ ಸಹಾಯಕ ಆಯುಕ್ತರು ಮತ್ತು ಉಸ್ತುವಾರಿ ಕಂದಾಯ ಅಧಿಕಾರಿಗಳಾದ ಬಸವರಾಜ್ ಮಾಗಿ ಮತ್ತು ಲೋಕಮಠ ಅವರ ವಿರುದ್ಧ ಕ್ರಮ ಜರುಗಿಸಲಾಗಿದೆ. ದೂರಿನ ಪ್ರಕಾರ, ತಾಂತ್ರಿಕ ಪರೀಕ್ಷೆಯಲ್ಲಿ ಜನವರಿ 29 ರಿಂದ ಜೂನ್ 19 ರವರೆಗೆ ಕೃಷ್ಣರಾಜಪುರ ಮತ್ತು ಹೊರಮಾವುಗಳಲ್ಲಿನ 98 ಅನರ್ಹ ಆಸ್ತಿಗಳಿಗೆ ಹೊಸ ಇ-ಖಾತಾಗಳನ್ನು ನೀಡಲಾಗಿದೆ ಎಂದು ಹೇಳಲಾಗಿದೆ. ಇ-ಆಸ್ತಿ ಸಾಫ್ಟ್‌ವೇರ್‌ನ SARFAESI ಮಾಡ್ಯೂಲ್ ಅನ್ನು ದುರುಪಯೋಗ ಮಾಡಿಕೊಂಡಿರುವ ಆರೋಪ ಅಧಿಕಾರಿಗಳ ಮೇಲಿದೆ.

ಸಾಲ ಬಾಕಿ ಉಳಿಸಿಕೊಂಡ ನಂತರ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಹರಾಜು ಮಾಡಿದ ಆಸ್ತಿಗಳಿಗೆ ಇ-ಖಾತಾಗಳನ್ನು ರಚಿಸಲು ಈ ಮಾಡ್ಯೂಲ್ ಅನ್ನು ಪ್ರತ್ಯೇಕವಾಗಿ ಉದ್ದೇಶಿಸಲಾಗಿದೆ. ಆದಾಗ್ಯೂ, ಕಡ್ಡಾಯವಾಗಿ ಬ್ಯಾಂಕ್ ನೀಡಿದ ಮಾರಾಟ ಪ್ರಮಾಣಪತ್ರಗಳ ಬದಲಿಗೆ ಸಾಮಾನ್ಯ ಮಾರಾಟ ಪತ್ರಗಳು, ಜಂಟಿ ಅಭಿವೃದ್ಧಿ ಒಪ್ಪಂದಗಳು ಮತ್ತು ಕಟ್ಟಡ ಪರವಾನಗಿಗಳನ್ನು ಅಪ್‌ಲೋಡ್ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಆಸ್ತಿ ಮಾಲೀಕರಿಗೂ ಸಂಕಷ್ಟ!

31 ಪ್ರಕರಣಗಳಲ್ಲಿ ಕಂದಾಯ ನಿರೀಕ್ಷಕರು ಸಲ್ಲಿಸಿದ ನಕಾರಾತ್ಮಕ ವರದಿಗಳನ್ನು ಕಡೆಗಣಿಸಿ, ಅರ್ಜಿಗಳನ್ನು ಅನುಮೋದಿಸಲು ತಮ್ಮ ಅಧಿಕೃತ ಲಾಗಿನ್ ಐಡಿಗಳನ್ನು ಬಳಸಿದ್ದಾರೆ ಎನ್ನುವುದು ಪ್ರಕರಣದ ತನಿಖೆಯಲ್ಲಿ ಬಹಿರಂಗವಾಗಿದ್ದು, ಎಫ್‌ಐಆರ್‌ನಲ್ಲೂ ಈ ಅಂಶಗಳನ್ನು ಉಲ್ಲೇಖಿಸಲಾಗಿದೆ. ಅಧಿಕಾರಿಗಳು ತಮ್ಮ ಹುದ್ದೆಗಳು ಮತ್ತು ಸರ್ಕಾರಿ ಸಾಫ್ಟ್‌ವೇರ್ ಅನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ 32 ಆಸ್ತಿ ಮಾಲೀಕರು ಅನುಮೋದನೆಗಳನ್ನು ಪಡೆಯಲು ಅವರೊಂದಿಗೆ ಶಾಮೀಲಾಗಿದ್ದಾರೆ ಎಂದು ಆರೋಪಿಸಲಾಗಿದೆ. ತನಿಖೆಯು ಅರ್ಜಿದಾರರ ವೈಯಕ್ತಿಕ ಪಾತ್ರಗಳನ್ನು ಮತ್ತು ಅವರು ಆಪಾದಿತ ಅಕ್ರಮಗಳಲ್ಲಿ ತಿಳಿದೇ ಭಾಗವಹಿಸಿದ್ದರು ಎನ್ನುವ ಅಂಶವನ್ನೂ ಈ ಪ್ರಕರಣದಲ್ಲಿ ಪರಿಗಣಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+