Bengaluru property Tax: ಆಸ್ತಿದಾರರಿಗೆ ಹೊಸ ಟ್ಯಾಕ್ಸ್‌ ಶಾಕ್ ಕೊಟ್ಟ ಸರ್ಕಾರ: ಕೇಂದ್ರ ಸಚಿವ ಎಚ್‌ಡಿಕೆ ಹೇಳಿದ್ದೇನು

Bengaluru property Tax: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಹೊಸ ತೆರಿಗೆ ವಿಧಿಸುವುದಕ್ಕೆ ಕರ್ನಾಟಕ ಕಾಂಗ್ರೆಸ್ ಸರ್ಕಾರವು ಮುಂದಾಗಿದ್ದು, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಬೆಂಗಳೂರಿನ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಐದು ಪಾಲಿಕೆಗಳ ವ್ಯಾಪ್ತಿಯಲ್ಲಿರುವ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಆನ್‌ಲೈನ್ ಸೇವೆಗಳನ್ನು ಬಳಸುತ್ತಿರುವ ಆಸ್ತಿ ಮಾಲೀಕರ ಮೇಲೆ 200 ರೂಪಾಯಿಯಿಂದ 10,000 ರೂ.ವರೆಗೆ ಹೊಸದಾಗಿ ಸಾಫ್ಟವೇರ್ ಶುಲ್ಕವನ್ನು ವಿಧಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. ಆದರೆ, ಆಸ್ತಿದಾರರಿಗೆ ಹೊಸ ಶುಲ್ಕ / ಆಸ್ತಿ ತೆರಿಗೆ ಸೇರ್ಪಡೆ ಮಾಡುತ್ತಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.

ಈ ಸಂಬಂಧ ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಕೇಂದ್ರ ಸಚಿವ ಎಚ್. ಡಿ ಕುಮಾರಸ್ವಾಮಿ ಅವರು, ಗ್ರೇಟರ್ ಬೆಂಗಳೂರು ಪ್ರಾಧಿಕಾರ (#GBA) ಬಂದ ಮೇಲೆ ಬೆಂಗಳೂರು 'ಗ್ರೇಟ್' ಆಗುತ್ತದೆ! ನಾಡಪ್ರಭು ಕೆಂಪೇಗೌಡರು ಕಟ್ಟಿದ ಈ ಮಹಾನಗರದ ವ್ಯಾಪ್ತಿ ಹಿಗ್ಗಿಸಿದರೆ ಅಭಿವೃದ್ಧಿಗೆ ಅನುಕೂಲ. 50 ವರ್ಷಗಳಲ್ಲಿ ಯಾರೂ ಮಾಡದ ಕೆಲಸ ನಾವು ಮಾಡುತ್ತಿದ್ದೇವೆ ಹಾಗೂ ನಿಮ್ಮ ಆಸ್ತಿ, ನಿಮ್ಮ ಹಕ್ಕು; ನಿಮ್ಮ ಮನೆ ಬಾಗಿಲಿಗೇ ದಾಖಲೆಗಳನ್ನು ತಲುಪಿಸುತ್ತೇವೆ, ಸುಳ್ಳು.. ಹಸಿಸುಳ್ಳು... ಸುಳ್ಳು ಹೇಳುವುದಕ್ಕೆ ಸಂಕೋಚವಿಲ್ಲ, ಸುಲಿಗೆಗೆ ನಾಚಿಕೆಯೂ ಇಲ್ಲ ಎಂದು ಕರ್ನಾಟಕ ಕಾಂಗ್ರೆಸ್ ಸರ್ಕಾರದ ನಿರ್ಧಾರಕ್ಕೆ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Bengaluru Property Tax New Fee Sparks Row What Did Union Minister H D Kumaraswamy Say new Tax

ಬೆಂಗಳೂರು ವ್ಯಾಪ್ತಿ ಹಿಗ್ಗಿಸುವುದು ಎಂದರೆ ಸುಲಿಗೆಗೆ "ವ್ಯಾಪಕ' ಅವಕಾಶಗಳನ್ನು ಸೃಷ್ಟಿಸಿಕೊಳ್ಳುವುದು. ಕರ್ನಾಟಕ ಕಾಂಗ್ರೆಸ್ ಸರ್ಕಾರ ಅದನ್ನೇ ಮಾಡಿದೆ. ಸಾಫ್ಟ್ ವೇರ್ ಹೆಸರಿನಲ್ಲಿ ನಾಗರಿಕರ ಜೇಬಿಗೆ 'ಕೈ' ಹಾಕಿದೆ. ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕ #ATM ಆಗಿದೆ. ನಿಜ, ಸುಲಿಗೆಯಲ್ಲಿ ಈ ಸರಕಾರ 50 ವರ್ಷಗಳ ದಾಖಲೆ ಸರಿಗಟ್ಟಲಿದೆ! ಸೇವೆಗೆ ₹10,000 ವರೆಗೂ ಶುಲ್ಕ. ಇದು ಪಿಕ್'ಪಾಕೆಟ್ ಅಲ್ಲದೆ ಮತ್ತೇನು ಎಂದು ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ ಅವರು ಪ್ರಶ್ನೆ ಮಾಡಿದ್ದಾರೆ.

ಬೆಂಗಳೂರಿನ ಗಡಿಗಳನ್ನು ವಿಸ್ತರಿಸುವುದು ಈಗ ನಾಗರಿಕರಿಂದ ಆದಾಯ ಸಂಗ್ರಹದ ವ್ಯಾಪ್ತಿಯನ್ನು ವಿಸ್ತರಿಸುವ ಅವಕಾಶವಾಗಿದೆ. ಸಾಫ್ಟ್‌ವೇರ್ ಮತ್ತು ಸೇವೆಗಳ ಹೆಸರಿನಲ್ಲಿ, ಕರ್ನಾಟಕದ ಕಾಂಗ್ರೆಸ್ ಸರ್ಕಾರ ಬೆಂಗಳೂರಿನ ನಾಗರಿಕರ ಜೇಬಿಗೆ ತಲುಪುತ್ತಿದೆ. ಆಸ್ತಿ ಸಂಬಂಧಿತ ಅಗತ್ಯ ಸೇವೆಗಳನ್ನು ಪಡೆಯಲು ನಾಗರಿಕರು ಇಷ್ಟೊಂದು ಮೊತ್ತವನ್ನು ಪಾವತಿಸುವಂತೆ ಒತ್ತಾಯಿಸಲಾಗುತ್ತಿದ್ದರೆ, ಅದನ್ನು #PickpocketSarkar ಎಂದು ಕರೆಯದೆ ಬೇರೆ ಏನು ಕರೆಯಬಹುದು ಎಂದೂ ಪ್ರಶ್ನಿಸಿದ್ದಾರೆ.

Bengaluru property Tax: ಬೆಂಗಳೂರಿನ ಹೊರವರ್ತುಲ ರಸ್ತೆ ಗುಂಡಿಮಯ: ಜೆಡಿಎಸ್

ಇನ್ನು ಬೆಂಗಳೂರಿನ ಹೊರವರ್ತುಲ ರಸ್ತೆಯು ಗುಂಡಿಮಯವಾಗಿದೆ ಎಂದು ಜೆಡಿಎಸ್ ಹೇಳಿದೆ. ಕರ್ನಾಟಕಕ್ಕೆ 1/3 ಭಾಗದಷ್ಟು ಐಟಿ ರಫ್ತು ಆದಾಯ ತರುವ ಬೆಂಗಳೂರಿನ ಹೊರವರ್ತುಲ ರಸ್ತೆ (ORR) ಇಂದು ಗುಂಡಿಮಯವಾಗಿದೆ. ರಸ್ತೆ ಅಭಿವೃದ್ಧಿಗೆಂದು ಅನುಮೋದಿಸಲಾದ 450 ಕೋಟಿ ರೂ. ಯಾರ ಜೇಬು ಸೇರಿತು ಕರ್ನಾಟಕ ಕಾಂಗ್ರೆಸ್ ಸರ್ಕಾರ ಎಂದು ಜೆಡಿಎಸ್ ಪಕ್ಷವು ಪ್ರಶ್ನೆ ಮಾಡಿದೆ.

₹15,000 ಕೋಟಿಯ ಮೆಟ್ರೋ ಕಾಮಗಾರಿ ವಿಳಂಬ, ಬಸ್ ಲೇನ್ ಹೆಸರಲ್ಲಿ ₹15 ಕೋಟಿ ಪೋಲು. ತೆರಿಗೆದಾರರ ಸಾವಿರಾರು ಕೋಟಿ ಹಣ ಲೂಟಿ ಮಾಡುವುದೇ ನಿಮ್ಮ 'ಬ್ರ್ಯಾಂಡ್ ಬೆಂಗಳೂರು' ಸಾಧನೆಯೇ? ದಿನನಿತ್ಯ 3.5 ಲಕ್ಷ ವಾಹನಗಳು, 6.5 ಲಕ್ಷ ಜನ ಓಡಾಡುವ ಹೊರವರ್ತುಲ ರಸ್ತೆ ಯಮಗುಂಡಿಗಳಿಂದ ವಾಹನ ಸವಾರರಿಗೆ ನರಕ ಸದೃಶ್ಯವಾಗಿದೆ. ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಮತ್ತು ಇಲಾಖೆಗಳ ಸಮನ್ವಯದ ಕೊರತೆಗೆ ಬೆಂಗಳೂರಿನ ಐಟಿ ಕಾರಿಡಾರ್ ಬಲಿಯಾಗುತ್ತಿದೆ. ಡಿಕೆ ಶಿವಕುಮಾರ್ ಹಾಗೂ ಕೃಷ್ಣಭೈರೇಗೌಡ ಅವರೇ ಕನ್ನಡಿಗರ ತೆರಿಗೆ ಹಣದ ಕೊಳ್ಳೆ ಹೊಡೆಯುವುದನ್ನು ನಿಲ್ಲಿಸಿ, ಸರಿಯಾದ ಮೂಲಸೌಕರ್ಯ ಕೊಡಿ ಎಂದೂ ಆಗ್ರಹಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+