Bengaluru Property: ಬೆಂಗಳೂರಿನ 13,600 ಆಸ್ತಿಗಳ ಆಸ್ತಿ ಮಾಲೀಕರಿಗೆ ಶಾಕ್ ಕೊಟ್ಟ ಜಿಬಿಎ: 318 ಕೋಟಿ ರೂ. ತೆರಿಗೆ ಸಂಗ್ರಹ

Bengaluru Property: ಬೆಂಗಳೂರಿನಲ್ಲಿ ತೆರಿಗೆ ವಂಚನೆ ಮಾಡುವವರ ಮೇಲೆ ಹದ್ದಿನ ಕಣ್ಣಿರಿಸುವುದನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಮುಂದುವರಿಸಿದೆ. ಬೆಂಗಳೂರಿನಲ್ಲಿ ಇ - ಖಾತಾ ಪ್ರಕ್ರಿಯೆಯ ನಂತರ ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಬೆಂಗಳೂರಿನ ಕೆಲವು ಆಸ್ತಿದಾರರಿಗೆ ಜಿಪಿಎಸ್ ಪರಿಶೀಲನೆ ಮಾಡುವ ಮೂಲಕ ಶಾಕ್ ನೀಡಲು ಮುಂದಾಗಿದೆ. ಬೆಂಗಳೂರಿನಲ್ಲಿ ಕೆಲವು ಆಸ್ತಿದಾರರು ತಪ್ಪು ಮಾಹಿತಿಗಳನ್ನು ಕೊಟ್ಟಿದ್ದರು. ಇದನ್ನು ಪರಿಶೀಲನೆ ಮಾಡುವ ಪ್ರಕ್ರಿಯೆ ಪ್ರಾರಂಭಿಸಲಾಗಿದ್ದು, ಇದೀಗ ಎರಡನೇ ಹಂತದ ಆಸ್ತಿಗಳ ಪರಿಶೀಲನೆಯನ್ನು ಪ್ರಾರಂಭಿಸಲಾಗಿದೆ. ಪ್ರಾಪರ್ಟಿ ಜಿಪಿಎಸ್ ಪರಿಶೀಲನೆ - 2ನೇ ಹಂತದಲ್ಲಿ 13,600 ಆಸ್ತಿಗಳಿಗೆ ತೆರಿಗೆ ಮರುಪರಿಶೀಲನೆ ಮಾಡಲಾಗಿತ್ತಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಂದಾಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದು, ಇದರಿಂದ ಜಿಬಿಎಗೆ ಕೋಟ್ಯಾಂತರ ರೂಪಾಯಿ ತೆರಿಗೆ ಸಂಗ್ರಹವಾಗುವ ನಿರೀಕ್ಷೆ ಇದೆ.

ನಗರ ಪಾಲಿಕೆಗಳ ಜಿಪಿಎಸ್ ತಂಡ, ಜಿಬಿಎ ಐಟಿ ಮತ್ತು National Informatics Centre (NIC) ಸಹಯೋಗದಲ್ಲಿ ಮನೆ - ಮನೆಗೆ ಭೇಟಿ ನೀಡಿ ಆಸ್ತಿ ತೆರಿಗೆ ಪರಿಶೀಲನೆ ಪ್ರಕ್ರಿಯೆಯನ್ನು ನಡೆಸಲಾಗಿದೆ. ಪ್ರಾಪರ್ಟಿ ಜಿಪಿಎಸ್ ಮತ್ತು ಡ್ರೋನ್ ಚಿತ್ರಗಳನ್ನು ಬಳಸಿ, ಬೆಂಗಳೂರಿನಲ್ಲಿ ಅಂದಾಜು 13,600 ಆಸ್ತಿಗಳ ಆಸ್ತಿ ಮಾಲೀಕರು ತೆರಿಗೆ ವಂಚನೆ ಮಾಡಿರುವುದು ಪತ್ತೆ ಮಾಡಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಂದಾಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Bengaluru Property Survey GBA Targets 13 600 Owners 318 Crore Tax Recovery Drive Intensifies

ಬೆಂಗಳೂರಿನ ಕೆಲವು ಆಸ್ತಿ ಮಾಲೀಕರು ಕಳೆದ 5 ವರ್ಷಗಳಿಂದ ಕಡಿಮೆ ತೆರಿಗೆ ಪಾವತಿಸುತ್ತಿರುವುದರಿಂದ ಅಂದಾಜು 318 ಕೋಟಿ ರೂಪಾಯಿ ತೆರಿಗೆ ತಪ್ಪಿಸಿಕೊಂಡಿರುವುದು ಕಂಡುಬಂದಿದೆ. ಇದಕ್ಕಾಗಿ ಒಟ್ಟು 67,000 ನೋಟಿಸ್‌ಗಳನ್ನು (ಪ್ರತಿ ವರ್ಷದಂತೆ ಪ್ರತ್ಯೇಕ ನೋಟಿಸ್) ಜಾರಿ ಮಾಡಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದೀಗ ಪ್ರಾಧಿಕಾರ ಹಾಗೂ ಪಾಲಿಕೆಯ ಅಧಿಕಾರಿಗಳು ಈ ರೀತಿಯ ಆಸ್ತಿ ತೆರಿಗೆ ವಂಚನೆ ಮಾಡಿರುವ ಆಸ್ತಿದಾರರಿಗೆ ಬಿಸಿ ಮುಟ್ಟಿಸುವುದಕ್ಕೆ ಮುಂದಾಗಿದ್ದಾರೆ. ಈಗಾಗಲೇ ಈ ರೀತಿ ಕಡಿಮೆ ಆಸ್ತಿ ತೆರಿಗೆ ಪಾವತಿ ಮಾಡಿರುವ ಆಸ್ತಿದಾರರಿಗೆ ಶೋಕಾಸ್ ನೋಟಿಸ್‌ಗಳನ್ನು SMS ಮತ್ತು IVRS ಮೂಲಕ ಕಳುಹಿಸಲಾಗಿದೆ. ನೋಟಿಸ್ ಪಡೆದವರು 15 ದಿನಗಳೊಳಗೆ ಆನ್‌ಲೈನ್ ಮೂಲಕ ಉತ್ತರ ನೀಡಬಹುದು ಅಥವಾ ಮೇಲ್ಮನವಿಯನ್ನೂ ಸಲ್ಲಿಸಬಹುದು ಎಂದು ಕಂದಾಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಮನವಿ ಸಲ್ಲಿಸಲು:
https://BBMPenyaya.karnataka.gov.in

ತೆರಿಗೆ ಪಾವತಿಸಲು:
https://BBMPtax.karnataka.gov.in

ನೋಟಿಸ್ ಮತ್ತು ಪಾವತಿ ಮಾಹಿತಿ

* ಸಂಬಂಧಿತ ನಾಗರಿಕರಿಗೆ ಶೋಕಾಸ್ ನೋಟಿಸ್‌ಗಳನ್ನು ಜಾರಿಗೊಳಿಸಲಾಗಿದ್ದು, SMS ಹಾಗೂ IVRS ಮುಖಾಂತರವೂ ಮಾಹಿತಿ ಕಳುಹಿಸಲಾಗಿದೆ.

* ನೋಟಿಸ್ ಪಡೆದ ಆಸ್ತಿದಾರರು 15 ದಿನಗಳೊಳಗಾಗಿ ಆನ್‌ಲೈನ್ ಮೂಲಕ ಮೇಲ್ಮನವಿ ಸಲ್ಲಿಸಬಹುದು: https://BBMPenyaya.karnataka.gov.in

* ಅಥವಾ ತಕ್ಷಣವೇ ತೆರಿಗೆ ಪಾವತಿಸಬಹುದು: https://BBMPtax.karnataka.gov.in

ನೋಟಿಸ್‌ನ ಮಾದರಿ ಪ್ರತಿಯನ್ನು ಕೂಡ ಇದರೊಂದಿಗೆ ಲಗತ್ತಿಸಲಾಗಿದೆ. ಇದರಲ್ಲಿ ಪಾರದರ್ಶಕವಾಗಿ ತೆರಿಗೆ ತಪ್ಪು ಪಾವತಿ ಹೇಗೆ ಪತ್ತೆಯಾಯಿತು ಎಂಬುದು ಸ್ಪಷ್ಟವಾಗಿ ವಿವರಿಸಲಾಗಿದೆ. ನಾಗರಿಕರು ಅದೇ ಪೋರ್ಟಲ್‌ನಲ್ಲಿ ಆನ್‌ಲೈನ್ ಮೂಲಕ ಅಪೀಲ್ ಸಲ್ಲಿಸುವ ಅವಕಾಶವೂ ಇದೆ.

ವ್ಯವಸ್ಥೆಯ ಕಾರ್ಯವಿಧಾನ (System Process):

1. ಜಿಪಿಎಸ್ ತಂಡದ ಮನೆ-ಮನೆ ಭೇಟಿ ವೇಳೆ ಮೊಬೈಲ್ ಆಪ್‌ನಲ್ಲಿ ಆಸ್ತಿ ತೆರಿಗೆ ಮಾಹಿತಿಯನ್ನು ಬಳಸಲಾಗುತ್ತದೆ.

2. ಪ್ರತಿಯೊಂದು ಆಸ್ತಿಯ ಜಿಪಿಎಸ್ ಮೂಲಕ ಸೆರೆ ಹಿಡಿಯುತ್ತಾರೆ (GPS Location), ಬಳಕೆ (ವಸತಿ/ವಾಣಿಜ್ಯ/ಮಿಶ್ರ ಇತ್ಯಾದಿ...) ಬಳಕೆಯ ವಿಸ್ತೀರ್ಣ ಮುಂತಾದ ಮಾಹಿತಿಗಳನ್ನು ದಾಖಲಿಸಲಾಗುತ್ತದೆ.

3. ಆಸ್ತಿಯ ಮಹಡಿಗಳ ಸಂಖ್ಯೆ ಸೇರಿದಂತೆ ಎಲ್ಲಾ ಮಾಹಿತಿ ಮೊಬೈಲ್ ಆ್ಯಪ್ ಮೂಲಕ ಬ್ಯಾಕ್ ಎಂಡ್‌ ಗೆ ಕಳುಹಿಸಲಾಗುತ್ತದೆ.

4. ಗುಣಮಟ್ಟ ಪರಿಶೀಲನಾ (QC) ತಂಡವು 100% ಪರಿಶೀಲನೆ ನಡೆಸುತ್ತದೆ. ತಿರಸ್ಕರಿಸಲಾದ ಪ್ರಕರಣಗಳನ್ನು ಮರುಪರಿಶೀಲನೆಗಾಗಿ ಜಿಪಿಎಸ್ ತಂಡಕ್ಕೆ ಹಿಂದಿರುಗಿಸಲಾಗುತ್ತದೆ.

5. QC ಅನುಮೋದಿತ ಮಾಹಿತಿಯನ್ನು ಡ್ರೋನ್ ಚಿತ್ರಗಳು ಹಾಗೂ ಡಿಜಿಟಲ್ ನಿರ್ಮಿತ ವಿಸ್ತೀರ್ಣದ ಮಾಹಿತಿಯೊಂದಿಗೆ ಹೋಲಿಕೆ ಮಾಡಲಾಗುತ್ತದೆ. ಘೋಷಿತ ವಿಸ್ತೀರ್ಣಕ್ಕಿಂತ ಹೆಚ್ಚಿನ ನಿರ್ಮಾಣ ಅಥವಾ ಘೋಷಿಸದ ವಾಣಿಜ್ಯ ಬಳಕೆ (ಭಾಗಶಃ ಅಥವಾ ಸಂಪೂರ್ಣ) ಕಂಡುಬಂದಲ್ಲಿ ವ್ಯವಸ್ಥೆಯೇ ಸ್ವಯಂಚಾಲಿತವಾಗಿ ಬಡ್ಡಿ ಮತ್ತು ದಂಡದೊಂದಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸುತ್ತದೆ.

ಜಿಪಿಎಸ್ ತಂಡವು ಪ್ರತಿದಿನ ಸುಮಾರು 10,000 ಆಸ್ತಿಗಳನ್ನು ಭೇಟಿ ಮಾಡುತ್ತಿದೆ. ತೆರಿಗೆ ತಪ್ಪು ಪಾವತಿಸಿದ ಪ್ರತಿಯೊಬ್ಬರೂ ಶೀಘ್ರದಲ್ಲೇ ಹೊಣೆಗಾರರಾಗುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವಿಶೇಷ ಆಯುಕ್ತರು(ಕಂದಾಯ) ಮುನೀಶ್ ಮೌದ್ಗಿಲ್ ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+