House Rent: ಬಾಡಿಗೆ ಮನೆ ಪಡೆಯುವವರಿಗೆ ಎದುರಾಗಿದೆ ದೊಡ್ಡ ಸಮಸ್ಯೆ

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಬಾಡಿಗೆಗೆ ಮನೆ ಪಡೆಯುವವರಿಗೆ ಹೊಸ ಸಮಸ್ಯೆ ಎದುರಾಗಿದೆ. ಈಗಾಗಲೇ ಬಾಡಿಗೆ ದರವು ಗಗನಕ್ಕೇರಿದೆ. ಹೀಗಾಗಿ ನಗರದಲ್ಲಿ ಬಾಡಿಗೆ ಮನೆಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್‌ ಹೆಚ್ಚಾಗಿದೆ. ಸದ್ಯ ಬೆಂಗಳೂರಿನಲ್ಲಿ ಬಾಡಿಗೆ ಮನೆಗಳ ಬಿಸಿನೆಸ್‌ ಜೋರಾಗಿದ್ದು, ಬಾಡಿಗೆದಾರರ ಜೇಬು ಸುಡುತ್ತಿದೆ. ಸಾಮಾನ್ಯವಾಗಿ ಬಾಡಿಗೆ ಮನೆ ಪಡೆಯುವಾಗ ಮಾಲೀಕರ ಷರತ್ತುಗಳನ್ನು ಹಾಕುತ್ತಾರೆ. ಈ ಪೈಕಿ ಠೇವಣಿ ಕೂಡ ಒಂದು. ಇದೀಗ ಲಕ್ಷಗಟ್ಟಲೆ ಹಣವನ್ನು ಮಾಲೀಕರು ಮುಂಗಡವಾಗಿ ಕೇಳಿರುತ್ತಿರುವುದು ಗೊತ್ತೇ ಇದೆ. ಆದರೆ 2 ಬಿಹೆಚ್‌ಕೆ ಮನೆಗೆ ಮಾಲೀಕ ಇಟ್ಟಿರುವ ಡಿಮ್ಯಾಂಡ್‌ ನೋಡಿ ಬಾಡಿಗೆದಾರರು ಬೆಚ್ಚಿಬಿದ್ದಿದ್ದಾರೆ.

ಹೌದು ಬೆಂಗಳೂರಿನ ದುಬಾರಿ ಪ್ರದೇಶಗಳಲ್ಲಿ ಒಂದಾಗಿರುವ ಫ್ರೇಜರ್ ಟೌನ್ ಪ್ರದೇಶದಲ್ಲಿ 2 BHK ಫ್ಲ್ಯಾಟ್‌ವೊಂದಕ್ಕೆ ನೀಡಿರುವ ಜಾಹೀರಾತಿನಲ್ಲಿ ಭದ್ರತಾ ಠೇವಣಿ ನೋಡಿ ಜನ ಶಾಕ್‌ ಆಗಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆಗಳು ಕೂಡ ನಡೆಯುತ್ತಿವೆ. 2 ಬಿಹೆಚ್‌ಕೆ ಮನೆಗೆ ಬರೋಬ್ಬರಿ 30 ಲಕ್ಷ ರೂಪಾಯಿ ಅಡ್ವಾನ್ಸ್‌ ಕೊಡುವಂತೆ ಜಾಹೀರಾತು ನೀಡಲಾಗಿದೆ. ಇದನ್ನು ರೆಡ್ಡಿಟ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಬೆಂಗಳೂರಿನ ಸದ್ಯದ ಬಾಡಿಗೆ ಮಾರುಕಟ್ಟೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

Bengaluru Property House Rent Shock 2BHK Flat Demands 30 Lakh Deposit In Fraser Town

"ಬೆಂಗಳೂರಿನ ಮನೆ ಮಾಲೀಕರು ಕೈ ತಪ್ಪುತ್ತಿದ್ದಾರೆ" ಎಂದು ರೆಡ್ಡಿಟ್‌ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಹೊಸ ಕಟ್ಟಡದಲ್ಲಿರುವ ಮನೆ ಬಾಡಿಗೆ 20,000 ರೂಪಾಯಿ ಮತ್ತು 30 ಲಕ್ಷ ರೂಪಾಯಿ ಠೇವಣಿ ಎಂದು ಉಲ್ಲೇಖಿಸಿರುವ ಜಾಹೀರಾತಿನ ಸ್ಕ್ರೀನ್‌ಶಾಟ್ ಚರ್ಚೆಯನ್ನು ಹುಟ್ಟುಹಾಕಿದೆ. ಈ ಪೋಸ್ಟ್‌ನಲ್ಲಿ ಡಿಸೈನರ್ ಇಂಟೀರಿಯರ್‌ಗಳು, ಪ್ರೀಮಿಯಂ ಹಾಸಿಗೆ, ಮಾಡ್ಯುಲರ್ ಕಿಚನ್ ಉಪಕರಣ, ಇನ್-ಹೌಸ್ ಸೆಕ್ಯುರಿಟಿ ಮತ್ತು ಕಾರ್ ಪಾರ್ಕ್ ಹೊಂದಿರುವ 2 ಬಿಹೆಚ್‌ಕೆ ಮನೆ ಎಂದು ಉಲ್ಲೇಖಿಸಲಾಗಿದೆ.

ಈ ಠೇವಣಿ ಮೊತ್ತ ನೋಡಿ ಬೆಂಗಳೂರಿನ ನಿವಾಸಿಗಳು ಶಾಕ್‌ ಆಗಿದ್ದಾರೆ. 30 ಲಕ್ಷ ರೂ. ಠೇವಣಿ ಕಟ್ಟುವ ಬದಲು ನೀವು ಬಿಲ್ಡರ್‌ನ ಫ್ಲಾಟ್ ಖರೀದಿಸಿ ಬಾಡಿಗೆಗೆ ಬದಲಾಗಿ ಇಎಂಐ ಪಾವತಿಸಬಹುದು. 30 ಲಕ್ಷ ರೂಪಾಯಿ ಠೇವಣಿಯೊಂದಿಗೆ ಯಾರು ಹೋಗುತ್ತಾರೆ ಎಂದು ನಮಗೆ ತಿಳಿದಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದು ಈಗ ಬೆಂಗಳೂರಿನಲ್ಲಿ ಇದೇ ದೊಡ್ಡ ದಂಧೆ, ಬೆಂಗಳೂರಿನ ಮನೆ ಮಾಲೀಕರು ವಂಚಕರಾಗುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

Bengaluru Property House Rent Shock 2BHK Flat Demands 30 Lakh Deposit In Fraser Town

ಪಿಜಿಗೆ ಹೋಗುವುದು ಬೆಸ್ಟ್‌

ಕೆಲವರು ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿ, ನೀವು ಒಂಟಿಯಾಗಿದ್ದರೆ ಹಾಗೂ ಉದ್ಯೋಗದಲ್ಲಿದ್ದರೆ ಇಂತಹ ವಂಚನೆಗೆ ಒಳಗಾಗುವ ಬದಲು ಒಳ್ಳೆಯ ಸೌಕರ್ಯ ಇರುವ ಪಿಜಿಗಳಿಗೆ ಹೋಗಿ. ನಿಮ್ಮ ಹಣ ಉಳಿಯುತ್ತದೆ ಎಂದು ಸಲಹೆ ಕೊಟ್ಟಿದ್ದಾರೆ. ಬೆಂಗಳೂರಿನ ಹಲವು ಏರಿಯಾಗಳಲ್ಲಿ ಇದೇ ರೀತಿಯ ದಂಧೆ ನಡೆಯುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+