Bengaluru property: ಬೆಂಗಳೂರು ರಿಯಲ್ ಎಸ್ಟೇಟ್ ಬೂಸ್ಟ್: 1 ಕೋಟಿ ರೂ. ಮೊತ್ತದಲ್ಲಿ ಮನೆ ಖರೀದಿ ಈಗ ಕನಸು
Bengaluru Property Boom: ಬೆಂಗಳೂರಿನಲ್ಲಿ ಭೂಮಿಯ ಬೆಲೆಯು ದಿನದಿಂದಕ್ಕೆ ಹೆಚ್ಚಳವಾಗುತ್ತಲ್ಲೇ ಇದೆ. ಬೆಂಗಳೂರಿನಲ್ಲಿ ಜಾಗ ಮತ್ತು ಮನೆ ಖರೀದಿ ಮಾಡಬೇಕು, ಸ್ವಂತ ಸೂರು ಕಟ್ಟಿಕೊಳ್ಳಬೇಕು ಎನ್ನುವುದು ಹಲವರ ಕನಸಾಗಿದೆ. ಆದರೆ, ಬೆಂಗಳೂರಿನಲ್ಲಿ ಭೂಮಿ ಬೆಲೆಯು ಗಗನಮುಖಿಯಾಗುತ್ತಿದೆ. ಮನೆ ಖರೀದಿ ಮಾಡಬೇಕು ಎನ್ನುವ ಕನಸು - ಕನಸಾಗಿಯೇ ಉಳಿಯುತ್ತಿದೆ. ಇನ್ನು ನಿಮ್ಮ ಬಳಿ 1 ಕೋಟಿ ರೂಪಾಯಿ ಇದ್ದರೂ ಬೆಂಗಳೂರಿನಲ್ಲಿ ಮನೆ ಕಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಂಗಳೂರಿನಲ್ಲಿ 1 ಕೋಟಿ ರೂಪಾಯಿ ಮೌಲ್ಯದ ಕನಸಿನ ಮನೆ ಎನ್ನುವುದು ಈಗ ಕನಸಾಗಿ ಉಳಿಯುತ್ತಿದೆ. ಬೆಂಗಳೂರಿನಲ್ಲಿ ಮೊದಲೆಲ್ಲ 1 ಕೋಟಿ ರೂಪಾಯಿಗೆ ಪ್ರಾಪರ್ಟಿ ಮಾಡಿಕೊಳ್ಳುವುದಕ್ಕೆ ಅವಕಾಶ ಸಿಗುತ್ತಿತ್ತು. ಆದರೆ ಇದೀಗ ಇದು ಕನಸಾಗಿ ಉಳಿಯುತ್ತಿದೆ. 1 ಕೋಟಿ ರೂಪಾಯಿ ಮೌಲ್ಯದ ಮನೆಯನ್ನು ಇನ್ಮುಂದೆ ಪ್ರೀಮಿಯಂ ವ್ಯಾಪ್ತಿಯ ಮನೆಗಳಲ್ಲಿ ಪರಿಗಣಿಸಲು ಸಾಧ್ಯವಿಲ್ಲ.

ಬದಲಾಗಿ ನಗರದ ಆಸ್ತಿ ಮಾರುಕಟ್ಟೆಯಲ್ಲಿ ಹೊಸ ಬದಲಾವಣೆ ಎಂದೇ ವಿಶ್ಲೇಷಿಸಲಾಗುತ್ತದೆ. ಖರೀದಿದಾರರು ಇನ್ಮುಂದೆ ದುಬಾರಿ ಅಥವಾ ಐಷಾರಾಮಿ ಮನೆಗಳನ್ನು ಖರೀದಿಸುವುದಕ್ಕೆ ಹಿಂದೇಟು ಹಾಕುವ ಸಾಧ್ಯತೆ ಇದೆ. ಸಾಮಾನ್ಯ ಅಥವಾ ಸಾಧಾರಣವಾಗಿರುವ ಪ್ರಾಪರ್ಟಿಗಳ ಬೆಲೆಯೇ ಭಾರೀ ಹೆಚ್ಚಳವಾಗುತ್ತಿರುವುದರಿಂದ ದುಬಾರಿ ಮನೆಗಳ ಖರೀದಿ ಹಾಗೂ ಮಾರಾಟದ ಮೇಲೆ ಅಲ್ಪ ಪ್ರಮಾಣದ ಪೆಟ್ಟು ಬೀಳುವ ಸಾಧ್ಯತೆ ಇದೆ.
Bengaluru property: ಸಮಯವು ಹೊಸ ಕರೆನ್ಸಿಯಾಗಿದೆ
ಇನ್ನು ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚಾಗುತ್ತಿದ್ದು, ಸಮೀಪದ ಮೆಟ್ರೋ ನಿಲ್ದಾಣಗಳ ಪ್ರದೇಶಗಳಲ್ಲಿ ಪ್ರಾಪರ್ಟಿಗೆ ಬೇಡಿಕೆ ಮೊದಲಿಗಿಂತಲೂ ಹೆಚ್ಚಾಗಿದೆ. ಒತ್ತಡ ಮುಕ್ತ ಪ್ರಯಾಣಕ್ಕಾಗಿ ಹಾಗೂ ಸಾಮಾನ್ಯವಾಗಿ ಕೆಲಸಕ್ಕೆ 15 ನಿಮಿಷಗಳಲ್ಲಿ ತಲುಪಬಹುದಾದ ಪ್ರದೇಶಗಳಲ್ಲಿ ಜನ ಪ್ರಾಪರ್ಟಿ ಹುಡುಕುವುದು (ಸ್ಥಿತಿವಂತರು) ಹೆಚ್ಚಾಗಿದೆ. ಹೀಗಾಗಿ, ಐಟಿ - ಬಿಟಿ ಕಂಪನಿಗಳು ಹಾಗೂ ಪ್ರತಿಷ್ಠಿತ ಕಂಪನಿಗಳು ಹೆಚ್ಚಾಗಿ ಇರುವ ಪ್ರದೇಶಗಳಲ್ಲಿ ಭೂಮಿ ಹಾಗೂ ಪ್ರಾಪರ್ಟಿ ಬೆಲೆಯು ಭರ್ಜರಿ ಹೆಚ್ಚಳವಾಗಿದೆ. ಸಮಯವನ್ನು ಇದೀಗ ಹೊಸ ಕರೆನ್ಸಿ ಎಂದು ಪರಿಗಣಿಸಲಾಗುತ್ತಿದೆ.
ಕೆಲವರು ಬೆಂಗಳೂರಿನಲ್ಲಿ ಮನೆ ಅಥವಾ ಪ್ರಾಪರ್ಟಿಗಳ ಬೆಲೆ ಕಡಿಮೆ ಆಗುವುದಕ್ಕೆ ಕಾಯುತ್ತಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಮನೆಗಳ ಬೆಲೆ ಇಳಿಕೆಯಾಗುವುದು ವಿರಳ ಎಂದೇ ಹೇಳಲಾಗುತ್ತಿದೆ.
ಕೆಲವು ವರ್ಷಗಳ ಹಿಂದೆ 1 ಕೋಟಿ ರೂಪಾಯಿ ಮೊತ್ತದಲ್ಲಿ ಐಷಾರಾಮಿ ವಸತಿ / ಮನೆಗಳು ಬೆಂಗಳೂರಿನಲ್ಲಿ ಸಿಗುತ್ತಿದ್ದವು. ಈಗ ವೈಟ್‌ಫೀಲ್ಡ್ ಅಥವಾ ಸರ್ಜಾಪುರ ರಸ್ತೆಯಂತಹ ಐಟಿ ಕಾರಿಡಾರ್ ಪ್ರದೇಶಗಳಲ್ಲಿ ಈಗ 2BHKಗೆ ಮಾತ್ರ ಸೀಮಿತವಾಗಿದೆ. ಪ್ರಮುಖ ಐಟಿ ಕಾರಿಡಾರ್‌ಗಳಲ್ಲಿ ಪ್ರತಿ ಚದರ ಅಡಿಗೆ 10,000 ರಿಂದ 15,000 ರೂ. ಇದೆ. 3BHK ಅಥವಾ ತುಸು ವಿಸ್ತಾರವಾದ ಪ್ರಾಪರ್ಟಿಗಳ ಬೆಲೆಯು ಒಂದೂವರೆ ಕೋಟಿ ರೂಪಾಯಿಗೂ ಹೆಚ್ಚಾಗಿದೆ.
ಮಧ್ಯಮ ವರ್ಗದವರಿಗೆ ಮನೆ ಖರೀದಿ ಕಷ್ಟ
ಬೆಂಗಳೂರಿನಲ್ಲಿ ಪ್ರಾಪರ್ಟಿ ಹಾಗೂ ಮನೆ ಖರೀದಿ ಮಾಡುವುದು ಮಧ್ಯಮ ವರ್ಗದವರಿಗೆ ಕನಸಾಗಿಯೇ ಉಳಿಯುತ್ತಿದೆ. ಪ್ರಾಪರ್ಟಿ ಬೆಲೆಯು ಒಂದು ಕೋಟಿ ರೂಪಾಯಿಗೂ ಹೆಚ್ಚಾಗುತ್ತಿರುವುದು ಮನೆ ಖರೀದಿ ಮಾಡಬೇಕು ಎನ್ನುವ ಕನಸನ್ನೇ ಬೆಂಗಳೂರಿಗರು ಬಿಡುತ್ತಿದ್ದಾರೆ. ಪ್ರಾಪರ್ಟಿ ಖರೀದಿ ಮಾಡಿ ನಂತರ ಮನೆ ನಿರ್ಮಾಣ ಮಾಡವುದು ಸಹ ದೂರದ ಮಾತಾಗಿದೆ.













Click it and Unblock the Notifications