Bengaluru Power Cut: ಬೇಸಿಗೆ ಆರಂಭದಲ್ಲೇ ಲೋಡ್ ಶೆಡ್ಡಿಂಗ್ ಶಾಕ್! ನಗರದಲ್ಲಿ ವಿದ್ಯುತ್ ವ್ಯತ್ಯಯ

ಬೆಂಗಳೂರು, ಫೆಬ್ರವರಿ 19: ಬೇಸಿಗೆ ಈಗಷ್ಟೇ ಆರಂಭವಾಗಿದ್ದು, ಇನ್ನೂ ಒಂದು ತಿಂಗಳಾಗಿಲ್ಲ, ಆಗಲೇ ಐಟಿ ಕೇಂದ್ರವಾಗಿರುವ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಲೋಡ್ ಶೆಡ್ಡಿಂಗ್ ಶುರುವಾಗಿದೆ. ನಿಯಮಿತವಾಗಿ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ಮತ್ತೊಂದೆಡೆ ಸರ್ಕಾರದ ಮುಂದೆ ವಿದ್ಯುತ್ ದರ ಏರಿಕೆ ಪಸ್ತಾವವು ಇದೆ. ಈ ಫೆಬ್ರವರಿ ತಿಂಗಳಲ್ಲಿ ಅನೇಕ ಬಾರಿ ವಿವಿಧೆಡೆ ವಿದ್ಯುತ್ ಕಟ್ ಮಾಡಲಾಗಿದೆ.

ಬೆಂಗಳೂರಿನಲ್ಲಿ ವಿದ್ಯುತ್ ವ್ಯತ್ಯಯ ಸಮಸ್ಯೆ ಇಂದು ಬುಧವಾರ (ಫೆಬ್ರವರಿ 19) ಸಹ ಮುಂದುವರಿದಿದೆ. ನಗರದಲ್ಲಿ ದೀರ್ಘಾವಧಿಯ ವಿದ್ಯುತ್ ಕಡಿತ ಉಂಟಾಗಲಿದೆ. ಹಲವು ಬಡಾವಣೆಗಳಲ್ಲಿ ಇಂದು ಬೆಳಗ್ಗೆಯಿಂದ ಸಂಜೆ ವರೆಗೆ ವಿದ್ಯುತ್ ಕಡಿತಗೊಳ್ಳ ಎಂದು 'ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ' (BESCOM), ಮಾಹಿತಿ ನೀಡಿದೆ.

Bengaluru Power Disruption in These Areas Today Feb 19th from 10am to 5pm

ಬೆಸ್ಕಾಂ ವ್ಯಾಪ್ತಿಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಲಿಮಿಟೆಡ್‌ನ (KPTCL) ತುರ್ತು ದುರಸ್ತಿ ಕಾಮಗಾರಿ ಕೈಗೊಳ್ಳುತ್ತಿದೆ. ಈ ಕಾರಣದಿಂದ ನಗರದಲ್ಲಿ ಗರಿಷ್ಠ 7 ಗಂಟೆಗಳ ಕಾಲ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಇದು ಆಯಾ ಪ್ರದೇಶಗಳಲ್ಲಿ ಬೇರೆ ಬೇರೆ ಸಮಯದಲ್ಲಿ ಕಡಿತಗೊಳ್ಳಲಿದೆ. ಬೆಳಗ್ಗೆ 10 ರಿಂದ ಸಂಜೆ 05 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ನಾಗರಿಕರು ಬೆಸ್ಕಾಂ ಜೊತೆ ಸಹಕರಿಸಬೇಕು. ವಿದ್ಯುತ್ ಸರಬರಾಜು ನೋಡಿಕೊಂಡು ದೈನಂದಿನ ಕಾರ್ಯ ಚಟುವಟಿಕೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಬೆಸ್ಕಾಂ ತಿಳಿಸಿದೆ.

ವಿದ್ಯುತ್ ವ್ಯತ್ಯಯದ ಸ್ಥಳಗಳು

* ಭೀಮನಕುಪ್ಪೆ ಗ್ರಾಮ, ಅಂಚೆಪಾಳ್ಯ, ಬಾಬುಸಾಪಾಳ್ಯ, ವಿನಾಯಕ ನಗರ, ಗೇರುಪಾಳ್ಯ ಮೀನು ಕಾರ್ಖಾನೆ ಮೊದಲ ಹಂತ, ಹೊಸಪಾಳ್ಯ, ಗುಡಿಮಾವು, ತಿಪ್ಪೂರು, ಕುಂಬಳಗೋಡು ಕೈಗಾರಿಕಾ ಪ್ರದೇಶ, ಕಂಬಿಪುರ, ಗೊಲ್ಲಹಳ್ಳಿ,

ತಗಚಗುಪ್ಪೆ, ಕರುಬೆಲೆ, ದೇವಗೆರೆ, ಗಂಗಸಂದ್ರ, ಆನೆಪಾಳ್ಯ, ದೊಡ್ಡಿಪಾಳ್ಯ, ಗೋಣಿಪುರ, ಚಿನ್ನಚುರ್ಕು, ದೊಡ್ಡಬೆಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

Bengaluru Power Disruption in These Areas Today Feb 19th from 10am to 5pm

ಬೆಳಗ್ಗೆ 10:30 ರಿಂದ 1:30 ತನಕ ವ್ಯತ್ಯಯ, ಸ್ಥಳಗಳು

ಕನಕನಗರ, ಅಂಬೇಡ್ಕರ್ ಲೇಔಟ್, ದೊಡ್ಡಣ್ಣ ನಗರ, ಮುನಿವೀರಪ್ಪ ಬಡಾವಣೆ, ಅಂಬೇಡ್ಕರ್ ವೈದ್ಯಕೀಯ ಕಾಲೇಜು, ಗಾಂಧಿನಗರ, ಚಿನ್ನಣ್ಣ ಬಡಾವಣೆ, ಅನ್ವರ್ ಲೇಔಟ್, ರಂಕಾನಗರ, KHB ಮುಖ್ಯ ರಸ್ತೆ, ಕಾವೇರಿ ನಗರ, ಸುಲ್ತಾನ್ ಪಾಳ್ಯ ಕಾವಲ್ಬೈರಸಂದ್ರ, ಎಲ್ ಆರ್ ಬಂಡೆ ಮುಖ್ಯ ರಸ್ತೆ, ವಿ.ನಾಗೇನಹಳ್ಳಿ, ಪೆರಿಯಾರ್ ನಗರ, ಕೆ.ಜೆ. ಕಾಲೋನಿ, ಆದರ್ಶ ನಗರ, ಮೋದಿ ಗಾರ್ಡನ್, ಭುವನೇಶ್ವರಿ ನಗರ.

ಡಿಜಿ ಹಳ್ಳಿ, ಕೆ.ಜೆ.ಹಳ್ಳಿ, ಪೆರಿಯಾರ್ ವೃತ್ತ, ಶಂಪುರ, ಕುಶಾಲ ನಗರ, ಮೋದಿ ರಸ್ತೆ, ಸಕ್ಕರೆ ಮಂಡಿ, ಉಪ್ಪು ಮಂಡಿ, ಮುನೇಶ್ವರ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+