Bengaluru power cut: ಅಕ್ಟೋಬರ್ 31ರವರೆಗೂ ಬೆಂಗ್ಳೂರಿನ ಹಲವೆಡೆ ಕರೆಂಟ್ ಕಟ್, ವಿವರ ಹೀಗಿದೆ
ಬೆಂಗಳೂರು, ಅಕ್ಟೋಬರ್, 27: ಅಕ್ಟೋಬರ್ 28, 29ರಂದು ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಿವ ಸಾಧ್ಯತೆಯಿದೆ. ಇನ್ನು ಕೆಲವು ಪ್ರದೇಶಗಳಲ್ಲಿ ತಿಂಗಳ ಅಂತ್ಯದವರೆಗೆ ಅಂದರೆ ಅಕ್ಟೋಬರ್ 31ರವರೆಗೆ ಬೆಳಗ್ಗೆ 10 ರಿಂದ ಸಂಜೆ 4ರವರೆಗೆ ಹೆಚ್ಚಿನ ವಿದ್ಯುತ್ ಕಡಿತವಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಹಾಗಾದರೆ ಯಾವ್ಯಾವ ಏರಿಯಾಗಳಲ್ಲಿ ಯಾವಾಗ ವಿದ್ಯುತ್ ಕಡಿತವಾಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ಗಮನಿಸಿ.
ಈ ಭಾರೀ ಮಳೆ ಕೈಕೊಟ್ಟ ಹಿನ್ನೆಲೆ ರಾಜ್ಯದಲ್ಲಿ ವಿದ್ಯುತ್ ಸರಬರಾಜು ಬಿಕ್ಕಟ್ಟು ಉಂಟಾಗಿದೆ. ಇದು ವಿದ್ಯುತ್ ಉತ್ಪಾದನೆಯಲ್ಲಿ ಭಾರಿ ಕುಸಿತ ಮತ್ತು ಅನೇಕ ಪ್ರದೇಶಗಳಲ್ಲಿ ದೀರ್ಘಕಾಲದ ವಿದ್ಯುತ್ ಕಡಿತಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ವಿದ್ಯುತ್ ಸರಬರಾಜು ಕಂಪನಿಗಳಾದ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ಹಲವು ಭಾಗಗಳಲ್ಲಿ ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿವೆ.

ಅಕ್ಟೋಬರ್ 27ರಂದು ಚಂದ್ರಾಲೇಔಟ್ 80 ಅಡಿ ರಸ್ತೆ, ಚಂದ್ರಾಲೇಔಟ್ 1 ಮತ್ತು 2ನೇ ಹಂತ, ಪಾಲಿಕೆ ಸೌಧ, ಜ್ಯೋತಿನಗರ, ಬಸವೇಶ್ವರ ಲೇಔಟ್‌ನಲ್ಲಿ ವಿದ್ಯುತ್ ವ್ಯತ್ಯಯ ಆಗುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು. ಅಕ್ಟೋಬರ್ 29ರಂದು ಗುಬ್ಬಣ್ಣ ಎಸ್ಟೇಟ್, 6ನೇ ಬ್ಲಾಕ್, ಕೈಗಾರಿಕಾ ಪ್ರದೇಶ, ರಾಜಾಜಿನಗರ, ಸುಬ್ರಮಣ್ಯನಗರ, ಲೋಕಿಕೆರೆ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗುವ ಸಾಧ್ಯತೆಯಿದೆ.
ಅಕ್ಟೋಬರ್ 27 ರಿಂದ ಅಕ್ಟೋಬರ್ 30ರವರೆಗೆ ಕುಂಟೇಗೌಡನಹಳ್ಳಿ, ಯಲದಬಾಗಿ, ನವನೆಬೋರನಹಳ್ಳಿ, ಅಜ್ಜಯ್ಯನಪಾಳ್ಯ, ಹಾವಿನಹಾಳು, ಕಾಟವೀರನಹಳ್ಳಿ, ಎಲ್.ಎಚ್.ಪಾಳ್ಯ, ಬೋರಸಂದ್ರ, ದಾಸರಹಳ್ಳಿ, ವೆಂಕಟಾಪುರ, ತಿಪ್ಪನಹಳ್ಳಿ, ಬ್ಯಾಡರಹಳ್ಳಿ, ಸಾಲುಪರಹಳ್ಳಿ, ಸೀಬಿ ಅಗ್ರಹಾರ, ತಿಪ್ಪನಹಳ್ಳಿ, ಬೋರಸಂದ್ರ, ದೊಡ್ಡಸೀಬಿ, ದುರ್ಗದಹಳ್ಳಿ, ಕಲ್ಲಶೆಟ್ಟಿಹಳ್ಳಿಯಲ್ಲಿ ವಿದ್ಯುತ್ ಕಡಿತವಾಗುವ ಸಾಧ್ಯತೆಯಿದೆ.
ಅಕ್ಟೋಬರ್ 30 ರಿಂದ ಅಕ್ಟೋಬರ್ 31ರವರೆಗೆ ಬಿಸಿಸಿ ಲೇಔಟ್, ಬಿಸಿಸಿ ಲೇಔಟ್ ಬಸ್ ನಿಲ್ದಾಣ ಹಿಂಭಾಗ, ಗುಡ್ ವಿಲ್ ಅಪಾರ್ಟ್ಮೆಂಟ್, ಬಿನ್ನಿ ಲೇಔಟ್, ಮೈಕೋಲೇಔಟ್, ವಿನಾಯಕ ಆಸ್ಪತ್ರೆ ಹಿಂಭಾಗ, ಚಂದ್ರಾಲೇಔಟ್, ಅತ್ತಿಗುಪ್ಪೆಯಲಲ್ಲಿ ವಿದ್ಯುತ್ ವ್ಯತ್ಯಯವಾಗುವ ಸಾಧ್ಯತೆಯಿದೆ.
ಇನ್ನು ಇಂಧನ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ರಾಜ್ಯದಲ್ಲಿ ವಿದ್ಯುತ್ ಕೊರತೆ ಉಂಟಾಗಲು ವಿದ್ಯುತ್ ಉತ್ಪಾದನೆ ಕಡಿಮೆಯಾಗಿದೆ. ವಿದ್ಯುತ್ ಬಿಕ್ಕಟ್ಟು ತಾತ್ಕಾಲಿಕವಾಗಿದೆ ಮತ್ತು ಸರ್ಕಾರ ಶೀಘ್ರದಲ್ಲೇ ಸಮಸ್ಯೆಗಳನ್ನು ಪರಿಹರಿಸುತ್ತದೆ. ಈ ಬಾರಿ ಮಳೆಯ ಕೊರತೆಯಿಂದಾಗಿ ಹೆಚ್ಚಿನ ವಿದ್ಯುತ್ ಬೇಡಿಕೆ ಇದೆ. ಇದು ಕೃಷಿ ನೀರಾವರಿ ಪಂಪ್ಸೆಟ್ ಲೋಡ್‌ಗಳಲ್ಲಿ ಏರಿಕೆಗೆ ಕಾರಣವಾಗಿದೆ. ಕರ್ನಾಟಕ ಸರ್ಕಾರವು ಇತರ ರಾಜ್ಯಗಳಿಂದ ವಿದ್ಯುತ್ ಖರೀದಿಸಲು ಯೋಜಿಸುತ್ತಿದೆ. ಉತ್ತರ ಪ್ರದೇಶ ಮತ್ತು ಪಂಜಾಬ್‌ನೊಂದಿಗೆ ವಿನಿಮಯ ವ್ಯವಸ್ಥೆಗಳನ್ನು ಮಾಡಲು ಕೆಲಸ ಮಾಡುತ್ತಿದೆ ಎಂದು ಹೇಳಿದರು.












Click it and Unblock the Notifications