ವಿದ್ಯುತ್ ಸಮಸ್ಯೆಗೆ ಬೆಸ್ಕಾಂನಿಂದ ವಾಟ್ಸಾಪ್ ಹೆಲ್ಪ್‌ಡೆಸ್ಕ್ ನಂಬರ್: ಬೆಂಗಳೂರು ಸೇರಿ ವಿವಿಧ ಪ್ರದೇಶಗಳ ನಂಬರ್ ತಿಳಿಯಿರಿ
ಬೆಂಗಳೂರು, ಜೂನ್ 14: ನಿರಂತರ ವಿದ್ಯುತ್ ಕಡಿತ, ಕಡಿಮೆ ವೋಲ್ಟೇಜ್, ವಿದ್ಯುತ್ ಏರಿಳಿತ ಮತ್ತು ವಿದ್ಯುತ್ ಪೂರೈಕೆಗೆ ಸಂಬಂಧಿಸಿದ ಇತರ ಸಮಸ್ಯೆಗಳ ಬಗ್ಗೆ ಹಲವಾರು ನಿವಾಸಿಗಳು ದೂರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಬೆಂಗಳೂರು ಮತ್ತು ಇತರ ಕೆಲವು ಪ್ರದೇಶಗಳಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ವಾಟ್ಸಾಪ್‌ನಲ್ಲಿ ಸಹಾಯವಾಣಿಗಳನ್ನು ನೀಡಿದೆ.
'ಬೆಸ್ಕಾಮ್‌ನ ವಾಟ್ಸಾಪ್ ಹೆಲ್ಪ್‌ಡೆಸ್ಕ್ ಯಾವುದೇ ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ತಕ್ಷಣವೇ ನಿಮಗೆ ಸಹಾಯ ಮಾಡಲು ತೆರೆದಿದೆ' ಎಂದು ಬೆಸ್ಕಾಂ ಟ್ವೀಟ್ ಮಾಡಿದೆ.

'ವಿದ್ಯುತ್ ಸಂಬಂಧಿತ ಸಮಸ್ಯೆಗಳಿಗೆ ಸಂಬಂಧಿಸಿದ ಸಂದೇಶಗಳು, ಚಿತ್ರಗಳು ಅಥವಾ ವಿಡಿಯೊಗಳನ್ನು ನಿಮ್ಮ ಜಿಲ್ಲೆಗೆ ಸಂಬಂಧಿತ ವಾಟ್ಸಾಪ್ ಸಹಾಯವಾಣಿ ಸಂಖ್ಯೆಗೆ ಕಳುಹಿಸಿ ಮತ್ತು ಶಾಶ್ವತ ಪರಿಹಾರವನ್ನು ಪಡೆಯಿರಿ' ಎಂದು ಬೆಸ್ಕಾಂ ಹೇಳಿದೆ.
ಗ್ರಾಹಕರು ತಮ್ಮ ಸಮಸ್ಯೆಗಳನ್ನು ವಿವರಿಸುವ ಸಂದೇಶಗಳು, ಛಾಯಾಚಿತ್ರಗಳು ಮತ್ತು ವಿಡಿಯೊಗಳನ್ನು ಈ ಸಹಾಯವಾಣಿಗಳಿಗೆ ಕಳುಹಿಸಬಹುದು ಎಂದು ಬೆಸ್ಕಾಂ ಹೇಳಿದೆ:
ಬೆಂಗಳೂರು ನಗರ: 8277884011, 8277884012, 8277884013, 8277884014
ಕೋಲಾರ: 8277884015
ಚಿಕ್ಕಬಳ್ಳಾಪುರ: 8277884016
ಬೆಂಗಳೂರು ಗ್ರಾಮಾಂತರ: 8277884017
ರಾಮನಗರ: 8277884018
ತುಮಕೂರು: 8277884019
ಚಿತ್ರದುರ್ಗ: 8277884020
ದಾವಣಗೆರೆ: 8277884021
ಕರ್ನಾಟಕಕ್ಕೆ ನೈಋತ್ಯ ಮಾನ್ಸೂನ್ ಬರಲಿದೆ. ಇದು ಭಾರೀ ಮಳೆಯನ್ನು ಹೊತ್ತು ತರುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ವಿದ್ಯುತ್ ಕಡಿತವು ನಿಯಮಿತವಾಗಿ ಸಂಭವಿಸುವ ನಿರೀಕ್ಷೆಯಿದೆ. ಅನೇಕ ನಿವಾಸಿಗಳು ಬೆಂಗಳೂರು ಮತ್ತು ಇತರ ಕೆಲವು ಪ್ರದೇಶಗಳಲ್ಲಿ ವಿದ್ಯುತ್‌ಗೆ ಸಂಬಂಧಿಸಿದ ತಮ್ಮ ಸಮಸ್ಯೆಗಳನ್ನು ವಾಟ್ಸಾಮ್ ಮೂಲಕ ಬಗೆಹರಿಸಿಕೊಳ್ಳಬಹುದು.
'@NammaBESCOM ಶಾರದ ನಗರದಲ್ಲಿ ಕಡಿಮೆ ವೋಲ್ಟೇಜ್, ವಸಂತಪುರ ಮುಖ್ಯ ರಸ್ತೆ, ಬಿ'ಲೂರು-61' ಎಂದು ಜೂನ್ 12 ರಂದು ನರಹರಿ ಎಂಬುವವರು ಟ್ವೀಟ್ ಮಾಡಿದ್ದಾರೆ.
ನಿಮ್ಮ ಸಪೋರ್ಟ್ ಲೈನ್‌ಗಳು ಕೆಲಸ ಮಾಡುತ್ತಿಲ್ಲ. ನಿಮ್ಮ ಸಹಾಯವಾಣಿಗಳು ಪಿಕಪ್ ಆಗುತ್ತಿಲ್ಲ. 10-15 ನಿಮಿಷಗಳಿಗಿಂತ ಹೆಚ್ಚು ಕಾಯುವಿಕೆಯ ನಂತರ ಬೆಂಗಳೂರಿನಲ್ಲಿ ಈ ಕೆಟ್ಟ ಸೇವೆಯನ್ನು ಪಡೆಯಲು ನಾವು ಏಕೆ ಹೆಚ್ಚು ಪಾವತಿಸಬೇಕು? ಎಂದೂ ಟ್ವಿಟಿಗರೊಬ್ಬರು ಹರಿಹಾಯ್ದಿದ್ದಾರೆ.
ಕಳೆದ 15 ದಿನಗಳಿಂದ ವರತ್ತೂರು ಪ್ರದೇಶದಲ್ಲಿ ಅದೇ ಪರಿಸ್ಥಿತಿ ಇದೆ. ಬೆಸ್ಕಾಂನಿಂದ ಯಾವುದೇ ಪ್ರತಿಕ್ರಿಯೆಯಿಲ್ಲ. ದಿನಕ್ಕೆ 9.10 ಗಂಟೆಗಳ ಕಾಲ ವಿದ್ಯುತ್ ಕಡಿತವಾಗುತ್ತಿದೆ ಎಂದು ಟ್ವಿಟಿಗರೊಬ್ಬರು ಬೇಸರ ಹಂಚಿಕೊಂಡಿದ್ದಾರೆ.












Click it and Unblock the Notifications