Bengaluru Power Cut: ಬಹುತೇಕ ಈ ವಾರಪೂರ್ತಿ ವಿದ್ಯುತ್ ಕಡಿತ, ಯಾವ ಪ್ರದೇಶಗಳು ತಿಳಿಯಿರಿ

ಬೆಂಗಳೂರು, ಆಗಸ್ಟ್ 29: ಬೇಸಿಗೆಯಲ್ಲೂ ಸಹ ಬೆಂಗಳೂರಿನಲ್ಲಿ ಆಗಾಗ ಲೋಡ್ ಶೆಡ್ಡಿಂಗ್ ಆಗುತ್ತಲೇ ಇದ್ದು, ಇದೀಗ ಆಗಸ್ಟ್ 31ರವರೆಗೂ ನಗರದ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ವಿದ್ಯುತ್ ಸರಬರಾಜು ಕಂಪನಿಗಳು ತ್ರೈಮಾಸಿಕ ನಿರ್ವಹಣಾ ಕಾಮಗಾರಿ ನಡೆಸಲಿವೆ. ಈ ಸಂಬಂಧ ವಾರಾಂತ್ಯದವರೆಗೆ ಬೆಂಗಳೂರು ವಿದ್ಯುತ್ ಕಡಿತಕ್ಕೆ ಸಾಕ್ಷಿಯಾಗಲಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ (BESCOM) ವೆಬ್‌ಸೈಟ್‌ ನಲ್ಲಿ ತಿಳಿಸಲಾದ ಮಾಹಿತಿ ಪ್ರಕಾರ, ಇಂದಿನಿಂದ ಮೂರು ದಿನ (ಆ.31ರವರೆಗೆ) ಗುರುವಾರವರೆಗೆ ಹಲವಾರು ಪ್ರದೇಶಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯವಾಗಲಿದೆ.

Bengaluru: Power Cut Issue Face To Several Parts Of City Till August 31st, See Affected Areas

ನಗರದಲ್ಲಿ ಒಟ್ಟು ನಿತ್ಯ ಐದಾರು ಗಂಟೆಗಳ ಕಾಲ ಅಂದರೆ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ರವರೆಗೆ ವಿದ್ಯುತ್ ಕಡಿತಗೊಳ್ಳಲಿದೆ. ಕೆಲವೊಮ್ಮೆ ವಿದ್ಯುತ್ ಕಾಮಗಾರಿ ಸಂಜೆ 5 ಗಂಟೆವರೆಗೂ ವಿಸ್ತರಣೆ ಆದರೆ ಹೆಚ್ಚು ಕಾಲ ವಿದ್ಯುತ್ ಸೇವೆ ಸ್ಥಗಿತಗೊಳ್ಳುವ ನಿರೀಕ್ಷೆ ಇದೆ.

ವಿದ್ಯುತ್ ಕಡಿತದ ದಿನ ಮತ್ತು ಪ್ರದೇಶಗಳ ವಿವಿರ

ಇಂದು ಆಗಸ್ಟ್ 29ರಂದು ಮಂಗಳವಾರ ಆನಂದ ನಗರ, ತಿರುಮಲಾಪುರ, ಟಿ ಬೇಗೂರು, ಬೈರನಹಳ್ಳಿ, ಗಂಗಾನಗಟ್ಟ, ಹುಣಸೆಘಟ್ಟ, ಹುಚ್ಚೇಗೌಡನಪಾಳ್ಯ, ಮಾರೋಹಳ್ಳಿ, ಎಂ ಗೊಲ್ಲರಟ್ಟಿ, ಕಾನುಘಟ್ಟ ಮತ್ತು ಸೂಗೂರುದಲ್ಲಿ ವಿದ್ಯುತ್ ಕಟ್ ಆಗಲಿದೆ.

Bengaluru: Power Cut Issue Face To Several Parts Of City Till August 31st, See Affected Areas

ನಾಳೆ ಆಗಸ್ಟ್ 30ರಂದು ಬುಧವಾರ ಹರೇಬೋಮನಹಳ್ಳಿ ಗ್ರಾ.ಪಂ., ಕೋಡಿಹಳ್ಳಿ, ಕರದಳ್ಳು, ನಾನ್‌ವಿಕೆರೆ, ಕಲ್ಲಹಳ್ಳಿ, ಗುಂಗುರಮಲೆ, ಅಂಚೆಕೊಪ್ಪಲು, ಬವನಕಟ್ಟೆ, ಜಿ. ಮಿತ್ರ, ಬಿಳನಕೋಟೆ ಪ್ರದೇಶ, ಹೊಸಹಳ್ಳಿ, ಹನುಮಂತಪುರ, ಕುಳ್ಳುವನಹಳ್ಳಿ, ಲಕ್ಕೇನಹಳ್ಳಿ, ದೊಡ್ಡೇರಿ, ಗುಂಡೇನಹಳ್ಳಿ, ಕುಲವನಹಳ್ಳಿ ಗ್ರಾಮ ಪಂಚಾಯಿತಿ, ಕಂದಿಕೆರೆ, ಅಜ್ಜಿಗುಡ್ಡೆ , ಸದ್ರಹಳ್ಳಿ, ಉಪ್ಪಿಕಟ್ಟೆ, ಮತ್ತಿಟ್ಟ.

ಸಿಂಗದಹಳ್ಳಿ, ಬಾರ್ಸಿಡ್ಲಹಳ್ಳಿ, ಹಂದನಕೆರೆ, ಹರೇನಹಳ್ಳಿ, ಕತ್ರಿಕೆಹಾಳ್, ಗೈರೇಹಳ್ಳಿ, ಸಿದ್ದರಾಮನಗರ, ಹೆಸರಳ್ಳಿ, ಶೆಟ್ಟಿಕೆರೆ, ಹುಳಿಯಾರ್, ಯೆಳ್ನಾಡು, ಕೊರ್ಗೆರೆ, ಟಿ. ನೂಂಕೆರೆ, ಕುಪ್ಪೂರು, ತಮಡಿಹಳ್ಳಿ ಸೇರಿದಂತೆ 11 ಕೆವಿ ಚೇಳೂರು, ಹೊಸಕೆರೆ, ಹಾಗಲವಾಡಿ ಮತ್ತು ನಂದಿಹಳ್ಳಿ ಉಪ ಕೇಂದ್ರಗಳ ವ್ಯಾಪ್ತಿಯಲ್ಲಿ ವಿದ್ಯುತ ಕಡಿತಗೊಳ್ಳಲಿದೆ.

ಅದೇ ರೀತಿ ಗುರುವಾರ ಆಗಸ್ಟ್ 31ರಂದು ಆನಂದ ನಗರ, ತಿರುಮಲಾಪುರ, ಹುಚ್ಚೇಗೌಡನಪಾಳ್ಯ, ಬೂದಿಹಾಳ್ ಗ್ರಾಮ ಪಂಚಾಯಿತಿ, ಟಿ ಬೇಗೂರು, ವೀರನಂಜಿಪುರ, ಬೊಮ್ಮನಹಳ್ಳಿ, ಕಾಚನಹಳ್ಳಿ, ಬಾರಾಡಿ, ಯರಮಂಚನಹಳ್ಳಿ, ಬಸವೇಶ್ವರ ಹಾಗೂ ಮಂಡಿಗೆರೆ ಪ್ರದೇಶಗಳು ವಿದ್ಯುತ್ ಕಡಿತಕ್ಕೆ ಸಾಕ್ಷಿಯಾಗಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+