Bengaluru Power Cut: ಬೆಂಗಳೂರಿನ ಈ ಏರಿಯಾಗಳಲ್ಲಿ ನಾಳೆಯಿಂದ ವಿದ್ಯುತ್ ವ್ಯತ್ಯಯ
ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನ ಹಲವೆಡೆ ಡಿಸೆಂಬರ್ 23ರಿಂದ ಜನವರಿ 11ರವರೆಗೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಬೆಂಗಳೂರಿನ 220/66/11ಕೆ.ವಿ ಇ.ಪಿ.ಐ.ಪಿ ಸ್ಟೇಷನ್ನಲ್ಲಿ 31.5 ಎಮ್.ವಿ.ಎ ಶಕ್ತಿ ಪರಿವರ್ತಕ-3 ರ ರಿಟ್ರೋಫಿಲ್ಲಿಂಗ್ ನಿರ್ವಹಣಾ ಕೆಲಸಗಳನ್ನು ಕೈಗೆತ್ತಿಕೊಂಡಿರುವ ಹಿನ್ನೆಲೆ ನಗರ ಹಲವು ಪ್ರದೇಶಗಳಲ್ಲಿ ಮಂಗಳವಾರ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ವತಿಯಿಂದ ತುರ್ತು ನಿರ್ವಹಣಾ ಪ್ರದೇಶಗಳಲ್ಲಿ ವಿದ್ಯುತ್ ಕಾಮಗಾರಿ ಕೈಗೊಂಡಿರುವುದರಿಂದ ನಗರದ ಬಹುತೇಕ ಏರಿಯಾಗಳಲ್ಲಿ ವಿದ್ಯುತ್ ಅಡಚಣೆ ಉಂಟಾಗಲಿದೆ.
ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು
ಕೋಣನಕುಂಟೆ, ತಲಘಟ್ಟಪುರ, ದೊಡ್ಡಕಲ್ಲಸಂದ್ರ, ಶ್ರೀನಿಧಿ ಲೇಔಟ್, ಆವಲಹಳ್ಳಿ ಮಂತ್ರಿ ಅಪಾರ್ಟ್ಮೆಂಟ್, ರಘುವನಹಳ್ಳಿ ಗುಬ್ಬಲಾಳ, ಕುವೆಂಪುನಗರ, ವಿ.ವಿ.ನಗರ, ವಿ.ವಿ.ಲೇಔಟ್, ಬಾಲಾಜಿ ಲೇಔಟ್, ರಾಯಲ್ ಫಾರಂ ಮತ್ತು ಅರೇಹಳ್ಳಿ ಮಾನ್ಯತಾ ಟೆಕ್ ಪಾರ್ಕ್ ಉಪಕೇಂದ್ರದ ಫಿಡೆಲಿಟಿ, ಫಿಲಿಪ್ಸ್ ಇನ್ ಕ್ಯುಬೇಟರ್, ಐಬಿಎಂ ಡಿ1, ಡಿ2, ಡಿ3 ಹಾಗೂ ಡಿ4 ಬ್ಲಾಕ್ಗಳು, ಬಿ.ಟಿ.ಎಸ್. ಲೇಔಟ್, ಹೆಬ್ಬಾಳ, ಕೆಂಪಾಪುರ, ವಿನಾಯಕ ಲೇಔಟ್, ಚಿರಂಜೀವಿ ಲೇಔಟ್, ವೆಂಕಟಗೌಡ ಲೇಔಟ್, ಮಧುವನ ಎಂ2 ಬ್ಲಾಕ್, ರಾಚೇನಹಳ್ಳಿ, ಶ್ರೀರಾಮಪುರ, ಚಾಮುಂಡೇಶ್ವರಿ ಲೇಔಟ್ ಪ್ರದೇಶಗಳು.

ರಾಯಲ್ ಎನ್ಕ್ಲೇವ್, ಥಣಿಸಂದ್ರ, ಬಿ.ನಾರಾಯಣಪುರ ಕ್ರಾಸ್, ಬಿಡಿಎಸ್ ಲೇಔಟ್, ಚಿಕ್ಕಲ್ಲಸಂದ್ರ, ಟಿ.ಜಿ.ಲೇಔಟ್, ಭುವನೇಶ್ವರಿನಗರ, ಇಸ್ರೋ ಮಂತ್ರಿ ಲಿಥೋಸ್, ಕಾಫಿ ಬೋರ್ಡ್ ಲೇಔಟ್, ಫಾತಿಮಾ ಲೇಔಟ್, ಕುಮಾರಸ್ವಾಮಿ ಬಡಾವಣೆ, ವಿಠಲನಗರ, ಲೇಔಟ್, ಉಮಿಯಾ ವೆಲಾಸಿಟಿ ಮತ್ತು ಸುತ್ತಮುತ್ತಲಿನ ವಿಕ್ರಮ್ ನಗರ, ಕದಿರೇನಹಳ್ಳಿ, ಅಬ್ಬಯ್ಯನಾಯ್ಡು ಸ್ಟುಡಿಯೊ, ನಾಯ್ಡು ಲೇಔಟ್ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಇರುವುದಿಲ್ಲ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಎಲ್&ಟಿ , ಆರ್ಎಂಝಡ್ ನೆಕ್ಸ್ಟ್, ರಾಗಿಹಳ್ಳಿ-ಸಿದ್ದಾಪುರ ಗೇಟ್, ಇಪಿಐಪಿ ಲೇಔಟ್, ಟಿಸಿಎಸ್ ಸಾಫ್ಟ್ವೇರ್, ಎಸ್ಜೆಆರ್ ಟೆಕ್ ಪಾರ್ಕ್ (ಇಪಿಐಪಿ ಲೇಔಟ್), ಎಂ/ಎಸ್ ವಿಎಸ್ಎನ್ಎಲ್ ಫೀಡರ್, ರಿಲಯನ್ಸ್ (ಬಿಗ್ ಬಜಾರ್), ಓರಿಯಂಟಲ್ ಹೋಟೆಲ್, ಏರ್ಟೆಲ್, ಬುಷ್ರಾ ಟೆಕ್ ಪಾರ್ಕ್ (ಇಪಿಐಪಿ ಲೇಔಟ್), ಗೋಪಾಲನ್ ಎಂಟರ್ಪ್ರೈಸಸ್, ಸದಾ ಟೆಕ್ ಪಾರ್ಕ್ (ಇಪಿಐಪಿ ಲೇಔಟ್), ಕ್ವಾಲ್ಕಾಮ್, ಕ್ವಾಲ್ಕಾಮ್-2, ಜಿಇ ಬಿಇ ಕಂಪನಿ, ಬಾಗ್ಮನೆ ನೀಯಾನ್ ಬ್ಲಾಕ್, ಇಪಿಐಪಿ ಇಂಡಸ್ಟ್ರಿಯಲ್ ಏರಿಯಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಇಂದು ಎಲ್ಲೆಲ್ಲಿ ಕರೆಂಟ್ ಇರಲ್ಲ?
ಸೋಮವಾರ (ಡಿಸೆಂಬರ್ 22) ಕೂಡ ಬೆಂಗಳೂರಿನ ಹಲವಾರು ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 66/11 ಕೆವಿ ಕಂಬಿಪುರ ವಿದ್ಯುತ್ ಸ್ಥಾವರದಲ್ಲಿ ತ್ರೈಮಾಸಿಕ ನಿರ್ವಹಣೆಗಾಗಿ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ವಿದ್ಯುತ್ ಕಡಿತಗೊಳ್ಳುವ ಪ್ರದೇಶಗಳಲ್ಲಿ ವಾಸಿಸುವ ಜನರು ತಮ್ಮ ಅಗತ್ಯ ವಿದ್ಯುತ್ ಕೆಲಸಗಳನ್ನು ಮೊದಲೇ ಪೂರ್ಣಗೊಳಿಸುವಂತೆ ಕೆಪಿಟಿಸಿಎಲ್ ವಿನಂತಿಸಿದೆ.
ಸೋಮವಾರದಂದು ಕಂಬಿಪುರ, ಕರುಬೆಲೆ, ಎಚ್ ಗೊಲ್ಲಹಳ್ಳಿ, ಕಾಟನಾಯಕನಪುರ, ವರಾಹಸಂದ್ರ, ಸ್ವಾಮೀಜಿನಗರ, ಅಂಚೆಪಾಳ್ಯ ಮತ್ತು ಅಪ್ರಮೇಯನಗರ ಸೇರಿದಂತೆ ಹಲವೆಡೆ ವಿದ್ಯುತ್ ಅಡಚಣೆ ಇರಲಿದೆ. ಕೃಷ್ಣ ದೇವಸ್ಥಾನದ ಸರ್ಕಾರಿ ಶಾಲೆಯ ಸುತ್ತಮುತ್ತಲಿನ ಪ್ರದೇಶಗಳು, ಪ್ರಾವಿಡೆಂಟ್ ಅಪಾರ್ಟ್ಮೆಂಟ್ಗಳು, ವಿಬಿಎಚ್ಸಿ ಅವ್ಟೋಮೆಂಟೊ, ಗುಡ್ ಅರ್ಥ್, ಶ್ರೀನಿಧಿ ಗ್ರೀನ್ ಲೇಔಟ್, ದೇವಗೆರೆ, ಆನೆಪಾಳ್ಯ ಮತ್ತು ಹತ್ತಿರದ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ವಿದ್ಯುತ್ ಕಡಿತಕ್ಕೆ ಕಾರಣವೇನು?
ಅನಿರೀಕ್ಷಿತ ವಿದ್ಯುತ್ ಸ್ಥಗಿತಗಳನ್ನು ತಡೆಗಟ್ಟಲು ಮತ್ತು ಸುರಕ್ಷಿತ ಮತ್ತು ಅಡೆತಡೆಯಿಲ್ಲದ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು, ವಿಶೇಷವಾಗಿ ಮುಂಬರುವ ತಿಂಗಳುಗಳಲ್ಲಿ ಬೇಡಿಕೆ ಹೆಚ್ಚಾಗುವ ಮುನ್ನ ಈ ನಿರ್ವಹಣೆಯು ಅತ್ಯಗತ್ಯ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ನಿರ್ವಹಣಾ ಅವಧಿಯಲ್ಲಿ ಗ್ರಾಹಕರು ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿದೆ. ವಿದ್ಯುತ್ಗೆ ಸಂಬಂಧಿಸಿದ ತುರ್ತು ಸಂದರ್ಭಗಳಲ್ಲಿ 1912ಗೆ ಕರೆ ಮಾಡುವ ಮೂಲಕ ದೂರುಗಳನ್ನು ಸಲ್ಲಿಸಬಹುದು. ನಗರದ ನಿವಾಸಿಗಳು ನಿಗದಿತ ವಿದ್ಯುತ್ ವ್ಯತ್ಯಯಗಳ ಬಗ್ಗೆ ಮುಂಚಿತವಾಗಿ ತಿಳಿದುಕೊಳ್ಳಲು ಬೆಸ್ಕಾಂ ವೆಬ್ಸೈಟ್ ಅನ್ನು ಸಹ ಪರಿಶೀಲಿಸಬಹುದು ಎಂದು ಹೇಳಿದ್ದಾರೆ.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications