ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾರ್ವಜನಿಕರ ಜಾಗೃತಿಗೆ ವಿಶಿಷ್ಟ ಹಾದಿ ತುಳಿದ ಬೆಂಗಳೂರು ಪೊಲೀಸ್

6 ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿರುವ ಬೆಂಗಳೂರು ಪೊಲೀಸರ ಟ್ವಿಟ್ಟರ್ ಖಾತೆಯಲ್ಲಿ ಜನರಿಗೆ ಜಾಗೃತಿ ಮೂಡಿಸುವ ವಿಶಿಷ್ಠ ಭಿತ್ತಿ ಪತ್ರಗಳು ಮೂಡಿ ಬರುತ್ತಿದ್ದು ಜನರ ಮೆಚ್ಚುಗೆ ಗಳಿಸಿವೆ.

By Sachhidananda Acharya
|
Google Oneindia Kannada News

ಬೆಂಗಳೂರು, ಮೇ 4: ಸಾರ್ವಜನಿಕರಲ್ಲಿ ಹಲವು ವಿಚಾರಗಳ ಬಗ್ಗೆ ಜಾಗೃತಿ ಮೂಡಿಸಲು ಸರಕಾರ ಹೆಣಗಾಡುತ್ತದೆ. ಅದರಲ್ಲೂ ಸೃಜನಶೀಲ ಹಾದಿಯಲ್ಲಿ ಸಾರ್ವಜನಿಕರಿಗೆ ಮಾಹಿತಿ ತಲುಪಿಸುವಲ್ಲಿ ಸರಕಾರಿ ಸಂಸ್ಥೆಗಳು ಇನ್ನೂ ಓಬಿರಾಯನ ಕಾಲದ ಪದ್ಧತಿಗಳನ್ನೇ ಅನುಸರಿಸುತ್ತವೆ.

ಆದರೆ ಬೆಂಗಳೂರು ಪೊಲೀಸರು ಇದಕ್ಕೆ ಅಪವಾದ. ಕಾರಣ ಬೆಂಗಳೂರು ನಗರ ಪೊಲೀಸರು ವಿಶಿಷ್ಠ ಮಾದರಿಯಲ್ಲಿ ಟ್ವಿಟ್ಟರ್ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಸೃಜನಶೀಲ ಮೆಮೆಗಳನ್ನು ಸೃಷ್ಠಿಸಿ ಸಾರ್ವಜನಿಕರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

6 ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿರುವ ಬೆಂಗಳೂರು ನಗರ ಪೊಲೀಸರ ಟ್ವಿಟ್ಟರ್ ಮೆಮೆ, ವಿಡಿಯೋ, ಭಿತ್ತಿಪತ್ರಗಳ ಸ್ಯಾಂಪಲ್ ಗಳು ಇಲ್ಲಿವೆ.

ವ್ಯಂಗ್ಯ, ಹಾಸ್ಯಗಳಲ್ಲೇ ಸಂದೇಶ

ಜನರಿಗೆ ಸಂದೇಶ ತಲುಪಿಸಲು ವ್ಯಂಗ್ಯ, ಹಾಸ್ಯದ ಮಾರ್ಗವನ್ನು ಪೊಲೀಸರು ಅನುಸರಿಸಿದ್ದಾರೆ. ಜತೆಗೆ ಸಿನಿಮಾದ ಸ್ಟಿಲ್ ಗಳನ್ನೆಲ್ಲಾ ಬಳಸಿಕೊಂಡು ಅತ್ಯುತ್ತಮ ರೀತಿಯಲ್ಲಿ ಪ್ರಚಾರ ಪರಿಕರಗಳನ್ನು ಸಿದ್ದಪಡಿಸುತ್ತಿದ್ದಾರೆ ಪೊಲೀಸರು.

ನೆಟಿಜನ್ ಮನಗೆದ್ದ ಪೊಲೀಸರು

ಕುಡಿದು ವಾಹನ ಚಾಲನೆ, ರಸ್ತೆ ಸುರಕ್ಷೆ, ಆನ್ ಲೈನ್ ವಂಚನೆ ಹೀಗೆ ಹಲವು ವಿಚಾರಗಳಿಗೆ ಸಂಬಮದಿಸಿದಂತೆ ಸಾರ್ವಜನಿಕರಲ್ಲಿ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ.

ಗೇಮ್ ಆಫ್ ಥ್ರೋನ್ಸ್

ಗೇಮ್ ಆಫ್ ಥ್ರೋನ್ಸ್ ನಂಥ ಧಾರವಾಹಿ ಸರಣಿಗಳಿಂದ ಪ್ರೇರಣೆ ಪಡೆದ ಮೆಮೆಗಳನ್ನೂ ಪೊಲೀಸರು ರಚಿಸಿ ಟ್ವಿಟ್ಟರಿನಲ್ಲಿ ಶೇರ್ ಮಾಡಿದ್ದಾರೆ.

ಕರೆಗಳನ್ನು ನಿರ್ಲಕ್ಷಿಸಿ

ನಿಮ್ಮ ಒಟಿಪಿಯನ್ನು ಶೇರ್ ಮಾಡಬೇಡಿ ಎಂಬುದಕ್ಕೆ ಆಕರ್ಷಕ ಚಿತ್ರ ಹಾಗಿ ಗಮನ ಸೆಳೆದಿದ್ದಾರೆ ಬೆಂಗಳೂರು ಪೊಲೀಸರು. ಒಟಿಪಿ ನೀಡಿದರೆ ನಿಮ್ಮ ಹಣವನ್ನು ಕಳ್ಳರು ಕೊಳ್ಳೆ ಹೊಡೆಯುತ್ತಾರೆ ಎಂದು ಪೊಲೀಸರು ಟ್ವೀಟ್ ಮಾಡಿದ್ದಾರೆ.

ಪಕ್ಕಾ ಹಿಡಿಸ್ತೀವಿ ಸ್ಲೇಟು

ಇಂಥಹ ಆಕರ್ಷಕ ಸ್ಲೋಗನ್ ಗಳು ಕೂಡಾ ಈ ಟ್ವಿಟ್ಟರ್ ಅಕೌಂಟ್ ಗಳಲ್ಲಿ ಕಾಣಿಸಿಕೊಳ್ಳುತ್ತವೆ. ಇದರ ಜತೆಗೆ ಹಲವು ವೀಡಿಯೋಗಳನ್ನು ಮಾಡಿಯೂ ಜಾಗೃತಿ ಮೂಡಿಸುತ್ತಾರೆ ಪೊಲೀಸರು. ಹೀಗೆ ವಿಶಿಷ್ಟ ಕಾರಣಕ್ಕೆ ಬೆಂಗಳೂರು ಪೊಲೀಸರ ಟ್ವಿಟ್ಟರ್ ಸುದ್ದಿಗೆ ಗ್ರಾಸವಾಗಿದೆ.

English summary
Bengaluru police uses innovative posters on road safety, had been a hit with netizens and had earned them much praise.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X