ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೊಲೀಸರ ಪಾಲಿನ ಪತ್ತೇದಾರಿ ಪುರುಷೋತ್ತಮನಾದ ಫೇಸ್ ಬುಕ್

By Vanitha
|
Google Oneindia Kannada News

ಬೆಂಗಳೂರು, ಜೂ. 19 : ಇತ್ತೀಚಿನ ದಿನಗಳಲ್ಲಿ ಅಪರಾಧಿಗಳ ಜಾಲ ಬೃಹದಾಕಾರವಾಗಿ ಬೆಳೆಯುತ್ತಿವೆ. ಹಿಂದಿನಿಂದಲೂ ಇವುಗಳನ್ನು ಪತ್ತೆಹಚ್ಚುವುದೇ ಬಹಳ ತ್ರಾಸದಾಯಕ ಕಾಯಕ. ಇದನ್ನು ಪತ್ತೆಹಚ್ಚಲು ನಾಗರಿಕರು ಕಾನೂನು ವ್ಯವಸ್ಥೆಯ ಮೊರೆ ಹೋಗಬೇಕಾಗಿತ್ತು ಅಥವಾ ಮನೆಯಲ್ಲಿ ಸುಮ್ಮನೆ ಕೂರುವ ಪರಿಸ್ಥಿತಿ ಇತ್ತು. ಆದರೆ ಇದೀಗ ಜನರು ಆತಂಕ ಪಡಬೇಕಾಗಿಲ್ಲ. ಕೇವಲ ತಮ್ಮ ಸಾಮಾಜಿಕ ಜಾಲತಾಣಗಳ ಅಕೌಂಟ್ ಗಳ ಕಡೆ ತಿರುಗಿದರೆ ಸಾಕು. ಅಪರಾಧಿಗಳ ಸಂಪೂರ್ಣ ವಿವರ ನಿಮ್ಮ ಮುಂದೆ ಹಾಜರಾಗುತ್ತದೆ.

ಹೌದು ಕೇವಲ ಭಾವಚಿತ್ರಗಳ ಹಂಚಿಕೊಂಡು, ಕಾಮೆಂಟ್ಗಳನ್ನು ನೀಡುತ್ತಾ, ಮನಸ್ಸಿನ ರಂಜನೆಗಾಗಿ ಬಳಕೆಯಾಗುತ್ತಿದ್ದ ಫೇಸ್ ಬುಕ್ ಈಗ ಸಾಮಾಜಿಕ ಅಪರಾಧಗಳನ್ನು ಪತ್ತೆಹಚ್ಚುವ ಪತ್ತೆದಾರಿ ಕೆಲಸಕ್ಕೆ ಮುಂದಾಗಿದೆ.

Bengaluru police turn to Social media for crime prevention

ಎಕ್ಸ್ ಪ್ಲೋರಿಂಗ್ ಆನ್ ಲೈನ್ ಕಮ್ಯೂನಿಕೇಶನ್ ಫಾರ್ ಕ್ರೈಂ ಪ್ರಿವೆನ್ಷನ್ ಅಧ್ಯಯನವನ್ನು ಸೋಷಿಯಲ್ ನೆಟ್‌ವರ್ಕ್ಸ್ ಫಾರ್ ಪೊಲೀಸ್ ಆಂಡ್ ರೆಸಿಡೆಂಟ್ಸ್ ಇನ್ ಇಂಡಿಯಾ ಸಂಸ್ಥೆ ಕೈಗೊಂಡಿತ್ತು. ಇದರಲ್ಲಿ ಸೈಬರ್ ಎಜ್ಯುಕೇಶನ್ ಆಂಡ್ ರಿಸರ್ಚ್ ಸೆಂಟರ್‌ (CERC) ಮತ್ತು ದೆಹಲಿಯ ಇಂದ್ರಪ್ರಸ್ಥ ಇನ್‌ಸ್ಟಿಟ್ಯೂಟ್ ಆಫ್ ಇನ್ ಫಾರ್ಮೇಶನ್ ಟೆಕ್ನಾಲಜಿ (IIIT) ನಗರ ಪೊಲೀಸರು ಅಪರಾಧಿಗಳನ್ನು ಪತ್ತೆಹಚ್ಚಲು ಸಾಮಾಜಿಕ ಜಾಲತಾಣವನ್ನು ಬಳಸಿಕೊಳ್ಳುತ್ತಿದ್ದಾರೆ. ಅಪರಾಧದ ಕುರಿತಾಗಿ ಮಾಹಿತಿಯನ್ನು ರವಾನೆ ಮಾಡಿದರೆ ಕೇವಲ 30 ಗಂಟೆಗಳ ಒಳಗಾಗಿ ಎಲ್ಲ ಮಾಹಿತಿಗಳು ಸಾರ್ವಜನಿಕರಿಗೆ ತಲುಪುತ್ತದೆ.

ಈ ಅಧ್ಯಯನದ ಕುರಿತಾಗಿ ನಗರದ ಪೊಲೀಸ್ ಕಮಿಷನರ್ (BCP) ಎಮ್.ಎನ್ ರೆಡ್ಡಿ ನಂಬಿಕೆಯನ್ನು ವ್ಯಕ್ತಪಡಿಸಿದ್ದು, ನಾಗರೀಕರು ಸುತ್ತಮುತ್ತಲಿನ ಅಪರಾಧಗಳನ್ನು ಅರಿತುಕೊಳ್ಳಲು ಇದು ಉತ್ತಮ ಮೈಲುಗಲ್ಲು ಎಂದು ತಿಳಿಸಿದ್ದಾರೆ. ಪೊಲೀಸರಿಗೆ ಸಾಕಷ್ಟು ಮಾಹಿತಿಯನ್ನು ಕಲೆಹಾಕಲು ಸಹಾಯಕವಾಗಿದ್ದು, ಸಾರ್ವಜನಿಕರ ಮೇಲೆ ಹಿಡಿತ ಸಾಧಿಸಲು ಇದು ನೆರವಾಗಲಿದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.

English summary
The city police have turned social media into an effective tool for crime prevention. Bangalore police has taken help of Facebook to book criminals. The users can provide information about the criminals to police through this medium.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X