ಬೈಕ್ ವ್ಹೀಲಿಂಗ್ ವಿರುದ್ಧ ಪೊಲೀಸರ ಜಾಗೃತಿ ಅಭಿಯಾನ
ಬೆಂಗಳೂರು, ಜ. 12: ಕರ್ನಾಟಕದ ರಾಜಧಾನಿ ಬೆಂಗಳೂರು ಎಷ್ಟು ವೇಗವಾಗಿ ಮುಂದುವರಿಯುತ್ತಿದೆಯೋ ಅಷ್ಟೇ ಅಶಿಸ್ತು ಕೂಡ ಹೆಚ್ಚುತ್ತಿದೆ. ಯುವಕರಲ್ಲಿ ಹೆಚ್ಚುತ್ತಿರುವ ಬೈಕ್ ವ್ಹೀಲಿಂಗ್ ಹುಚ್ಚು ಹಲವು ಜೀವಗಳನ್ನು ಬಲಿಪಡೆದಿದೆ. ಬೈಕ್ ವ್ಹೀಲಿಂಗ್ ಅಧಿಕಪ್ರಸಂಗಿಗಳಿಗೆ ಸಾರ್ವಜನಿಕರು ಅನೇಕ ಬಾರಿ ಧರ್ಮದೇಟು ಕೂಡ ನೀಡಿದ್ದಾರೆ.
ಬೈಕ್ ವ್ಹೀಲಿಂಗ್ ಮಾಡಿದವರ ಚಾಲನಾ ಪರವಾನಗಿ ರದ್ದುಮಾಡುವುದಾಗಿ ಈಗಾಗಲೇ ಪೊಲೀಸ್ ಇಲಾಖೆ ಎಚ್ಚರಿಕೆಯನ್ನೂ ನೀಡಿದೆ. ಆದರೂ, ಸ್ಟಂಟ್ ಮಾತ್ರ ನಿಂತಿಲ್ಲ. ಆದ್ದರಿಂದ ಈಗ ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿ ಅಭಿಯಾನವನ್ನು ಪೊಲೀಸ್ ಇಲಾಖೆ ಹಮ್ಮಿಕೊಂಡಿದೆ. [ಬೈಕ್ ವ್ಹೀಲಿಂಗ್ ಮಾಡುತ್ತ ಕಾರಿಗೆ ಗುದ್ದಿದ ಯುವಕ]
ಟ್ವಿಟ್ಟರ್‌ನಲ್ಲಿ ಸ್ಟಂಟ್ ಮಾಡುವುದರಿಂದ ಉಂಟಾಗುವ ದುಷ್ಪರಿಣಾಮದ ಕುರಿತು ರೇಖಾಚಿತ್ರ ಪ್ರಕಟಿಸಿ ಎಚ್ಚರಿಕೆ ನೀಡಿದೆ.

ಏನಿದೆ ರೇಖಾಚಿತ್ರದಲ್ಲಿ? : ಓರ್ವ ಯುವಕ ಸೈಕಲ್‌ನಲ್ಲಿ ವ್ಹೀಲಿಂಗ್ ಮಾಡುತ್ತಿರುತ್ತಾನೆ. ಕೈಬಿಟ್ಟು ಚಲಾಯಿಸುವುದು, ಫ್ರಂಟ್ ವ್ಹೀಲಿಂಗ್, ಬ್ಯಾಕ್ ವ್ಹೀಲಿಂಗ್ ಮಾಡುತ್ತ ತಾಯಿಗೆ ಹೆಮ್ಮೆಯಿಂದ ತೋರಿಸುತ್ತಾನೆ. ಕೊನೆಯಲ್ಲಿ ತನ್ನ ಹಲ್ಲು ಮುರಿದುಹೋಗಿದೆ ಎಂದು ನೋವಿನಿಂದ ಹೇಳಿಕೊಳ್ಳುತ್ತಾನೆ.
ಗಿರಿನಗರದಲ್ಲಿ ಭಾನುವಾರವಷ್ಟೇ ಬೈಕ್ ವ್ಹೀಲಿಂಗ್ ಮಾಡುತ್ತ ಬಂದ ಯುವಕ ಕಾರಿಗೆ ಡಿಕ್ಕಿ ಹೊಡೆಸಿದ್ದಾನೆ.
ಇಂದು ಹಾರ್ನ್ ಬಳಸದೆ ಇರುವ ಸೋಮವಾರ..ದಯಮಾಡಿ ಆದಷ್ಟು ಹಾರ್ನ್ ಬಳಸದಿರಿ. It's NO Honking Monday, Please avoid honking.. pic.twitter.com/m5vJIrfedI
— BengaluruCityPolice (@BlrCityPolice) January 12, 2015 ಸೋಮವಾರ ಹಾರ್ನ್ ಮಾಡಬೇಡಿ : ಜನವರಿ 12ರಂದು ಹಾರ್ನ್ ರಹಿತ ಸೋಮವಾರ ಎಂದು ಬೆಂಗಳೂರು ನಗರ ಪೊಲೀಸ್ ಇಲಾಖೆ ಘೋಷಿಸಿದೆ. ಸಾರ್ವಜನಿಕರು ಸೋಮವಾರ ರಸ್ತೆಯಲ್ಲಿ ಸಂಚರಿಸುವಾಗ ಆದಷ್ಟು ಹಾರ್ನ್ ಮಾಡದೇ ಇರಲು ಪ್ರಯತ್ನಿಸಬೇಕು. ಅತಿ ಅಗತ್ಯ ಇರುವಾಗ ಮಾತ್ರ ಹಾರ್ನ್ ಬಳಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.












Click it and Unblock the Notifications