ಐಟಿ ಕಂಪೆನಿಗಳ ಮೇಲೆ ಉಗ್ರರ ದಾಳಿ: ಸುಳ್ಳು ವದಂತಿ ನಂಬಬೇಡಿ ಎಂದು ಪೊಲೀಸರ ಮನವಿ

ಬೆಂಗಳೂರು, ಮೇ 6: ಉಗ್ರರ ದಾಳಿಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ವಾಟ್ಸಾಪ್‌ನಂತಹ ಸಂದೇಶ ಸಂವಹನ ಸಾಧನಗಳಲ್ಲಿ ಹರಿದಾಡುತ್ತಿರುವ ವದಂತಿಗಳನ್ನು ನಂಬದಿರುವಂತೆ ಬೆಂಗಳೂರು ಪೊಲೀಸರು ಮನವಿ ಮಾಡಿದ್ದಾರೆ.

ಶ್ರೀಲಂಕಾದಲ್ಲಿ ಈಸ್ಟರ್ ಹಬ್ಬದ ದಿನದಂದು ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ 250ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಈ ದಾಳಿ ಬಳಿಕ ನಾಲ್ವರು ಉಗ್ರರು ಬೆಂಗಳೂರಿಗೆ ಬಂದಿದ್ದಾರೆ ಎಂಬ ಸುದ್ದಿ ಹರಡಿತ್ತು. ಅನೇಕರು ಉಗ್ರರ ಫೋಟೊ ಸಹಿತ ಅವುಗಳನ್ನು ಫೇಸ್‌ಬುಕ್‌, ಟ್ವಿಟ್ಟರ್, ವಾಟ್ಸಾಪ್ ಮುಂತಾದ ಕಡೆಗಳಲ್ಲಿ ಹಂಚಿಕೊಂಡಿದ್ದರು.

bengaluru police requested not to circulate hoax messages on terrorist attack on IT companies

ಈ ನಾಲ್ವರು ಉಗ್ರರು ಬೆಂಗಳೂರಿನ ವೈಟ್‌ಫೀಲ್ಡ್ ಮತ್ತು ಬೆಳ್ಳಂದೂರಿನಲ್ಲಿ ಪ್ರಮುಖ ಐಟಿ ಕಂಪೆನಿಗಳ ಮೇಲೆ ಮುಂದಿನ 15 ದಿನಗಳಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ. ಹೀಗಾಗಿ ನಿವಾಸಿಗಳು ಎಚ್ಚರಿಕೆಯಿಂದ ಇರಬೇಕು. ಈ ವ್ಯಕ್ತಿಗಳನ್ನು ಕಂಡರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ. ಬೆಳ್ಳಂದೂರು ಪೊಲೀಸರೇ ಈ ಶಂಕಿತ ಉಗ್ರರ ಫೋಟೊಗಳನ್ನು ಹಂಚಿಕೊಂಡಿದ್ದಾರೆ ಎಂದು ಸುದ್ದಿಗಳು ಹರಿದಾಡುತ್ತಿದ್ದವು.

ಇದು ಶುದ್ಧ ಸುಳ್ಳು ಸುದ್ದಿ ಎಂದು ಬೆಂಗಳೂರು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

'ಇದು ಸುಳ್ಳು ಸುದ್ದಿ. ಸಾರ್ವಜನಿಕರು ಇಂತಹ ಸುಳ್ಳು ವದಂತಿಗಳಿಗೆ ಕಿವಿಕೊಡಬಾರದು. ಮತ್ತು ಇವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಾರದು. ಸುಳ್ಳು ವದಂತಿಗಳನ್ನು ನಂಬಬೇಡಿ ಮತ್ತು ಪ್ರೋತ್ಸಾಹಿಸಬೇಡಿ' ಎಂದು ಪೊಲೀಸರು ಮನವಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+