ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿಯಮ ಉಲ್ಲಂಘಿಸಿದ ಡ್ಯಾನ್ಸ್‌ ಬಾರ್‌ ಮೇಲೆ ದಾಳಿ: 74 ಮಹಿಳೆಯರ ರಕ್ಷಣೆ

|
Google Oneindia Kannada News

ಬೆಂಗಳೂರು, ಜೂನ್ 29: ಕಾನೂನು ನಿಯಮ ಉಲ್ಲಂಘಿಸಿ ನಡೆಸುತ್ತಿದ್ದ ಡ್ಯಾನ್ಸ್‌ ಬಾರ್ ಮೇಲೆ ದಾಳಿ ನಡೆಸಿದ ಪೊಲೀಸರು 74 ಮಂದಿ ಮಹಿಳೆಯರನ್ನು ರಕ್ಷಿಸಿದ್ದು, 53 ಮಂದಿಯನ್ನು ಬಂಧಿಸಿದ್ದಾರೆ.

ಬೆಂಗಳೂರು ನಗರ ಜೀವನ ಭೀಮನಗರ ಪೊಲೀಸ್ ಠಾಣಾ ಸರಹದ್ದಿನ ದೊಮ್ಮಲೂರು ರಿಂಗ್ ರಸ್ತೆಯಲ್ಲಿರುವ CHEF INN REGENCY ಎಂಬಲ್ಲಿ ಮಹಿಳೆಯರನ್ನು ಇರಿಸಿಕೊಂಡು ಪರವಾನಗಿ ನಿಬಂಧನೆಗಳನ್ನು ಉಲ್ಲಂಘನೆ ಮಾಡಿ ಅಕ್ರಮವಾಗಿ ಡ್ಯಾನ್ಸ್‌ಬಾರ್ ನಡೆಸುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಕೇಂದ್ರ ಅಪರಾಧ ವಿಭಾಗದ ಪೊಲೀಸರುಕ್ಷಿಪ್ರ ಕಾರ್ಯಾಚರಣೆ ನಡೆಸಿ, ಅಕ್ರಮ ಡ್ಯಾನ್ಸ್ ಬಾರ್ ನಡೆಸುತ್ತಿದ್ದ ಆರೋಪಿಗಳಾದ

ಪಬ್‌ನಲ್ಲಿ ಏಕಾಏಕಿ ಬಂದು ಯುವತಿಯನ್ನು ತಬ್ಬಿದ ಅಪರಿಚಿತ, ನಡೆದಿದ್ದೇನು?ಪಬ್‌ನಲ್ಲಿ ಏಕಾಏಕಿ ಬಂದು ಯುವತಿಯನ್ನು ತಬ್ಬಿದ ಅಪರಿಚಿತ, ನಡೆದಿದ್ದೇನು?

ದಿನೇಶ ಬಿನ್ ಪೂವಯ್ಯ, ದಿನೇಶ್‌ಕುಮಾರ್, ರಿಯಾಜ್‌ವುದ್ದೀನ್ ಬಿನ್ ಅಬ್ಬಾಸ್ ಖಾನ್ , ಪ್ರಕಾಶ್‌ದತ್ ಜೋಷಿ, ಹೆಗ್ಯಾರಾಜ್ ಜೋಷಿ, ಡ್ಯಾನ್ಸ್‌ಬಾರ್‌ನಲ್ಲಿದ್ದ 48 ಜನ ಗಿರಾಕಿಗಳು ಸೇರಿದಂತೆ ಒಟ್ಟು 53 ಜನರನ್ನು ದಸ್ತಗಿರಿ ಮಾಡಿದ್ದಾರೆ.

Bengaluru police raid dance bar 74 women rescued

ಆರೋಪಿಗಳಿಂದ 1,04,000 ರೂ ನಗದು ಹಣವನ್ನು ವಶಕ್ಕೆ ಪಡೆದಿರುತ್ತದೆ. ಡ್ಯಾನ್ಸ್‌ಬಾರ್‌ಗೆ ಬರುವ ಗಿರಾಕಿಗಳ ಜೊತೆ ಡ್ಯಾನ್ಸ್ ಮಾಡಲು ಕಳುಹಿಸಿಕೊಡಲು ಇರಿಸಿಕೊಂಡಿದ್ದ ಸ್ಥಳೀಯ ಹಾಗೂ ಹೊರ ರಾಜ್ಯದ 74 ಮಹಿಳೆಯರನ್ನು ಸಂರಕ್ಷಣೆ ಮಾಡಲಾಗಿರುತ್ತದೆ. ಈ ಸಂಬಂಧ ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

ಈ ಕಾರ್ಯಚರಣೆಯನ್ನು ಬೆಂಗಳೂರು ನಗರದ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾದ ಬಿ.ಆರ್.ರವಿಕಾಂತೇಗೌಡ, ಐಪಿಎಸ್ ಮತ್ತು ಉಪ ಪೊಲೀಸ್ ಆಯುಕ್ತರಾದ ಗಿರೀಶ್.ಎಸ್, ಐಪಿಎಸ್ ರವರ ನೇರ ಮಾರ್ಗದರ್ಶನದಲ್ಲಿ, ಸಿಸಿಬಿ ಘಟಕ ವಿಶೇಷ ವಿಚಾರಣಾ ದಳದ ಸಹಾಯಕ ಪೊಲೀಸ್ ಆಯುಕ್ತರಾದ ಎನ್.ಹೆಚ್.ರಾಮಚಂದ್ರಯ್ಯ ರವರ ನೇತೃತ್ವದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ವಿ.ನಾರಾಯಣಸ್ವಾಮಿ ಮತ್ತು ಎ.ಪಿ.ಕುಮಾರ್,ಪಿ.ಐ ಮತ್ತು ಸಿಬ್ಬಂಧಿಗಳಾದ ರವರುಗಳು ಕೈಗೊಂಡಿರುತ್ತಾರೆ.

English summary
Bengaluru police raid dance bar 74 women rescued in Jeevan bhimana nagar and recovered 1.4 lakh rupees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X