• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟಿಕ್‍ಟಾಕ್‍ಗೆ ಬೆಂಗಳೂರು ನಗರ ಪೊಲೀಸರ ಸೇರ್ಪಡೆ

|

ಬೆಂಗಳೂರು ಫೆಬ್ರವರಿ 7: ಕಾನೂನು ಅರಿವಿಗಾಗಿ ಸಾಮಾಜಿಕ ಜಾಲತಾಣಗಳನ್ನು ಅತ್ಯಂತ ಹೆಚ್ಚು ಬಳಸಿಕೊಳ್ಳುವ ಬೆಂಗಳೂರು ನಗರ ಪೊಲೀಸ್ ವಿಭಾಗವು, ಜನಪ್ರಿಯ ಸಣ್ಣ ವಿಡಿಯೋ ಹಂಚಿಕೆಯ ಸೋಶಿಯಲ್ ನೆಟ್‍ವರ್ಕ್ ವೇದಿಕೆಯಾಗಿರುವ ಟಿಕ್‍ಟಾಕ್‍ಗೂ ಪ್ರವೇಶ ಪಡೆದಿದೆ.

ಉತ್ತಮ ಸಮಾಜ ನಿರ್ಮಾಣಕ್ಕಾಗಿ ಸಾರ್ವಜನಿಕ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರೇರಕ ವಿಡಿಯೋಗಳನ್ನು ಟಿಕ್‍ಟಾಕ್ ಮೂಲಕ ಹಂಚುವ ಗುರಿಯನ್ನು ಬೆಂಗಳೂರು ಪೊಲೀಸ್ ವಿಭಾಗವು ಹೊಂದಿದೆ. ಅದಕ್ಕೆ ಪೂರಕವಾಗಿ ಇತ್ತೀಚಿನ ದಿನಗಳಲ್ಲಿ ವಿಭಾಗದ ವತಿಯಿಂದ ನಗರದಲ್ಲಿ ಆಯೋಜಿಸಲಾಗಿರುವ ಹಲವಾರು ಕಾರ್ಯಕ್ರಮಗಳ ಸಣ್ಣ ವಿಡಿಯೋಗಳನ್ನು ಟಿಕ್‍ಟಾಕ್‍ನಲ್ಲಿ ಅಪ್‍ಲೋಡ್ ಮಾಡಿ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ನಾಗರಿಕ ಕೇಂದ್ರಿತ ಹೊಸ ಯುಗದ ವಿಷಯಗಳನ್ನು ಬೆಂಗಳೂರು ಪೊಲೀಸರು ಇನ್ನು ಟಿಕ್‍ಟಾಕ್‍ನಲ್ಲಿ ಶೇರ್ ಮಾಡಲಿದ್ದಾರೆ.

ಬೆಂಗಳೂರು ಪೊಲೀಸರು ಟಿಕ್‍ಟಾಕ್‍ಗೆ ಸೇರುವ ಮೊದಲೇ ದೇಶದ ಹಲವು ರಾಜ್ಯಗಳ ಪೊಲೀಸ್ ವಿಭಾಗಗಳು ಟಿಕ್‍ಟಾಕ್ ವೇದಿಕೆಯನ್ನು ಉತ್ತಮ ಕಾರ್ಯಕ್ಕಾಗಿ ಬಳಸಿಕೊಳ್ಳುತ್ತಿವೆ. ಕೇರಳ ಪೊಲೀಸ್, ಉತ್ತರಾಖಂಡ ಪೊಲೀಸ್ ಹಾಗೂ ದುರ್ಗ್ ಪೊಲೀಸ್ ಇವುಗಳಲ್ಲಿ ಪ್ರಮುಖವಾದ ಪೊಲೀಸ್ ವಿಭಾಗಗಳಾಗಿವೆ.

ಹೊಸ ಸಾಮಾಜಿಕ ಜಾಲತಾಣದ ಪ್ರವೇಶದ ಕುರಿತು ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಐಪಿಎಸ್ "ಸಾಮಾಜಿಕ ಜಾಲತಾಣಗಳ ವೇದಿಕೆಯನ್ನು ಬಳಸಿಕೊಂಡು ಸಾರ್ವಜನಿಕ ಅರಿವು ಮೂಡಿಸಬಹುದು ಎಂಬುದರ ಬಗ್ಗೆ ಬೆಂಗಳೂರು ಪೊಲೀಸರಿಗೆ ಹೆಚ್ಚು ವಿಶ್ವಾಸವಿದೆ. ಅದೇ ರೀತಿ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಾಗೂ ವಿನೋದಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಸಾರ್ವಜನಿಕರ ಜತೆ ಸಂವಹನ ಮಾಡುವಲ್ಲಿ ಬೆಂಗಳೂರು ಪೊಲೀಸ್ ಕಮಿಷನರೇಟ್ ಉಳಿದೆಲ್ಲ ನಗರಗಳ ಪೊಲೀಸ್ ವಿಭಾಗಕ್ಕಿಂತ ಒಂದು ಹೆಜ್ಜೆ ಮುಂದಿದೆ. ಟಿಕ್‍ಟಾಕ್‍ಗೂ ಬೆಂಗಳೂರು ಪೊಲೀಸರು ಎಂಟ್ರಿ ಪಡೆದಿರುವುದು ಈ ಸಾಲಿಗೆ ಇತ್ತೀಚಿನ ಸೇರ್ಪಡೆಯಾಗಿದೆ. ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಪ್ರೇರಕವಾದ ವಿಡಿಯೋಗಳನ್ನು ಟಿಕ್‍ಟಾಕ್‍ನಲ್ಲಿ ಹಂಚುವ ಮೂಲಕ ಹೆಚ್ಚಿನ ಜಾಗೃತಿ ಮೂಡಿಸಲು ಸಾಧ್ಯವಿದೆ,'' ಎಂದು ಹೇಳಿದರು.

@blrcitypolice

Talent hits a target no one else can hit! Our intention to be with city and citizens! This melody interprets the same... Jotheyali Jothe Jotheyali...

♬ original sound - BENGALURUCITYPOLICE

ಈ ಕುರಿತು ಮಾತನಾಡಿದ ಟಿಕ್‍ಟಾಕ್ ವಕ್ತಾರರು "ಬೆಂಗಳೂರು ಪೊಲೀಸರು ಟಿಕ್‍ಟಾಕ್‍ಗೆ ಪ್ರವೇಶ ಪಡೆದಿರುವ ಬಗ್ಗೆ ನಮಗೆ ಅತೀವ ಸಂತಸವಿದೆ. ಸ್ಥಳೀಯ ವಿಚಾರಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವ ವಿಚಾರದಲ್ಲಿ ಟಿಕ್‍ಟಾಕ್ ಹೆಚ್ಚು ಕಾಳಜಿ ವಹಿಸುತ್ತಿದ್ದು, ಅದೇ ರೀತಿಯಲ್ಲಿ ಬೆಂಗಳೂರು ಪೊಲೀಸರಿಗೆ ಕಾನೂನು ಹಾಗೂ ಅದರ ಜಾರಿಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಟಿಕ್‍ಟಾಕ್ ನೆರವು ನೀಡಲಿದೆ. ಮುಂದಿನ ದಿನಗಳಲ್ಲಿ ಬೆಂಗಳೂರು ಪೊಲೀಸ್ ವಿಭಾಗದ ಮಾದರಿಯಲ್ಲೇ ಇನ್ನಷ್ಟು ಸಂಸ್ಥೆಗಳನ್ನು ಟಿಕ್‍ಟಾಕ್‍ನ ಭಾಗವಾಗಿಸುವುದರೊಂದಿಗೆ ಸಾಮಾಜಿಕ ಬದಲಾವಣೆಗೆ ಆದ್ಯತೆ ನೀಡಲಾಗುವುದು,'' ಎಂದು ನುಡಿದರು.

ಬೆಂಗಳೂರು ಪೊಲೀಸರನ್ನು ಟಿಕ್‍ಟಾಕ್‍ನಲ್ಲಿ ಫಾಲೋ ಮಾಡಲು ಇಲ್ಲಿಗೆ ಕ್ಲಿಕ್ ಮಾಡಿ: @blrcitypolice

ಐಒಎಸ್ ಹಾಗೂ ಗೂಗಲ್ ಪ್ಲೇನಿಂದ ಟಿಕ್‍ಟಾಕ್ ಅನ್ನು ಡೌನ್‍ಲೋಡ್ ಮಾಡಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಟಿಕ್‍ಟಾಕ್‍ನಲ್ಲಿ ಟಿಕ್‍ಟಾಕ್ ಇಂಡಿಯಾವನ್ನು ಫಾಲೋ ಮಾಡಿ.

ಟಿಕ್‍ಟಾಕ್ ಬಗ್ಗೆ:

ಮೊಬೈಲ್‍ನಲ್ಲಿ ಚಿತ್ರೀಕರಿಸಿರುವ ಸಣ್ಣ ವಿಡಿಯೋಗಳನ್ನು ಪ್ರಸರಣ ಮಾಡಲು ಇರುವ ಅತ್ಯಂತ ಪ್ರಶಸ್ತ ವೇದಿಕೆ ಟಿಕ್‍ಟಾಕ್. ಲಾಸ್ ಏಂಜಲೀಸ್, ನ್ಯೂಯಾರ್ಕ್, ಲಂಡನ್, ಪ್ಯಾರೀಸ್, ಬರ್ಲಿನ್, ದುಬೈ, ಮುಂಬಯಿ, ಸಿಂಗಾಪುರ, ಜಕಾರ್ತ, ಸಿಯೋಲ್ ಮತ್ತು ಟೋಕಿಯೋದಲ್ಲಿ ಟಿಕ್‍ಟಾಕ್ ಜಾಗತಿಕ ಕಚೇರಿಗಳನ್ನು ಹೊಂದಿದೆ.

English summary
Bengaluru police is active in socila media sites like Facebook, Twitter now department has opened in video sharing app Tiktok.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X