ಪೊಲೀಸರ ಪಂಜರ ಸೇರಿದ ಪಾರಿವಾಳ ಮಂಜ! ಈತ ಕದಿಯೋ ಸ್ಟೈಲೇ ಡಿಫ್ರೆಂಟು
ʼಪ್ರೀತಿಯ ಪಾರಿವಾಳ ಹಾರಿಹೋಯ್ತೋ ಗೆಳೆಯ..ʼ ಅನ್ನೋ ಹಾಡು ಸಖತ್ ಫೇಮಸ್. ಆದರೆ, ಈ ಪಾರಿವಾಳಗಳನ್ನೇ ಹಾರಿಸಿ ಬೆಂಗಳೂರಿನಲ್ಲಿ ಕಳ್ಳನೊಬ್ಬ ಹಲವು ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಈ ಕಥೆ ಕೇಳಿದವರು ನಾಳೆಯಿಂದ ಪಾರಿವಾಳ ಕಂಡ್ರೆ ಮೊದಲು ಓಡಿಸೋದು ಗ್ಯಾರಂಟಿ..
ಬೆಂಗಳೂರಿನಲ್ಲಿ ಕೆಲವರು ಪ್ಯಾಶನ್‌ಗಾಗಿ ಪಾರಿವಾಳಗಳನ್ನು ಸಾಕುವುದನ್ನು ನೋಡಿರುತ್ತೀವಿ. ಆದರೆ, ಖತರ್ನಾಕ್ ಕಳ್ಳನೊಬ್ಬ ಪಾರಿವಾಳಗಳನ್ನು ಬಳಸಿಕೊಂಡೇ ಸಿಲಿಕಾನ್ ಸಿಟಿಯಲ್ಲಿ ಕಳ್ಳತನ ಮಾಡುತ್ತಿರುವ ಅಚ್ಚರಿಯ ವಿಚಾರದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ.

ಸದ್ಯ ಸಿಟಿ ಮಾರ್ಕೆಟ್ ಪೊಲೀಸರು ಈ ಪ್ರತಿಭೆಯನ್ನು ಬಂಧಿಸಿದ್ದಾರೆ. ಈತನ ಹೆಸರು ಮಂಜು ಅಲಿಯಾಸ್ ಪಾರಿವಾಳ ಮಂಜ ಎನ್ನಲಾಗಿದೆ. ಈತ ತಮಿಳುನಾಡು ಮೂಲದವನ್ನು ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ. ಮೊದಲಿಗೆ ಪಾರಿವಾಳಗಳಿಗೆ ಚೆನ್ನಾಗಿ ಟ್ರೈನಿಂಗ್ ಕೊಡುತ್ತಿದ್ದ ಮಂಜ, ಅವುಗಳನ್ನು ಬೇರೆ ಮನೆಗಳ ಒಳಗೆ ಹೋಗಿ ಕೂರುವಂತೆ ಸಜ್ಜು ಮಾಡುತ್ತಿದ್ದ.
ಮಾಲೀಕನ ಅಣತಿಯಂತೆ ಪಾರಿವಾಳಗಳು ಹಲವರ ಮನೆಗಳ ಪ್ರಾಂಗಣ ತಲುಪಿ ಕೂರುತ್ತಿದ್ದವು. ಬಳಿಕ ಈತ ನಿಮ್ಮನೇಲಿ ನನ್ನ ಪಾರಿವಾಳ ಬಂದಿದೆ. ಅದನ್ನು ಹಿಡಿದುಕೊಂಡು ಹೋಗುತ್ತೇನೆಂದು ಹೇಳಿ ಮನೆಗಳನ್ನು ಪ್ರವೇಶಿಸುತ್ತಿದ್ದ. ಬಳಿಕ ಅಲ್ಲಿ ಬೆಲೆಬಾಳುವ ವಸ್ತುಗಳನ್ನು ಕದಿಯುತ್ತಿದ್ದ ಎಂಬ ವಿಚಾರ ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ.
ಕೆಲವರು ಪಾರಿವಾಳಗಳು ಬಂದಾಗ ಖುಷಿಯಿಂದ ಅವುಗಳಿಗೆ ಜಾಗ ನೀಡುತ್ತಾರೆ. ಆದರೆ, ಈ ಖತರ್ನಾಕ್ ಕಳ್ಳ ಪಾರಿವಾಳಗಳನ್ನೇ ತನ್ನ ಕೃತ್ಯಕ್ಕೆ ಬಳಸಿಕೊಂಡಿದ್ದಾನೆ ಎನ್ನಲಾಗಿದೆ. ಕೆ.ಆರ್.ಮಾರ್ಕೆಟ್, ಚಾಮರಾಜಪೇಟೆ, ಜಯನಗರ ಕಾಟನ್‌ಪೇಟೆ ಸೇರಿದಂತೆ ನಗರದ ಹಲವು ಭಾಗಗಳಲ್ಲಿ ಮಂಜ ಕಳ್ಳತನ ಮಾಡುತ್ತಿದ್ದನಂತೆ. ಇದೇ ರೀತಿ ಈತ ಬರೋಬ್ಬರಿ 30 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕದ್ದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಮಂಜ ಹಲವು ವರ್ಷಗಳಿಂದ ಈ ಕೃತ್ಯದಲ್ಲಿ ತೊಡಗಿದ್ದಾನೆ. ಕೆ.ಆರ್.ಮಾರುಕಟ್ಟೆ ವ್ಯಾಪ್ತಿಯ ಮನೆಯೊಂದರಲ್ಲಿ ಇಂತಹ ಪ್ರಕರಣ ದಾಖಲಾಗಿತ್ತು. ಪೊಲೀಸರು ಬಲೆ ಬಿದ್ದಾಗ ಪಾರಿವಾಳ ಮಂಜ ಸಿಕ್ಕಿಬಿದ್ದಿದ್ದಾನೆ. ವಿಚಾರಣೆ ನಡೆಸಿದಾಗ ಪಾರಿವಾಳದ ಕಥೆ ಹೇಳಿದ್ದಾನೆ. ನೂರಾರು ಗ್ರಾಂ ಚಿನ್ನಾಭರಣವನ್ನು ಪೊಲೀಸರು ಸದ್ಯ ವಶಕ್ಕೆ ಪಡೆದಿದ್ದಾರೆ. ಜೊತೆಗೆ ಪಾರಿವಾಳ ಮಂಜನನ್ನು ಪೊಲೀಸರು ಬೋನಿಗೆ ಹಾಕಿದ್ದಾರೆ.
ಬೆಂಗಳೂರಿನ ಕೇಂದ್ರಭಾಗದಲ್ಲೇ ಪಾರಿವಾಳ ಸಾಕುವವರ ಸಂಖ್ಯೆ ಹೆಚ್ಚಾಗಿದೆ. ಇದು ಟ್ರೆಂಡ್ ಕೂಡ ಆಗಿದೆ. ಪಾರಿವಾಳಗಳಿಗೆ ದೊಡ್ಡ ಅಭಿಮಾನಿ ಬಳಗವೇ ಇದ್ದು, ಅನೇಕರು ತಮ್ಮ ಮನೆಗಳ ಟೆರೇಸ್‌ನಲ್ಲಿ ಪಾರಿವಾಳಗಳಿಗೆ ಗೂಡು ನಿರ್ಮಿಸಿ ಅವುಗಳನ್ನು ಪೋಷಿಸುತ್ತಿದ್ದಾರೆ. ಪಾರಿವಾಳಗಳನ್ನು ಸಾಕಿ, ಟೂರ್ನಿಮೆಂಟ್ ಮಾದರಿಯಲ್ಲೇ ಅದ್ದೂರಿಯಾಗಿ ಅವುಗಳ ಸ್ಪರ್ಧೆ ಆಯೋಜಿಸುವ ಮೂಲಕ ನಡೆಸಿ ಖುಷಿಪಡುವವರಿದ್ದಾರೆ. ಆದರೆ, ಪಾರಿವಾಳ ಮಂಜ ಮಾಡಿರುವ ಈ ದುಷ್ಕೃತ್ಯವು ಪಾರಿವಾಳ ಸಾಕುವವರನ್ನು ತಲೆತಗ್ಗಿಸುವಂತೆ ಮಾಡಿದೆ.

ಮತ್ತೊಂದೆಡೆ ಪೊಲೀಸರು ಕೂಡ ಈ ಬಗ್ಗೆ ಬೆಂಗಳೂರು ನಿವಾಸಿಗಳಿಗೆ ಸಲಹೆ ನೀಡಿದ್ದು, ಈ ರೀತಿ ಪಾರಿವಾಳದ ಹೆಸರೇಳಿಕೊಂಡು ಯಾರಾದರೂ ನಿಮ್ಮ ಮನೆ ಪ್ರವೇಶಿಸಲು ಯತ್ನಿಸಿದರೆ ಅವರನ್ನು ಹಿಂದೂಮುಂದು ನೋಡದೆ ಒಳಗೆ ಬಿಟ್ಟುಕೊಳ್ಳಬೇಡಿ. ಸಾಧ್ಯವಾದರೆ ಪಾರಿವಾಳಗಳನ್ನು ಮೊದಲೇ ಓಡಿಸಿ ಎಂದಿದ್ದಾರೆ. ಕಳ್ಳತನಕ್ಕೆ ಪಾರಿವಾಳ ಬಳಸುವ ಕ್ರಿಮಿನಲ್ ಬುದ್ಧಿಗೆ ಪೊಲೀಸರು ಶಾಕ್ ಆಗಿರುವುದಂತೂ ನಿಜ!
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications