ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೌಡಿಗಳನ್ನು ಬೆಂಡೆತ್ತಲಿಕ್ಕೆ ಪೊಲೀಸ್ ಕಮೀಷನರ್ ಆರ್ಡರ್

|
Google Oneindia Kannada News

ಬೆಂಗಳೂರು, ಜು. 08: ಲಾಕ್ ಡೌನ್ ತೆರವು ಆಗುತ್ತಿದ್ದಂತೆ ರಾಜಧಾನಿಯಲ್ಲಿ ರೌಡಿಗಳ ಅಟ್ಟಹಾಸ ಮಿತಿ ಮೀರುತ್ತಿದೆ. ಕೇವಲ ಒಂದು ತಿಂಗಳಲ್ಲಿ ಬೆಂಗಳೂರಿನಲ್ಲಿ ರೌಡಿ ಹಿನ್ನೆಲೆಯುಳ್ಳ ಎಂಟು ಕೊಲೆ ಪ್ರಕರಣ ವರದಿಯಾಗಿವೆ. ರಾಜಧಾನಿಯಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಅನುಮಾನ ಮೂಡುವಂತಹ ಅಪರಾಧ ಕೃತ್ಯಗಳು ನಡೆದ ಬೆನ್ನಲ್ಲೇ ರೌಡಿಗಳ ಹುಡುಕಾಟಕ್ಕೆ ಬೆಂಗಳೂರು ಪೊಲೀಸರು ಸಜ್ಜಾಗಿದ್ದಾರೆ. ರೌಡಿ ಪಟ್ಟಿ ತಯಾರಿಸಿ ಕ್ರಮ ಜರುಗಿಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ ಪಂತ್ ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಠಾಣಾವಾರು ರೌಡಿಗಳ ಪಟ್ಟಿ ತಯಾರಿಸಿ ಚಟುವಟಿಕೆ ಮೇಲೆ ನಿಗಾ ಇಡುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ಬೆಂಗಳೂರಿನ ಅಪರಾಧ ಚಟುವಟಿಕೆ ಸಂಪೂರ್ಣ ನಿಯಂತ್ರಣದಲ್ಲಿತ್ತು. ಲಾಕ್ ಡೌನ್ ಸಡಿಲಗೊಳ್ಳುತ್ತಿದ್ದಂತೆ ಬೆಂಗಳೂರಿನಲ್ಲಿ ಅನೇಕ ಬೀದಿ ಹೆಣಗಳು ಬಿದ್ದವು. ಅದರಲ್ಲೂ ರೌಡಿಗಳೇ ಕೊಲೆ ಪ್ರಕರಣಗಳಲ್ಲಿ ಶಾಮೀಲಾಗಿರುವುದು ಪೊಲೀಸರ ನಿದ್ದೆ ಗೆಡಸಿದೆ. ಮಾತ್ರವಲ್ಲ, ಬೆಂಗಳೂರು ಜನರು ಕೂಡ ಬೆಚ್ಚಿ ಬಿದ್ದಿದ್ದಾರೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಬಹುತೇಕ ಕೊಲೆ ಪ್ರಕರಣಗಳಲ್ಲಿ ರೌಡಿಗಳೇ ಶಾಮೀಲಾಗಿರುವುದು ಪೊಲೀಸರ ನಿದ್ದೆ ಗೆಡಿಸಿದೆ.

ಪ್ರಕರಣ -1

ಪ್ರಕರಣ -1

ದಿನಾಂಕ - ಜೂನ್ 16,

ಮೃತ ವ್ಯಕ್ತಿ - ಕಾರ್ತಿಕ್ ಎಂಬ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರ ಹತ್ಯೆ

ಕಾರಣ - ಫ್ಲಾಟ್ ವಿಚಾರಕ್ಕೆ ಗಲಾಟೆ

ಕೊಲೆ ನಡೆದ ಸ್ಥಳ - ಜಿಕೆಡಬ್ಲೂ ಲೇಔಟ್, ರಾಜಗೋಪಾಲನಗರ,

ಕೊಲೆ ಆರೋಪಿಗಳು - ರಿಯಲ್ ಎಸ್ಟೇಟ್ ಏಜೆನ್ಸಿ ಮೋಹನ್ ಮತ್ತು ನಾಗರಾಜ್ ಎಂಬುವರಿಂದ ಹತ್ಯೆ

ಠಾಣೆ - ರಾಜಗೋಪಾಲನಗರ ಪೊಲೀಸ್ ಠಾಣೆ

ಕೇಸ್ ಸ್ಟೇಟಸ್ - ಆರೋಪಿಗಳ ಸೆರೆ

 ಪ್ರಕರಣ-2

ಪ್ರಕರಣ-2

ದಿನಾಂಕ- ಜೂನ್ 22,

ಮೃತ ವ್ಯಕ್ತಿ- ಸೈಯದ್ ಕರೀಮ್ ಅಲಿ, ರೌಡಿ ಶೀಟರ್

ಕಾರಣ - ರಶೀದ್ ಮಲಬಾರಿ ಬಂಟ ಅನೀಸ್ ಪತ್ನಿ ಜೊತೆ ಕ್ರಮ ಸಂಬಂಧ

ಕೊಲೆ ನಡೆದ ಸ್ಥಳ- ಗೋವಿಂದಪುರದ ಆಂಜನೇಯಸ್ವಾಮಿ ದೇಗುಲ,

ಕೊಲೆ ಆರೋಪಿಗಳು- ಅನೀಸ್ ಸಹಚರರು.. ಆರೋಪಿ-ಮೊಹ್ಮದ್ ಸಲೀಂ ಬಂಧನ

ಠಾಣೆ- ಗೋವಿಂದಪುರ ಪೊಲೀಸ್ ಠಾಣೆ,

ಕೇಸ್ ಸ್ಟೇಟಸ್: ಆರೋಪಿಗಳ ಬಂಧನ,

 ಪ್ರಕರಣ-3

ಪ್ರಕರಣ-3

ದಿನಾಂಕ-ಜೂನ್ 22,

ಮೃತ ವ್ಯಕ್ತಿ- ತಮಿಳುನಾಡಿನ 32 ವರ್ಷದ ಆಶಾ

ಕಾರಣ- ಅಕ್ರಮ ಸಂಬಂಧ

ಕೊಲೆ ಆರೋಪಿ- ಮಣಿ. ಮೃತ ಮಹಿಳೆಯ ಪತಿ

ಠಾಣೆ- ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಕೇಸ್ ಸ್ಟೇಟಸ್ - ಆರೋಪಿ ಸೆರೆ,

ಪ್ರಕರಣ-4

ಪ್ರಕರಣ-4

ದಿನಾಂಕ- ಜೂನ್, 23

ಮೃತ ವ್ಯಕ್ತಿ- ಕಾಮತ್

ಕಾರಣ- ಅಕ್ರಮ ಸಂಬಂಧ ಶಂಕೆ

ಕೊಲೆ ನಡೆದ ಸ್ಥಳ- ಐಟಿಸಿ ಕಾಲೋನಿ ಬಳಿ ಹತ್ಯೆ

ಕೊಲೆ ಆರೋಪಿ- ಆರೋಪಿಗಳ ಪತ್ತೆಗಾಗಿ ಪೊಲೀಸರ ಹುಡುಕಾಟ

ಠಾಣೆ- ಪುಲಿಕೇಶಿನಗರ ಠಾಣೆಯಲ್ಲಿ ಪ್ರಕರಣ ದಾಖಲೆ

ಪ್ರಕರಣ-5

ದಿನಾಂಕ- ಜೂನ್. 24,

ಮೃತ ವ್ಯಕ್ತಿ- ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್

ಕಾರಣ- ರಾಜಕೀಯ ಒಳ ಸಂಚು ಮತ್ತು ಹಳೆ ದ್ವೇಷ

ಕೊಲೆ ನಡೆದ ಸ್ಥಳ - ಛಲವಾದಿ ಪಾಳ್ಯದ ಫ್ಲವರ್ ಗಾರ್ಡನ್

ಕೊಲೆ ಆರೋಪಿಗಳು- ಪೀಟರ್, ಮಾಲಾ, ಅರುಳ್, ಸ್ಟೀಫನ್, ಸೂರ್ಯ ಮತ್ತು ಸಹಚರರು

ಠಾಣೆ- ಕಾಟನ್ ಪೇಟೆ ಪೊಲೀಸ್ ಠಾಣೆ,

ಕೇಸ್ ಸ್ಟೇಟಸ್ - ಆರೋಪಿಗಳ ಸೆರೆ

 ಪ್ರಕರಣ-6

ಪ್ರಕರಣ-6

ದಿನಾಂಕ - ಜೂನ್ 30,

ಮೃತ ವ್ಯಕ್ತಿ- ರೌಡಿ ಶೀಟರ್ ಉದಯ್

ಕಾರಣ-ಕುಡಿದು ಊರ ಹುಡುಗರೊಂದಿಗೆ ಗಲಾಟೆ ಮಾಡಿಕೊಂಡಿದ್ದ ಉದಯ್

ಠಾಣೆ- ಆನೆಕಲ್ ಪೊಲೀಸ್ ಠಾಣೆ

Recommended Video

ಸುಮಲತಾ ಅವರು ಮನೆಒಡೆಯುವ ಕೆಲಸ ಮಾಡ್ತಿದ್ದಾರೆ ಎಂದ ರೇವಣ್ಣ | Oneindia Kannada
 ಪ್ರಕರಣ-7

ಪ್ರಕರಣ-7

ದಿನಾಂಕ, ಜುಲೈ -2

ಮೃತ ವ್ಯಕ್ತಿ- ಮದನ್ (36)

ಕಾರಣ- ಹಳೆ ದ್ವೇಷ ಹಿನ್ನೆಲೆ

ಕೊಲೆ ನಡೆದ ಸ್ಥಳ- ಬನಶಂಕರಿ ಮೆಟ್ರೋ ನಿಲ್ದಾಣದ ಬಳಿ

ಕೊಲೆ ಆರೋಪಿಗಳು- ಶಾಂತಿನಗರದಲ್ಲಿ ಕೊಲೆಯಾಗಿದ್ದ ರೌಡಿ ಶೀಟರ್ ಶಾಂತಿನಗರ ಲಿಂಗನ ಸಹಚರರು ಎಂದು ಶಂಕೆ

ಠಾಣೆ- ಜಯನಗರ ಪೊಲಿಸ್ ಠಾಣೆ


ಪ್ರಕರಣ-8

ದಿನಾಂಕ- ಜುಲೈ 3,

ಮೃತ ವ್ಯಕ್ತಿ - ಕೃಷ್ಣಮೂರ್ತಿ

ಕಾರಣ- ಎರಡನೇ ಪತ್ನಿ ರೂಪಿಸಿದ ಸಂಚು,

ಕೊಲೆ ನಡೆದ ಸ್ಥಳ- ಕಾವಲ್ ಭೈರಸಂದ್ರದ ಅಂಬೇಡ್ಕರ್ ಕಾಲೇಜು ಮುಂಭಾಗ,

ಠಾಣೆ- ಡಿಜೆ ಹಳ್ಳಿ ಪೊಲೀಸ್ ಠಾಣೆ,

English summary
Bengaluru city police commissioner Kamal Pant IPS order about Bengaluru crime control know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X