Bengaluru Pink Line Metro: ಮೆಟ್ರೋ ಯಶಸ್ವಿ ಪರೀಕ್ಷೆಯ ವರದಿ ಸಲ್ಲಿಕೆ, ಜುಲೈನಲ್ಲಿ ಗುಡ್ನ್ಯೂಸ್ ಸಾಧ್ಯತೆ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಒಂದೊಂದೇ ನಮ್ಮ ಮೆಟ್ರೋ ಮಾರ್ಗಗಳು ಅಂತಿಮ ಘಟ್ಟಕ್ಕೆ ಬರುತ್ತಿವೆ. ಗುಲಾಬಿ ಮಾರ್ಗದ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಜ್ಜಾಗಿದೆ. ಅದಕ್ಕೂ ಮುನ್ನ ಗುಲಾಬಿ ಡ್ರೈವರ್ಲೆಸ್ ರೈಲುಗಳ ಕುರಿತು ವಿವಿಧ ಪರೀಕ್ಷೆಗಳನ್ನು ನಡೆಸಲಾಯಿತು. ಇತ್ತೀಚೆಗೆ ನಡೆಸಲಾದ 12 ದಿನಗಳ ಮಹತ್ವದ ಆಸಿಲೇಶನ್ (ಕಂಪನ) ಪರೀಕ್ಷೆ ಸಹ ಯಶಸ್ವಿಯಾಗಿದೆ. ಈ ಮೂಲಕ ಕಾಳೇನ ಅಗ್ರಹಾರ-ತಾವರೆಕರೆ ವರೆಗಿನ ಎತ್ತರಿಸಿದ ಮಾರ್ಗದ ಲೋಕಾರ್ಪಣೆಗೆ ದಿನಗಳು ಸನ್ನಿಹಿತವಾಗಿವೆ.
ಕಳೆದ ಮೇ ತಿಂಗಳಲ್ಲಿ ತೆರೆಯಬೇಕಿದ್ದ 7.5 ಕಿಲೋ ಮೀಟರ್ ನ ಎತ್ತರಿಸಿದ (ಕಾಳೇನ ಅಗ್ರಹಾರ-ತಾವರೆಕರೆ) ಗುಲಾಬಿ ಮಾರ್ಗವು ಕಾರಣಾಂತರಗಳಿಂದ ಆಗಲಿಲ್ಲ. ರೈಲ್ವೆ ವಿನ್ಯಾಸ, ಮಾನದಂಡ ಸಂಸ್ಥೆ (DRSO) ಜೂನ್ 28ರಿಂದ ಒಟ್ಟು 12 ದಿನಗಳ ಕಾಲ ಆಸಿಲೇಶನ್ (ಕಂಪನ) ಪರೀಕ್ಷೆ ನಡೆಸಿತ್ತು. ಅದರ ಯಶಸ್ವಿ ವರದಿಯ ಜೂನ್ 4ರಂದು ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ (BMRCL) ದೊರೆತಿದೆ. ಸದ್ಯ ಈ ವರದಿಯನ್ನು ನಮ್ಮ ಮೆಟ್ರೋ ಅಧಿಕಾರಿಗಳು ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (CMRS) ಅವರಿಗೆ ಸಲ್ಲಿಸಿದ್ದಾರೆ.

ಮಹತ್ವದ ಪರೀಕ್ಷೆ ಯಶಸ್ವಿ
ಪ್ರಾಯೋಗಿಕ ಸಂಚಾರ, ಸಿಗ್ನಲ್ ತಪಾಸಣೆ ಸೇರಿದಂತೆ ಎಲ್ಲ ವಿಧದ ಪರೀಕ್ಷೆಗಳು ಈಗಾಗಲೇ ಆಗಿವೆ. ಕೊನೆಗೆ ಉಳಿದಿದ್ದ ಅಸಿಲೇಶನ್ ಪರೀಕ್ಷೆ ಸಹ ಪೂರ್ಣಗೊಂಡಿದೆ. ಇದರೊಂದಿಗೆ ತುರ್ತು ಬ್ರೇಕ್ ಸಿಸ್ಟಮ್ ಪರೀಕ್ಷೆಗಳನ್ನು ಸಹ ನಡೆಸಲಾಗಿತ್ತು. ಇದರು ಮೆಟ್ರೋ ರೈಲು ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಮಹತ್ವದ ಪರೀಕ್ಷೆಯಾಗಿದೆ.
ಇನ್ನೂ ಮೆಟ್ರೋ ಅಧಿಕಾರಿಗಳಿಗೆ ದೊರೆತ DRSO ಅನುಮೋದಿತ ವರದಿಯಲ್ಲಿ ಮೆಟ್ರೋ ರೈಲಿನ ವೇಗಕ್ಕೆ ನಿರ್ಬಂಧ ವಿಧಿಸಿಲ್ಲ. ಪ್ರತಿ ಗಂಟೆಗೆ 90 ಕಿಲೋ ಮೀಟರ್ ವೇಗದಲ್ಲಿ ಸಂಚರ ಮಾಡಿದರೂ ಸಹಿ ಅಡ್ಡಿ ಇಲ್ಲವೆಂದು ಅಧಿಕಾರಿಗಳು ಅನುಮೋದಿತ ವರದಿಯಲ್ಲಿ ತಿಳಿಸಿದ್ದಾರೆ.
ಮುಂದಿನ ಜುಲೈ ತಿಂಗಳಲ್ಲೇ ಗುಡ್ನ್ಯೂಸ್..
ಮುಂದಿನ ಜುಲೈ ತಿಂಗಳಲ್ಲಿ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಗುವ ಸಾಧ್ಯತೆ ಇದೆ. ಏಕೆಂದರೆ ಜುಲೈನಲ್ಲಿ ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (CMRS) ವರದಿಗೆ ಅನುಮೋದನೆ ನೀಡುವ ಸಾಧ್ಯತೆ ಇದೆ. ಅದಕ್ಕು ಮೊದಲು ರೋಲಿಂಗ್ ಸ್ಟಾಕ್ ರೈಲುಗಳು, ರೈಲು ಸ್ವಚ್ಛತೆ, ವಾಟರ್ಜೆಟ್, ಇನ್ನಿತರ ನಿರ್ವಹಣಾ ಸೌಲಭ್ಯಗಳನ್ನು ಪರಿಶೀಲಿಸಲಿದ್ದಾರೆ. ಇದೆಲ್ಲ ಆಗಿ ಅನುಮೋದನೆ ದೊರೆಯುತ್ತಿದ್ದಂತೆ ಆಗಸ್ಟ್ 15ರಂದು ಬನ್ನೇರುಘಟ್ಟ ರಸ್ತೆಯ ಗುಲಾಬಿ ಮಾರ್ಗವು ತೆರೆಯಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಸದ್ಯ ಈ ಮಾರ್ಗವು ಕಾಳೇನ ಅಗ್ರಹಾರದಿಂದ ತಾವರೆಕೆರೆ ವರೆಗಿನ ಮೊದಲ ಹಂತ ಮಾತ್ರ ಲೋಕಾರ್ಪಣೆಗೊಳ್ಳಲಿದೆ. ಇದೇ ಡಿಸೆಂಬರ್ 2026ರಕ್ಕೆ ಭೂಗತ ಮಾರ್ಗ ತಾವರೆಕೆರೆ-ನಾಗವಾರವರೆಗಿನ 13 ಕಿಲೋ ಮೀಟರ್ ಮಾರ್ಗ ತೆರೆಯಲು ಸಿದ್ಧತೆ ಸಹ ನಡೆಸಲಾಗಿದೆ.
ಆರ್.ವಿ.ರಸ್ತೆಯಿಂದ ಹಸಿರು ಮಾರ್ಗದಲ್ಲಿ (ಮಾದಾವರ-ರೇಷ್ಮೆ ಸಂಸ್ಥೆ) ಇಂಟರ್ ಚೇಂಜ್ ನಿಲ್ದಾಣ ಇದ್ದು ಅಲ್ಲಿಂದ ಬೊಮ್ಮಸಂದ್ರ ಕಡೆಗೆ ಹೋಗುವವರು ಹಳದಿ ಮೆಟ್ರೋ ಲೈನ್ ಅನುಸರಿಸುತ್ತಾರೆ. ಈ ಹಳದಿ ಮೆಟ್ರೋ ಮಾರ್ಗದ ಜಯದೇವ ಆಸ್ಪತ್ರೆ ಮೆಟ್ರೋ ನಿಲ್ದಾಣವನ್ನು ಈ ಗುಲಾಬಿ ಮಾರ್ಗವು ಸಂಧಿಸುತ್ತದೆ. ಜಯದೇವ ಇಂಟರ್ಚೇಂಜ್ ನಿಲ್ದಾಣವಾಗಲಿದೆ.
ನಮ್ಮ ಮೆಟ್ರೋ ಗುಲಾಬಿ ಮಾರ್ಗದಲ್ಲಿ ಮೂಲ ಮಾದರಿಯ ಮೆಟ್ರೋ ರೈಲು ಸಂಚಾರ ನಡೆಸಲಿವೆ. ಫೆಬ್ರವರಿಯಲ್ಲಿ ಮತ್ತೆ ಎರಡು ರೈಲುಗಳು ಆಗಮಿಸಿದ್ದು, ಇತ್ತಿಚೆಗೆ ನೇರಳೆ ಹಾಗೂ ಹಸಿರು ಮಾರ್ಗಕ್ಕಾಗಿ ಎರಡು ಡಿಟಿಜಿ ರೈಲುಗಳನ್ನು ರವಾನಿಸಲಾಗಿದೆ. ಅವುಗಳ ಪರೀಕ್ಷೆ ಪ್ರಗತಿಯಲ್ಲಿದ್ದು, ಶೀಘ್ರವೇ ಹೆಚ್ಚುವರಿ 21 ರೈಲುಗಳು ಬೆಂಗಳೂರಿಗೆ ಆಗಮಿಸಲಿದ್ದು, ಅವು ಒಂದು ಮತ್ತು ಎರಡನೇ ಮಾರ್ಗಕ್ಕೆ ನಿಯೋಜನೆಗೊಳ್ಳಲಿವೆ ಎಂದು BMRCL ಮೂಲಗಳು ತಿಳಿಸಿವೆ.














Click it and Unblock the Notifications