Bengaluru: ಹೊಸ ವರ್ಷದ ಹಿನ್ನೆಲೆ ಹಲವು ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ಮುಗಿಬಿದ್ದ ಜನ
ಇವತ್ತು 2024 ಜನವರಿ 1 ಹೊಸ ವರ್ಷ ಆರಂಭದ ಮೊದಲನೇ ದಿನ. ಇದು ವಾರದ ಆರಂಭವೂ ಹೌದು. ಈ ದಿನವನ್ನು ದೇವರ ಆಶೀರ್ವಾದದಿಂದ ಆರಂಭಿಸಲು ಜನ ಭಯಸುತ್ತಾರೆ. ಹೀಗಾಗಿ ಇಂದು ಬೆಂಗಳೂರಿನ ಹಲವು ಪ್ರಸಿದ್ಧ ದೇವಸ್ಥಾನಗಳಲ್ಲಿ ಜನ ಮುಗಿ ಬಿದ್ದಿರುವುದು ಕಂಡು ಬಂದಿದೆ.
ಹೌದು... ಬೆಂಗಳೂರಿನ ಹಲವಾರು ಪ್ರಸಿದ್ಧ ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಸಾಗರೋಪಾಗಿಯಲ್ಲಿ ಜನ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ. ಹೀಗೆ ಕಾಡು ಮಲ್ಲೇಶ್ವರ ದೇವಸ್ಥಾನ, ಇಸ್ಕಾನ್ ಟೆಂಪಲ್, ಶಿವೋಹಂ ಶಿವ ದೇವಾಲಯ, ಸೋಮೇಶ್ವರ ದೇವಸ್ಥಾನ ಸೇರಿದಂತೆ ನಾನಾ ದೇವಸ್ಥಾನಗಳಿಗೆ ಜನ ಭೇಟಿ ನೀಡುತ್ತಿದ್ದಾರೆ.

ಇನ್ನೂ ಚೊಕ್ಕನಾಥಸ್ವಾಮಿ ದೇವಾಲಯ, ನಂದಿ ದೇವಾಲಯ, ಬನಶಂಕರಿ ಅಮ್ಮನ ದೇವಸ್ಥಾನ, ಹುಳಿಮಾವು ಗುಹಾ ದೇವಾಲಯ, ಕೋಟೆ ವೆಂಕಟರಮಣ ದೇವಸ್ಥಾನ, ಶೃಂಗಗಿರಿ ಷಣ್ಮುಖ ದೇವಸ್ಥಾನ, ಗವಿ ಗಂಗಾಧರೇಶ್ವರ ದೇವಸ್ಥಾನ ಹೀಗೆ ನಗರದ ಪ್ರಸಿದ್ಧ ದೇವಸ್ಥಾನಗಳಿಗೆ ಭಕ್ತರು ಬೆಳಗಿನ ಪೂಜೆಯಲ್ಲಿ ಭಾಗವಹಿಸಿ ದೇವರ ಆಶೀರ್ವಾದದೊಂದಿಗೆ ಹೊಸ ವರ್ಷವನ್ನು ಆರಂಭಿಸುತ್ತಿದ್ದಾರೆ.
ಜೊತೆಗೆ ನಗರದ ರಾಗಿಗುಡ್ಡ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನ, ಬಿಗ್ ಬುಲ್ ಟೆಂಪಲ್ ಮತ್ತು ಗಣೇಶ್ ಟೆಂಪಲ್, ಅಭಯ ಆಂಜನೇಯ ದೇವಸ್ಥಾನ, ಗಾಳಿ ಆಜನೇಯ ದೇವಸ್ಥಾನಗಳಲ್ಲೂ ಭಕ್ತರು ನೂರಾರು ಸಂಖ್ಯೆಯಲ್ಲಿ ನೆರೆದಿರುವುದು ಕಂಡು ಬಂದಿದೆ.
ಹೊಸ ವರ್ಷದ ಹಿನ್ನೆಲೆ ವಿಶೇಷ ಪೂಜೆ:-
ಇಂದು ಹೊಸ ವರ್ಷದ ಆರಂಭದ ಹಿನ್ನೆಲೆಯಲ್ಲಿ ಹಲವಾರು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ. ಭಾನುವಾರವೇ ದೇವಸ್ಥಾನಗಳಲ್ಲಿ ಶುಚಿ ಕಾರ್ಯವನ್ನು ಪೂರ್ಣಗೊಳಿಸಲಾಗಿದ್ದು, ಇಂದು ಬೆಳಿಗ್ಗೆಯಿಂದಲೇ ವಿಶೇಷ ಪೂಜೆಗಳು ಅರಂಭವಾಗಿವೆ. ಜನರು ತಂಡೋಪತಂಡವಾಗಿ ದೇವಸ್ಥಾನಗಳಿಗೆ ಭೇಟಿ ನೀಡಿ ತಮ್ಮ ಕೋರಿಕೆಯೊಂದಿಗೆ ಪೂಜೆ ಸಲ್ಲಿಸುತ್ತಿದ್ದಾರೆ.

ಕೆಲವರು ವಿಶೇಷ ಪೂಜೆ ಮಾತ್ರವಲ್ಲದೆ ಅನ್ನದಾನ, ಬಟ್ಟೆ ಹಾಗೂ ದವಸಧಾನ್ಯಗಳನ್ನು ನೀಡಿದರು. ಇನ್ನೂ ಹಲವರು ಪ್ರಸಾದ ವಿರತಣೆಗೆ ದೇಣಿಗೆ ನೀಡುವ ಮೂಲಕ ಹೊಸ ವರ್ಷವನ್ನು ಆರಂಭಿಸಿದರು.
ಹೊಸ ವರ್ಷದ ಹಿನ್ನಲೆ ದೇವಾಲಯಗಳಲ್ಲಿ ವಿಶೇಷ ಅಲಂಕಾರ ಮಾಡಲಾಗಿದೆ. ಹಲವಾರು ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ. ಮಾತ್ರವಲ್ಲದೆ ಬಹತೇಕರು ಮನೆಯಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಹೂವು, ಹಣ್ಣು, ಬಟ್ಟೆ, ಪ್ರಸಾದದೊಂದಿಗೆ ಮನೆಗಳಲ್ಲಿ ಪೂಜೆ ಸಲ್ಲಿಸಲಾಗುತ್ತಿದೆ.
ಹೊಸ ವರ್ಷದ ಹಿನ್ನೆಲೆ ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿದೆ. ಹೂವಿನ ಮಾರುಕಟ್ಟೆಗಳಲ್ಲಿ ಖರೀದಿ ಜೋರಾಗಿದೆ. ಹಣ್ಣು, ಕಾಯಿ, ಪೂಜಾ ಸಾಮಾಗ್ರಿಗಳ ಮಾರಾಟ ಕಂಗೊಳಿಸುತ್ತಿದೆ.
ಗಿಫ್ಟ್ ಖರೀದಿ
ಇನ್ನೂ ಸ್ನೇಹಿತರಿಗೆ, ಸಂಬಂಧಿಗಳಿಗೆ ಹೊಸ ವರ್ಷದ ಉಡುಗೊರೆ ನೀಡಲು ಜನ ಹೆಚ್ಚಿನ ಸಂಖ್ಯೆಯಲ್ಲಿ ಗಿಫ್ಟ್ ಸೆಂಟರ್‌ಗಳಿಗೆ ಭೇಟಿ ನೀಡುತ್ತಿರುವುದು ಕಂಡು ಬಂದಿದೆ. ಗ್ರೀಟಿಂಗ್ ಕಾರ್ಟ್, ಡಾಲ್, ದೇವರ ಮೂರ್ತಿಗಳು, ಇನ್ನಿತರ ಉಡುಗೊರೆಗಳಿಗೆ ಬೇಡಿಕೆ ಹೆಚ್ಚಾಗಿದೆ.












Click it and Unblock the Notifications