ಬೆಂಗಳೂರು: ರೇಪ್ ಕೇಸಿನಲ್ಲಿ ಜಾಮೀನು ಕೊಟ್ರು, ಆತ ಮತ್ತೆ ರೇಪ್ ಮಾಡಿದ

ಈತನ ಹೆಸರು ಶಿವರಾಮ ರೆಡ್ಡಿ. 2014ರಲ್ಲೊಮ್ಮೆ ರೇಪ್ ಕೇಸಿನಲ್ಲಿ ಬಂಧಿತನಾಗಿದ್ದ. ಅದಾಗಿ ಆತನಿಗೆ ಒಂದು ವರ್ಷದಲ್ಲೇ ಬೇಲ್ ನೀಡಲಾಯಿತು. ಇದೀಗ ಆತನನ್ನು ಮತ್ತದೇ ರೇಪ್ ಕೇಸ್ ನಲ್ಲಿ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು, ಮಾರ್ಚ್ 9: ಈತನ ಹೆಸರು ಶಿವರಾಮ ರೆಡ್ಡಿ. 2014ರಲ್ಲೊಮ್ಮೆ ರೇಪ್ ಕೇಸಿನಲ್ಲಿ ಬಂಧಿತನಾಗಿದ್ದ. ಅದಾಗಿ ಆತನಿಗೆ ಒಂದು ವರ್ಷದಲ್ಲೇ ಬೇಲ್ ನೀಡಲಾಯಿತು. ಇದೀಗ ಆತನನ್ನು ಮತ್ತದೇ ರೇಪ್ ಕೇಸ್ ನಲ್ಲಿ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಪಿಜಿಯಲ್ಲಿ ವಾಸ್ತವ್ಯ ಹೂಡಿದ್ದ ಇಬ್ಬರನ್ನು ಈತ ರೇಪ್ ಮಾಡಿದ್ದಾನೆ ಎನ್ನಲಾಗಿದೆ. ಈ ಕುರಿತು ಎಚ್.ಎ.ಎಲ್ ಪೊಲೀಸ್ ಠಾಣಾ ವ್ಯಾಪ್ತಿಯ 23 ವರ್ಷದ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ನನಗೆ ಚಾಕು ತೋರಿಸಿ ಪಿಜಿ ಯಲ್ಲಿ ರೇಪ್ ಮಾಡಿದ್ದಾನೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾಳೆ.[ಬೆಂಗಳೂರು ಕಮಲಾ ನಗರದಲ್ಲಿ ರೌಡಿ ಶೀಟರ್ ಹತ್ಯೆ]

Bengaluru: Out on bail, rape accused arrested again

ಇದಾಗಿ ಮೂರು ದಿನದಲ್ಲಿ ಮತ್ತೊಬ್ಬರು ಯುವತಿ ಬಂದು ಇದೇ ರೀತಿ ದೂರು ನೀಡಿದ್ದಾರೆ. ನನ್ನಲ್ಲಿರುವ ಚಿನ್ನ, ಹಣವನ್ನು ದರೋಡೆ ಮಾಡಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಕೊನೆಗೆ ಪೊಲೀಸರು ಅನುಮಾನದ ಮೇರೆಗೆ ಶಿವರಾಮ ರೆಡ್ಡಿ ಫೋಟೋ ತೋರಿಸಿದಾಗ ಯುವತಿಯರು ಆತನನ್ನು ಗುರುತಿಸಿದ್ದಾರೆ ಎಂದು ಹೇಮಂತ್ ನಿಂಬಾಳ್ಕರ್ ತಿಳಿಸಿದ್ದಾರೆ.

ಮಂಗಳವಾರ ಆತನನ್ನು ಬಂಧಿಸಲು ಹೋದಾಗ ಮೂವರು ಪೊಲೀಸರ ಮೇಲೆ ಚಾಕುವಿನಿಂದ ದಾಳಿ ಮಾಡಿ ಗಾಯಗೊಳಿಸಿದ್ದಾನೆ. ಕೊನೆಗೆ ಆತನ ಕಾಲಿಗೆ ಗುಂಡು ಹೊಡೆದು ಬಂಧಿಸಲಾಗಿತ್ತು.[ಕೆ.ಆರ್. ಪುರಂನಲ್ಲಿ ಕೊಲೆ, ಮತ್ತೆ ಭುಗಿಲೆದ್ದ ಕಸ ವಿಲೇವಾರಿ ವಿವಾದ]

ಮೂಲತಃ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಶಿವರಾಮ ರೆಡ್ಡಿ 15 ವರ್ಷಗಳಿಂದ ಬೆಂಗಳೂರಿನಲ್ಲಿದ್ದಾನೆ. ಪಿಜಿಗಳಲ್ಲಿ ಏಕಾಂಗಿಯಾಗಿರುವ ಹುಡುಗಿಯರನ್ನು ಗುರಿಯಾಗಿಸಿ ಈತ ಕೃತ್ಯ ಎಸಗುತ್ತಾನೆ ಎಂದು ಪೊಲೀಸರು ತಿಳಿಸಿದ್ದಾರೆ.

31 ವರ್ಷದ ಶಿವರಾಮ ರೆಡ್ಡಿಯನ್ನು 2014ರ ಆಗಸ್ಟ್ ನಲ್ಲಿ ಬಂಧಿಸಲಾಗಿತ್ತು. ಈತನ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಮಹಿಳೆಯರ ದರೋಡೆ ಮುಂತಾದ 4 ಪ್ರಕರಣಗಳಿವೆ. ಹೀಗಿದ್ದೂ ಈತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.

ಆದರೆ ಅತ್ಯಾಚಾರ ಪ್ರಕರಣದ ಆರೋಪಿ ಇಷ್ಟು ಸುಲಭವಾಗಿ ಜೈಲಿಗೆ ಹಾಗೆ ಹೋಗಿ ಹೀಗೆ ಬರುತ್ತಾನೆ ಎಂದರೆ ಹೇಗೆ? ಎಂದು ಬೆಂಗಳೂರಿಗರು ಪ್ರಶ್ನೆ ಮಾಡುತ್ತಾರೆ. ಇಲ್ಲಿ ಪೊಲೀಸರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಆತನಿಗೆ ಬೇಲ್ ಸಿಗುವಂತೆ ಮಾಡಿದ್ದು ಯಾಕೆ? ಜೈಲಿನಿಂದ ಹೊರ ಬಂದ ನಂತರ ಆತನ ಮೇಲೆ ಯಾಕೆ ಕಣ್ಣಿಟ್ಟಿಲ್ಲ ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+