ಲಲನೆಯರ ಮಾರ್ಜಾಲ ನಡಿಗೆಗೆ ಪುಳಕವಾಯಿತೆನ್ನ ಮನ

ಬೆಂಗಳೂರು, ಡಿಸೆಂಬರ್, 11: ಮಿನಿಸ್ಕರ್ಟ್, ಸ್ಲೀವ್ ಲೆಸ್ ಟಾಪ್, ಲಾಂಗ್ ಮಿಡಿ, ಗಾಗ್ರಾ, ನವ ವಿನ್ಯಾಸದ ಫ್ಯಾಷನ್ ಟಾಪ್, ಒನ್ ಪೀಸ್ ಹೀಗೆ ಹಲವು ಫ್ಯಾಷನ್ ಭರಿತ ಧಿರಿಸುಗಳು ನಲ್ಲ, ನಲ್ಲೆಯರ ರ್ಯಾಂಪ್ ನಡಿಗೆ ಮೂಲಕ ಅನಾವರಣಗೊಂಡಿದ್ದು, ಡಿಸೆಂಬರ್ 10, 11 ಎರಡು ದಿನಗಳ ಕಾಲ ಲೇಕ್ ಸೈಡ್ ನಲ್ಲಿ ನಡೆದ ಒರಾಯನ್ ಫ್ಯಾಷನ್ ವೀಕ್ ನಲ್ಲಿ. ಇದರ ಗ್ರಾಂಡ್ ಫಿನಾಲೆ ಶನಿವಾರ ಜರುಗಲಿದೆ.

ಈ ವರ್ಷದ ಒರಾಯನ್ ಫ್ಯಾಷನ್ ವೀಕ್‍ ನಲ್ಲಿ ರಾಂಪ್ ಮೇಲೆ ಆಕರ್ಷಕವಾಗಿ ಹೆಜ್ಜೆಹಾಕುವ ಟಾಪ್ ಮಾಡೆಲ್ ಗಳ ಮೇಲೆ ಸ್ಯಾಂಡಲ್ ವುಡ್ ತಾರೆ ಸಂಜನಾ ಗಲ್ ರಾಣಿ ಮತ್ತು ಕೃತಿ ಕರಬಂಧ ಅವರು ಹೆಜ್ಜೆಹಾಕಿ ನೋಡುಗರನ್ನು ತನ್ನತ್ತ ಸೆಳೆದರು. ಡಿಸೆಂಬರ್ 12 ರಂದು ನಡೆಯುವ ಮುಕ್ತಾಯ ಸಮಾರಂಭದಲ್ಲಿ ಬಾಲಿವುಡ್‍ನ ಕಣ್ಮಣಿ ಮತ್ತು ಫ್ಯಾಶನ್ ಐಕಾನ್ ಚಿತ್ರಾಂಗದಾ ಸೇನ್ ಪಾಲ್ಗೊಳ್ಳಲಿದ್ದಾರೆ.[ಒರಾಯನ್ ಮಾಲ್ ನಲ್ಲಿ ಹೊಸ ಫ್ಯಾಷನ್ ಲೋಕ ಅನಾವರಣ]

ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಹಾಗೂ ಭಾರತೀಯ ಬ್ರಾಂಡ್ ಗಳು, ಹೊಚ್ಚಹೊಸ ಸಂಗ್ರಹಗಳು ಪ್ರದರ್ಶನಗೊಂಡವು. ಒರಾಯನ್ ಫ್ಯಾಷನ್ ವೀಕ್ -2015 ಬೆಂಗಳೂರು ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ ಅವರು ಸಂಯೋಜಿಸಿದ್ದು, 26 ರೂಪದರ್ಶಿಯರು ನಾನಾ ವಿಧದ ಧಿರಿಸು ಧರಿಸಿ ರಾಂಪ್ ಮೇಲೆ ಕಿಚ್ಚು ಹಚ್ಚಿದರು. ಬನ್ನಿ ಮನಸ್ಸಿಗೆ ಕಿಚ್ಚು ಹಚ್ಚಿದ ಫ್ಯಾಷನ್ ಲೋಕದ ಸುತ್ತಾ ಹೋಗಿ ಬರೋಣ.

ಫ್ಯಾಷನ್ ವೀಕ್ ನಲ್ಲಿ ಸಂಜನಾ ರಾಯ್

ಫ್ಯಾಷನ್ ವೀಕ್ ನಲ್ಲಿ ಸಂಜನಾ ರಾಯ್

ಮೂರು ದಿನಗಳ ಆಯೋಜನೆಗೊಂಡ ಫ್ಯಾಷನ್ ವೀಕ್ ನಲ್ಲಿ ಕನ್ನಡ ಚಿತ್ರರಂಗ ನಟಿ ಸಂಜನಾ ರಾಯ್ ರ್ಯಾಂಪ್ ವಾಕ್ ನಲ್ಲಿ ಕಾಣಿಸಿದ್ದು ಹೀಗೆ.

ಈ ಡ್ರೆಸ್ ಹೇಗಿದೆ?

ಈ ಡ್ರೆಸ್ ಹೇಗಿದೆ?


ಕಂದು ಮಿಶ್ರಿತ ಕೇಸರಿ ಬಣ್ಣದ ಚೂಡಿ, ಕಟ್ಟಿದ ಮುಡಿ, ಉದ್ದನೆಯ ಕಿವಿ ಓಲೆ, ತೀಡಿದ ಹುಬ್ಬು ಹೀಗೆ ಅಲಂಕೃತಗೊಂಡ ರೂಪದರ್ಶಿ ನೋಡುಗರಿಗೆ ಸೊಂಟದ ಮೇಲೆ ಫೋಸ್ ಕೊಟ್ಟಿದು ಹೀಗೆ

ಚೆಲುವೆಯ ನೋಡಿ

ಚೆಲುವೆಯ ನೋಡಿ

ಬಳುಕುವ ಬಳ್ಳಿಯನ್ನು ನಾಚಿಸುವಂತಹ ದೇಹ, ಕಂದು ಬಣ್ಣ ಒನ್ ಪೀಸ್ ಡ್ರೆಸ್, ತಲೆಗೆ ಕಟ್ಟಿದ ದುಪ್ಪಟ್ಟ, ಮೊಗದಲ್ಲೊಂದು ಸಣ್ಣ ನಗು, ಹೀಲ್ಡ್ ಸ್ಲಿಪ್ಪರ್ ಇದು ಇನ್ನೊಬ್ಬ ರೂಪದರ್ಶಿಯ ಧಿರಿಸು

ಚಳಿಗಾಲಕ್ಕೆ ಬೆಚ್ಚನೆಯ ಉಡುಗೆ

ಚಳಿಗಾಲಕ್ಕೆ ಬೆಚ್ಚನೆಯ ಉಡುಗೆ

ಚಳಿ, ಚಳಿ ಎಂದು ಹೇಳುತ್ತಾ ಮುದುರಿಕೊಳ್ಳುವ ತುಂಡುಡುಗೆ ಬೇಕೆನ್ನುವ, ಪಾರ್ಟಿ ಪ್ರಿಯರಿಗೆ ಅಂದದ, ಚಂದದ ಧಿರಿಸು ಇದು. ಹೋಗಿ ಕೊಂಡು ತನ್ನಿ

ಚಿಗುರು ಮೀಸೆಯ ಸುಂದರಾಂಗ

ಚಿಗುರು ಮೀಸೆಯ ಸುಂದರಾಂಗ

ಕೆದರಿದಂತೆ ಕಾಣುವ ಕೂದಲು, ಚಿಗುರು ಮೀಸೆ, ಗಡ್ಡ, ಕ್ರೀಮ್ ಬಣ್ಣದ ತುಂಬುತೋಳಿನ ಶರ್ಟ್, ಎರಡು ಭುಜಗಳ ಮೆತ್ತನೆಯ ಬಿಳಿ ಬಣ್ಣದ ಶ್ವೆಟರ್ ಧರಿಸಿದ ಚಿಗುರು ಮೀಸೆಯ ಸುಂದರಾಂಗನ ನೋಡಿ.

ತ್ರಿಬಲ್ ಧಮಾಕ

ತ್ರಿಬಲ್ ಧಮಾಕ

ಬಿಳಿ ಬಣ್ಣದ ಟೀ ಶರ್ಟ್, ಅದರ ಮೇಲೊಂದು ಕೆಂಪನೆಯ ಬಣ್ಣದ ಶರ್ಟ್, ಚಳಿಗಾಲದ ನಡುಗುವಿಕೆ, ಮಳೆಗಾಲದ ನೆನೆಯುವಿಕೆಯನ್ನು ಕಡಿಮೆ ಮಾಡುವ ವಾಟರ್ ಫ್ರೂಫ್ ಜರ್ಕಿನ್ ಇದು ಇನ್ನೊಂದು ನಮೂನೆಯ ಧಿರಿಸು. ಇಷ್ಟವಾಯಿತೇ?

ಭಲೇ ಜೋಡಿ, ಸೂಪರ್ ಡ್ರೆಸ್

ಭಲೇ ಜೋಡಿ, ಸೂಪರ್ ಡ್ರೆಸ್

ಜೋಡಿ ಹಕ್ಕಿಗಳಿಗೆ ಒಳ್ಳೆಯ ಕಾಂಬೀನೆಷನ್ ಧಿರಿಸನ್ನು ಇಬ್ಬರು ಮಾಡೆಲ್ ಗಳ ಮೂಲಕ ಪ್ರದರ್ಶಿಸಿದೆ ಪರಾಯನ್ ಮಾಲ್ ಫ್ಯಾಷನ್ ವೀಕ್.

ನಾನಾ ಸುರಸುಂದರಾಗಿಯರ ನಡುವೆ ಸಂಜನಾ ರಾಯ್

ನಾನಾ ಸುರಸುಂದರಾಗಿಯರ ನಡುವೆ ಸಂಜನಾ ರಾಯ್

ವಿವಿಧ ನಮೂನೆಯ ಧಿರಿಸು ಧರಿಸಿದ ನಾನಾ ಸುರಸುಂದರಾಗಿಯರ ನಡುವೆ ಸಂಜನಾ ರಾಯ್ ಹೆಜ್ಜೆ ಹಾಕಿದ್ದು, ಎಷ್ಟೋ ಹುಡುಗರ ಮನಸ್ಸಿಗೆ ಕಚಗುಳಿ ಇಟ್ಟಿದ್ದಂತೂ ನಿಜ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+