ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ 2 ಕಿ.ಮೀಗೆ 100 ರೂ. ನಿಗದಿಗೆ ಒಲಾ, ಉಬರ್, ರಾಪಿಡೋ ಒತ್ತಾಯ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 29: ಕರ್ನಾಟಕ ಸಾರಿಗೆ ಇಲಾಖೆ ಜೊತೆೆಗೆ ನಡೆದ ಸಭೆಯಲ್ಲಿ 2 ಕಿ.ಮೀಗೆ 100 ರೂಪಾಯಿ ನಿಗದಿಪಡಿಸುವಂತೆ ಓಲಾ, ಉಬರ್, ರಾಪಿಡೋ ಕಂಪನಿಗಳು ಬೇಡಿಕೆ ಸಲ್ಲಿಸಿವೆ.
ಬೆಂಗಳೂರಿನ ಎಂಎಸ್ ಕಟ್ಟಡದಲ್ಲಿ ಶನಿವಾರ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್ ವಿ ಪ್ರಸಾದ್ ಹಾಗೂ ಇಲಾಖೆ ಆಯುಕ್ತ ಟಿಹೆಚ್ಎಂ ಕುಮಾರ್ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಈ ವೇಳೆ ಒಲಾ, ಉಬರ್ ಹಾಗೂ ರಾಪಿಡೋ ಕಂಪನಿಗಳು ತಮ್ಮ ಮನವಿಯನ್ನು ಸಲ್ಲಿಸಿದವು.

Breaking: Ola, Uberನ 15 ದಿನದ ಗಡುವು ಅಂತ್ಯ: ಕನಿಷ್ಠ ದರ ನಿಗದಿಗೆ ಮುಂದಾದ ರಾಜ್ಯ ಸರ್ಕಾರBreaking: Ola, Uberನ 15 ದಿನದ ಗಡುವು ಅಂತ್ಯ: ಕನಿಷ್ಠ ದರ ನಿಗದಿಗೆ ಮುಂದಾದ ರಾಜ್ಯ ಸರ್ಕಾರ

ಸಿಲಿಕಾನ್ ಸಿಟಿಯಲ್ಲಿ ಗ್ರಾಹಕರು ಮತ್ತು ಚಾಲಕರನ್ನು ಹಲವು ನೆಪದಲ್ಲಿ ಸುಲಿಯುತ್ತಿದ್ದ ಕಂಪನಿಗಳಿಗೆ ಹೊಸ ದರ ನಿಗದಿಪಡಿಸುವುದಕ್ಕೆ ರಾಜ್ಯ ಸರ್ಕಾರವು ಮುಂದಾಗಿತ್ತು. 15 ದಿನದೊಳಗೆ ಹೊಸ ದರ ನಿಗದಿ ಮಾಡುವಂತೆ ಈ ಹಿಂದೆ ಹೈಕೋರ್ಟ್​​ ಸೂಚಿಸಿತ್ತು. ಹೀಗಾಗಿ ಕರ್ನಾಟಕ ಸರ್ಕಾರ ಓಲಾ, ಉಬರ್​ ಱಪಿಡೋ, ಆಟೋ ಯೂನಿಯನ್​​ಗಳ ಜೊತೆ ಶನಿವಾರ ಸಭೆ ನಡೆಸಲಾಯಿತು.

ಹೈಕೋರ್ಟ್ ನಲ್ಲಿ ನವೆಂಬರ್ 7ರಂದು ವಿಚಾರಣೆ

ಹೈಕೋರ್ಟ್ ನಲ್ಲಿ ನವೆಂಬರ್ 7ರಂದು ವಿಚಾರಣೆ

ಬೆಂಗಳೂರು ನಗರ ಜಿಲ್ಲಾಧಿಕಾರಿ 2021ರಲ್ಲೇ ಎರಡು ಕಿಮೀಗೆ 30 ರೂ ಫಿಕ್ಸ್ ಮಾಡಲಾಗಿತ್ತು. ಆದರೆ ಇದಕ್ಕೆ ಶೇ.30ರಷ್ಟು ದರ ಹೆಚ್ಚಳ ಮಾಡಬೇಕು ಎಂದು ಕಂಪನಿಗಳು ಪಟ್ಟು ಹಿಡಿದಿವೆ. ಇದಕ್ಕೆ ಸಾರಿಗೆ ಅಧಿಕಾರಿಗಳು ನಮಗೆ ಈ ಬಗ್ಗೆ ಯಾವುದೇ ಮನವಿ ಬಂದಿಲ್ಲ ಎಂದಿದ್ದಾರೆ. ಇನ್ನೊಂದು ಮಗ್ಗಲಿನಲ್ಲಿ ದರ ಹೆಚ್ಚಳದ ಬಗ್ಗೆ ನಾವು ಈಗಾಗಲೇ ಹೆಚ್ಚುವರಿ ಆಯುಕ್ತ ಹೇಮಂತ್ ಕುಮಾರ್ ಮೇಲ್ ನಲ್ಲಿ ಮನವಿ ಮಾಡಿದ್ದೇವೆ ಎಂದು ಕಂಪನಿಗಳು ಸ್ಪಷ್ಟಪಡಿಸಿದ್ದು, ಈ ಬಗ್ಗೆ ನನಗೆ ಯಾವುದೇ ‌ಮಾಹಿತಿ ಬಂದಿಲ್ಲ ಎಂದು RTO ಕಮೀಷನರ್ ಟಿಎಚ್ಎಂ ಕುಮಾರ್ ಹೇಳಿದ್ದಾರೆ.
ಈ ಸಭೆಯಲ್ಲಿ ಸಾರಿಗೆ ಇಲಾಖೆಯಿಂದ ಕಂಪನಿಗಳ ದರ ಹೆಚ್ಚಳ ಮನವಿಗೆ ಒಪ್ಪಿಗೆ ಸೂಚಿಸಲಿಲ್ಲ. ಈ ಸಭೆಯ ಬಗ್ಗೆ ಹೈ ಕೋರ್ಟ್ ಗೆ ಮಾಹಿತಿ ನೀಡಲು ಸಾರಿಗೆ ಇಲಾಖೆ ಮುಂದಾಗಿದೆ. ನವೆಂಬರ್ 7ರಂದು ಹೈಕೋರ್ಟ್ ನಲ್ಲಿ ದರಕ್ಕೆ ಸಂಬಂಧಪಟ್ಟಂತೆ ವಿಚಾರಣೆ ನಡೆಯಲಿದೆ.

ಆಟೋರಿಕ್ಷಾ ಚಾಲಕರ ಪರ ವಕೀಲರ ವಾದವೇನು?

ಆಟೋರಿಕ್ಷಾ ಚಾಲಕರ ಪರ ವಕೀಲರ ವಾದವೇನು?

ರಾಜ್ಯದ ಸಾರಿಗೆ ಇಲಾಖೆ ಅಧಿಕಾರಿಗಳು ಕಣ್ಣೋರೆಸುವ ತಂತ್ರ ಮಾಡುತ್ತಿದ್ದಾರೆ ಎಂದು ಸಭೆ ನಂತರ ಆಟೋ ರಿಕ್ಷಾ ಚಾಲಕರ ಪರ ವಕೀಲ ಅಮೃತೇಶ್ ಹೇಳಿದ್ದಾರೆ. ಇದುವರೆಗೆ ಯಾವುದೇ ದರ ನಿಗದಿ ಮಾಡದೇ ಸಭೆ ಮುಗಿಸಿದ್ದಾರೆ. ನವೆಂಬರ್ 7ಕ್ಕೆ ಕೋರ್ಟಿನ ಮುಂದೆ ವರದಿ ನೀಡಬೇಕಿರುವ ಹಿನ್ನೆಲೆ ಸಭೆ ಕರೆದಿದ್ದೇವೆ ಅಂತ ಕೋರ್ಟ್ ಮುಂದೆ ಕಣ್ಣೋರೆಸುವ ತಂತ್ರ ಮಾಡುತ್ತಿದ್ದಾರೆ. ಕಳೆದ ಐದಾರು ವರ್ಷಗಳಿಂದ ಉಬರ್ ಆಪ್ ಗಳು ಹಗಲು ದರೋಡೆ ಮಾಡುತ್ತಿವೆ ಎಂದರು.
ಈ ಸಭೆಯಲ್ಲಿ ನಾವು ವಿವರವಾಗಿ ತಿಳಿಸಿದ್ದೇವೆ. ಹಾಗಿದ್ದರೂ ಕಾಟಾಚಾರಕ್ಕೆ ಸಭೆ ಮುಗಿಸಿದ್ದಾರೆ. ಯಾವುದೇ ಅಂತಿಮ ನಿರ್ಧಾರಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳು ಬಂದಿಲ್ಲ. ಸಾರಿಗೆ ಇಲಾಖೆಯೇ ಅವರನ್ನು ಲೈಸೆನ್ಸ್ ಇಲ್ಲದೇ ಫ್ರೀ ಬಿಟ್ಟಿದ್ದಾರೆ. ಸಾರಿಗೆ ಇಲಾಖೆ ಉಬರ್ ಆಟೋ ನಿಲ್ಲಿಸಲು ಕೋರ್ಟ್ ನೆಪ ಕೊಡುತ್ತಿದೆ. ಯಾವುದೇ ಆಟೋ ಯೂನಿಯನ್ ಅವರನ್ನು ಸಭೆಗೆ ಕರೆದಿಲ್ಲ. ಕೇವಲ ಆಪ್ ಆಧಾರಿತ ಕಂಪನಿಯವರನ್ನು ಮಾತ್ರ ಮೀಟಿಂಗ್ ಗೆ ಕರೆದಿದ್ದಾರೆ ಎಂದು ದೂಷಿಸಿದರು.

ಹೈಕೋರ್ಟ್ ಈ ಹಿಂದೆ ನೀಡಿದ್ದ ಸೂಚನೆ ಏನು?

ಹೈಕೋರ್ಟ್ ಈ ಹಿಂದೆ ನೀಡಿದ್ದ ಸೂಚನೆ ಏನು?

ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಉಬರ್ ಇಂಡಿಯಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಹೈಕೋರ್ಟ್‌ಗೆ ಈ ಹಿಂದೆ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದವು. ಇವುಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರಿದ್ದ ಏಕಸದಸ್ಯ ಪೀಠವು ಪ್ರಯಾಣ ಶುಲ್ಕ ನಿಗದಿ ಮಾಡುವಂತೆ ಸೂಚಿಸಿತ್ತು.
ಹೊಸ ದರ ನಿಗದಿ ಮಾಡಲು ಕಂಪನಿಗಳ ಜೊತೆ ಚರ್ಚಿಸಿ ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿದ ಹೈಕೋರ್ಟ್ 15 ದಿನ ಗಡುವು ನೀಡಿತ್ತು. ಜೊತೆಗೆ ಕಂಪನಿಗಳಿಗೆ ನಿಗದಿತ ದರ ಮತ್ತು ಹೆಚ್ಚುವರಿ ಶೇ. 10ರಷ್ಟು ಸೇವಾ ತೆರಿಗೆ ಮಾತ್ರ ಪಡೆಯುವಂತೆ ತಿಳಿಸಿತ್ತು. ಆದರೆ ಈ ವರೆಗೆ ಕಂಪನಿಗಳು ಯಾವುದೇ ನಿರ್ಧಾರ ಕೈಗೊಳ್ಳದ ಹಿನ್ನೆಲೆ ರಾಜ್ಯ ಸರ್ಕಾರವೇ ಓಲಾ, ಉಬರ್ ಕಂಪನಿ ಆಟೋ ಗಳಿಗೆ ಪ್ರಯಾಣದ ಕನಿಷ್ಠ ದರ ನಿಗದಿಗೆ ಮುಂದಾಗಿದೆ.

ಹೊಸ ದರ ನಿಗದಿಪಡಿಸುವ ಸವಾಲು

ಹೊಸ ದರ ನಿಗದಿಪಡಿಸುವ ಸವಾಲು

ಓಲಾ, ಉಬರ್ ಪ್ರಯಾಣ ದರ ಕುರಿತು ಹೈಕೋರ್ಟ್‌ಗೆ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಪೀಠ ಪ್ರಯಾಣದ ದರ ನಿಗದಿಪಡಿಸುವಂತೆ 15 ದಿನ ಗಡುವು ನೀಡಿ ಆದೇಶಿಸಿತ್ತು. ಆದರೆ ಗುಡುವು ಮುಗಿದರೂ ಈ ಬಗ್ಗೆ ಕಂಪನಿಗಳು ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ.
ಈ ಕಾರಣದಿಂದ ರಾಜ್ಯ ಸರ್ಕಾರವೇ ಓಲಾ, ಉಬರ್ ಆಟೋಗಳಿಗೆ ಹೊಸದಾಗಿ ಪ್ರಯಾಣದ ಕನಿಷ್ಠ ದರ ನಿಗದಿ ಮಾಡಿ ಆದಷ್ಟು ಶೀಘ್ರ ದರಪಟ್ಟಿ ಬಿಡುಗಡೆ ಮಾಡಲಿದೆ. ಈ ದರದಲ್ಲಿ ಸರಕು ಸೇವಾ ತೆರಿಗೆ (ಜಿಎಸ್‌ಟಿ) ಸಹ ಒಳಗೊಂಡಿರಲಿದೆ. ಹೆಚ್ಚುವರಿ ಹಣ ವಸೂಲಿ ವಿಚಾರ ತೀವ್ರತೆ ಪಡೆದುಕೊಂಡ ಬಳಿಕ ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ 2 ಕಿಲೋ ಮೀಟರ್‌ ಪ್ರಯಾಣಕ್ಕೆ 30 ರೂ. ನಿಗದಿ ಮಾಡಿತ್ತು. ಇದೀಗ ಗುಡುವು ಮುಗಿದ ಹಿನ್ನೆಲೆ ಹೊಸ ದರವನ್ನು ನಿಗದಿ ಮಾಡಬೇಕಿದೆ.

English summary
Bengaluru News: Ola, Uber and Rapido Companies Demands to fix 100 rupees for 2 KM in Transport Dept Meeting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X