Get Updates
Get notified of breaking news, exclusive insights, and must-see stories!

Namma Metro: ಹಳದಿ ಮಾರ್ಗದ ಕಾರ್ಯಾಚರಣೆ: ಬಿಗ್ ಅಪ್ಡೇಟ್ ಕೊಟ್ಟ ತೇಜಸ್ವಿ ಸೂರ್ಯ

ಬೆಂಗಳೂರು, ಫೆಬ್ರವರಿ 12: ಸಿಲಿಕಾನ್ ಸಿಟಿ ಬೆಂಗಳೂರಿನ ಬಹುನಿರೀಕ್ಷೆಯ ನಮ್ಮ ಮೆಟ್ರೋ ಹಳದಿ ಮಾರ್ಗ (Namma Metro Yellow Line) ಮತ್ತು ಇನ್ನಿತರ ಮೆಟ್ರೋ ಯೋಜನೆಗಳ ಕುರಿತು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಮಹತ್ವದ ಮಾಹಿತಿ ಕೊಟ್ಟಿದ್ದಾರೆ. ಚೀನಾದಿಂದ ಆಗಮಿಸುವ ಡ್ರೈವರ್‌ಲೆಸ್ ಮೆಟ್ರೋ ಕೋಚ್‌ಗಳನ್ನು ಶೀಘ್ರವೇ BMRCL ಹಳದಿ ಮಾರ್ಗದಲ್ಲಿ ಓಡಿಸಲಿದೆ ಎಂದು ತಿಳಿಸಿದ್ದಾರೆ.

ಸೋಮವಾರ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL)ದ ಅಧಿಕಾರಿಗಳನ್ನು ಖುದ್ದು ಭೇಟಿ ಮಾಡಿದ ತೇಜಸ್ವಿ ಸೂರ್ಯ ಅವರು ಹಳದಿ ಮಾರ್ಗ, ಮೆಟ್ರೋ ಹಂತ-3ದ ಯೋಜನೆಗಳ ಪ್ರಗತಿ ಕುರಿತು ಚರ್ಚಿಸಿದ್ದಾರೆ. ಯೋಜನೆ ವಿಳಂಬದಿಂದಾಗಿ ನಗರವಾಸಿಗಳು ಆಗುತ್ತಿರುವ ತೊಂದರೆ, ನಿಗಮದ ವಿರುದ್ಧ ಇರುವ ಅಸಮಾಧಾನವನ್ನು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಈ ಕುರಿತು ಅವರು ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

Bengaluru Namma Metro: Trial Run Very Soon in Yellow Line: says Tejasvi Surya

ಆರ್‌ವಿ ರಸ್ತೆ-ಬೊಮ್ಮಸಂದ್ರ ಮಾರ್ಗ ವಿಳಂಬ

ಮೆಟ್ರೋ ಹಂತ-3 ಗಾಗಿ ಅನುಮೋದನೆಯು ಕೇಂದ್ರ ಸರ್ಕಾರದೊಂದಿಗಿನ ಮುಂದುವರಿದ ಹಂತಗಳಲ್ಲಿದೆ. ನಾವು ಅದನ್ನು ತ್ವರಿತಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಇನ್ನು ಈಗಾಗಲೇ ತೆರೆಯಬೇಕಿದ್ದ ಆರ್‌ವಿ ರಸ್ತೆ-ಬೊಮ್ಮಸಂದ್ರವರೆಗಿನ 19ಕಿ.ಮೀ.ಯ 'ನಮ್ಮ ಮೆಟ್ರೋ ಹಳದಿ ಮಾರ್ಗ' ಮತ್ತಷ್ಟು ವಿಳಂಬವಾಗುತ್ತಿದೆ. ಈ ಬಗ್ಗೆ ಅವರು ಪ್ರಶ್ನಿಸಿದರು.

ಈ ಬಗ್ಗೆ ಮಾರ್ಗದ ಪ್ರಾಯೋಗಿಕ ಕಾರ್ಯಾಚರಣೆಗೆ, ವಾಣಿಜ್ಯ ಕಾರ್ಯಾಚರಣೆ ತಡವಾಗುತ್ತಿರುವುದಕ್ಕೆ ಸಾರ್ವಜನಿಕ ದುಃಖವನ್ನು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಪ್ರತಿ ಸಂಸ್ಥೆಯು ಮೀಸಲಾದ ಸಮಯದ ಚೌಕಟ್ಟಿನೊಳಗೆ ನಿಗದಿತ ಗುರಿಗಳನ್ನು ಸಾಧಿಸಲು ಅತ್ಯುತ್ತಮ ಪ್ರಯತ್ನಗಳೊಂದಿಗೆ ಕೆಲಸ ಮಾಡುತ್ತದೆ.

ನೀಡಿದ ಭರವಸೆ ಈಡೇರಿಸದ BMRCL

ಆದರೆ, ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಮಾತ್ರ ತಮ್ಮ ಸ್ವಂತ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗಿಲ್ಲ. ಇದು ರುವುದು ಸಾರ್ವಜನಿಕರಲ್ಲಿ ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದೆ. ಆದಷ್ಟು ಬೇಗ ಹೊಸ ಮಾರ್ಗದಲ್ಲಿ ಓಡಾಡುವ ಮತ್ತು ಟ್ರಾಫಿಕ್ ಕಿರಿಕಿರಿಯಿಂದ ಮುಕ್ತವಾಗುವ ನಿರೀಕ್ಷೆಯಲ್ಲಿದ್ದಾರೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ತೇಜಸ್ವಿ ಸೂರ್ಯ ಹೇಳಿದರು.

ಪ್ರಯಾಣಿಕರ ಪರ ಸಂಸದರ ಮನವಿ

ಮೆಟ್ರೋ ಹಳದಿ ರೇಖೆಯಲ್ಲಿ ಯಾವಾಗ ಆರಂಭವಾಗುತ್ತದೆ ಎಂಬುದನ್ನು ತಿಳಿಸುವಂತೆ ಪ್ರಯಾಣಿಕರ ಪರವಾಗಿ ಬಿಎಂಆರ್‌ಸಿಎಲ್ ಗೆ ಒತ್ತಾಯಿಸಿದ್ದೇನೆ. BMRCL ಮಾರ್ಗಸೂಚಿ ಚಾರ್ಟ್‌ನೊಂದಿಗೆ ಬರಲಿದೆ. ಶೀಘ್ರವೇ ಚೆನ್ನೈನಿಂದ ಬರುವ ರೈಲು ಬೋಗಿಗಳ ಪ್ರಾಯೋಗಿಕ ಕಾರ್ಯಾಚರಣೆ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದರು.

Bengaluru Namma Metro: Trial Run Very Soon in Yellow Line: says Tejasvi Surya

ಇನ್ನೂ ಬಿಎಂಆರ್‌ಸಿಎಲ್ ಹೊಸ ಮಾರ್ಗಸೂಚಿ ಜತೆ ಬರಲಿದೆ. ಈ ಮಾರ್ಗಸೂಚಿ ಚಾರ್ಟ್ ಆದ ಮಟ್ರೋ ಕಾಮಗಾರಿಗಳ ಪ್ರಗತಿಯ ಬಗ್ಗೆ ನಿಗಾ ಇಡಲು ಅನುಕೂಡಲ ಮಾಡಿಕೊಡುತ್ತದೆ. ಮತ್ತಷ್ಟು ವಿಳಂಬದ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲು ಅವಕಾಶ ನೀಡುತ್ತದೆ ಎಂದು ಹೇಳಿದರು.

BRMCL ಕೊಟ್ಟ ಭರವಸೆ ಏನು?

ಮೆಟ್ರೋ ಮೂರನೇ ಹಂತದ ಯೋಜನೆ ಪ್ರಗತಿ ಕುರಿತು ಚರ್ಚಿಸಲಾಗಿದೆ. ಮುಖ್ಯವಾಗಿ ನಮಗೆ ಹಳದಿ ರೇಖೆಯಲ್ಲಿ ಪ್ರಾಯೋಗಿಕ ಪರೀಕ್ಷೆ ತಡವಾಗುತ್ತಿದೆ. ಇದರಿಂದ ವಾಣಿಜ್ಯ ಕಾರ್ಯಾಚರಣೆ ಸಹ ತಡವಾಗುತ್ತದೆ. ಹೀಗಾಗದಂತೆ ನೋಡಿಕೊಳ್ಳಲು ಮನವಿ ಮಾಡಿದ್ದೇನೆ. ಪ್ರತಿಯಾಗಿ ಅಧಿಕಾರಿಗಲು ಶೀಘ್ರದಲ್ಲಿ ಟೆಸ್ಟ್ ರನ್ ಮಾಡುವುದಾಗಿ ತಿಳಿಸಿದ್ದಾರೆ. ಸಾರ್ವಜನಿಕರು ಕುಂದು ಕೊರತೆಗಳನ್ನು ನಮ್ಮ ಮೆಟ್ರೋ ಅಧಿಕಾರಿಗಳಿಗೆ ತಿಳಿಸುವ ನನ್ನ ಕಾರ್ಯ ಮುಂದುವರಿಯುತ್ತದೆ ಎಂದು ಸಂಸದರು ವಿವರಿಸಿದರು.

ಹಳದಿ ರೇಖೆಗೆ ಮೀಸಲಾಗಿರುವ ಚೀನಾ ಕಂಪನಿ ನಿರ್ಮಿತ ಚಾಲಕ ರಹಿತ ಮೆಟ್ರೋ ರೈಲು ಬೋಗಿಗಳು ಸಮುದ್ರದ ಮೂಲಕ ಚೆನ್ನೈಗೆ ಆಗಮಿಸಿವೆ. ಇವು ಫೆಬ್ರವರಿ 20 ರೊಳಗೆ ಬೆಂಗಳೂರಿನ ಹೆಬ್ಬಗೋಡಿ ಡೀಪೋಗೆ ತಲುಪಲಿವೆ. ಅದಾದ ಬಳಿಕ ಕೆಲವು ಅನುಮತಿ ಪಡೆದು ಮೆಟ್ರೋ ಪ್ರಾಯೋಗಿಕ ಸಂಚಾರ ನೆರವೇರಲಿದೆ.

ಬೆಂಗಳೂರು ಪ್ರಯಾಣಿಕರ ಬಹುದಿನಗಳ ಹಳದಿ ಮೆಟ್ರೋ ಮಾರ್ಗ ಕಾರ್ಯಾಚರಣೆಯ ಕನಸು ಆದಷ್ಟು ಶೀಘ್ರವೇ ನೆರವರಲಿದೆ. ಶೀಗ್ರವೇ ಪ್ರಾಯೋಗಿಕ ರೈಲು ಸಂಚಾರ ದಿನಾಂಕ ತಿಳಿಯಲಿದೆ ಎಂದು ನಮ್ಮ ಮೆಟ್ರೋ ಮೂಲಗಳು ಮಾಹಿತಿ ನೀಡಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+