Namma Metro: ಪೀಕ್ ಅವರ್‌ಗಳಲ್ಲಿ ಹೆಚ್ಚುವರಿ ರೈಲುಗಳ ಸಂಚಾರ- ಯಾವ ಮಾರ್ಗದಲ್ಲಿ, ಯಾವ ನಿಲ್ದಾಣಗಳ ನಡುವೆ ತಿಳಿಯಿರಿ

ಬೆಂಗಳೂರು, ಸೆಪ್ಟೆಂಬರ್‌ 04: ವಾರದ ದಿನಗಳಲ್ಲಿ ಜನದಟ್ಟಣೆ ಹೆಚ್ಚಿರುವ ಕಾರಣ ಪೀಕ್‌ ಅವರ್‌ಗಳಲ್ಲಿ ಹೆಚ್ಚುವರಿ ರೈಲುಗಳನ್ನು ಓಡಿಸಲು ನಮ್ಮ ಮೆಟ್ರೊ ನಿರ್ಧರಿಸಿದೆ. ನಮ್ಮ ಮೆಟ್ರೊದ ನೇರಳೆ ಮಾರ್ಗದಲ್ಲಿ ಹೆಚ್ಚುವರಿ ರೈಲು ಸೇವೆಗಳನ್ನು ಒದಗಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಮುಂದಾಗಿದೆ.

ಪರ್ಪಲ್ ಲೈನ್‌ನಲ್ಲಿನ ಈ ಹೆಚ್ಚುವರಿ ರೈಲುಗಳನ್ನು ಪ್ರಾಯೋಗಿಕ ಉಪಕ್ರಮವಾಗಿ ಕಾರ್ಯಗತಗೊಳಿಸಲಾಗುತ್ತಿದೆ. ಇದೇ ರೀತಿಯ ವಿಸ್ತರಣೆಯನ್ನು ಇತರ ಮೆಟ್ರೋ ಮಾರ್ಗಗಳಿಗೆ ವಿಸ್ತರಿಸಲಾಗುವುದು ಎಂದು ಬಿಎಂಆರ್‌ಸಿಎಲ್‌ ಘೋಷಣೆ ಮಾಡಿದೆ.

Bengaluru Namma Metro Starts Extra Purple Line Trains During Peak Hours- Know the details

ಪ್ರಸ್ತುತ ಮಹಾತ್ಮಾ ಗಾಂಧಿ ರಸ್ತೆ ನಿಲ್ದಾಣ ಮತ್ತು ನಾಡಪ್ರಭು ಕೆಂಪೇಗೌಡ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಗಳ ನಡುವೆ ಹೆಚ್ಚುವರಿ ರೈಲುಗಳು ಸಂಚರಿಸುತ್ತವೆ. ಪ್ರಯಾಣಿಕರು ಈ ಹೆಚ್ಚುವರಿ ರೈಲುಗಳಿಂದ ಪ್ರಯೋಜನ ಪಡೆಯುತ್ತಾರೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಹೇಳಿದ್ದಾರೆ.

ಬಿಎಂಆರ್‌ಸಿಎಲ್‌ ಹೇಳಿಕೆ ಪ್ರಕಾರ, ನಾಡಪ್ರಭು ಕೆಂಪೇಗೌಡ ನಿಲ್ದಾಣ ಮತ್ತು ಮಹಾತ್ಮ ಗಾಂಧಿ ರಸ್ತೆ ಮೆಟ್ರೋ ನಿಲ್ದಾಣದ ನಡುವೆ ಪ್ರಯಾಣಿಸುವ ಪ್ರಯಾಣಿಕರು ಹೆಚ್ಚುವರಿ ರೈಲುಗಳ ಸೇವೆಗಳನ್ನು ಪಡೆಯಲಿದ್ದಾರೆ. ಬೆಳಗಿನ ಹಾಗೂ ಸಂಜೆಯ ಪೀಕ್‌ ಅವರ್‌ಗಳಲ್ಲಿ ಈ ರೈಲುಗಳು ಸಂಚರಿಸಲಿವೆ. ಈ ಹೆಚ್ಚುವರಿ ರೈಲುಗಳು ಸೋಮವಾರದಿಂದ ಶುಕ್ರವಾರದ ವರೆಗೆ ವಾರದ ದಿನಗಳಲ್ಲಿ ಕಾರ್ಯನಿರ್ವಹಿಸಲಿವೆ.

Bengaluru Namma Metro Starts Extra Purple Line Trains During Peak Hours- Know the details

'ನಾಡಪ್ರಭು ಕೆಂಪೇಗೌಡ ನಿಲ್ದಾಣ ( ಮೆಜೆಸ್ಟಿಕ್ ) ಮತ್ತು ಮಹಾತ್ಮಗಾಂಧಿ ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಬೆಳಗಿನ ಜನದಟ್ಟಣೆಯ ಸಮಯದಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಬೇಕಿದೆ. ವಾರದ ದಿನಗಳಲ್ಲಿ ( ಸೋಮವಾರದಿಂದ ಶುಕ್ರವಾರದ ವರೆಗೆ ) ಹೆಚ್ಚುವರಿ ಟ್ರಿಪ್‌ಗಳನ್ನು ಬಿಎಂಆರ್‌ಸಿಎಲ್‌ ನಿರ್ವಹಿಸಲಿದೆ. ಈ ಹೆಚ್ಚುವರಿ ಟ್ರಿಪ್‌ಗಳು ಪರ್ಪಲ್ ಲೈನ್‌ನಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಮಾಡಲಾಗುತ್ತಿದೆ' ಎಂದು ಪ್ರಕಟಣೆ ಹೇಳಿದೆ.

ಈ ರೈಲುಗಳು ಎಂಜಿ ರೋಡ್ ನಿಲ್ದಾಣದಲ್ಲಿ ಕೊನೆಗೊಳ್ಳುತ್ತವೆ. ಬೈಯಪ್ಪನಹಳ್ಳಿಗೆ ಪ್ರಯಾಣ ಮುಂದುವರಿಸಲು ಬಯಸುವ ಪ್ರಯಾಣಿಕರು ಎಂಜಿ ರಸ್ತೆ ನಿಲ್ದಾಣದಲ್ಲಿ ಮತ್ತೊಂದು ರೈಲಿಗೆ ಹತ್ತಬೇಕಾಗುತ್ತದೆ.

ಮಹಾತ್ಮಾ ಗಾಂಧಿ ರಸ್ತೆಯ ಆಚೆಗೆ ಹೋಗುವ ಪ್ರಯಾಣಿಕರು ಎಂಜಿ ರಸ್ತೆಯ ಮೆಟ್ರೋ ನಿಲ್ದಾಣದಲ್ಲಿ ಇಳಿದು ಇತರ ರೈಲಿಗೆ ಹತ್ತಿಕೊಳ್ಳಬೇಕು ಎಂದು ಬೆಂಗಳೂರಿನ ನಮ್ಮ ಮೆಟ್ರೋ ಅಧಿಕಾರಿಗಳು ಹೇಳಿದ್ದಾರೆ.

ಪರ್ಪಲ್ ಲೈನ್ ಪ್ರಯಾಣಿಕರ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆಯನ್ನು ಕಂಡಿದೆ. ವಿಶೇಷವಾಗಿ ಪೀಕ್ ಅವರ್‌ಗಳಲ್ಲಿ ಭಾರೀ ಜನದಟ್ಟಣೆ ಆಗುತ್ತಿದೆ. ಪ್ರಯಾಣಿಕರ ವಿನಂತಿಗಳಿಗೆ ಸ್ಪಂದಿಸಿ ಬಿಎಂಆರ್‌ಸಿಎಲ್‌ ಸಮಸ್ಯೆಯನ್ನು ಪರಿಹರಿಸಲು ಮುಂದಾಗಿದೆ. ಸಾರ್ವಜನಿಕರಿಗೆ ಉತ್ತಮ ಸಾರಿಗೆ ಒದಗಿಸಲು ಕ್ರಮ ಕೈಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೈಯಪ್ಪನಹಳ್ಳಿ- ಕೆಆರ್ ಪುರಂ ನಡುವಿನ 2 ಕಿಲೋಮೀಟರ್ ಮಾರ್ಗದ ಉದ್ಘಾಟನೆಯನ್ನು ಸೆಪ್ಟೆಂಬರ್‌ನಲ್ಲಿ ನಿಗದಿಪಡಿಸಲಾಗಿದೆ. ಈ ವಿಸ್ತರಣೆಯು ಬೆಂಗಳೂರು ಪೂರ್ವ ಮತ್ತು ನಗರದ ಮಧ್ಯ ಮತ್ತು ದಕ್ಷಿಣ ಭಾಗಗಳ ನಡುವೆ ಸಂಪರ್ಕವನ್ನು ಕಲ್ಪಿಸುತ್ತದೆ. ಬೆಂಗಳೂರು ಮೆಟ್ರೋ ಜಾಲವು ಪ್ರಸ್ತುತ 69.66 ಕಿಲೋ ಮೀಟರ್‌ಗಳಷ್ಟು ದೂರವನ್ನು ವ್ಯಾಪಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+