Bengaluru metro: ಈ ದಿನ ಬೆಳಗ್ಗೆ 'ಮೆಟ್ರೋ' ಸಂಚಾರ ಸಮಯದಲ್ಲಿ ಬದಲಾವಣೆ, ಗಮನಿಸಿ

ಬೆಂಗಳೂರು, ಫೆಬ್ರವರಿ 02: ಬೆಂಗಳೂರು ಮೆಟ್ರೋ ರೈಲ್ ನಿಗಮವು (BMRCL) ಮುಂದಿನ ಭಾನುವಾರ ಫೆಬ್ರವರಿ 4ರಂದು ಬೆಳಗ್ಗೆ ಬೇಗನೇ ಮೆಟ್ರೋ ಸಂಚಾರ ಆರಂಭಿಸಲು ನಿರ್ಧರಿಸಿದೆ. ಅಂದು ಓಡಾಡುವ ಮೆಟ್ರೋ ಪ್ರಯಾಣಿಕರು ಗಮನಿಸಿ ಪ್ರಯಾಣ ಬೆಳಸಿದರೆ ಒಳ್ಳೆಯದು.

ಬೆಂಗಳೂರಿನಲ್ಲಿ ಮುಂಬರಲಿರುವ ಭಾನುವಾರ ದಂದು ನಡೆಯಲಿರುವ ವಿಶ್ವ ಕ್ಯಾನ್ಸರ್ ದಿನ- ಕ್ಯಾನ್‌ವಾಕ್ ಮತ್ತು ಎಕ್ಸ್‌ಎಲ್‌ ರನ್‌ಥಾನ್ (XL Runathon) ಇವೆಂಟ್ ಗಳಿಗೆ ಸಾರ್ವಜನಿಕರು ಹೆಚ್ಚು ಆಗಮಿಸುವ ನಿರೀಕ್ಷೆ ಇದೆ. ಅವರಿಗೆ ಸುಗಮವಾಗಿ ಭಾಗವಹಿಸಲು ನಮ್ಮ ಮೆಟ್ರೋ (namma metro) ಎಲ್ಲಾ ನಾಲ್ಕು ಟರ್ಮಿನಲ್‌ ಗಳಿಂದ ಭಾನುವಾರ ಬೆಳಗ್ಗೆ 07ಗಂಟೆಯ ಬದಲಾಗಿ 04.30 ಗಂಟೆಗೆ ಮೆಟ್ರೋ ರೈಲು ಸೇವೆಗಳು ಆರಂಭವಾಗಲಿವೆ.

 Bengaluru Namma Metro Service Starting Time Change on Feb 4th early Morning, Check details

ಈ ಕುರಿತು ಬೆಂಗಳೂರು ನಮ್ಮ ಮೆಟ್ರೊ ಮಾಹಿತಿ ನೀಡಿದೆ. ಅಂದು ಬೆಳಗ್ಗೆ ಸಾರ್ವಜನಿಕರು ಸಹ ಎಂದಿನಂತೆ ಸೇವೆ ಪಡೆಯಬಹುದು. 04.30 ಗಂಟೆಗೆ ಮೆಟ್ರೋ ರೈಲು ಸೇವೆಗಳು ಆರಂಭ ನಿರ್ಧಾರ ಕೇವಲ ಫೆಬ್ರವರಿ 4ರ ಭಾನುವಾರಕ್ಕೆ ಮಾತ್ರ ಸಿಮೀತವಾಗಿದೆ. ಉಳಿದ ದಿನಗಳು ಮತ್ತು ನಂತರದ ಭಾನುವಾರ ಎಂದಿನ ಸಮಯದಲ್ಲಿ ಸಂಚಾರ ಶುರುವಾಗಲಿವೆ.

ಎಲ್ಲ ಭಾನುವಾರ ಬೇಗ ಮೆಟ್ರೋ ಆರಂಭಕ್ಕೆ ಒತ್ತಾಯ

ನಮ್ಮ ಮೆಟ್ರೋ ಭಾನುವಾರ ತಡವಾಗಿ ಅಂದರೆ ಬೆಳಗ್ಗೆ 7 ಗಂಟೆಗೆ ಆರಂಭವಾಗಲಿದೆ. ಆದರೆ ಈ ವ್ಯವಸ್ಥೆ ಭಾನುವಾರ ಕೆಲಸಕ್ಕೆ ಹೋಗುವ ಉದ್ಯೋಗಿಗಳಿಗೆ, ಪ್ರಯಾಣಿಕರಿಗೆ ತೊಂದರೆ ಆಗುತ್ತದೆ. ಆದ್ದರಿಂದ ಭಾನುವಾರ ಸಹ ಬಹುಬೇಗನೇ ಮೆಟ್ರೋ ಆರಂಭಿಸಬೇಕು ಎಂದು ಬೇಡಿಕೆ ಇದೆ.

 Bengaluru Namma Metro Service Starting Time Change on Feb 4th early Morning, Check details

ಈ ಮನವಿ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಈ ಬಗ್ಗೆ ಯೋಚನೆ ಮಾಡುವುದಾಗಿ ಮಾತ್ರವೇ ಈ ಹಿಂದೊಮ್ಮೆ ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದರು.

100 ಕೋಟಿ ಪ್ರಯಾಣಿಕರಿಗೆ ಮೆಟ್ರೋ ಸೇವೆ

ಬೆಂಗಳೂರು ನಮ್ಮ ಮೆಟ್ರೋ ಆರಂಭವಾಗಿ ಸುಮಾರು ಹದಿಮೂರು ವರ್ಷಗಳಾಗಿವೆ. ಅಂದಿನಿಂದ ಈವರೆಗೆ ಒಟ್ಟು 100 ಕೋಟಿ ಪ್ರಯಾಣಿಕರಿಗೆ ಸೇವೆ ನೀಡುವ ಮೂಲಕ ಮಹತ್ವದ ಮೈಲುಗಲ್ಲು ಸಾಧಿಸಿದೆ.

ಸದ್ಯ ಹೊಸ ಮಾರ್ಗಗಳು ವಾಣಿಜ್ಯ ಕಾರ್ಯಾಚರಣೆಗೆ ಸಜ್ಜಾಗುತ್ತಿವೆ. ಕೆಲವೆಡೆ ಮಾರ್ಗಗಳು ವಿಸ್ತರಣೆ ಆಗಲಿವೆ. ಇತ್ತ ಮೆಟ್ರೋ ನೇರಳೆ ಮಾರ್ಗ ಪೂರ್ಣವಾಗಿ ಓಪನ್ ಆದ ಮೇಲೆ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಆಗಿದೆ. ದೈನಂದಿನ ಸರಿಸುಮಾರು 30 ಸಾವಿರ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ ಎಂದು BMRCL ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+