ನಮ್ಮ ಮೆಟ್ರೋ: ಜೂನ್ 22 ರಿಂದ 6 ಕೋಚ್, ಮಹಿಳೆಯರಿಗೆ ಪ್ರತ್ಯೇಕ ಬೋಗಿ!

ಬೆಂಗಳೂರು, ಜೂನ್ 18: "ಕಾಲಿಡೋದಕ್ಕಾದರೂ ಜಾಗ ಸಿಕ್ರೆ ಸಾಕು..." ಎನ್ನುತ್ತ ಓಡೋಡಿ ಬಂದು ಗಜಗರ್ಭದ ಮೆಟ್ರೋ ಟ್ರೈನಿನಲ್ಲಿ ತೂರಿಕೊಳ್ಳುವವರಿಗೊಂದು ಸಿಹಿ ಸುದ್ದಿ! ಜೂನ್ 22, ಶುಭ ಶುಕ್ರವಾರದಿಂದ ನಮ್ಮ ಮೆಟ್ರೋದಲ್ಲಿ ಮೂರು ಹೆಚ್ಚುವರಿ ಬೋಗಿಗಳು ಸೇರ್ಪಡೆಯಾಗಲಿವೆ. ಇನ್ನು ಮೇಲೆ 6 ಕೋಚುಗಳ ಮೆಟ್ರೋ ಟ್ರ್ಯಾಕ್ ಮೇಲೆ ಹರಿದಾಡಲಿದೆ! ಅವುಗಳಲ್ಲಿ ಒಂದು ಬೋಗಿ ಮಹಿಳೆಯರಿಗೆ ಮಾತ್ರ!

ಮೆಟ್ರೋ ಮೊದಲನೇ ಹಂತ ಸಂಪೂರ್ಣ ಆರಂಭವಾಗಿ ಜೂನ್ 17 ಕ್ಕೆ ಒಂದು ವರ್ಷ ಸಂದಿದೆ. ಈ ಹಿನ್ನೆಲೆಯಲ್ಲಿ ಬಿಎಂಆರ್ ಸಿಎಲ್(ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಶನ್ ಲಿ.) ತಾನು ನೀಡಿದ ಮಾತಿನಂತೆ ಮೂರು ಹೆಚ್ಚುವರಿ ಬೋಗಿಯನ್ನು ನೀಡಲು ಮುಂದಾಗಿದೆ.

ಸದ್ಯಕ್ಕೆ ಹೆಚ್ಚುವರಿ ಮೂರು ಬೋಗಿಗಳು, ಜನದಟ್ಟಣೆ ಅಧಿಕವಾಗಿರುವ ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆ ವರೆಗಿನ ನೇರಳೆ ಮಾರ್ಗಕ್ಕೆ ಮಾತ್ರ. ಜೂನ್ 2019 ರ ಹೊತ್ತಿಗೆ ಎಲ್ಲಾ ಮೆಟ್ರೋ ಟ್ರೈನುಗಳಿಗೂ 6 ಕೋಚ್ ಗಳನ್ನು ನೀಡಲಾಗುವುದು ಎಂದು ಬಿಎಂ ಆರ್ ಸಿಎಲ್ ಹೇಳಿದೆ.

Bengaluru: Namma Metro of 6-coach set to start on June 22

ಈಗಾಗಲೇ ಮೂರು ಕೋಚ್ ವುಳ್ಳ ಮೆಟ್ರೋ ವೊಂದರಲ್ಲಿ ಒಂದು ಬಾರಿಗೆ 900 ಕ್ಕೂ ಹೆಚ್ಚು ಜನ ಸಂಚರಿಸುತ್ತಾರೆ. ಕೋಚ್ ಗಳು ದುಪ್ಪಟ್ಟಾದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಬಹುದೆಂದು ನಿರೀಕ್ಷಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+