ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Namma Metro: 1131ಮೀಟರ್ ಸುರಂಗ ಕೊರೆದು ಹೊರಬಂದ 'ಅವನಿ'

|
Google Oneindia Kannada News

ಬೆಂಗಳೂರು, ಅಕ್ಟೋಬರ್ 24: ನಗರದ ಮಾಹಾತ್ಮ ಗಾಂಧಿ (ಎಂ.ಜಿ) ರಸ್ತೆಯಿಂದ ರಾಷ್ಟ್ರೀಯ ಮಿಲಿಟರಿ ಶಾಲೆವರೆಗೆ ಸುರಂಗ ಕಾರ್ಯಾಚರಣೆ ಆರಂಭಿಸಿದ್ದ 'ಅವನಿ' ಹೆಸರಿನ ಟನಲ್ ಬೋರಿಂಗ್ ಮಷಿನ್ (ಟಿಬಿಎಂ) 1,131ಮೀಟರ್ ಸುರಂಗ ಕೊರೆದು ಯಶಸ್ವಿಯಾಗಿ ಹೊರ ಬಂದಿದೆ.

ಈ ಕುರಿತು ಮಾಹಿತಿ ನೀಡಿರುವ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಅಧಿಕಾರಿಗಳು, 2022 ಮಾರ್ಚ್ 4ರಂದು ರಿಂದ ಮಾಹಾತ್ಮ ಗಾಂಧಿ (ಎಂ.ಜಿ) ರಸ್ತೆಯಿಂದ ರಾಷ್ಟ್ರೀಯ ಮಿಲಿಟರಿ ಶಾಲೆ ಕಡೆಗೆ ಸುರಂಗ ಕೊರೆಯಲು ಆರಂಭಿಸಿತ್ತು. ಅಂದಿನಿಂದ ಈವರೆಗೆ 230ದಿನ ಪೂರೈಸಿದ ಬಳಿಕ ಅವನಿ ಟನಲ್ ಬೋರಿಂಗ್ ಮಷಿನ್ (ಟಿಬಿಎಂ) 1,131 ಮೀಟರ್ ಸುದೀಘ ಸುರಂಗವನ್ನು ಯಶಸ್ವಿಯಾಗಿ ಕೊರೆದು ಹೊರ ಶುಕ್ರವಾರ ಬಂದಿದೆ ಎಂದು ತಿಳಿಸಿದ್ದಾರೆ.

ಪಂಜಾಬ್ ನಲ್ಲಿ 15ನೇ ದಿನಕ್ಕೆ ಕಾಲಿಟ್ಟ ಪಂಜಾಬ್ ನಲ್ಲಿ 15ನೇ ದಿನಕ್ಕೆ ಕಾಲಿಟ್ಟ

ಈ ಅವನಿ ಟಿಬಿಎಂ ಈ ಮೊದಲು ಈ ಅವನಿ ಟಿಬಿಎಂ 2020ರ ಸೆಪ್ಟಂಬರ್ 5ರಲ್ಲಿ ಶಿವಾಜಿ ನಗರದ ಮೆಟ್ರೋ ನಿಲ್ದಾಣದಿಂದ ಸುರಂಗ ಕೊರೆಯಲು ಪ್ರಾರಂಭಿಸಿ ಒಟ್ಟು 1086ಮೀಟರ್ ಉದ್ದದ ಸುರಂಗ ಮಾರ್ಗವನ್ನು ಕೊರೆದು ಮಾಹಾತ್ಮ ಗಾಂಧಿ (ಎಂ.ಜಿ) ರಸ್ತೆಯ ಕಡೆಗೆ ತಲುಪಿತು.

Bengaluru Namma Metro Avani TBM came out after digging 1131 meters tunnel

ಇದರಲ್ಲಿ 280ಮೀಟರ್ ಮಾರ್ಗವು ಹೆಚ್ಚು ಕಷ್ಟಕವಾಗಿತ್ತು. ಅಲ್ಲಿ ಸಿಕ್ಕಿದ್ದ ಬಂಡೆಗಳನ್ನು ಕೊರೆಯುವ ಸವಾಲನ್ನು ಅವನಿ ಯಶಸ್ವಿಯಾಗಿ ನಿಭಾಯಿಸಿತ್ತು. ಇದಾದ ಬಳಿಕ ಎಂ.ಜಿ.ರಸ್ತೆಯಿಂದ ರಾಷ್ಟ್ರೀಯ ಮಿಲಿಟರಿ ಶಾಲೆ ಕಡೆಗೆ ಸುರಂಗ ಮಾರ್ಗ ಕೊರೆಯುವ ಕಾರ್ಯಾಚರಣೆ ಆರಂಭಿಸಿತ್ತು.

Bengaluru Namma Metro Avani TBM came out after digging 1131 meters tunnel

ಇನ್ನು 'ವಮಿಕ' ಹೆಸರಿನ ಸುರಂಗ ಕೊರೆಯುವ ಟನಲ್ ಬೋರಿಂಗ್ ಮಷಿನ್ (ಟಿಬಿಎಂ) ಈಗಾಗಲೇ ಜಯನಗರ ಅಗ್ನಿಶಾಮಕ ಠಾಣೆ ಬಳಿಯ ದಕ್ಷಿಣ ರ್‍ಯಾಂಪ್ ಹಾಗೂ ಡೈರಿ ವೃತ್ತ ವರೆಗಿನ ಸುರಂ ಮಾರ್ಗದ ಕೆಲಸವನ್ನು ಪೂರ್ಣಗೊಳಿಸಿದೆ. ಒಟ್ಟು 614 ಮೀಟರ್ ಉದ್ದದ ಸುರಂಗ ಇದಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

English summary
Bengaluru Namma Metro. 'Avani' Tunnel Boring Machine came out after digging 1131 meters tunnel near Rashtriya Military School.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X