Bengaluru-Mysuru Expressway: ಟೋಲ್‌ ಶುಲ್ಕ ಸಂಗ್ರಹ ಮುಂದೂಡಿಕೆ- ಎಲ್ಲಿಯವರೆಗೆ ತಿಳಿಯಿರಿ

ಬೆಂಗಳೂರು- ಮೈಸೂರು ಎಕ್ಸಪ್ರೆಸ್‌ ವೇ ಅಲ್ಲಿ ಇಂದಿನಿಂದ (ಫೆಬ್ರವರಿ 27) ಟೋಲ್‌ ಶುಲ್ಕ ಸಂಗ್ರಹಿಸಲಾಗುತ್ತದೆ ಎಂದು ಸರ್ಕಾರ ಹೇಳಿತ್ತು. ಆದರೆ, ಈ ಕುರಿತು ಸಂಸದ ಪ್ರತಾಪ ಸಿಂಹ ಅವರು ಮೊದಲ ಹಂತದ ಟೋಲ್‌ ಕೇಂದ್ರಗಳಲ್ಲಿ ಶುಲ್ಕ ಸಂಗ್ರಹ ಕಾರ್ಯವನ್ನು ಮುಂದೂಡಲಾಗಿದೆ.

ಬೆಂಗಳೂರು, ಫೆಬ್ರವರಿ 27: ಬೆಂಗಳೂರು- ಮೈಸೂರು ಎಕ್ಸಪ್ರೆಸ್‌ ವೇ ಅಲ್ಲಿ ಇಂದಿನಿಂದ (ಫೆಬ್ರವರಿ 27) ಟೋಲ್‌ ಶುಲ್ಕ ಸಂಗ್ರಹಿಸಲಾಗುತ್ತದೆ ಎಂದು ಸರ್ಕಾರ ಹೇಳಿತ್ತು. ಆದರೆ, ಈ ಕುರಿತು ಪ್ರತಿಕ್ರಿಯಿಸಿರುವ ಮೈಸೂರು- ಕೊಡಗು ಸಂಸದ ಪ್ರತಾಪ ಸಿಂಹ ಅವರು ಮೊದಲ ಹಂತದ ಟೋಲ್‌ ಕೇಂದ್ರಗಳಲ್ಲಿ ಶುಲ್ಕ ಸಂಗ್ರಹ ಕಾರ್ಯವನ್ನು ಮುಂದೂಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸೇವಾ ರಸ್ತೆಗಳ ನಿರ್ಮಾಣ ಕಾಮಗಾರಿ ಬಾಕಿ ಇದೆ. ಅದು ಪೂರ್ಣಗೊಳ್ಳುವವರೆಗೂ ಟೋಲ್‌ ಶುಲ್ಕ ಸಂಗ್ರಹಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

Bengaluru- Mysuru Expressway: Toll tax collection postponed Know the reasons

ಇಂದಿನಿಂದ (ಫೆಬ್ರವರಿ 27) ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಬಳಸುವ ಪ್ರಯಾಣಿಕರು ಬೆಂಗಳೂರಿನಿಂದ ಮಂಡ್ಯ ಜಿಲ್ಲೆಯ ನಿಡಘಟ್ಟಕ್ಕೆ ಪ್ರಯಾಣಿಸಲು ಟೋಲ್ ಪಾವತಿಸಬೇಕೆಂದು ಆದೇಶಿಸಲಾಗಿತ್ತು.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) 119-ಕಿಮೀ ಎಕ್ಸ್‌ಪ್ರೆಸ್‌ವೇ (ರಾಷ್ಟ್ರೀಯ ಹೆದ್ದಾರಿ 275) ಯ ಮೊದಲ ಭಾಗದಲ್ಲಿ (55.63 ಕಿಮೀ) ಟೋಲ್ ಶುಲ್ಕವನ್ನು ಘೋಷಿಸಿತ್ತು.

Bengaluru- Mysuru Expressway: Toll tax collection postponed Know the reasons

ಮಾರ್ಚ್ 11 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಔಪಚಾರಿಕವಾಗಿ ರಸ್ತೆಯನ್ನು ಉದ್ಘಾಟಿಸಲಿದ್ದಾರೆ. ಕಣಿಮಿಣಿಕೆ ಮತ್ತು ಶೇಷಗಿನಿಹಾಲ್‌ನಲ್ಲಿರುವ ಆರು ಪಥಗಳ ಹೆದ್ದಾರಿಯ ಟೋಲ್ ಪ್ಲಾಜಾಗಳಿಂದ ಟೋಲ್ ಪಡೆಯಲು ಪ್ರಾರಂಭಿಸಲು NHAI ಪ್ರಧಾನ ಕಛೇರಿಯು ಅನುಮತಿ ನೀಡಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಟೋಲ್‌ ದರ

ಕಾರು/ಜೀಪ್/ವ್ಯಾನ್‌ಗೆ ಒಂದು ಬದಿಯ ಪ್ರಯಾಣಕ್ಕೆ ರೂ 135 ಮತ್ತು ಒಂದೇ ದಿನದೊಳಗೆ ಹಿಂದಿರುಗುವ ಪ್ರಯಾಣಕ್ಕೆ ರೂ 205. ಮಾಸಿಕ ಪಾಸ್‌ಗೆ ರೂ 4,525. ಇದು ಒಂದು ತಿಂಗಳಲ್ಲಿ 50 ಏಕ ಪ್ರಯಾಣಗಳನ್ನು ಒಳಗೊಂಡಿರುತ್ತದೆ.

LCV/LGV/ ಮಿನಿ ಬಸ್‌ಗೆ, ಇದು ರೂ 220, ರೂ 330 ಮತ್ತು ಮಾಸಿಕ ರೂ 7,315 ಇದೆ. ಟ್ರಕ್/ಬಸ್ (2 ಆಕ್ಸಲ್‌ಗಳು) ರೂ 460, ರೂ 690 ಮತ್ತು ಮಾಸಿಕ ರೂ 15,325 ಇದೆ.

3-ಆಕ್ಸಲ್ ವಾಣಿಜ್ಯ ವಾಹನ: ರೂ 500, ರೂ 750 ಮತ್ತು ಮಾಸಿಕ ರೂ 16,715 ಇದೆ. ಭಾರೀ ನಿರ್ಮಾಣ ಯಂತ್ರಗಳು/ಅರ್ಥ್‌ ಮೂವರ್‌ ಉಪಕರಣಗಳು (4-6 ಆಕ್ಸಲ್) ರೂ 720, ರೂ 1,080 ಹಾಗೂ ಮಾಸಿಕ ರೂ 24,030 ಇದೆ. ಮತ್ತು ಗಾತ್ರದ ವಾಹನ (7 ಅಥವಾ ಹೆಚ್ಚಿನ ಆಕ್ಸಲ್‌ಗಳು) ರೂ 880, ರೂ 1,315 ಮತ್ತು ಮಾಸಿಕ ರೂ 29,255 ಇದೆ.

ಪ್ಲಾಜಾ ಇರುವ ಜಿಲ್ಲೆಯೊಳಗೆ ನೋಂದಾಯಿಸಲಾದ ಸ್ಥಳೀಯ ವಾಣಿಜ್ಯ ವಾಹನಗಳಿಗೆ ದರಗಳು ಕಡಿಮೆ ಇವೆ. ಕಾರು, ಜೀಪ್ ಮತ್ತು ವ್ಯಾನ್‌ಗಳಿಗೆ 70 ರೂ. ಮಿನಿಬಸ್ ಮತ್ತು LCV ಅಥವಾ LGV ಗೆ 110 ರೂ., ಮತ್ತು ಟ್ರಕ್ ಅಥವಾ ಬಸ್‌ಗೆ 230 ರೂ ಇದೆ.

3-ಆಕ್ಸಲ್‌ಗೆ ರೂ 250, ಭಾರೀ ನಿರ್ಮಾಣಕ್ಕೆ ರೂ 360 ಮತ್ತು ಆಕ್ಸಲ್‌ಗಳಿಗೆ ರೂ 440 ವೆಚ್ಚವಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ. ದೂರುಗಳಿಗೆ ಸಾರ್ವಜನಿಕರು 1033ಗೆ ಕರೆ ಮಾಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+