ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಎಂಟ್ರಿ-ಎಕ್ಸಿಟ್ ಟೋಲ್ ನಿರ್ಮಾಣ ಕಾಮಗಾರಿ ಆರಂಭ ಕುರಿತು ಬಿಗ್ ಅಪ್ಡೇಟ್
Bengaluru-Mysuru Expressway: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಉದ್ಘಾಟನೆ ಆದಗಿನಿಂದಲೂ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲಿದೆ. ಇನ್ನು ಇದೀಗ ಈ ಹೆದ್ದಾರಿಯ ಎಂಟ್ರಿ-ಎಕ್ಸಿಟ್ ಟೋಲ್ ನಿರ್ಮಾಣ ಕಾಮಗಾರಿ ಆರಂಭದ ಕುರಿತು ಮಹತ್ವದ ಅಪ್ಡೇಟ್‌ವೊಂದು ಹೊರಬಿದ್ದಿದೆ. ಹಾಗಾದ್ರೆ ಯಾವಾಗ ಆರಂಭ? ಎಲ್ಲೆಲ್ಲಿ ಹಾಗೂ ಇದರಿಂದ ಏನೆಲ್ಲಾ ಪ್ರಯೋಜನೆಗಳಿವೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ನಲ್ಲಿ ಟೋಲ್ ವಿಚಾರಕ್ಕೆ ಟೋಲ್ ಸಿಬ್ಬಂದಿ ಹಾಗೂ ವಾಹನ ಸವಾರರ ನಡುವೆ ಮಾರಾಮಾರಿ ನಡೆದಿರುವ ಉದಾಹರಣೆಗಳಿವೆ. ಅಲ್ಲದೆ, ಇಲ್ಲಿ ಸುರಕ್ಷತೆಗೆ ಯಾವುದೇ ಸೌಲಭ್ಯಗಳು ಇಲ್ಲ ಎನ್ನುವ ಆರೋಪಗಳು ಕೇಳಿಬಂದಿದ್ದವು. ಈ ನಡುವೆಯೇ ಇತ್ತೀಚೆಗಷ್ಟೇ ನಿತಿನ್ ಗಡ್ಕರಿ ಅವರು ಈ ಎಕ್ಸ್‌ಪ್ರೆಸ್ ವೇನ ಎಂಟ್ರಿ, ಎಕ್ಸಿಟ್ ಟೋಲ್ ಕಾಮಗಾರಿಗೆ ಚಾಲನೆ ನೀಡಿದ್ದರು. ಕಾಮಗಾರಿ ಇನ್ನೂ ಆರಂಭ ಆಗಿರಲಿಲ್ಲ. ಆದರೆ, ಇದೀಗ ಕಾಮಗಾರಿ ಆರಂಭದ ದಿನಾಂಕವನ್ಮ ಫಿಕ್ಸ್ ಮಾಡಲಾಗಿದೆ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಎಂಟ್ರಿ ಹಾಗೂ ಎಕ್ಸಿಟ್ ಟೋಲ್ ನಿರ್ಮಾಣ ಕಾಮಗಾರಿ ಇನ್ನು 15 ದಿನದಲ್ಲಿಆರಂಭ ಆಗಲಿದೆ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಅವರು ಮಾಹಿತಿ ನೀಡಿದ್ದಾರೆ. ರಾಮನಗರ ತಾಲೂಕಿನ ಶೇಷಗಿರಿಹಳ್ಳಿ ಹಾಗೂ ಲಕ್ಷ್ಮೀಸಾಗರ ಗೇಟ್ ಬಳಿ ಉಂಟಾಗುತ್ತಿರುವ ಸಮಸ್ಯೆಗಳನ್ನು ತಡೆಯುವಂತೆ ಸಾರ್ವಜನಿಕರು ಆಗ್ರಹಿಸಿದ್ದರು.
ರಾಮನಗರದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಬಗ್ಗೆ ಡಾ.ಸಿ.ಎನ್.ಮಂಜುನಾಥ್ ಅವರು ಮಾತನಾಡಿದ್ದು, ಈಗಾಗಲೇ ಎಂಟ್ರಿ, ಎಕ್ಸಿಟ್ ಟೋಲ್ ಕಾಮಗಾರಿಗೆ ಕೇಂದ್ರ ಸಚಿವರಾಗಿರುವ ನಿತಿನ್ ಗಡ್ಕರಿ ಅವರು ಚಾಲನೆ ನೀಡಿದ್ದಾರೆ. ಇನ್ನೂ 15 ದಿನಗಳ ಒಳಗೆ ಕಾಮಗಾರಿ ಆರಂಭ ಆಗಲಿದೆ ಎಂದು ಭರವಸೆ ನೀಡಿದರು ಅಂತಾ ವಿಜಯ ಕರ್ನಾಟಕ ವರದಿ ಮಾಡಿದೆ.
ಬೆಂಗಳೂರ- ಮೈಸೂರು ಎಕ್ಸ್‌ಪ್ರೆಸ್‌ವೇ ಶೇಷಗಿರಿಹಳ್ಳಿ ಹಾಗೂ ಲಕ್ಷ್ಮಿಸಾಗರ ಗೇಟ್‌ಗಳ ಬಳಿ ವಾಹನ ಸಂಚಾರ ಹಾಗೂ ಸ್ಥಳೀಯರ ಓಡಾಟಕ್ಕೆ ತೊಂದರೆ ಆಗುತ್ತಿರುವ ಕುರಿತು ಸ್ಥಳೀಯರು ಮನವಿ ಸಲ್ಲಿಕೆ ಮಾಡಿದ ಸ್ಕೈ ವಾಕ್ ಮಾಡಿಕೊಡಲು ಆಗ್ರಹಿಸಿದ್ದರು. ಸ್ಥಳೀಯರ ಮನವಿಯನ್ನು ತಕ್ಷಣವೇ ಪರಿಗಣಿಸಿ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದ್ದೇವೆ ಎಂದು ತಿಳಿಸಿದರು.
ಈ ಸಮಸ್ಯೆಗಳನ್ನಲ್ಲಾ ಗಮನಿಸಿ ಅಧಿಕಾರಿಗಳಿಗೆ ನೇರವಾಗಿ ದೂರವಾಣಿ ಮೂಲಕ ಸಂಪರ್ಕಿಸಿ ತ್ವರಿತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ. ಪ್ರಯಾಣಿಕರಿಗೆ ಸುರಕ್ಷಿತ ಹಾಗೂ ಸುಗಮ ಸಂಚಾರ ಅವಕಾಶ ಮಾಡಿಕೊಂಡುವಂತೆ ಶೀಘ್ರದಲ್ಲೇ ಪರಿಹಾರ ನೀಡುತ್ತೇವೆ ಎಂದು ಭರವಸೆ ನೀಡಿದರು. ಒಟ್ಟಿನಲ್ಲಿ ಇಲ್ಲಿ ನಡೆಯುತ್ತಿರುವ ಸಮಸ್ಯೆಗಳಿಗೆ ಮುಕ್ತಿ ಸಿಕ್ಕರೆ ಸಾಕು ಎನ್ನುತ್ತಿದ್ದಾರೆ ಇಲ್ಲಿನ ಸಾರ್ವಜನಿಕರು.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಹೀಗೆ ಒಂದಲ್ಲ ಒಂದು ವಿಚಾರಕ್ಕೆ ಉದ್ಘಾಟನೆ ಆದ ಆರಂಭದಿಂದಲೂ ಇಲ್ಲಿಯವರೆಗೂ ಸುದ್ದಿಯಾಗುತ್ತಲೇ ಬಂದಿದೆ. ಇನ್ನೂ ಇದೀಗ ಇಲ್ಲಿ ಎಂಟ್ರಿ-ಎಕ್ಸಿಟ್ ಟೋಲ್ ನಿರ್ಮಾಣ ಆದ್ರೆ ಸಾಕು ಇಲ್ಲಿನ ಸಮಸ್ಯೆಗಳಿಗೆಲ್ಲ ಪರಿಹಾರ ಸಿಕ್ಕಂತಾಗಲಿದೆ. ಈಗಾಗಲೇ ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲ ವಿಸ್ತರಣೆ ಆಗುತ್ತಲಿದೆ. ಈ ನಡುವೆಯೇ ಟೋಲ್ ಶುಲ್ಕಗಳು ಸಹ ಏರಿಕೆಯಾಗಿದ್ದು, ಹೆದ್ದಾರಿ ಪ್ರಾಧಿಕಾರದ ವಿರುದ್ಧ ವಾಹನ ಸವಾರರು ಆಕ್ರೋಶ ಹೊರಹಾಕುತ್ತಿದ್ದಾರೆ.












Click it and Unblock the Notifications