ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪತ್ತೆದಾರಿ ಕಾದಂಬರಿಯನ್ನೂ ಮೀರಿಸುವ ಆ ಮೂರು ಕೊಲೆಗಳು!

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಜೂನ್ 8: ಉದ್ಯಾನ ನಗರಿ ಬೆಂಗಳೂರಿನಲ್ಲಿ 2001, 2002, 2014 ಈ ಮೂರು ವರ್ಷಗಳಲ್ಲಿ ನಡೆದ ಮೂರು ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಚಕ ಸತ್ಯವೊಂದು ಬಯಲಾಗಿದೆ. ಆತ್ಮಹತ್ಯೆ ಪ್ರಕರಣಗಳೆಂದು ಮುಚ್ಚಿಹೋಗಿದ್ದ ಈ ಮೂರೂ ಪ್ರಕರಣಗಳೂ ಪೂರ್ವನಿಯೋಜಿತ ಕೊಲೆ ಎಂಬ ಆಘಾತಕಾರಿ ಅಂಶ ಹೊರಬಿದ್ದಿದೆ!

ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಶೇಖರ್, ವೆಂಕಟೇಶ್, ಕುಮಾರ್, ಗಣೇಶ್, ನಾಗೇಂದ್ರ ಕುಮಾರ್, ರಾಜು ಮತ್ತು ನಾಗೇಂದ್ರ ಎಂಬ ಏಳು ಜನರನ್ನು ಬಂಧಿಸುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.[ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಉದ್ಯಮಿ ಭೀಕರ ಹತ್ಯೆ]

ಪೊಲೀಸರ ಹದ್ದಿನ ಕಣ್ಣಿಗೂ ಮಣ್ಣೆರಚಿ, ಪಕ್ಕಾ ಆತ್ಮಹತ್ಯೆ ಪ್ರಕರಣಗಳು ಎಂಬಂತೆ ಬಿಂಬಿತವಾಗಿದ್ದ ಈ ಪ್ರಕರಣಗಳನ್ನು ಕೊಲೆ ಎಂದು ಭೇದಿಸಿದ ಪೊಲೀಸರಿಗೆ ಹ್ಯಾಟ್ಸ್ ಆಫ್ ಹೇಳಲೇಬೇಕು!

Bengaluru: mystery of 3 murders solved by bengaluru police

ಘಟನೆ- 1
2001 ರಲ್ಲಿ ಬೆಂಗಳೂರು ನಿವಾಸಿ ಯಲ್ಲಪ್ಪ ಎನ್ನುವವರ ಶವ ಇಲ್ಲಿನ ರೈಲ್ವೇ ಹಳಿಯೊಂದರ ಮೇಲೆ ಸಿಗುತ್ತದೆ. ಅದು ಕೊಲೆ ಎಂಬ ಅನುಮಾನ ಬಾರದಷ್ಟು ವ್ಯವಸ್ಥಿತವಾಗಿ ಆತನನ್ನು ಸಾಯಿಸಿ, ರೈಲ್ವೇ ಹಳಿ ಮೇಲೆ ಬಿಸಾಡಲಾಗಿತ್ತು. ಪೋಸ್ಟ್ ಮಾರ್ಟಮ್ ಸಮಯದಲ್ಲೂ ಯಾವ ಅನುಮಾನವೂ ಬಾರದ ಕಾರಣ ಅದನ್ನು ಆತ್ಮಹತ್ಯೆ ಎಂದು ನಿರ್ಧರಿಸಿ ಪ್ರಕರಣ ಮುಚ್ಚಲಾಗಿತ್ತು! ಆದರೆ ಅಸಲಿಗೆ ಅಲ್ಲಿ ನಡೆದಿದ್ದೇ ಬೇರೆ. ಯಲ್ಲಪ್ಪನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವೆಂಕಟೇಶ್ ಈ ವಿಷಯ ಯಲ್ಲಪ್ಪನಿಗೆ ತಿಳಿದಿದೆ ಎಂಬುದು ತಿಳಿಯುತ್ತಿದ್ದಂತೆಯೇ ಆತನನ್ನು ತನ್ನ 7 ಸಹಚರರೊಂದಿಗೆ ಸೇರಿ ಸಾಯಿಸಿ, ಶವವನ್ನು ರೈಲ್ವೇ ಹಳಿಯ ಮೇಲೆ ಎಸೆಯಲಾಗಿತ್ತು.[ಬೆಂಗಳೂರಿನಲ್ಲಿ ಐದು ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ]

ಘಟನೆ- 2
ಎರಡನೇ ಕೊಲೆ ನಡೆದಿದ್ದು 2002 ರಲ್ಲಿ. ವೆಂಕಟೇಶನ ಪತ್ನಿಗೆ ರಮೇಶ ಎನ್ನುವವರೊಂದಿಗೆ ಅನೈತಿಕ ಸಂಬಂಧವಿದೆ ಎಂಬುದು ತಿಳಿಯುತ್ತಿದ್ದಂತೆಯೇ ಈ ತಂಡ ರಮೇಶನನ್ನೂ ಸಾಯಿಸಿ, ಹಾಗೆಯೇ ರೈಲ್ವೇ ಹಳಿಯ ಮೇಲೆ ಶವವನ್ನು ಎಸೆದಿತ್ತು. ಆಗಲೂ ಯಾವ ಅನುಮಾನವೂ ಬರದೆ ಆತ್ಮಹತ್ಯೆ ಎಂದು ಶರಾ ಬರೆಯಲಾಗಿತ್ತು.

ಘಟನೆ- 3
ಈ ಎರಡು ಘಟನೆ ನಡೆದ 12 ವರ್ಷದ ನಂತರ, ಕೊಲೆಯಾದ ರಮೇಶನ ತಮ್ಮ ಸುರೇಶನಿಗೆ ತನ್ನ ಅಣ್ಣನ ಸಾವು ಆತ್ಮಹತ್ಯೆಯಲ್ಲ ಎಂಬ ಅನುಮಾನ ಬಂದಿದೆ. ಆತನ ಸಾವಿಗೆ ವೆಂಕಟೇಶ್ ಕಾರಣ ಎಂಬುದನ್ನು ಸುರೇಶ ಪತ್ತೆ ಮಾಡಿದ್ದಾನೆ. ಈ ಬಗ್ಗೆ ತಿಳಿಯುತ್ತಿದ್ದಂತೆಯೇ ವೆಂಕಟೇಶನನ್ನು ಸಾಯಿಸಿ ಅಣ್ಣನ ಸಾವಿನ ಪ್ರತೀಕಾರ ತೀರಿಸಿಕೊಳ್ಳಲು ಪ್ರತ್ನಿಸಿದ್ದಾರೆ. ಆದರೆ ವೆಂಕಟೇಶನ ತಂಡ ಸುರೇಶನನ್ನು ಸಾಯಿಸಿ ರೈಲ್ವೇ ಹಳಿಯ ಮೇಲೆ ಆತನ ಶವವನ್ನು ಎಸೆದಿದೆ.[ಹೆಂಡತಿಯ ಕತ್ತು ಕೊಯ್ದು ಕೊಂದ ಉಪನ್ಯಾಸಕ ಪಕ್ಕದಲ್ಲೇ ಕೂತಿದ್ದ]

ಸುರೇಶ ಕಣ್ಮರೆಯಾಗಿದ್ದಾನೆಂದು ಆತನ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾಳೆ. ಆಕೆಯ ದೂರಿನನ್ವಯ ಸುರೇಶನ ಹುಡುಕಾಟ ನಡೆಸಿದ ಪೊಲೀಸರಿಗೆ ಸುರೇಶನ ಮೃತದೇಹ ರೈಲ್ವೇ ಹಳಿಯ ಮೇಲೆ ಪತ್ತೆಯಾಗಿದೆ. ಶವವನ್ನು ಗುರುತಿಸಿದ ಸುರೇಶನ ಪತ್ನಿ, ಸುರೇಶನಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಯಾವ ಕಾರಣವೂ ಇರಲಿಲ್ಲ, ಎಂದು ಸ್ಪಷ್ಟವಾಗಿ ತಿಳಿಸಿದ್ದಾಳೆ. ಇದರಿಂದ ಅನುಮಾನಗೊಂಡ ಪೊಲೀಸರು ಇತ್ತೀಚೆಗೆ ಸುರೇಶ ಯಾವ್ಯಾವ ವ್ಯಕ್ತಿಗಳನ್ನು ಸಂಪರ್ಕಿಸಿದ್ದ ಎಂದು ತನಿಖೆ ನಡೆಸಿದಾಗ ವೆಂಕಟೇಶನ ಬಗ್ಗೆ ತಿಳಿದಿದೆ. ಆತನನ್ನು ವಿಚಾರಣೆಗೊಳಪಡಿಸಿದಾಗ ಸರಣಿ ಕೊಲೆಯ ಸತ್ಯ ಹೊರಬಂದಿದೆ! ಇದೀಗ ಏಳು ಜನರನ್ನೂ ಪೊಲೀಸರು ಬಂಧಿಸಿದ್ದಾರೆ.

English summary
For 16 years three cases of death were being investigated by the Bengaluru police as suicides. It has now turned out that the three cases starting from 2011 onwards were all murders planned and executed by a gang of seven. The Bengaluru police arrested 7 persons and it was during their interrogation that it was found that the cases being probed as unnatural deaths in reality were murders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X